28/06/2022
ಶ್ರೀಮದ್ ರಾಮಾಯಣಮ್ — 127 ವೈಶ್ರವಣರ ವೈಭವವನ್ನು ಕಂಡು ಮಾತ್ಸರ್ಯಕ್ಕೊಳಗಾದ ಕೈಕಸಿ, ತನ್ನ ಮಕ್ಕಳಿಗೂ ಆ ರೀತಿ ಐಶ್ವರ್ಯ ಪಡೆಯುವಂತೆ ಸೂಚಿಸುತ್ತಾಳೆ. ಅದರಂತೆ ಮೂರೂ ಜನ ಮಕ್ಕಳು ತಪಸ್ಸಿಗಾಗಿ ತೆರಳುತ್ತಾರೆ. ಋಷಿಗಳ ತಪಸ್ಸಿಗೂ ರಾಕ್ಷಸರ ತಪಸ್ಸಿಗೂ ಇರುವ ವ್ಯತ್ಯಾಸ. ವಿಭೀಷಣ, ಕುಂಭಕರ್ಣ ಮತ್ತು ದಶಗ್ರೀವರ ವಿಭಿನ್ನ ತಪಸ್ಸಿನ ಕ್ರಮ ದಶಗ್ರೀವ ಅಮರತ್ವವನ್ನು ಕೇಳಿದರೂ ನೀಡುವದಿಲ್ಲ, ಆದರೆ ವಿಭೀಷಣರಿಗೆ ಕೇಳದೆಯೇ ಅಮರತ್ವವನ್ನು ಬ್ರಹ್ಮದೇವರು ನೀಡುತ್ತಾರೆ. ಅದರ ಹಿಂದಿನ ಕಾರಣದ ನಿರೂಪಣೆ ಇಲ್ಲಿದೆ. ವಿಭೀಷಣರು ಕೇಳಿದ ಎರಡು ಸರ್ವಶ್ರೇಷ್ಠ ವರಗಳು, ಮತ್ತು ಇತಿಹಾಸದಲ್ಲಿಯೇ ಅಪೂರ್ವವಾದ ಮೂರನೆಯ ವರ. ದೇವತೆಗಳ ಪ್ರಾರ್ಥನೆಯಂತೆ ಕುಂಭಕರ್ಣನನ್ನು ಸರಸ್ವತೀದೇವಿಯರು ಮೋಹಕ್ಕೀಡು ಮಾಡಿ ನಿದ್ರೆಯ ವರವನ್ನು ಕೇಳುವಂತೆ ಮಾಡಿದ ಘಟನೆಯ ವಿವರ.
Play Time: 47:45
Size: 3.84 MB