Upanyasa - VNU1011

ಯುದ್ಧಕ್ಕೆ ಸಿದ್ಧನಾದ ನಾರಾಯಣ

ಶ್ರೀಮದ್ ರಾಮಾಯಣಮ್ — 124

ದೇವತೆಗಳು ರುದ್ರದೇವರನ್ನು ಪ್ರಾರ್ಥಿಸಿದಾಗ ಬ್ರಹ್ಮವರವನ್ನು ಮೀರಲು ನನಗೆ ಸಾಧ್ಯವಿಲ್ಲ, ಶ್ರೀಹರಿಯನ್ನೇ ಪ್ರಾರ್ಥಿಸಿ ಎಂದು ಹೇಳುತ್ತಾರೆ. ಅವರ ಪ್ರಾರ್ಥನೆಯಿಂದ ಪ್ರಸನ್ನನಾದ ಶ್ರೀಹರಿ ಯುದ್ಧಕ್ಕೆ ಸಿದ್ಧನಾದ ಪರಿಯ ವಿವರಣೆ ಇಲ್ಲಿದೆ. 

ಬ್ರಹ್ಮದೇವರು ರುದ್ರದೇವರಿಗಿಂತ ಉತ್ತಮರಾದ್ದರಿಂದ ಅವರು ನೀಡಿದ ವರವನ್ನು ರುದ್ರದೇವರಿಗೆ ಮೀರಲು ಸಾಧ್ಯವಿಲ್ಲ ಎಂಬ ಶ್ರೀಮದಾಚಾರ್ಯರ ಪರಮಮಂಗಲ ತಾರತಮ್ಯ ಸಿದ್ಧಾಂತವನ್ನು ರುದ್ರದೇವರ ಮುಖದಿಂದಲೇ ನಾವಿಲ್ಲಿ ಕೇಳುತ್ತೇವೆ. 

ತಮ್ಮನ್ನು ಕೊಲ್ಲಲು ಶಿವನಿಗೂ ಸಾಧ್ಯವಿಲ್ಲವಂತೆ ಎಂದು ದರ್ಪಕ್ಕೊಳಗಾದ ರಾಕ್ಷಸರು ದೇವತೆಗಳನ್ನು ಕೊಲ್ಲಲು ಸೈನ್ಯಸಮೇತ ದೇವಲೋಕದ ಮೇಲೆ ಆಕ್ರಮಣ ಮಾಡಲು ಹೊರಟಾಗ ಆಯುಧಗಳಿಂದೊಡಗೂಡಿ ಗರುಡಾರೂಢನಾಗಿ ಸ್ವಾಮಿ ಅವರ ಎದುರಾಗಿ ಬರುವ ಘಟನೆಯ ಚಿತ್ರಣ ಇಲ್ಲಿದೆ. 

ರಾಕ್ಷಸರು ಲಂಕೆಯಿಂದ ಹೊರಡುವಾಗ ಅವರಿಗೆ ಉಂಟಾದ ಅನೇಕ ತರಹದ ಅಪಶಕುನಗಳ ವಿವರ ಇಲ್ಲಿದೆ.

Play Time: 32:40

Size: 3.84 MB


Download Upanyasa Share to facebook View Comments
6174 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  9:07 AM , 29/07/2022

  Shri Rama Jai Rama Jai Jai Rama 🙏🙏🙏
 • Sowmya,Bangalore

  2:16 PM , 25/07/2022

  🙏🙏🙏
 • Jayashree karunakar,Bangalore

  9:17 PM , 12/07/2022

  ಗುರುಗಳೇ 
   ದೇವತೆಗಳಿಗೆ ಗೊತ್ತಿದೆ ಈ ರಾಕ್ಷಸರು ಬ್ರಹ್ಮದೇವರಲ್ಲಿ ವರವನ್ನು ಪಡೆದು, ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ರುದ್ರದೇವರನ್ನು ಯಾಕೆ ಕೇಳಬೇಕು? ಬ್ರಹ್ಮ ದೇವರನ್ನೇ ಕೇಳಬಹುದಲ್ಲ? ರುದ್ರದೇವರಿಗಿಂತ ಮೇಲಿನ ಕಕ್ಷೆಯಲ್ಲಿರುವ ಬ್ರಹ್ಮ ದೇವರಿಂದಲೇ ಇದು ಸಾಧ್ಯ ವಾಗುವದು ಅನ್ನುವದು ದೇವತೆಗಳಿಗೆ ತಿಳಿದಿಲ್ಲವೇ?

