Upanyasa - VNU1013

ದಶಗ್ರೀವನ ಜನ್ಮ

ಶ್ರೀಮದ್ ರಾಮಾಯಣಮ್ — 126

ನಾರಾಯಣನಿಂದ ಭೀತರಾದ ಮಾಲ್ಯವಂತ ಸುಮಾಲಿಯರು ಲಂಕೆಯನ್ನು ತೊರೆದು ರಸಾತಲದಲ್ಲಿ ಅಡಗಿಕೊಳ್ಳುತ್ತಾರೆ. ಶೂನ್ಯವಾದ ಲಂಕೆಯನ್ನು ವಿಶ್ರವಸರು ತಮ್ಮ ಮಗನಿಗೆ ನೀಡುತ್ತಾರೆ. 

ಒಮ್ಮೆ ಸುಮಾಲಿ ತನ್ನ ಮೂರನೆಯ ಮಗಳು ಕೈಕಸಿಯನ್ನು ಕರೆದುಕೊಂಡು ಲಂಕೆಯನ್ನು ತೋರಿಸಿ, ಅವಳಲ್ಲಿರುವ ಮಾತ್ಸರ್ಯವನ್ನು ಹೆಚ್ಚು ಮಾಡುತ್ತಾನೆ. ವಿಶ್ರವಸರನ್ನು ನಿನ್ನ ರೂಪದಿಂದ ಒಲಿಸಿಕೊಂಡು ಅವರಿಂದ ಮಕ್ಕಳನ್ನು ಪಡೆ ಎಂದು ಉಪದೇಶಿಸುತ್ತಾನೆ. 

ಹೆಣ್ಣು ಮೂರು ಕುಲಗಳನ್ನು (ತಂದೆ, ತಾಯಿ, ಗಂಡನ ಕುಲಗಳು) ಉದ್ಧರಿಸುವವಳು ಎಂದು ಸಾತ್ವಿಕರು ತಿಳಿದರೆ, ಮೂರು ಕುಲವನ್ನು ಸಂಶಯದಲ್ಲಿ ಮುಳುಗಿಸುವವಳು ಹೆಣ್ಣು ಎನ್ನುವದು ತಾಮಸರ ಅಭಿಪ್ರಾಯ. ಒಂದೇ ವಿಷಯವನ್ನು ಸಾತ್ವಿಕ ತಾಮಸರು ವಿರುದ್ಧವಾಗಿ ತಿಳಿಯುತ್ತಾರೆ ಎಂಬ ಆಚಾರ್ಯರ ಸಿದ್ಧಾಂತದ ವಿವರಣೆ ಇಲ್ಲಿದೆ.

ಸ್ತ್ರೀಯರ ಸಾತ್ವಿಕ, ರಾಜಸ, ತಾಮಸರೂಪಗಳ ಕುರಿತ ಆಚಾರ್ಯರ ನಿರ್ಣಯದ ವಿವರಣೆ ಇಲ್ಲಿದೆ. 

ವಿಶ್ರವಸರ ಪತ್ನಿ ದೇವವರ್ಣಿನಿ ರಜಸ್ವಲೆಯಾದ ಕಾರಣಕ್ಕೆ ಅಗ್ನಿಹೋತ್ರದ ಸ್ಥಳಕ್ಕೆ ಬರುವದಿಲ್ಲ ಎಂದು ತಿಳಿದು ಕೈಕಸಿ ಸಂಧ್ಯಾಕಾಲದಲ್ಲಿ ಅಲ್ಲಿಗೆ ಬಂದು ವಿಶ್ರವಸರನ್ನು ಮೋಹಿಸಿ ಅವರಿಂದ ಮಕ್ಕಳನ್ನು ಪಡೆಯುತ್ತಾಳೆ.  

ಸಂಧ್ಯಾಕಾಲದ ಮೈಥುನದಿಂದ ಉಂಟಾಗುವ ದುಷ್ಫಲದ ವಿವರಣೆ ಇಲ್ಲಿದೆ. 

