Upanyasa - VNU1007

ಪುಲಸ್ತ್ಯರ ಕಥೆ

ಶ್ರೀಮದ್ ರಾಮಾಯಣಮ್ — 120

ಗಂಗಾ ಗಣಪತಿಯರಿಗೂ ಯಾರ ಮಹಿಮೆಯನ್ನು ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲವೋ ಅಂತಹ ಮಹಾನುಭಾವರಾದ ಶ್ರೀ ಪುಲಸ್ತ್ಯಬ್ರಹ್ಮರ ಚರಿತ್ರೆಯ ಯಥಾಮತಿ ನಿರೂಪಣೆ. 

ಪುಲಸ್ತ್ಯರು ಬ್ರಹ್ಮದೇವರ ಪುತ್ರ, ಪ್ರಜಾಪತಿ
ಸಪ್ತರ್ಷಿಗಳಲ್ಲಿ ಪುಲಸ್ತ್ಯರ ಸ್ಥಾನ
ಪುಲಸ್ತ್ಯಾದಿ ನವಬ್ರಹ್ಮರು
ವಾಮನಪುರಾಣದ ಪ್ರವರ್ತಕರು 
ಪುಲಸ್ತ್ಯರು ಅಪ್ಸರೆಯರಿಗೆ ನೀಡಿದ ಶಾಪ
ತೃಣಬಿಂದು ರಾಜರ್ಷಿಯ ಪುತ್ರಿಯೊಂದಿಗೆ ಮದುವೆ ವಿಶ್ರವಸ್ ಋಷಿಗಳ ಜನ್ಮ ಮುಂತಾದ ವಿವರ ಇಲ್ಲಿದೆ. 


Play Time: 40:22

Size: 3.84 MB


Download Upanyasa Share to facebook View Comments
6295 Views

Comments

(You can only view comments here. If you want to write a comment please download the app.)
 • JOTHIPRAKASH L,DHARMAPURI

  8:30 PM , 25/08/2022

  🙏🙏🙏
 • Sanjeeva Kumar,Bangalore

  1:34 PM , 08/08/2022

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏, ಗುರುಗಳೆ ಧನ್ಯೋಸ್ಮಿ, ಗುರುಗಳೆ ಶ್ರೀ ವಿಶ್ರಾವಸ್ ಋಷಿಗಳ ತಾಯಿಯವರ ಹೆಸರು ತಿಳಿಸುತ್ತೀರಾ 🙏
 • Sowmya,Bangalore

  4:13 PM , 16/07/2022

  🙏🙏🙏
 • Venkatesh. Rajendra . Chikkodikar.,Mudhol

  6:07 AM , 14/07/2022

  Shri Rama Jai Rama Jai Jai Rama 🙏🙏🙏
 • Abhishek,Kalaburagi

  5:23 PM , 11/07/2022

  ಆಚಾರ್ಯರಿಗೆ ನಮಸ್ಕಾರಗಳು
  
  
  ಆಚಾರ್ಯರೇ
  
  
  
  ಈ ಉಪನ್ಯಾಸದಲ್ಲಿ ಮತ್ತು ಇತರ ಕೆಲವು ಕಡೆ ದೇವತಾ ತಾರತಮ್ಯ ಹೇಳುವಾಗ "ಕಕ್ಷೆ" ಎಂಬ ಪದ ಬಳಸಿದ್ದೀರಿ.
  
  ನನ್ನ ಪ್ರಶ್ನೆ
  
  
  ಈ "ಕಕ್ಷೆ" ಎಂದರೇನು.
  
  ಒಟ್ಟು ಇರುವ ಕಕ್ಷೆಗಳು ಎಷ್ಟು?
  
  ಕಕ್ಷೆಯಲ್ಲಿ ಒಳಗಡೆಯೂ ತಾರತಮ್ಯ ಇರುತ್ತದೆಯೇ?
  
  
  
  
  ಉತ್ತರಿಸಬೇಕಾಗಿ ವಿನಮ್ರ ವಿನಂತಿ

  Vishnudasa Nagendracharya

  ಇದು ತುಂಬ ದೊಡ್ಡ ವಿಷಯ
  
  ಪ್ರತ್ಯೇಕ ಉಪನ್ಯಾಸ, ಲೇಖನಮಾಲೆಗಳೇ ಆವಶ್ಯಕ. 
 • M V Lakshminarayana,Bengaluru

  4:47 PM , 04/07/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ವಿಶ್ರವಸ್ ಋಷಿಗಳ ಪತ್ನಿಯರ ಹೆ‌ಸರೇನು?
  ಇಂತಿ ನಮಸ್ಕಾರಗಳು

  Vishnudasa Nagendracharya

  ಶ್ರೀ ಭರದ್ವಾಜಮಹರ್ಷಿಗಳ ಮಗಳು ದೇವವರ್ಣಿನಿದೇವಿಯರು ಶ್ರೀ ವಿಶ್ವವಸ್ ಮಹರ್ಷಿಗಳ ಧರ್ಮಪತ್ನಿ. 
  
  ಮತ್ತೊಬ್ಬ ಹೆಂಡತಿ ರಾಕ್ಷಸಕುಲದ ಕೈಕಸಿ. 
  
