28/06/2022
ಶ್ರೀಮದ್ ರಾಮಾಯಣಮ್ — 119 ದೇವರು ಯಾವಾಗ ಭಕ್ತರನ್ನು ಕಾಪಾಡುತ್ತಾನೆ, ಯಾವಾಗ ಮತ್ತು ಏಕೆ ಕಾಪಾಡದೇ ಸುಮ್ಮನಿರುತ್ತಾನೆ ಎನ್ನುವ ಅಪೂರ್ವ ವಿಷಯದ ನಿರೂಪಣೆ ಇಲ್ಲಿದೆ. ಶ್ರೀರಾಮ ಕಾಡಿಗೆ ಬಂದಿರುವದು ರಾಕ್ಷಸರಿಗೆ ಸಹನೆಯಾಗಿಲ್ಲ ಎನ್ನುವ ಕಾರಣಕ್ಕೆ ಜನಸ್ಥಾನದಲ್ಲಿ ಅವರು ತಪಸ್ವಿಗಳನ್ನು ಕೊಲ್ಲುತ್ತಿದ್ದಾರೆ ಎಂಬ ವಿಷಯ ಚಿತ್ರಕೂಟದ ಋಷಿಗಳಿಗೆ ತಿಳಿದು ಅವರೆಲ್ಲರೂ ಚಿತ್ರಕೂಟವನ್ನು ಬಿಟ್ಟು ಹೊರಡಲು ಸಿದ್ಧರಾಗುತ್ತಾರೆ. ಶ್ರೀರಾಮದೇವರು ಬಂದು ಅವರನ್ನು ಕಾರಣ ಕೇಳಿದಾಗ, ನಾವು ಈ ಸ್ಥಳವನ್ನು ಬಿಟ್ಟು ಹೋಗಲು ನೀನೇ ಕಾರಣ ಎನ್ನುತ್ತಾರೆ. ಇಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ನೀಡುವದರೊಂದಿಗೆ ಕಥಾ-ತತ್ವಗಳ ನಿರೂಪಣೆ ಇಲ್ಲಿದೆ.
Play Time: 40:45
Size: 3.84 MB