Upanyasa - VNU1018

ಪುಷ್ಪಕ ಹೇಗೆ ಚಲಿಸುತ್ತಿತ್ತು

ಶ್ರೀಮದ್ ರಾಮಾಯಣಮ್ — 131

ಪುಷ್ಪಕ ವಿಮಾನ ಯಾವ ರೀತಿಯಾಗಿ ಕೆಲಸ ಮಾಡುತ್ತಿತ್ತು ಎಂಬ ವಿಷಯದೊಂದಿಗೆ ರಾವಣನಿಗೆ ನಂದೀಶ್ವರರು ಶಾಪ ನೀಡಿದ ವಿವರ ಇಲ್ಲಿದೆ. 

ಕೈಲಾಸದ ಮಹಿಮೆ

ಕೈಲಾಸದ ಬಳಿ ಇರುವ “ಶರವಣ” ಎಂಬ ಪರ್ವತದ ಬಳಿ ಪುಷ್ಪಕ ಬಂದಾಗ ಪುಷ್ಪಕವಿಮಾನ ಸ್ತಬ್ಧವಾಗಿ ಕೈಲಾಸವಾಸಿಯ ಸಾಮರ್ಥ್ಯದಿಂದ ನೆಲದ ಮೇಲೆ ನಿಂತು ಬಿಡುತ್ತದೆ. 

ಏಕೆ ಹೀಗಾಯಿತು ಎಂದು ತಿಳಿಯದೇ ರಾವಣ ಅವನ ಭೃತ್ಯರು ಅಲ್ಲಿದ್ದಾಗ, ಈ ರಾಕ್ಷಸರನ್ನು ಅಲ್ಲಿಂದ ಕಳುಹಿಸಲು ನಂದೀಶ್ವರರಿಗೆ ರುದ್ರದೇವರು ಆಜ್ಞೆ ಮಾಡುತ್ತಾರೆ. 

ಆ ಸಂದರ್ಭದಲ್ಲಿ ನಡೆದ ಘಟನೆಗಳು, ಮತ್ತು “ಕಪಿಗಳಿಂದಲೇ ನಿನ್ನ ಕುಲ ನಾಶವಾಗುತ್ತದೆ” ಎಂದು ನಂದೀಶ್ವರರು ರಾವಣನಿಗೆ ಶಾಪ ನೀಡಿದ ಘಟನೆಯ ವಿವರ ಇಲ್ಲಿದೆ. 

Play Time: 38:03

Size: 3.84 MB


Download Upanyasa Share to facebook View Comments
6882 Views

Comments

(You can only view comments here. If you want to write a comment please download the app.)
  • Venkatesh. Rajendra . Chikkodikar.,Mudhol

    10:57 PM, 05/08/2022

    Shri Rama Jai Rama Jai Jai Rama🙏🙏🙏
  • Sowmya,Bangalore

    1:41 PM , 03/08/2022

    🙏🙏🙏
  • Laxmi Padaki,Pune

    7:09 AM , 28/07/2022

    ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು. ಎಲ್ಲರೂ ಆಗಲೇ ಒಳ್ಳೆಯ ಅನಿಸಿಕೆಗಳನ್ನು ನೀಡಿದ್ದಾರೆ. ನಿಜ, ನಾವು ಈವರೆಗೂ ತಿಳಿದುಕೊಂಡಿದ್ದು ಶೂನ್ಯ. ತಮ್ಮ ಅದ್ಯಯನ ಅಪಾರ.ನಮಗೆ ಇಂತಹ ವಿಷಯ ಗಳು ತಿಳಿದು ಬಹಳಷ್ಟು ಹರ್ಷ ಹಾಗೂ ರೋಮಾಂಚನ. ಮತ್ತೆ ಮತ್ತೆ ಎಲ್ಲರೂ ಕೇಳುತ್ತಿದ್ದೇವೆ.ಧನ್ಯೊಸ್ಮಿ ಗುರುಗಳೆ.ನಮೋ ನಮಃ.

