Upanyasa - VNU1009

ಮೋಕ್ಷಯೋಗ್ಯ ರಾಕ್ಷಸರು

ಶ್ರೀಮದ್ ರಾಮಾಯಣಮ್ — 122

ಬ್ರಹ್ಮದೇವರು ಸೃಷ್ಟಿ ಮಾಡಿದ ಹೇತಿ-ಪ್ರಹೇತಿ ಮುಂತಾದ ರಾಕ್ಷಸರ ಕಥೆ, ಹಾಗೂ ರಾಕ್ಷಸರಲ್ಲಿಯೂ ಮುಕ್ತಿಯನ್ನು ಪಡೆಯುವ ಸಜ್ಜೀವರಿದ್ದಾರೆ ಎಂಬ ತತ್ವದ ನಿರೂಪಣೆ. 

ವೈವಸ್ವತ ಮನ್ವಂತರದ ಆದಿಯಲ್ಲಿ ಬ್ರಹ್ಮ ದೇವರು ಮಾಡಿದ ಹೇತಿ-ಪ್ರಹೇತಿ ಮುಂತಾದ ರಾಕ್ಷಸ ಯಕ್ಷರ ಸೃಷ್ಟಿ

ರಾಕ್ಷಸರಲ್ಲಿಯೂ ಮೋಕ್ಷಯೋಗ್ಯರಿದ್ದಾರೆ ಎಂಬ ವಿಷಯದಲ್ಲಿ ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಶ್ರೀರಾಮಚಂದ್ರತೀರ್ಥ ಗುರುರಾಜರ ನಿರ್ಣಯಗಳು. ಅಪವ್ಯಾಖ್ಯಾನದ ನಿರಾಸ. 

ಹೇತಿ ಎನ್ನುವ ರಾಕ್ಷಸ ಮೋಕ್ಷಯೋಗ್ಯ ಎಂದು ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ತಿಳಿಸಿಕೊಟ್ಟ ಕ್ರಮ, ಆ ಹೇತಿ ಎಂಬ ರಾಕ್ಷಸ ಮಾಡಿದ ದ್ರೌಪದಿಯ ಸೇವೆ, ಮತ್ತು ಇಂದ್ರದೇವರ ಸೇವೆಯ ವಿವರ. 

ಮಾರ್ಕಂಡೇಯ ಪುರಾಣದಲ್ಲಿ ಸಜ್ಜೀವರಾದ ರಾಕ್ಷಸರು ಮಾಡುವ ಶ್ರಾದ್ಧದ, ಅವರ ಆಹಾರಪದ್ಧತಿಯ ಉಲ್ಲೇಖ ಇಲ್ಲಿದೆ. 

ವಿಷ್ಣುಭಕ್ತರಾದ ರಾಕ್ಷಸರನ್ನು ಪ್ರತೀನಿತ್ಯ ಸ್ಮರಣೆ ಮಾಡಿ ತರ್ಪಣ ನೀಡುವ ಸದಾಚಾರದ ಉಲ್ಲೇಖ ಇಲ್ಲಿದೆ. 

ಹೇತಿಯು ಕಾಲನ ತಂಗಿ ಭಯಾಳನ್ನು ಮದುವೆಯಾಗಿ ವಿದ್ಯುತ್ಕೇಶನನ್ನು ಮಗನನ್ನಾಗಿ ಪಡೆಯುತ್ತಾನೆ. 

Play Time: 43:28

Size: 3.84 MB


Download Upanyasa Share to facebook View Comments
7062 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  11:27 AM, 20/07/2022

  Shri Rama Jai Rama Jai Jai Rama
 • Sowmya,Bangalore

  2:08 PM , 19/07/2022

  🙏🙏🙏
 • Nalini Premkumar,Mysore

  4:19 PM , 09/07/2022

  ಹರೆ ಶ್ರೀನಿವಾಸ ಗುರುಗಳೆ ರಾಕ್ಷಸ ರಲ್ಲೂ ಮುಕ್ತಿ ಪಡೆಯುವ ಸಜ್ಜೀವ ರಿದ್ದಾರೆ ರಾಕ್ಷಸ ರಲ್ಲಿ ಹೇತಿ ಪ್ರಹೇತಿ ಮುಂತಾದ ರಾಕ್ಷಸ ರಿದ್ದಾರೆ..... ಎಲ್ಲಾ ವಿಷಯಗಳು ಕೇಳಿ ಆಶ್ಚರ್ಯ ವಾಯಿತು ಗುರುಗಳೇ ಬಹಳ ಚೆನ್ನಾಗಿ ವಿಷಯಗಳ ನ್ನು ಸಂಗ್ರಹ ಮಾಡಿ ತಿಳಿಸಿದ್ದಿರಿ ರಾಮಾಯಣ ದಲ್ಲಿ ಇದನ್ನೆಲ್ಲ ಇಷ್ಟು ವಿಸ್ತಾರವಾಗಿ ಕೇಳುತ್ತಿರುವ ನಾವೆ ಪುಣ್ಯವಂತರು ನನಗೂ ಭಾಗವತ ಬಹಳ ಬಹಳ ಇಷ್ಟ ಗುರುಗಳೇ ನಿಮ್ಮಿಂದ ಭಾಗವತದ ಮುಂದಿನ ಭಾಗವನ್ನು ನಿರೀಕ್ಷಿಸುತ್ತಿದ್ದೆವೆ ಗುರುಗಳೇ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏
 • Sanjeeva kolli,Raichur

