Upanyasa - VNU1020

ವೇದವತಿಯರ ಪ್ರತಿಜ್ಞೆ

28/06/2022

ಶ್ರೀಮದ್ ರಾಮಾಯಣಮ್ — 132

ಲಕ್ಷ್ಮೀದೇವಿಯ ಅವತಾರರಾದ ವೇದವತಿದೇವಿಯರನ್ನು ರಾವಣ ಬಲಾತ್ಕರಿಸಲು ಬಂದಾಗ ನಿನ್ನ ಮರಣಕ್ಕಾಗಿ ಮತ್ತೆ ಆವಿರ್ಭವಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ವೇದವತಿಯರು ಅಗ್ನಿಪ್ರವೇಶ ಮಾಡಿದ ಘಟನೆಯ ವಿವರ. 

ವೇದವತಿ-ಪದ್ಮಾವತಿಯರು ಮಹಾಲಕ್ಷ್ಮೀದೇವಿಯರೇ, ಕೇವಲ ಜೀವವಲ್ಲ ಎಂದು ನಾರಾಯಣಪಂಡಿತಾಚಾರ್ಯರ, ಶ್ರೀ ವಿಶ್ವಪತಿತೀರ್ಥರ ಮತ್ತು ಶ್ರೀ ವಿಜಯದಾಸಾರ್ಯರ ವಚನಗಳಿಂದ ಸಮರ್ಥನೆ.

ವೇದವತಿಯ ಅವತಾರ
ವೇದೋಚ್ಚಾರ ಮಾಡುತ್ತಲೇ ಅವತರಿಸಿದ ಲಕ್ಷ್ಮೀದೇವಿ.

ವೇದವತಿದೇವಿಯ ತಪಸ್ಸು

ರಾವಣನ ಕಾಮುಕ ವರ್ತನೆ

ವೇದವತಿಯ ಪ್ರತಿಜ್ಞೆ ಮತ್ತು ಅಗ್ನಿಪ್ರವೇಶ

Play Time: 33:36

Size: 3.84 MB


Download Upanyasa Share to facebook View Comments
6362 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  5:31 PM , 11/08/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  1:16 PM , 05/08/2022

  🙏🙏🙏
 • Nalini Premkumar,Mysore

  3:21 PM , 31/07/2022

  ಅಧ್ಭುತ ಗುರುಗಳೇ ಧನ್ಯವಾದಗಳು ಗುರುಗಳೇ ಬಹಳಷ್ಟು ವಿಷಯಗಳನ್ನು ತಿಳಿದು ಕೊಳ್ಳುತ್ತಿದ್ದೆವೆ ಕೋಟಿ ಕೋಟಿ ಪ್ರಣಾಮಗಳು ಅನಂತ ಧನ್ಯವಾದಗಳು ಗುರುಗಳೇ 🙏🙏🙏
 • Lakshmi,Pune

  12:58 PM, 30/07/2022

  Acharyarige anant koti namaskargalu. Vedvati deviy kathe keli manassige nemmadi sikkitu, janmantardalli matte namm bhagya padeyalu devar kuritu tapassu madidare dorkuvudu ant harivayu gurugal anugrah dind tiliyitu gurugale. Ondu matu gurugale vedvati deviyar tande ge yake mrityu aitu avarantu tamm magalige shrimannarayananige kottu maduve madalu tapassu madta idru

  Vishnudasa Nagendracharya

  ಹೇಗೆ ಯಶೋದಾ ನಂದರಿಗೆ ಶ್ರೀಕೃಷ್ಣದೇವರ ಬಾಲ್ಯವನ್ನು ಮಾತ್ರ ನೋಡುವ ಪುಣ್ಯವಿತ್ತೋ, 
  ಹೇಗೆ ದೇವಕಿ ವಸುದೇವರಿಗೆ ಶ್ರೀಕೃಷ್ಣದೇವರ ಬಾಲ್ಯವನ್ನು ನೋಡುವ ಪುಣ್ಯವಿರಲಿಲ್ಲವೋ, 
  ಹೇಗೆ ದಶರಥಮಹಾರಾಜರಿಗೆ ಮಗನ ಪಟ್ಟಾಭಿಷೇಕವನ್ನು ಮಾಡುವ, ನೋಡುವ ಪುಣ್ಯವಿರಲಿಲ್ಲವೋ. 
  
  ಹಾಗೇ ಇದೂ ಸಹ. ನಮ್ಮ ಕರ್ಮ, ಪುಣ್ಯ ಎಷ್ಟಿರುತ್ತದೆಯೋ ಅಷ್ಟೇ ಲಭ್ಯ. 
 • Roopa,Bengaluru

  9:15 AM , 30/07/2022

  ಶ್ರೀ ಗುರುಭ್ಯೋ ನಮಃ 
  ಕಳೆದ ಕೆಲವು ಉಪನ್ಯಾಸಗಳನ್ನು ಸೇರಿಸಿ ಒಟ್ಟಿಗೆ ಪ್ರಶ್ನೆಗಳನ್ನು ಕೇಳಿದ್ದೀನಿ. 
  
  1. ಹಿಂದೆ ಕೇಳಿದೆವು - ರಾಜರಿಗೆ ಅನೇಕ ಪತ್ನಿಯರು ಇರುವುದು ಕೆಲವೊಮ್ಮೆ ಅನಿವಾರ್ಯ ಮತ್ತು ಕೆಲವೊಮ್ಮೆ ಅವಶ್ಯಕ ಎಂದು. ಆದರೆ, ಪುಲಾಸ್ತ್ಯರಂತಹ ಋಷಿಗಳಿಗೂ ಅನೇಕ ಪತ್ನಿಯರು ಏಕೆ ಇರುತ್ತಾರೆ?
  
