Upanyasa - VNU1025

ಯಮ ರಾವಣ ಯುದ್ಧ

ಶ್ರೀಮದ್ ರಾಮಾಯಣಮ್ — 138

ಬ್ರಹ್ಮದೇವರಿಂದ ಅಮೋಘತ್ವವರವಿರುವ ಕಾಲದಂಡ ಯಮದೇವರ ಬಳಿಯಲ್ಲಿ, ಅವಧ್ಯತ್ವವರ ಪಡೆದ ರಾವಣ ಒಂದೆಡೆಯಲ್ಲಿ. ಈ ಮಹಾಪರಾಕ್ರಮಿ ಅವಧ್ಯರಿಬ್ಬರ ರೋಮಾಂಚಕಾರಿ ಯುದ್ಧ. 

ಆಯುಧಾಭಿಮಾನಿ ದೇವತೆಗಳೊಂದಿಗೆ ಯುದ್ದಕ್ಕೆ ಸಿದ್ಧತೆ

ಯಮರನ್ನು ಕಂಡೇ ಮೂರ್ಛಿತರಾದ ರಾವಣನ ಮಂತ್ರಿಗಳು

ಯಮರನ್ನು ತಡೆಯುವ ಬ್ರಹ್ಮದೇವರು

ರಾವಣನಿಗೆ ಅಕಾಲ ಮರಣವಾದರೆ ಸಮಗ್ರ ಜಗತ್ತು ನಾಶವಾಗುತ್ತದೆ. 

ರಾವಣನನ್ನು ಕಾಲದಂಡದಿಂದ ಕೊಲ್ಲಹೊರಟ ಯಮಧರ್ಮರನ್ನು ಬ್ರಹ್ಮದೇವರು ತಡೆಯುತ್ತಾರೆ. ದುಷ್ಟನನ್ನು ಸಾಯುವದರಿಂದ ಏಕೆ ತಪ್ಪಿಸಿದರು ಬ್ರಹ್ಮದೇವರು ಎನ್ನುವ ಪ್ರಶ್ನೆಗೆ ಅತ್ಯಪೂರ್ವವಾದ ಅತೀ ಮಹತ್ತ್ವದ ಉತ್ತರವನ್ನಿಲ್ಲಿ ಪಡೆಯುತ್ತೇವೆ. 

Play Time: 55:28

Size: 3.84 MB


Download Upanyasa Share to facebook View Comments
7074 Views

Comments

(You can only view comments here. If you want to write a comment please download the app.)
 • Sowmya,Bangalore

  2:33 PM , 27/08/2022

  🙏🙏🙏
 • Venkatesh. Rajendra . Chikkodikar.,Mudhol

  7:12 PM , 14/08/2022

  Shri Rama Jai Rama Jai Jai Rama🙏🙏🙏
 • Chethan.G,Bengaluru

  5:49 PM , 13/08/2022

  ಆಚಾರ್ಯರಿಗೆ ಅನಂತ ಪ್ರಣಾಮಗಳು 🙏 ಯಮಧರ್ಮ ದೇವರು ವಿವಿಧ ಸ್ವಭಾವದ ಜೀವರ ಮೇಲೆ ಅವರವರ ಕರ್ಮಾನುಸಾರ 
   ಪ್ರತ್ಯೇಕ ಕಾಲಪಾಷಗಳ ಪ್ರಯೋಗ ಮಾಡುತ್ತಾರೆ ಎಂದು ಹೇಳಿದಿರಿ, ಈ ನಿಯಮ ಕೇವಲ ಮನುಷ್ಯರಿಗೋ ಅಥವಾ ಸಕಲ ಜೀವರಾಶಿಗಳಿಗೂ ಇದೆ ನಿಯಮವೋ..? ಹೌದು ಎಂದಾದಲ್ಲಿ ಪಶು-ಪಕ್ಷಿಗಳ ಕರ್ಮ ನಿರ್ಣಯ ಹೇಗೆ ಮಾಡಲಾಗುತ್ತದೆ...?
 • Vishwnath MJoshi,Bengaluru

