28/06/2022
ಶ್ರೀಮದ್ ರಾಮಾಯಣಮ್ — 129 ಧರ್ಮದಿಂದ ದೊಡ್ಡವರು ಪ್ರೀತರಾಗುತ್ತಾರೆ, ಅಧರ್ಮ ಮಾಡಿದರೆ ಕುಪಿತರಾಗುತ್ತಾರೆ ಎಂದು ತಮ್ಮ ದೃಷ್ಟಾಂತದಿಂದಲೇ ವೈಶ್ರವಣರು ದಶಗ್ರೀವನಿಗೆ ಬುದ್ಧಿ ಹೇಳಿದರೆ ಅವನು ಅವರ ದೂತನನ್ನು ಕೊಂದು ಹಾಕುವ ಘಟನೆಯ ವಿವರ. ಮೇಘನಾದನ ಭಯಂಕರ ಜನನ, ತಾಮಸಿಕವಾದ ಕ್ರಮದಲ್ಲಿ ರಾವಣ ಅವನ ಬೆಳೆಸಿದ್ದು. ಯಾವ ಯುದ್ಧಕ್ಕೆ ಕರೆದುಕೊಂಡು ಹೋದರು ನಿದ್ರೆಗೆ ಜಾರುತ್ತಿದ್ದ ಕುಂಭಕರ್ಣನಿಂದ ರಾವಣನಿಗೆ ಅಪಾರ ಕಿರಿಕಿರಿಯುಂಟಾಗುತ್ತಿರುತ್ತದೆ. ಸಮಸ್ಯೆಯ ಪರಿಹಾರಕ್ಕೆ ಕುಂಭಕರ್ಣನಿಗೆ ನಿದ್ರಾಗೃಹವನ್ನೇ ನಿರ್ಮಾಣ ಮಾಡಿಕೊಡುವ ಪ್ರಸಂಗವನ್ನಿಲ್ಲಿ ಕೇಳುತ್ತೇವೆ. ನಂದನವನ್ನು ರಾವಣ ನಾಶ ಮಾಡಿದ ಘಟನೆ. ಕುಬೇರರು ಒಂದು ಪ್ರಸಂಗದಲ್ಲಿ ಪಾರ್ವತೀದೇವಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಕ್ಕಾಗಿ ತಮ್ಮ ಎಡಗಣ್ಣಿಗೆ ತೊಂದರಯನ್ನು ಅನುಭವಿಸುವ ಘಟನೆ. ಆ ನಂತರ ರುದ್ರದೇವರ ಕುರಿತು ತಪಸ್ಸು ಮಾಡಿ ಅವರ ಅನುಗ್ರಹದಿಂದ ಅವರ ಸಖ್ಯವನ್ನು ಕುಬೇರರು ಗಳಿಸುವ ಘಟನೆಯ ಚಿತ್ರಣ.
Play Time: 35:49
Size: 3.84 MB