Upanyasa - VNU1017

ಪುಷ್ಪಕವಿಮಾನದ ಅಪಹರಣ

ಶ್ರೀಮದ್ ರಾಮಾಯಣಮ್ — 130

ವೈಶ್ರವಣರ ಮೇಲೆ ಆಕ್ರಮಣ ಮಾಡಿ, ಅವರನ್ನು ಸೋಲಿಸಿ, ಲಕ್ಷಾಂತರ ಯಕ್ಷರನ್ನು ರಾವಣ ಪುಷ್ಪಕವಿಮಾನವನ್ನು ಅಪಹರಣ ಮಾಡಿದ ಘಟನೆಯ ಚಿತ್ರಣ.

ರಾವಣನಿಂದ ಯಕ್ಷರ ಮೇಲೆ ಆಕ್ರಮಣ

ಒಂದು ಲಕ್ಷ ವಿಚಿತ್ರ ರೂಪಗಳನ್ನು ಸ್ವೀಕರಿಸಿ ರಾವಣನಿಂದ ಮಾಯಾಯುದ್ಧ

ಪುಷ್ಪಕವಿಮಾನದ ವೈಭವ

ಸಕಲ ಋತುಗಳಲ್ಲಿಯೂ ಹಣ್ಣು ಬಿಡುತ್ತಿದ್ದ ವೃಕ್ಷಗಳಿಂದ ಮೊದಲು ಮಾಡಿ ಬಂಗಾರದ ಕಂಬಗಳಿಂದ ಕೂಡಿದ ಪುಷ್ಪದ ವೈಭವ.

Play Time: 35:49

Size: 3.84 MB


Download Upanyasa Share to facebook View Comments
7072 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  8:27 PM , 05/08/2022

  Shri Rama Jai Rama Jai Jai Rama 🙏🙏🙏
 • Sowmya,Bangalore

  2:33 PM , 02/08/2022

  🙏🙏🙏
 • Madhu Simha,Bangalore

  7:30 AM , 28/07/2022

  ನಮಸ್ಕಾರ ಆಚಾರ್ಯರೆ, ಬ್ರಹ್ಮದೇವರು ವೈಶ್ರವಣರಿಗೆ ಲಂಕಾ ನೀಡಿದ್ದರೆ ದುಷ್ಟ ರಾಕ್ಷಸರಿಗೆ ಅಪಹರಣ ಮಾಡಲಿಕ್ಕೆ ಆಗುವುದಿಲ್ಲ ಎಂದು ಕೇಳಿದ್ದೆವು. ಆದರೆ ಇಲ್ಲಿ ಬ್ರಹ್ಮದೇವರು ನೀಡಿದ ಪುಷ್ಪಕ ವಿಮಾನ ಅಪಹರಿಸಲು ಆಯಿತು. ಹೇಗೆ ಅರ್ಥಿಸುವುದು?
 • Jayashree karunakar,Bangalore

  10:15 PM, 25/07/2022

  ಗುರುಗಳೇ 
  
  ತ್ರಿಪುರಾಸುರ ಸಂಹಾರದ ಉಪನ್ಯಾಸದಲ್ಲಿ ರುದ್ರದೇವರು ದೇವತಾಸ್ವರೂಪವಾದ ವಿಶ್ವಕರ್ಮ ನಿರ್ಮಾಣ ಮಾಡಿದ ರಥವನ್ನು ಏರಿ, ಬಿಲ್ಲು ಬಾಣಗಳನ್ನು ಸುಲಭವಾಗಿ ಎತ್ತಲು ಸಾಧ್ಯವಾಗುವದಿಲ್ಲ, ಭಗವಂತ ಬ್ರಹ್ಮದೇವರ ಸನ್ನಿಧಾನವಿದ್ದದ್ದಕ್ಕಾಗಿ(ಉದ್ದೇಶ ಸತ್ಕರ್ಮವಾಗಿದ್ದರೂ ). 
  
  ಆದರೆ ಇಲ್ಲಿ ಬ್ರಹ್ಮದೇವರೇ ಕೊಟ್ಟ ಪುಷ್ಪಕವಿಮಾನವನ್ನು, ದುಷ್ಟ ಕಾರ್ಯಕ್ಕಾಗಿಯೇ ದುರ್ನಡತೆಯ ದಶಗ್ರೀವನಿಗೆ ಅಪಹರಣ ಅಲ್ಲ, ಮುಟ್ಟಲು ಹೇಗೆ ಸಾಧ್ಯವಾಯಿತು?