  ಈ ಎಲ್ಲ ವಿಷಯಗಳೂ ಮುಂದಿನ ಉಪನ್ಯಾಸಗಳಲ್ಲಿ ಬರುತ್ತದೆ. 
 • Jayashree karunakar,Bangalore

  10:20 PM, 04/07/2022

  ಗುರುಗಳೇ 
  
  ತೃಣಬಿಂದು ರಾಜರ್ಷಿಯ ಪುತ್ರಿಗೆ ಶಾಪದ ವಿಷಯ ಗೊತಿಲ್ಲವಾದರೂ, ಪುಲಸ್ತ್ಯರಿಗೆ ಗೊತ್ತಿದೆಯಲ್ಲ ಈ ಹೆಣ್ಣುಮಗಳು, ತಮಗೆ ತೊಂದರೆ ನೀಡಿದ ಗುಂಪಿನಲ್ಲಿ ಇರಲಿಲ್ಲ ಅಂತ.. 
  
  ಅವರ ಶಾಪ ಇದ್ದದು  ತೊಂದರೆ ನೀಡಿದ ಹೆಣ್ಣುಮಕ್ಕಳು ಮತ್ತೆ ಬಂದರೆ  ಮಾತ್ರ ತಾನೆ? 
  
  ಅಲ್ಲಿಗೆ ಯಾವ ಹೆಣ್ಣುಮಕ್ಕಳೇ ಬರಲಿ, ಅವರು ಗರ್ಭಿಣಿಯಾಗಲಿ ಅಂತ ಅಲ್ಲವಲ್ಲ...? 
  
   ಯಾಕೆ ಹೀಗಾಯಿತು ಗುರುಗಳೇ? 
  
  (ಭಗವಂತ ನ ಸಂಕಲ್ಪದಂತೆ ಮುಂದೆ ರಾವಣ ಕುಬೇರದಿಗಳು ಹುತ್ತುವದಿದೆ ಅಂದುಕೊಂಡರೂ, )

  Vishnudasa Nagendracharya

  ತೊಂದರೆ ಮಾಡಿದವರಿಗೆ ಮಾತ್ರ ಶಾಪ ಎಂದಲ್ಲ, ಯಾವುದೇ ಕನ್ಯೆ ನನ್ನನ್ನು ನೋಡಿದರೂ ಗರ್ಭಿಣಿಯಾಗುತ್ತಾಳೆ ಎಂದೇ ಶಾಪ. 
  
  ಪುಲಸ್ತ್ಯರ ವಚನ ಹೀಗಿದೆ - 
  
  "ಯಾ ಮೇ ದರ್ಶನಮಾಗಚ್ಛೇತ್ ಸಾ ಗರ್ಭಂ ಧಾರಯಿಷ್ಯತಿ" 
  
  "ಯಾ ಕನ್ಯಕಾ ಮಾಮವಲೋಕಯೇತ ಸಾ ಗರ್ಭಿಣೀ ಸ್ಯಾದಿತಿ ವಾಕ್ಯಬಾಣಾತ್" 
  
  "ಯಾವ ಹೆಣ್ಣು ನನ್ನನ್ನು ನೋಡುತ್ತಾಳೆಯೋ ಅವಳು ಗರ್ಭಿಣಿಯಾಗುತ್ತಾಳೆ" 
  
  ಹೀಗಾಗಿ ಸರ್ವಸಾಧಾರಣವಾದ ಶಾಪ. ಇಂತಹವರಿಗೆ ಮಾತ್ರ ಎಂದಲ್ಲ. 
  
  
  
  
 • Nalini Premkumar,Mysore

  8:52 PM , 04/07/2022

  ತಪ್ಪಾಗಿದೆ ಗುರುಗಳೇ ಬ್ರಹ್ಮ ದೇವರ ಮಾನಸ ಪುತ್ರರು🙏
 • Nalini Premkumar,Mysore

  8:50 PM , 04/07/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು        ಈ ದಿನದ ರಾಮಾಯಣದ ಭಾಗ ಬಹಳ ಅಧ್ಭುತ ವಾಗಿದೆ ಗುರುಗಳೇ  ಪುಲಸ್ತ್ಯ ರ ಕಥೆ ನಮಗೆ ತಿಳಿದಿರಲಿಲ್ಲ ಸಪ್ತ ಋಷಿಗಳ ಬಗ್ಗೆ...... ಪುಲಸ್ತ್ಯ ರು ನಾಲ್ಕನೆಯ ವರು.... ಗಣಪತಿ ಯೋಗ್ಯ ತೆ ಗಿಂತ ದೊಡ್ಡ ವರು...... ಬಣ್ಣ ದೇವರ ಮಾನಸ ಪುತ್ರರು...... ನವ ಬ್ರಹ್ಮ ರು...... ಅನೇಕ ಅನೇಕ ವಿಷಯಗಳನ್ನು ತಿಳಿದುಕೊಂಡೆ ವು ಎಲ್ಲರಿಗೂ ತಿಳಿಯುವ ಹಾಗೆ ಬಹಳ ಸರಳವಾಗಿ ಮನ ಮುಟ್ಟುವಂತೆ ತಿಳಿಸುತ್ತಿರಿ ನಾವೆ ಪುಣ್ಯವಂತರು ಮುಂದಿನ ಭಾಗ ಕ್ಕಾಗಿ ಕಾಯುತ್ತಿರುತ್ತೇವೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏
 • Poornima Sowda,Bangalore