  2. ಈಗ ಹೇಳುತ್ತಿರುವ ರಾಮಾಯಣದ ಭಾಗ ಉತ್ತರಕಾಂಡದಲ್ಲಿದೆ. ಇದೆಲ್ಲವನ್ನೂ ವಾಲ್ಮೀಕಿ ಋಷಿಗಳು ಅಯೋಧ್ಯಾ ಅಥವಾ ಅರಣ್ಯ ಕಾಂಡಗಳಲ್ಲಿ ಏಕೆ ಹೇಳಿಲ್ಲ?
  
  3. ನಿಯತ ಪತಿಯನ್ನು ಪಡೆಯಲು ಕಲಿಯುಗದಲ್ಲಿಯೂ ಹೆಣ್ಣು ಮಕ್ಕಳು ತಪಸ್ಸು ಮಾಡಬಹುದೇ? ಹೇಗೆ ಮಾಡುವುದು ಮತ್ತು ಏನು ಮಾಡಬೇಕೆಂದು ದಯವಿಟ್ಟು ತಿಳಿಸಿಕೊಡಿ 🙏
  
  ಶ್ರೀ ಕೃಷ್ಣಾರ್ಪಣಮಸ್ತು

  Vishnudasa Nagendracharya

  1. ಪುಲಸ್ತ್ಯ, ಕಶ್ಯಪ, ಮುಂತಾಗಿ, ಸಂತಾನೋತ್ಪತ್ತಿಯನ್ನೇ ಪ್ರಧಾನ ಕಾರ್ಯವನ್ನಾಗಿ ಬ್ರಹ್ಮದೇವರಿಂದ ಪಡೆದವರು ಅನೇಕ ಪತ್ನಿಯರನ್ನು ಪಡೆಯುತ್ತಾರೆ. 
  ಸೌಭರಿ ಮುಂತಾದ ಮಹರ್ಷಿಗಳು ತಮ್ಮ ಅನೇಕ ಜನ್ಮಗಳ ಕರ್ಮವನ್ನು ಒಂದೇ ಜನ್ಮದಲ್ಲಿ ಪರಿಹರಿಸಿಕೊಳ್ಳಲು ಅನೇಕ ಪತ್ನಿಯರನ್ನು ಪಡೆಯುತ್ತಾರೆ. 
  
  
  2. ಇದಕ್ಕೆ ಈಗಾಗಲೇ ಹಿಂದಿನ ಉಪನ್ಯಾಸಗಳಲ್ಲಿಯೇ (ಋಷಿಗಳ ಭಯ ಮತ್ತು ಪುಲಸ್ತ್ಯರ ಕಥೆ) ಉತ್ತರಿಸಿದ್ದೇನೆ. ಶ್ರೀ ವಾಲ್ಮೀಕಿ ಮಹರ್ಷಿಗಳು ಘಟನೆಗಳು ಹೇಗೆ ನಡೆದವೋ ಹಾಗೆ ನಿರೂಪಣೆ ಮಾಡುತ್ತಿದ್ದಾರೆ. ಶ್ರೀರಾಮದೇವರ ಪ್ರಾದುರ್ಭಾವ, ಮದುವೆ, ಪಟ್ಟಾಭಿಷೇಕದ ತಯಾರಿ, ವನವಾಸ, ರಾವಣನ ಸಂಹಾರ, ಪಟ್ಟಾಭಿಷೇಕ, ಆ ನಂತರ ಅಗಸ್ತ್ಯರು ಬಂದು ರಾವಣನ ವೃತ್ತಾಂತ, ರಾಮದೇವರಿಗೆ ಹೇಳಿದ್ದು, ಹೀಗೆ ಘಟನೆಗಳು ನಡೆದಿವೆ. 
  
  ನಾವು ರಾವಣನ ಕುರಿತು ಪೂರ್ಣ ತಿಳಿಯದೇ ರಾವಣವಧೆಯನ್ನು ಪೂರ್ಣ ಅರ್ಥ ಮಾಡಿಕೊಳ್ಳಲು ಆಗುವದಿಲ್ಲ, ಸೀತಾಪಹಾರಕ್ಕೆ ಕಾರಣವನ್ನು ತಿಳಿಯಲು ಆಗುವದಿಲ್ಲ ಎಂದು ಶ್ರೀ ನಾರಾಯಣಪಂಡಿತಾಚಾರ್ಯರು ಸಂಗ್ರಹರಾಮಾಯಣದಲ್ಲಿ ಅರಣ್ಯಕಾಂಡದ ಆರಂಭದಲ್ಲಿಯೇ ರಾವಣನಕಥೆಯನ್ನು ನಿರೂಪಿಸುತ್ತಾರೆ. ಅದರ ಅನುಸಾರವಾಗಿ ಇಲ್ಲಿಯೂ ರಾವಣನ ಕಥೆಯನ್ನು ಮೊದಲು ಕೇಳುತ್ತಿದ್ದೇವೆ. 
  
  3. ಮುಂದೆ ಸೀತಾ ಅನಸೂಯಾ ಸಂವಾದದಲ್ಲಿ ಈ ವಿಷಯ ನಿರೂಪಿತವಾಗುತ್ತದೆ.