    Vishnudasa Nagendracharya

    ತುಂಬ ಸಂತೋಷ.
  • Madhusudana.A,Mangalore

    4:04 PM , 27/07/2022

    👌👌
  • Jayashree karunakar,Bangalore

    11:17 PM, 26/07/2022

    ರಾಮಾಯಣ ಅಂದರೆ ಪುಷ್ಪಕ ವಿಮಾನ ಬರುತ್ತದೆ  , ಹಾಗೆ ಸುಮ್ಮನೆ ಪುಷ್ಪಕ ವಿಮಾನ ಇತ್ತು ಅಂತ ಹೇಳಿಕೊಂಡು ಹೋಗಬಹುದು ಅಂತ ಅಂದುಕೊಂಡಿದ್ದೆ ಗುರುಗಳೇ.... ಆದರೆ ಇಷ್ಟು ವಿಸ್ತಾರವಾಗಿ ಪ್ರತಿಯೊಂದನ್ನೂ ತಿಳಿಯುತ್ತೇವೆ ಅಂತ ಅಂದುಕೊಂಡಿರಲಿಲ್ಲ..ಅದರೊಳಗೆ ಒಬ್ಬ ಜೀವ ಇದ್ದಾನೆ ಅಂತ ಗೊತ್ತೇ ಇರಲಿಲ್ಲ . ನಮ್ಮ ಮನಸಿನಲ್ಲಿ ಬರಬಹುದಾದ ಸಂಶಯಗಳನ್ನೂ ನಾವು ಕೇಳದೇನೆ ಪರಿಹರಿಸುತ್ತಿದ್ದೀರಿ.... ಮನಸ್ಸಿಗೆ ಮೌನ ಆವರಿಸುತ್ತಿದೆ.... ಮೈರೋಮಾಂಚನ ವಾಗುತ್ತಿದೆ.... ಏಕೆಂದರೆ ಇಂತಹ ವಿಶೇಷವಾದ ವಿಷಯಗಳನ್ನು ಎಲ್ಲಿಯೂ ಕೇಳಿಲ್ಲ... ಒಂದೇ ಎರಡೇ... ಕೇಳದ ವಿಷಯಗಳನ್ನು ಎಣಿಸಲು ಸಾಧ್ಯವಾಗುತ್ತಿಲ್ಲ... 
    
    "ನಿನ್ನ ಕರ್ಮವೇ ನಿನ್ನನ್ನು ಕೊಲ್ಲುತ್ತದೆ" ಆಗಲೇ ನಿನ್ನನು ನಿನ್ನ ಕರ್ಮಗಳು ಕೊಂದಿವೆ ಆದರೆ ನಿನ್ನ ದೇಹದ ಸಾವಾಗಬೇಕಿದೆ ಅಷ್ಟೇ" ಅಬ್ಬಾ !!ಅದೆಷ್ಟು ತೀಕ್ಷ್ಣವಾದ  ಕಠೋರವಾದ ಮಾತು .... 
    
    ರಾಮಾಯಣ ನಡೆದ ಕಾಲಕ್ಕೆ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದೀರಿ... ರಾಮಾಯಣ ನಡೆದ ಸ್ಥಳಗಳಿಗೆಲ್ಲ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದೀರಿ... ಇದೀಗ ಪರಮ ಮಂಗಲವಾದ ಕೈಲಾಸದಲ್ಲಿಯೂ ನಮ್ಮ ಮನಸ್ಸು ಹರಿದಾಡುತ್ತಿದೆ..... ಲೌಖಿಕದಲ್ಲಿಯೇ ಮನಸ್ಸು ಸುಳಿದಾಡುವದಕ್ಕಿಂತ, ಇಂತಹ ಅದ್ಭುತವಾದ ರಾಮಾಯಣದಲ್ಲಿ ನಮ್ಮ ಮನಸ್ಸನ್ನು ಕಟ್ಟಿಹಾಕುವ ಗುರುಗಳಿಗೆ ಭಕ್ತಿಯ ನಮಸ್ಕಾರಗಳು... 
    
    ಒಂದು ಬಾರಿ ಕೇಳಿದೆ ಆದರೆ  ತೃಪ್ತಿಯಾಗಿಲ್ಲ... ಮತ್ತೆ  ಕೇಳಬೇಕು ಅನಿಸಿತ್ತಿದೆ...
  • Nalini Premkumar,Mysore

    10:52 AM, 26/07/2022

    ಹರೆ ಶ್ರೀನಿವಾಸ ಗುರುಗಳೇ ಈ ದಿನ ದ ರಾಮಾಯಣದ ಭಾಗ ಪರಮ ಅಧ್ಬುತ ಗುರುಗಳೇ ಇಷ್ಟೆಲ್ಲಾ ವಿಷಯಗಳು ಇರುವುದೆ ನಮಗೆ ತಿಳಿದಿಲ್ಲ ಪುಷ್ಪ ಕ ವಿಮಾನದ ಬಗ್ಗೆ, ಕೈಲಾಸ ಪರ್ವತದ ಬಗ್ಗೆ, ರಾವಣನ ಸಾವು ಕಪಿಗಳಿಂದ, ನಾವು ತಿಳಿಯ ಬೇಕಾದ್ದು ಬಹಳ ಇದೆ ನಾವು ತಿಳಿದಿಲ್ಲ ಎನ್ನುವ ಮಾತು ಎಲ್ಲವೂ ಪರಮ ಅಧ್ಬುತ ಗುರುಗಳೇ ಈ ರೀತಿಯ ಜ್ಞಾನ ನಮಗೆ ಜನ್ಮ ಜನ್ಮ ಕ್ಕೂ ಸಿಗಲಿ ನಿಮ್ಮಂಥ ಗುರುಗಳು ಜನ್ಮ ಜನ್ಮ ಕ್ಕೂ ಸಿಗಲಿ ರಾಮನ ಕಾರುಣ್ಯ ನಮ್ಮ ಮೇಲೆ ಇರಲಿ ಕೋಟಿ ಕೋಟಿ ಪ್ರಣಾಮಗಳು ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ 🙏🙏🙏