28/06/2022
ಶ್ರೀಮದ್ ರಾಮಾಯಣಮ್ — 121 ಪುಲಸ್ತ್ಯರ ಪುತ್ರರಾದ ವಿಶ್ರವಸ್ ಋಷಿಗಳ ತಪಸ್ಸು, ಅವರು ಭರದ್ವಾಜರ ಪುತ್ರಿ ದೇವವರ್ಣಿನಿಯನ್ನು ಮದುವೆಯಾಗಿ ವೈಶ್ರವಣರನ್ನು (ಕುಬೇರ) ಮಗನನ್ನಾಗಿ ಪಡೆದದ್ದು, ಆ ವೈಶ್ರವಣರು ತಪಸ್ಸು ಮಾಡಿ ದಿಕ್ಪಾಲಕರಾದ ಕಥೆ. ಮಕ್ಕಳಲ್ಲಿ ಒಳ್ಳೆತನವನ್ನೋ, ಕೆಟ್ಟತನವನ್ನೋ ಮೂಡಿಸುವ ಮೂಲಕಾರಣದ ವಿವರ ಇಲ್ಲಿದೆ. ವೈಶ್ರವಣರು ತಪಸ್ಸು ಮಾಡಿ ಬ್ರಹ್ಮದೇವರ ವರದಿಂದ ದಿಕ್ಪಾಲಕರಾದದ್ದು. ವೈಶ್ರವಣರಿಗೆ ಒಲಿದು ಬಂದ ಲಂಕೆೆಯ ಯಕ್ಷ ರಾಕ್ಷಸ ಅಪ್ಸರೆಯರ ಒಡೆತನ. ಲಂಕಾ ಎಂಬ ಶಬ್ದದ ಅರ್ಥ. ಇಪ್ಪತ್ತೆಂಟನೆಯ ಕೃತಯುಗದಲ್ಲಿ ಹುಟ್ಟಿದ ವೈಶ್ರವಣರು ತಪಸ್ಸು ಮಾಡಿ ಉತ್ತರದಿಕ್ಕಿಗೆ ಒಡೆಯರಾದರೆ, ಅದಕ್ಕಿಂತ ಮುಂಚೆ ಯಾರು ಕುಬೇರರ ಸ್ಥಾನದಲ್ಲಿದ್ದರು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ. ಲಂಕೆಯನ್ನು ಬ್ರಹ್ಮದೇವರು ಯಾಕಾಗಿ ವೈಶ್ರವಣರಿಗೆ ನೇರವಾಗಿ ನೀಡುವದಿಲ್ಲ? ವಿಶ್ರವಸ್ ಋಷಿಗಳೇ ಯಾಕಾಗಿ ನೀಡುತ್ತಾರೆ? ಗರುಡ, ಶೇಷ, ಸೂರ್ಯ, ಕುಬೇರ ಮುಂತಾದವರು ಮೊದಲಿಂದ ಪದವಿ ಪಡೆದಿದ್ದರೂ ಮತ್ತೆ ಮನುಷ್ಯರಾಗಿ ಹುಟ್ಟಿ ಬಂದು ತಪಸ್ಸು ಮಾಡಿ ಮತ್ತೆ ಆ ಪದವಿಯನ್ನೇ ಪಡೆಯುತ್ತಾರೆ, ಇದಕ್ಕೆ ಕಾರಣವೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
Play Time: 44:13
Size: 3.84 MB