Upanyasa - VNU1010

ಮಾಲ್ಯವಂತ ಸುಮಾಲಿ ಮಾಲಿ

ಶ್ರೀಮದ್ ರಾಮಾಯಣಮ್ — 123

ಶಿವ ಪಾರ್ವತಿಯರು ರಕ್ಷಿಸಿದ ಸುಕೇಶ ರಾಕ್ಷಸನಿಗೆ ಮೂರು ಜನ ತಾಮಸ ರಾಕ್ಷಸರು ಮಕ್ಕಳಾಗಿ ಹುಟ್ಟಿ ಬರುತ್ತಾರೆ. ಅವರು ಮಾಡಿದ ತಪಸ್ಸು, ಲಂಕೆಯನ್ನು ಪಡೆದ ವಿವರ ಇಲ್ಲಿದೆ. 

ಸುಕೇಶ ದೇವವತಿಯರ ಮದುವೆ

ಮಾಲ್ಯವಂತ ಸುಮಾಲಿ ಮಾಲಿಯರ ಜನನ

ತಂದೆಯ ಕುರಿತ ಅವರ ಮಾತ್ಸರ್ಯ

ಅವರು ಮಾಡಿದ ತಪಸ್ಸು. ಆ ತಪಸ್ಸಿನಿಂದ ಲೋಕಗಳಿಗೆ ಉಂಟಾದ ತಾಪ

ಬ್ರಹ್ಮದೇವರಿಂದ ಮೂರು ವರಗಳನ್ನು ಪಡೆದದ್ದು,

ವಿಶ್ವಕರ್ಮರಿಂದ ನಿರ್ಮಾಣವಾದ ಲಂಕೆಯ ಸೊಗಸು, ಅದರಲ್ಲಿ ಈ ರಾಕ್ಷಸರ ವಾಸ. 

ನರ್ಮದಾ ಎಂಬ ಗಂಧರ್ವಿಯ ಮಕ್ಕಳಾದ ಸುಂದರಿ, ಕೇತುಮತಿ ಮತ್ತು ವಸುದಾ ಎಂಬ ಮೂರು ಜನರನ್ನು ಕ್ರಮವಾಗಿ ಮಾಲ್ಯವಂತ, ಸುಮಾಲಿ, ಮಾಲಿಯರು ಮದುವೆಯಾಗುತ್ತಾರೆ. ಇವರ ಮಕ್ಕಳು, ಅವರ ಹೆಸರು, ಹೆಸರಿನ ಅರ್ಥಗಳು ಇಲ್ಲಿವೆ. 

ಸುಮಾಲಿ ಕೇತುಮತಿಯರ ಮಗಳು ಕೈಕಸಿ, ಇವಳ ಮಗನೇ ರಾವಣ. 

ಕೀಕಸ ಎಂದರೆ ಮೂಳೆಗಳು. ಅತಿ ಗಟ್ಟಿಯಾದ ಮೂಳೆಯುಳ್ಳವಳು ಎಂದರ್ಥ. ಕುತ್ಸಿತ ಮಾರ್ಗದಲ್ಲಿ ನಡೆಯುವವಳೂ ಎಂದೂ ಅರ್ಥ. 

ಈ ಸಾವಿರಾರು ರಾಕ್ಷಸರಿಂದ ಋಷಿಗಳಿಗೆ ದೇವತೆಗಳಿಗೆ ಉಂಟಾದ ಹಿಂಸೆ. ಮುಂತಾದ ವಿವರಗಳು. 

Play Time: 36:17

Size: 3.84 MB


Download Upanyasa Share to facebook View Comments
6423 Views

Comments

(You can only view comments here. If you want to write a comment please download the app.)
 • Abhishek,Kalaburagi

  10:28 AM, 26/07/2022

  ಆಚಾರ್ಯರಿಗೆ ನಮಸ್ಕಾರಗಳು
  
  
  
  ಆಚಾರ್ಯರೆ
  
  
  
  ಮೂರೂ ಜನ ಅಣ್ಣ ತಮ್ಮಂದಿರು ಘೋರವಾದ ನಿಯಮಗಳನ್ನ ಇಟ್ಟುಕೊಂಡು ತಪಸ್ಸು ಮಾಡಿದರು ಅಂತ ಹೇಳಿದಿರಿ
  
  
  ಅವರು ತಪಸ್ಸಿನಲ್ಲಿ ಏನು ಮಾಡಿದರು ಹೇಗೆ ಮಾಡಿದರು ಅಂತ ನನ್ನ ಪ್ರಶ್ನೆ.
  
  
  
  ಉತ್ತರಿಸಬೇಕಾಗಿ ವಿನಂತಿ

  Vishnudasa Nagendracharya

  ತಪಸ್ಸಿನ ಪ್ರಧಾನ ಕಾರ್ಯಗಳು
  
  ಉಪವಾಸ, ದೇಹದಂಡನೆ, ಯಾರನ್ನು ಕುರಿತು ತಪಸ್ಸು ಮಾಡುತ್ತಿದ್ದಾರೆಯೋ ಅವರ ಧ್ಯಾನ, ಸ್ತೋತ್ರ ಇತ್ಯಾದಿಗಳು. 
 • Sowmya,Bangalore

  1:43 PM , 25/07/2022

  🙏🙏🙏
 • Venkatesh. Rajendra . Chikkodikar.,Mudhol

  9:40 PM , 20/07/2022

  Shri Rama Jai Rama Jai Jai Rama   🙏🙏🙏
 • Jayashree karunakar,Bangalore

  8:48 AM , 11/07/2022

  ದೇವರ ಕಥೆಯಾಗಲಿ ದೈತ್ಯರ ಕಥೆಯಾಗಲಿ ಅದನ್ನು ನಿಮ್ಮ ವಾಕ್ಯಗಳಲ್ಲಿ ಕೇಳಿದಾಗಲೇ ಮನಸ್ಸಿಗೆ ಸಮಾಧಾನ.... ನಮ್ಮ ತಲೆಗೆ ನಾಟುವದು.... ಏಕೆಂದರೆ ನೀವು ಕೊಡುವ ಉದಾಹರಣೆ.... ಸಂಧರ್ಭಗಳನ್ನು ಸಮೀಕರಿಸುವ ರೀತಿಯನ್ನು ಕೇಳಿಯೇ ಆನಂದಿಸಬೇಕು... 
  