  4:40 PM , 04/07/2022

  ನಮಸ್ಕಾರ ಆಚಾರ್ಯರೆ. ಶ್ರೀ ಪುಲಸ್ತ್ಯ ಬ್ರಹ್ಮರ ಚರಿತ್ರೆ ಅದೇಷ್ಟು ಸೊಗಸಾಗಿ, ಸರಳ ರೀತಿಯಲ್ಲಿ ಅರ್ಥವಾಗುವ ಹಾಗೆ ವಿವರಿಸಿದ್ದೀರಿ. ಎಷ್ಟೋ ಅಪೂರ್ವವಾದ ವಿಷಯಗಳು ನಿಮ್ಮ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ತುಂಬಾ ಧನ್ಯವಾದಗಳು.
 • N.H. Kulkarni,Bangalore

  11:35 AM, 04/07/2022

  This part contains a very rare information about a great sage, explained in a simple & yet detailed manner.
 • H.Suvarna kulkarni,Bangalore

  10:35 AM, 04/07/2022

  ಗುರುಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು
  ಈ ರೀತಿ ಅಪೂರ್ವ ವಾದ ..ವಿಷಯಗಳೊಂದಿಗೆ ರಾಮಾಯಣ ನಾವು ಕೇಳಿರಲಿಲ್ಲ..ಕಕ್ಷಾ ತಾರತಮ್ಯ ದಲ್ಲಿ ಬರುವ ...ಮರೀಚಿ ಅತ್ರಿ ಅಂಗೀರಸ ಪುಲಸ್ತ್ಯ ಪುಲಹ, ಕೃತು ವಸಿಷ್ಟ...ಇಷ್ಟನ್ನ ಕೇಳಿದ್ದೆ...ಆದರೆ ಇದೇ ಪುಲಸ್ತ್ಯ ರೇ ರಾವಣನ ತಾತ ....ಎಂಬ ವಿಷಯ ತಿಳಿದಿರಲಿಲ್ಲ.ಪುಲಸ್ತ್ಯ ಋಷಿಗಳ ಬಗ್ಗೆ ವಿಷದವಾಗಿ ತಿಳಿಸಿದ್ದೀರಿ...ತೃಣ ಬಿಂದುವಿನ ಮಗಳು...ಗರ್ಭಿಣಿ ಯಾದ ಸಂದರ್ಭ..ಅವಳನ್ನು ಪತ್ನಿಯಾಗಿ ಸ್ವೀಕರಿಸಿದ್ದು..ನಂತರದಲ್ಲಿ ಅವಳು ಪತಿಸೇವೆ...ಆಶ್ರಮದ ಒಪ್ಪ ಓರಣ ...ಆಭಗವದ್ಭಕ್ತಿ..ಅವರ ದಾಂಪತ್ಯ... ಅವಳ ಕಳವಳವನ್ನು ಪರಿಹರಿಸಿದ ರೀತಿ..ಎಲ್ಲವೂ...ಸರಳವಾಗಿ , ಸುಂದರವಾಗಿ..ವಿವರಿಸಿದ್ದೀರಿ
  
  ಅನಂತ ಧನ್ಯವಾದಗಳು...
 • Laxmi Padaki,Pune

  10:22 AM, 04/07/2022

  ಶ್ರೀ ಆಚಾರ್ಯರಿಗೆ ನಮೋ ನಮಃ. ತಮ್ಮ ಉಪನ್ಯಾಸ ಗಳಿಂದ ತಿಳಿಯುವ ಹೊಸ ಹೊಸ ವಿಷಯಗಳು ವಿಸ್ಮಯ ಹಾಗು ಸತ್ಯ. ತಮ್ಮ ಪರಿಶ್ರಮಕ್ಕೆ ಆ ಭಗವಂತನು ಸದಾ ಶಕ್ತಿ ಸಾಮರ್ಥ್ಯ ನೀಡಿ ಹೀಗೆ ಮುಂದುವರೆಯಲಿ. ಅದನ್ನು ಕೇಳುವ ಭಾಗ್ಯ ನಮಗಿರಲಿ ಎಂದು ಪ್ರಾರ್ಥನೆ ಮಾಡುವೆ.🙏🙏
 • Badari Narasimha M P,Bengaluru

  5:45 AM , 04/07/2022

  ಶ್ರೀ ಗುರುಭ್ಯೋ ನಮಃ ಶ್ರೀಮದ್ ರಾಮಾಯಣದ ರಸದೌತಣ ಉಣಿಸುತ್ತಿರುವ ಗುರುಗಳ ಪಾದಕಮಲಗಳಿಗೆ ಅನಂತ ವಂದನೆಗಳು🙏🏻🙏🏻🙏🏻🙏🏻