  Vishnudasa Nagendracharya

  ಬ್ರಹ್ಮದೇವರು, ದೇವತೆಗಳು ನಿರ್ಮಾಣ ಮಾಡಿದ್ದಾರೆ ಎಂದ ಮಾತ್ರಕ್ಕೆ ಅದನ್ನು ಮತ್ತೊಬ್ಬರು ಎತ್ತಲಿಕ್ಕಾಗುವದಿಲ್ಲ, ಉಪಯೋಗಿಸಲಿಕ್ಕಾಗುವದಿಲ್ಲ, ಹಾಳು ಮಾಡಲಿಕ್ಕಾಗುವದಿಲ್ಲ ಎಂದೇನೂ ಇಲ್ಲ. 
  
  ಮಣ್ಣು, ಕಲ್ಲುಗಳನ್ನು ನೋಡುತ್ತೀರಲ್ಲ, ಅದೂ ಸಹ ಬ್ರಹ್ಮದೇವರ ಸೃಷ್ಟಿಯೇ. ನಾವು ಕಲ್ಲನ್ನು ಎತ್ತುತ್ತೇವೆ ತಾನೆ?
  
  ಯಾವುದನ್ನು ಯಾರು ಉಪಯೋಗಿಸಬಾರದು ಎಂದು ಸಂಕಲ್ಪಿಸಿ ಬ್ರಹ್ಮದೇವರು ಸೃಷ್ಟಿ ಮಾಡುತ್ತಾರೆಯೋ ಅಂತಹುದನ್ನು ಬೇರೆಯವರಿಗೆ ಉಪಯೋಗಿಸಲು ಸಾಧ್ಯವಾಗುವದಿಲ್ಲ. 
  
  ಉದಾಹರಣೆಗೆ ನಾವು ತಿರುಪತಿಯ ಬೆಟ್ಟಕ್ಕೆ ಹೋಗಿ ಬರುತ್ತೇವೆ. ಹಿಮಾಲಯದಲ್ಲಿ ಸಾಕಷ್ಟು ಬೆಟ್ಟಗಳಿಗೆ ಹೋಗಿ ಬರುತ್ತೇವೆ. ಹಾಗೆ ಮೇರು ಪರ್ವತಕ್ಕೆ ಹೋಗಲು ಸಾಧ್ಯವೇನು? ಇಲ್ಲ. ಕಾರಣ, ಬ್ರಹ್ಮದೇವರು ಅದನ್ನು ಮನುಷ್ಯರಿಗೆ ಅಗಮ್ಯವಾಗಿಯೇ ಸೃಷ್ಟಿ ಮಾಡಿದ್ದಾರೆ. 
  
  ಹಾಗೆ, ಬ್ರಹ್ಮದೇವರು ಪುಷ್ಪಕವಿಮಾನವನ್ನು ಬ್ರಹ್ಮದೇವರು ಸೃಷ್ಟಿಮಾಡಿರುವದೇ ಶ್ರೀರಾಮದೇವರ ಪ್ರಧಾನ ಸೇವೆಗಾಗಿ, ಮತ್ತು ಭರತರನ್ನು ಉಳಿಸಲಿಕ್ಕಾಗಿ. ರಾಮದೇವರು ಅದನ್ನು ಉಪಯೋಗಿಸಬೇಕು ಎಂದರೆ ಅದು ರಾವಣನ ಬಳಿ ಬರಬೇಕು. ರಾವಣನ ಬಳಿ ಬರಬೇಕು ಎಂದರೆ ಅದನ್ನು ಅವನು ಉಪಯೋಗಿಸುವಂತಿರಬೇಕು. ಹೀಗಾಗಿ ಬ್ರಹ್ಮದೇವರು ಸೃಷ್ಟಿ ಮಾಡಬೇಕಾದರೇ ಇದು ರಾವಣನಿಗೂ ಉಪಯೋಗಿಸಲು ಸಾಧ್ಯವಾಗಲಿ ಎಂದು ಸೃಷ್ಟಿ ಮಾಡಿದ್ದರು. ಆದ್ದರಿಂದ ರಾವಣನಿಗೆ ಅದನ್ನು ಅಪಹರಿಸಿ ಉಪಯೋಗಿಸಲು ಸಾಧ್ಯವಾಯಿತು. 
 • Nalini Premkumar,Mysore

  11:10 PM, 25/07/2022

  🙏🙏🙏