  1:26 PM , 09/07/2022

  Ade reethi kailasadalli shivanodane vaasisuva innulida ella bhoota ganagalu (nandi haagu bhrungi rushiya nantharadavaru) baahyadalli shaivaradaru antharangadalli vishnubhaktarirabahude? Idara bagge dayavittu tilisi.
 • Sanjeeva kolli,Raichur

  1:26 PM , 09/07/2022

  Ade reethi kailasadalli shivanodane vaasisuva innulida ella bhoota ganagalu (nandi haagu bhrungi rushiya nantharadavaru) baahyadalli shaivaradaru antharangadalli vishnubhaktarirabahude? Idara bagge dayavittu tilisi.
 • Sanjeeva kolli,Raichur

  1:23 PM , 09/07/2022

  Kailasadalli shivanodane vaasisuva shivana vaahana Nandi, bhrungi rushi ivarellaru vishnubhakthare? Haagu mokshakke yogyare? Haagiddare ivaru tharathamyada yaava kaksheyalli baruthaare?
 • Srikar K,Bengaluru

  9:37 AM , 09/07/2022

  Gurugale, namaskaragalu. Bhagavatha da prakara jeeva Tanna charama deha padeda mele utkrantha nagi maharaadi loka galalli Brahma pralaya aguva thanaka Vasa madikondu iruttare endide. Prahlada radu charama deha endu heliddiri. Haagiddaga prahlada ru Bahlika, Raghavendra swamy muntada avatara tegedu kollalikke hege sadhya ?

  Vishnudasa Nagendracharya

  ಪ್ರಹ್ಲಾದರಾಜರು ಚರಮದೇಹದಲ್ಲಿದ್ದಾರೆ. ಇನ್ನೂ ಉತ್ಕ್ರಾಂತರಾಗಿಲ್ಲ. 
  
  ಮತ್ತು ಮನುಷ್ಯರ ಉತ್ಕ್ರಾಂತಿಗೂ ದೇವತೆಗಳು ಮುಕ್ತಿ ಪಡೆಯು ರೀತಿಗೂ ತುಂಬ ವ್ಯತ್ಯಾಸವಿದೆ. 
  
  ಶ್ರೀಮದ್ ಭಾಗವತದ ಎರಡನೆಯ ಸ್ಕಂಧದ ಉಪನ್ಯಾಸ ಮಾಲಿಕೆಗಳಲ್ಲಿ ಉತ್ಕಾಂತಿ ಎಂದೇ ಒಂದು ಉಪನ್ಯಾಸವಿದೆ. ಅದನ್ನು ಕೇಳಿ. 
  
 • N.H. Kulkarni,Bangalore

  2:28 PM , 08/07/2022

  "ರಾಮಾಯಣ ರಗಡ್ ಕೇಳೀವಿ, ಮತ್ತೇನ್ ಹೊಸಾದ್ ಅದ ಕೇಳ್ಲಿಕ್ಕಿ " 
  ಈ ಭ್ರಮೆಯನ್ನು ಸಮೂಲವಾಗಿ ನಿರಸನ ಮಾಡುವ ಭಾಗ ಈ ಪ್ರವಚನ. 
  
  ಆಥರ್ವಣ ಭಾಷ್ಯ, ಅನುವ್ಯಖ್ಯಾನ, ನ್ಯಾಯಸುಧಾ, ಟಿಪ್ಪಣಿ ಗ್ರಂಥಗಳು, ಭಾಗವತ, ತಾತ್ಪರ್ಯ ನಿರ್ಣಯ, ಭಾವಪ್ರಕಾಶಿಕ ಇತ್ಯಾದಿ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ, ಅದರಲ್ಲಿಯ ಸಂಬಂಧಪಟ್ಟ ವಾಕ್ಯಗಳನ್ನು ಉದಾಹರಿಸಿ ವಿಷಯದ ಸ್ಪಷ್ಟ ನಿರೂಪಣೆಯನ್ನು ಇಲ್ಲಿ ಮಾಡಿದ್ದಾರೆ .
  
  ಸಜ್ಜನರಿಗೆ ರಸಾಯನ.
 • Kailashshivsharma T,Dharwad

  2:06 PM , 08/07/2022

  ರಾಕ್ಷಸರು ಎಂದರೆ, ಯಾವುದೋ ಜನ್ಮದಲ್ಲಿ ರಾಕ್ಷಸರಾಗಿದ್ದವರು ಎಂದು ಅರ್ಥ, ಹೊರತು ರಾಕ್ಷಸ ಜೀವರಲ್ಲ. ಎಂಬುದಾಗಿ ವ್ಯಾಖ್ಯಾನ ಮಾಡಿದವರು ಯಾರು ಗುರುಗಳೇ?
 • Kailashshivsharma T,Dharwad

  2:05 PM , 08/07/2022

  ರಾಕ್ಷಸರು ಎಂದರೆ, ಯಾವುದೋ ಜನ್ಮದಲ್ಲಿ ರಾಕ್ಷಸರಾಗಿದ್ದವರು ಎಂದು ಅರ್ಥ, ಹೊರತು ರಾಕ್ಷಸ ಜೀವರಲ್ಲ. ಎಂಬುದಾಗಿ ವ್ಯಾಖ್ಯಾನ ಮಾಡಿದವರು ಯಾರು ಗುರುಗಳೇ?
 • K.N.Venkatesha murthy,Tumkur

  1:16 PM , 08/07/2022

  🙏🙏