  ತ್ರೇತಾಗ್ನಿ ಅಬ್ಬಾ !!! ಅದರ ಪರಿಚಯ.... ನಂತರ ಅದನ್ನು ರಾಕ್ಷಸರ ನಡವಳಿಕೆಗೆ ಸಮೀಕರಿಸಿದ ರೀತಿ ಅಬ್ಬಾ... !!. ಅದನ್ನು ಸ್ಪಷ್ಟಪಡಿಸಲು ವಾಲ್ಮೀಕಿ ಋಷಿಗಳ ಸಂಸ್ಕೃತದ ವಾಕ್ಯಗಳು... ಅಬ್ಬಾ ಏನನ್ನು ಕೇಳಿದರೂ ಸರಿಯಾದದ್ದನ್ನೇ ತಿಳಿಯುತಿದ್ದೇವೆ ಎಂಬ ತೀರ್ಮಾನ ನಮ್ಮ ಮನಸ್ಸಿಗೆ ಉಂಟಾಗುತ್ತಿದೆ... 
  
  ತಪಸ್ಸು ಮಾಡಿದ ತಕ್ಷಣ ಅವರು ಒಳ್ಳೆಯವರು ಎಂದು ತಿಳಿಯಬಾರದು.... ಹೌದು ನಾವು ಹಾಗೇನೇ ತಿಳಿಯುವುದು ಸಾಮಾನ್ಯ.... ಅದನ್ನು ಶ್ರೀಮದಾಚಾರ್ಯರ ವಾಕ್ಯಗಳಿಂದ ಸ್ಪಷ್ಟಿಕರಣ.... ಪ್ರತೀ ಉಪಾಯಸಗಳಿಂದಲೂ ತುಂಬಾ ವಿಷಯಗಳನ್ನು ತಿಳಿಯುತಿದ್ದೇವೆ ಗುರುಗಳೇ... 
  
  ನಮ್ಮಲ್ಲಿರುವ ಸಂಶಯರೂಪದ ಸಾಮಾನ್ಯ ಜ್ಞಾನವನ್ನೂ ಗಟ್ಟಿಮಾಡಿಸುತ್ತಿದ್ದೀರಿ... 
  
  ತಾತ ಅಜ್ಜಿಯರ ಮುಖದಿಂದ ಪುರಾಣಕಥೆಗಳನ್ನು ಕೇಳುವ ಸೌಭಾಗ್ಯವನ್ನು ಪಡೆಯಲಿಲ್ಲವಲ್ಲ ಎಂಬ ಕೊರಗನ್ನು, ವಿಶ್ವನಂದಿನಿಯು ಈ ಕಲಿಯುಗದಲ್ಲಿ ಪರಿಹರಿಸುತ್ತಿದೆ....
 • H.Suvarna kulkarni,Bangalore

  9:57 PM , 10/07/2022

  ಗುರುಗಳಿಗೆ ಪ್ರಣಾಮಗಳು...
  ರಾಮಾಯಣ ದಲ್ಲಿ ಬರುವ ಅದ್ಭುತ ಪಾತ್ರ ಪರಿಚಯವಿದೆ ಈ ಉಪನ್ಯಾಸ ದಲ್ಲಿ..ಸುಮಾಲಿ ಕೇತುಮತಿಯರ ಮಗಳೇ ಕೈಕಸಿ...ಇವಳೇ ರಾವಣನ ತಾಯಿ ಎಂಬುದನ್ನು ತಿಳಿಯಲು ..ಇವರ ಹಿಂದಿನ ತಲೆಮಾರುಗಳ ಪರಿಚಯ ಮಾಡಿಸಿದಿರಿ..ಸಜ್ಜನರಾಕ್ಷಸರು, ದುರ್ಜನ ರಾಕ್ಷಸರು, ಇವರ ನಡವಳಿಕೆಗಳು...ವಿಶ್ವಕರ್ಮ ಇವರಿಗಾಗಿ ಸೃಷ್ಟಿ ಮಾಡಿದ ಆ ಲಂಕಾ ನಗರಿ...ಅಬ್ಬಬ್ಬಾ..ಒಮ್ಮೆ ಕೇಳಿದರೆ ಸಾಲದು ..ಆ ಹೆಸರುಗಳು ...ಅವುಗಳ ಅರ್ಥ ತಿಳಿಯಲು ಎರೆಡು ಮೂರು ಬಾರಿ ಕೇಳಲೇಬೇಕು..ದುಷ್ಟ ರಾಕ್ಷಸರಿಗಾಗಿಯೇ ನಿರ್ಮಾಣವಾದ ಲಂಕೆ ...ಇಂದು ದುಃಸ್ಥಿತಿಯಲ್ಲಿದೆ..ಇಂಥ ವಿಷಯಗಳು ಯಾವ ರಾಮಾಯಣ ಉಪನ್ಯಾಸ ದಲ್ಲೂ ಕೇಳಿರಲಿಲ್ಲ..ಅಪೂರ್ವ ವಾದ ವಿಷಯಗಳನ್ನು ಸವಿವರವಾಗಿ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು