Upanyasa - VNU1015

ಲಂಕೆ ಮಂಡೋದರಿಯರ ಪ್ರಾಪ್ತಿ

ಶ್ರೀಮದ್ ರಾಮಾಯಣಮ್ — 128

ವೈಶ್ರವಣರ ವಶವಾಗಿದ್ದ ಲಂಕೆಯನ್ನು ಪಡೆದು ಮಯಾಸುರರ ಮಗಳು ಮಂಡೋದರಿಯನ್ನು ರಾವಣ ಮದುವೆಯಾದ ಘಟನೆಯ ವಿವರ.

ತನಗಿಂತ ಸಂಬಂಧದಲ್ಲಿ ಹಿರಿಯರಾದ ಸೋದರಮಾವ ಪ್ರಹಸ್ತ, ತಾತ ಸುಮಾಲಿ ಎಲ್ಲರನ್ನೂ ತನ್ನ ಕಿಂಕರರನ್ನಾಗಿ ಮಾಡಿಕೊಂಡ ರಾವಣನ ದರ್ಪ. 

ಶೂರ್ಪಣಖೆ, ಕುಂಭಕರ್ಣ, ವಿಭೀಷಣರ ಮದುವೆಯ ವಿವರ. 

Play Time: 46:50

Size: 3.84 MB


Download Upanyasa Share to facebook View Comments
6404 Views

Comments

(You can only view comments here. If you want to write a comment please download the app.)
 • Sanjeeva Kumar,Bangalore

  9:48 PM , 28/09/2022

  ಅನಂತ ಪ್ರಣಾಮಗಳು ಗುರುಗಳೆ, ಧನ್ಯೋಸ್ಮಿ 🙏🙏
 • Venkatesh. Rajendra . Chikkodikar.,Mudhol

  7:32 PM , 30/07/2022

  Shri Rama Jai Rama Jai Jai Rama 🙏🙏🙏
 • Sowmya,Bangalore

  1:36 PM , 29/07/2022

  🙏🙏🙏
 • Jayashree karunakar,Bangalore

  3:02 PM , 24/07/2022

  ಗುರುಗಳೇ 
  
  ವಿಶ್ರವಸ್ ಋಷಿಗಳಿಗೆ ತಮ್ಮದೇ ಮಗನನ್ನು ನಿಗ್ರಹಿಸುವಷ್ಟು ಸಾಮರ್ಥ್ಯವಿಲ್ಲವೇ? 
  ವೈಶ್ರವಣರನ್ನೇ ಲಂಕೆಯನ್ನು ತೊರೆಯುವಂತೆ ಏಕೆ ಹೇಳಿದರು? ದಶಗ್ರೀವ ಮುಂದೆ ಕೈಲಾಸ ಪರ್ವತಕ್ಕೂ  ಬರುವದಿಲ್ಲವೆಂಬ ಖಾತ್ರಿ ಏನು? 
  
  ದುರಾಸೆಯ ದಶಗ್ರೀವನನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಯಾಕೆ ಮಾಡಲಿಲ್ಲ? 
  
  2. ಹಿಂದಿನ ಉಪನ್ಯಾಸದಲ್ಲಿ ಮಾಲಿ ಸುಮಾಲಿ ಮುಂತಾದ ರಾಕ್ಷಸರು ಭಾಗವನಿಗೆ ಭಯಪಟ್ಟು ರಸಾತಳದಲ್ಲಿ ಅಡಗಿಕುಳಿತಿದ್ದರು ಅಂತಹೇಳಿದಿರಿ, ಅಲ್ಲಿಗೆ ಭಗವಂತ ಬರುವುದಿಲ್ಲ ಅಂತ ಅವರಿಗೆ ಗೊತ್ತಿತ್ತಾ? 
   ಭಗವಂತ ಅಲ್ಲಿಗೆ ಯಾಕೆ ಹೋಗುವುದಿಲ್ಲ ಗುರುಗಳೇ? 
  
  3. ಅಪ್ಸರೆಯರು ಎಷ್ಟು ಬೇಕಾದರೂ ಮದುವೆಯಾಗಬಹುದು.... ರಾಜರೂ ಎಷ್ಟು ಬೇಕಾದರೂ ಮದುವೆಯಾಗಬಹದು... ನಿಯಮ ಇಬ್ಬರಿಗೂ ಒಂದೇನಾ? ಯಾಕೆ?

  Vishnudasa Nagendracharya

  1 a. ರಾವಣನಿಗೆ ಬ್ರಹ್ಮದೇವರ ವರವಿದೆ. ಇಂದ್ರಾದಿ ದೇವತೆಗಳಿಗೇ ಅವನನ್ನು ನಿಗ್ರಹಿಸಲು ಸಾಧ್ಯವಿಲ್ಲ. ಅಂದ ಮೇಲೆ ಪುಲಸ್ತ್ಯರು ಹೇಗೆ ನಿಗ್ರಹಿಸಲು ಸಾಧ್ಯ. ಮತ್ತು ರಾವಣ ಮಾತು ಕೇಳುವ ಮಗನಲ್ಲವಲ್ಲ!
  
  1 b. ದೇವರ ಇಚ್ಛೆಯಂತೆ ರಾಕ್ಷಸ ಮಕ್ಕಳನ್ನು ಪಡೆದಿದ್ದಾರೆ, ವಿಶ್ರವಸರು. ರಾಕ್ಷಸರು ರಾಕ್ಷಸರಂತೆಯೇ ವರ್ತಿಸುತ್ತಾರೆ. ಬೇವಿನ ಮರ ಬೆಳೆಸಿ ಮಾವಿನ ಫಲವನ್ನು ವಿಶ್ರವಸ್ ಋಷಿಗಳು ಅಪೇಕ್ಷಿಸುವದಿಲ್ಲ. ಶುದ್ಧಫಲವನ್ನು ನೀಡಲು ವಿಭೀಷಣರನ್ನೂ ಪುತ್ರರನ್ನಾಗಿ ಪಡೆದಿದ್ದಾರೆ. 
  
  1 c. ದಶಗ್ರೀವ ಕೈಲಾಸಕ್ಕೂ ಬರುತ್ತಾನೆ, ವೈಶ್ರವಣರ ಲಕ್ಷಲಕ್ಷ ಭೃತ್ಯರನ್ನೂ ಕೊಲ್ಲುತ್ತಾನೆ, ಕೈಲಾಸ ಪರ್ವತವನ್ನೇ ಬುಡಮೇಲು ಮಾಡಹೋಗಿ ಶಾಪಕ್ಕೀಡಾಗುತ್ತಾನೆ, ದುರವಸ್ಥೆಗೀಡಾಗುತ್ತಾನೆ. ಮುಂದೆ ಕೇಳುತ್ತೀರಿ. 
  
  2. ಹಾವೊಂದು ಮನೆ ಸೇರಿದಾಗ ಅದನ್ನು ಓಡಿಸಲು ಪ್ರಯತ್ನ ಪಡುತ್ತಾರೆ, ಅಗ ಅದು ಹೊರ ಬಂದು ತನ್ನ ಬಿಲ ಸೇರುತ್ತದೆ. ಭಗವಂತನಿಗೆ ಅಪೇಕ್ಷೆ ಇದ್ದದ್ದೇ ಸುಮಾಲಿ ಮೊದಲಾದವರು ರಸಾತಲ ಸೇರಲಿ ಎಂದು. ಅವರು ಸೇರಿದರು. ಭಗವಂತ ಸುಮ್ಮನಾದ. ಶ್ರೀರಾಮಚಂದ್ರನಾಗಿ ಕೊಂದು ಹಾಕಿದ. ದೇವರ ಕಾರ್ಯ ಬರಿಯ ಕೊಲ್ಲುವದಿಲ್ಲ. ಮುಂದಾಗುವ ಸಕಲ ಕಾರ್ಯಗಳನ್ನೂ ಸಹ ನಡೆಸುವದು. ಮುಂದಿನ ಘಟನೆಗಳು ನಡೆಯಬೇಕಾಗಿವೆ. ಹೀಗಾಗಿ ರಸಾತಲಕ್ಕೆ ಹೋಗಿ ಕೊಲ್ಲಲಿಲ್ಲ. 
  
  3 a. ಅಪ್ಸರೆಯರ ಕುರಿತು ವಿಶ್ವನಂದಿನಿಯಯಲ್ಲಿ ಈಗಾಗಲೇ ಅನೇಕ ಬಾರಿ ತಿಳಿಸಲಾಗಿದೆ. ಇದೇ ರಾವಣ ರಂಭೆಯ ಮೇಲೆ ಅತ್ಯಾಚಾರ ಮಾಡುವ ಘಟನೆಯನ್ನು ವಿವರಿಸುವಾಗ ಮತ್ತಷ್ಟು ವಿವರಗಳನ್ನು ತಿಳಿಸುತ್ತೇನೆ. ಯ
  
  3 b. ಅಪ್ಸರೆಯರದು ಶಾಶ್ವತ ಮದುವೆಯಲ್ಲ. ತಾತ್ಕಾಲಿಕ "ಸಂಕೇತ". ರಾಜರದು ಶಾಶ್ವತ ಮದುವೆ. ಬಹುಪತ್ನಿತ್ವದ ಕುರಿತು ಪ್ರತ್ಯೇಕ ಉಪನ್ಯಾಸ ಮಾಡಬೇಕು. ಕಾಮೆಂಟುಗಳಲ್ಲಿ ತಿಳಿಸುವಷ್ಟು ಪುಟ್ಟ ವಿಷಯವಲ್ಲ. 
  
  
 • M V Lakshminarayana,Bengaluru

  2:19 PM , 20/07/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಇಲ್ಲಿಯ ತನಕ ಕೇಳದ ರಾಮಾಯಣದ ಭಾಗಗಳನ್ನು ತಿಳಿಸುತ್ತಿರುವ ತಮಗೆ ಅನಂತಾನಂತ ಶಿರಸಾಷ್ಟಾಂಗ ನಮಸ್ಕಾರಗಳು