ದಶಗ್ರೀವನಿಗೆ ಹತ್ತು ಕುತ್ತಿಗೆಗಳು. ಚಿತ್ರಗಳಲ್ಲಿರುವಂತೆ ದಶಗ್ರೀವನ ತಲೆಗಳಿದ್ದದ್ದಲ್ಲ, ವಸ್ತುಸ್ಥಿತಿಯಲ್ಲಿ ಹೇಗಿದ್ದವು ಎನ್ನುವದರ ವಿವರಣೆ. 

ಕುಂಭಕರ್ಣ, ಶೂರ್ಪಣಖೆ, ವಿಭೀಷಣರ ಜನ್ಮವಾದ ಬಗೆ. 

Play Time: 49:43

Size: 3.84 MB


Download Upanyasa Share to facebook View Comments
10295 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  3:10 PM , 29/07/2022

  Shri Rama Jai Rama Jai Jai Rama    🙏🙏🙏
 • Venkatesh. Rajendra . Chikkodikar.,Mudhol

  3:10 PM , 29/07/2022

  Shri Rama Jai Rama Jai Jai Rama    🙏🙏🙏
 • Jayashree karunakar,Bangalore

  9:39 PM , 25/07/2022

  ಗುರುಗಳೇ 
  
  ವಿಭೀಷಣರ ಜನ್ಮ ಚರಮ ಜನ್ಮ ಎಂದಾದರೆ, ಅವರು ಸಾವೇ ಇಲ್ಲದ ಚಿರಂಜೀವಿಗಳು ಹೇಗಾಗುತ್ತಾರೆ? ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು?

  Vishnudasa Nagendracharya

  ಚಿರಂಜೀವಿ ಎಂದರೆ ಬ್ರಹ್ಮದೇವರ ಒಂದು ದಿನ ಪೂರ್ತಿ ಬದುಕುವಷ್ಟು ಆಯುಷ್ಯ ಉಳ್ಳವರು ಎಂದರ್ಥ. ಹೊರತು ಸಾವೇ ಇಲ್ಲದವರು ಎಂದಲ್ಲ. 
  
  ವಿಭೀಷಣರು, ಪ್ರಹ್ಲಾದರು, ಕೃಪಾಚಾರ್ಯರು ಮುಂತಾದ ಮಹಾನುಭಾವರು ತಮ್ಮ ಚರಮ ಜನ್ಮಗಳಲ್ಲಿ ಈ ರೀತಿಯಾಗಿ ಚಿರಂಜೀವಿಗಳಾಗುತ್ತಾರೆ. 
 • Sowmya,Bangalore

  1:43 PM , 27/07/2022

  🙏🙏🙏
 • Vishwnath MJoshi,Bengaluru

  4:46 PM , 24/07/2022

  ಗುರುಗಳಿಗೆ ನಮಸ್ಕಾರ
  ವಿಶ್ರವಸ ಋಷಿಗಳು ತಾವು ಶ್ರೇಷ್ಠ ಋಷಿಗಳ ಮಗನಾಗಿ ಪತ್ನಿ ಇದ್ದಾಗಲೆ ಕೈಕಸಿಯನ್ನು ಮದುವೆಯಾದದ್ದು ತಪ್ಪುಅಲ್ಲವೆ?
  
  ಶೂರ್ಪಣಖೆ ಮತ್ತು ವಿಭೀಷಣರ ಸ್ವರೂಪ ಯಾವುದು

  Vishnudasa Nagendracharya

  1. ಅನೇಕ ಸ್ತ್ರೀಯರನ್ನು ಮದುವೆಯಾಗುವದು, ಕಲಿಯುಗದ 20ನೆಯ ಶತಮಾನದಲ್ಲಿ ತಪ್ಪು (ಕಾನೂನು ವಿರುದ್ಧ). ಹಿಂದಿನ ಇತರ ಯುಗಗಳಲ್ಲಿ ಅಲ್ಲ. ಹಿಂದಿನ ಕಾಲದಲ್ಲಿ ಒಬ್ಬ ವ್ಯಕ್ತಿ ಅವಶ್ಯವಾಗಿ ಅನೇಕ ಮದುವೆಗಳನ್ನು ಆಗಬಹುದಿತ್ತು. ಧರ್ಮಶಾಸ್ತ್ರಕ್ಕೆ ವಿರೋಧವಿಲ್ಲ. 
  