  Vishnudasa Nagendracharya

  1. ಸನಕಾದಿಗಳಿಗೆ, ನಾರದರಿಗೆ, ಪಾರ್ವತೀದೇವಿಯರಿಗೆ ಎಲ್ಲವೂ ಮೊದಲೇ ಗೊತ್ತಿದೆ, ಆದರೂ ದೇವರನ್ನು, ರುದ್ರದೇವರನ್ನು ಪ್ರಶ್ನೆ ಮಾಡುತ್ತಾರೆ, ಯಾಕೆ? ಆ ಪ್ರಶ್ನೋತ್ತರದ ಮುಖಾಂತರ ಸಕಲ ಸಜ್ಜನರಿಗೂ ಜ್ಞಾನ ದೊರೆಯಲಿ ಎಂದು. 
  
  ಹಾಗೆ, ದೇವತೆಗಳಿಗೆ ತಿಳಿದಿದ್ದರೂ, ಜಗತ್ತಿನ ಜನರಿಗೆ ತಾರತಮ್ಯ ಸುಸ್ಪಷ್ಟವಾಗಿ ತಿಳಿಯಲಿ ಎಂದು ದೇವತೆಗಳು ರುದ್ರದೇವರನ್ನು ಪ್ರಾರ್ಥಿಸಿ ನಂತರ ಬ್ರಹ್ಮದೇವರ ಪ್ರಾರ್ಥನೆ ಮಾಡುತ್ತಾರೆ. 
  
  2. ಎಲ್ಲ ತತ್ವಗಳಿಗೂ ಒಂದು ದೃಷ್ಟಾಂತವಿದ್ದಾಗಲೇ ಸಾಮಾನ್ಯರಿಗೆ ಅರ್ಥವಾಗುವದು. ಬ್ರಹ್ಮದೇವರು ರುದ್ರದೇವರಿಗಿಂತ ದೊಡ್ಡವರು ಎಂಬ ತತ್ವಕ್ಕೆ ಇದೂ ಒಂದು ದೃಷ್ಟಾಂತವಾಗಲಿ ಎಂದು ಈ ಘಟನೆ ನಡೆಯುತ್ತದೆ. 
  
  3. ಮೇಲಿನ ಎರಡಕ್ಕಿಂತ ಮಹತ್ತ್ವದ ಉತ್ತರ - ನಾವು ಬ್ರಹ್ಮದೇವರನ್ನು, ದೇವರನ್ನು ಪ್ರಾರ್ಥಿಸಬೇಕು ಎಂದರೆ ರುದ್ರದೇವರನ್ನು ಪ್ರಾರ್ಥಿಸಿದ ನಂತರವೇ ಪ್ರಾರ್ಥಿಸಬೇಕು. ರುದ್ರದೇವರನ್ನು ಬಿಟ್ಟು ಪ್ರಾರ್ಥಿಸುವಂತಿಲ್ಲ. ರುದ್ರದೇವರ ಅನುಗ್ರಹ ದೊರೆಯದೇ ಬ್ರಹ್ಮದೇವರ ಭಗವಂತನ ಅನುಗ್ರಹ ದೊರೆಯುವದಿಲ್ಲ. 
  
  ಮುಕ್ತಿ ಕೊಡುವವನು ಭಗವಂತನೇ ಎಂದು ಶಾಸ್ತ್ರದಿಂದ ನಿರ್ಣಯವಾಗಿದೆ. ಹಾಗಂತ ನಾವು ಕೇವಲ ನೇರವಾಗಿ ಭಗವಂತನನ್ನು ಭಜಿಸಲು ಸಾಧ್ಯವೇನು? ಗುರುಗಳ, ದೇವತೆಗಳ, ರುದ್ರದೇವರ, ಪ್ರಾಣದೇವರ, ಮಹಾಲಕ್ಷ್ಮೀದೇವಿಯರ ಅನುಗ್ರಹ ಪಡೆದರೆ ಮಾತ್ರ ಶ್ರೀಹರಿಯ ಕಾರುಣ್ಯ ಪಡೆಯಲು ಸಾಧ್ಯ. ಹಾಗೆ, ಬ್ರಹ್ಮ ವಿಷ್ಣುಗಳ ಅನುಗ್ರಹ ಪಡೆಯಲು ಪಾರ್ವತೀಶರ ಅನುಗ್ರಹ ಅತ್ಯಂತ ಅನಿವಾರ್ಯ ಎಂದು ತೋರಿಸಲು ಈ ಘಟನೆ ನಡೆಯಿತು.