  2. ಬಹುಪತ್ನಿತ್ವಕ್ಕೂ ಸಹ ಅನಿವಾರ್ಯ ಕಾರಣಗಳಿವೆ. ಮುಂದೆ ಅದನ್ನು ಪ್ರತ್ಯೇಕವಾಗಿ ಒಮ್ಮೆ ಚರ್ಚಿಸುತ್ತೇನೆ. 
  
  3. ರಾಕ್ಷಸರ ಸೃಷ್ಟಿಯಾಗಬೇಕಾಗಿದೆ, ಪುಲಸ್ತ್ಯರೂ ಸಹ ತಮ್ಮ ಪತ್ನಿಗೆ ಆ ಮಾತನ್ನು ತಿಳಿಸಿದ್ದಾರೆ. ಹೀಗಾಗಿ, ವಿಶ್ರವಸ್ ಋಷಿಗಳು ಕೈಕಸಿಯನ್ನು ಮದುವೆಯಾದರು. 
  
  ವಿಭೀಷಣರು ಎನ್ನುವದೇ ಮೂಲಸ್ವರೂಪ. ಮೋಕ್ಷಯೋಗ್ಯರಾದ ರಾಕ್ಷಸ ಜೀವ ಅದು. ವಿಭೀಷಣ ಜನ್ಮ ಚರಮ ಜನ್ಮ. ಆ ನಂತರ ಮುಕ್ತಿ. 
  
  ಶೂರ್ಪಣಖೆಯ ಕುರಿತು ವಿವರ ತಿಳಿದಿಲ್ಲ. 
 • Jayashree karunakar,Bangalore

  3:15 PM , 17/07/2022

  ದಶಗ್ರೀವ ಅನ್ನುವ ಹೆಸರನ್ನೇ ಕೇಳಿರಲಿಲ್ಲ.... 
  
  ಹತ್ತು ತಲೆ ಮಾತ್ರ ಇತ್ತು ಅಂತ ತಿಳಿದಿದ್ದೆ.. .. ಚಿತ್ರಗಳಲ್ಲಿರುವ ಹಾಗ.... ಕಂಠವೂ ಇತ್ತು ಅಂತ ಗೊತ್ತಿರಲಿಲ್ಲ.... 
  
  ನೀವು ಹೇಳುವ ರಾಮಾಯಣದಲ್ಲಿ ಎಷ್ಟೋ ಗೊತ್ತಿರದ ವಿಷಯಗಳನ್ನು ತಿಳಿಯುತಿದ್ದೇವೆ ಗುರುಗಳೇ... 
  
  
  ತುಂಬಾ ಚೆನ್ನಾಗಿ ಮೂಡಿಬರುತ್ತಿದೆ... 
  
  ಸಮಾಗಮದ ಒಂದು ಘಟನೆಯಲ್ಲಿ ಅದೆಂತಹ ಧರ್ಮ ಸೂಕ್ಷ್ಮಗಳನ್ನು ತಿಳಿಸಿದ್ದೀರಿ... ಎಲ್ಲಿಯೂ ಕೇಳಿರಲಿಲ್ಲ... 
  
  
  ನಿಮ್ಮಿಂದ ಹರಿದು ಬರುವ ಜ್ಞಾನಧಾರೆಯನ್ನು ಶೇಖರಿಸಿಕೊಳ್ಳುವಷ್ಟು ದೊಡ್ಡ ಪಾತ್ರೆ ನಮ್ಮ ಬುದ್ದಿಯಲ್ಲಿ ಇಲ್ಲ...ಶ್ರವಣ ಮಾಡುತ್ತೇವೆ... ರಸಾಸ್ವಾದ ಮಾಡುತ್ತೇವೆ... ಮತ್ತಷ್ಟು ಇನ್ನಷ್ಟು ಶ್ರವಣ ಮಾಡಲು ಮನಸ್ಸು ಹಂಬಲಿಸುತ್ತದೆ... ನಾವು ಮಾಡಿದ ಪಾಪಗಳು ಭಸ್ಮ ವಾಗುತ್ತಿದೆ... ಆದರೆ ತತ್ವಗಳನ್ನೆಲಾ ನಮ್ಮ ಬುದ್ದಿಯಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನನಗಂತೂ ಇಲ್ಲ ಗುರುಗಳೇ 🙏🙏