  8:50 PM , 12/08/2022

  ಗುರುಗಳಿಗೆ ನಮಸ್ಕಾರ
  ಇಂದಿನ ಪ್ರವಚನದಲ್ಲಿ ಯಮದೇವರ ವಿವಿಧ ರುಪಗಳು ಹಾಗು ಮೃತ್ಯು ದೇವತೆ ಮೃತ್ಯುವನ್ನು ತರುವ ರಿತಿ ಅಧ್ಬುತ ವಾಗಿ ಹೇಳಿದ್ದಿರಿ.
  ನನ್ನ ಒಂದು ಪ್ರಶ್ನೆ. ಭಾಗವತಾದಿ ಗ್ರಂಥಗಳ್ಳಲಿ ನಮ್ಮ ದೇಹದಲ್ಲಿ ಇಂದ್ರಿಯ ದೇವತೆಗಳು ಮತ್ತು ಪ್ರಾಣದೇವರು ಜೀವರ ಕಡೆಯ ಕ್ಷಣದಲ್ಲಿ ಹೇಗೆ ನಿರ್ಗಮಿಸುತ್ತಾರೆ ಎಂದು ಕೆಳ್ಳಿದ್ದೇವೆ. ಕೊನೆಯಲ್ಲಿ ಪ್ರಾಣದೇವರು ನಿರ್ಗಮಿಸಿದ ಮೇಲೆ ನಮ್ಮ ದೇಹ ನಿಷ್ಕ್ರಿಯವಾಗುತ್ತದೆ ಎಂದು. 
  ಇಂದಿನ ಪ್ರವಚನದಲ್ಲಿ ಮೃತ್ಯು ದೇವತೆ ನಮ್ಮ ದೇಹ ಪ್ರವೇಶಿಸಿದ ಮೇಲೆ ಮೃತ್ಯು ಸಂಭವಿಸುತ್ತದೆಎಂದೂ. ಇಲ್ಲಿ ತಿಳಿದುಕೊಳ್ಳಬೇಕಾದ್ದು ಪ್ರಾಣದೇವರು ನಿರ್ಗಮಿಸಿದ ಮೇಲೆ
  ಮೃತ್ಯು ದೇವತೆ ಪ್ರವೇಷವಾಗುತ್ತ ಅಥವಾ ಎರಡು ಏಕಕಾಲಕ್ಕೆ ನಡೆಯುವ ಕ್ರಿಯೆನಾ?. ದಯವಿಟ್ಟು ತಿಳಿಸಿಕೊಡಿ
  ಧನ್ಯವಾದಗಳು
 • Nalini Premkumar,Mysore

  6:05 PM , 10/08/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ವಾದ ಪ್ರವಚನ ಗುರುಗಳೇ ನಿಮ್ಮಿಂದ ರಾಮಾಯಣ ಕೇಳುತ್ತಿರುವ ನಾವೆ ಪುಣ್ಯವಂತರು ರಾವಣ ಮತ್ತು ಯಮ ದೇವರ ಏಳು ದಿನಗಳ ಯುದ್ಧದ ಬಗ್ಗೆ ಕೇಳಿ ಮೈ ರೋಮಾಂಚನ ವಾಯಿತು ಆದರೆ ಬ್ರಹ್ಮ ದೇವರು ಬಂದು ಯಮಧರ್ಮ ದೇವರಿಗೆ ರಾವಣ ನನ್ನು ಕೊಲ್ಲ ಬೇಡ ರಾವಣನ ಪಾಪ ಇನ್ನು ಮುಗಿದಿಲ್ಲ ಎನ್ನುತ್ತಾರೆ ಹಾಗೂ ತಪ್ಪಸ್ವಿಗಳಿಗೆ ಹಿಂಸೆ ಅನಿವಾರ್ಯ ಭಗವಂತನ ಇಚ್ಛೆ ಎನ್ನುತ್ತಾರೆ.... ಇಲ್ಲಿ ತಪಸ್ವಿ ಗಳು ಯಾಕೆ ನೋವನ್ನು ಅನುಭವಿಸಬೇಕು.. ತಿಳಿಸಿ ಗುರುಗಳೇ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏

  Vishnudasa Nagendracharya

  ಕಷ್ಟ, ಪ್ರತಿಬಂಧಕಗಳಿಲ್ಲದೇ ಸಾಧನೆಯಿಲ್ಲ. ಪ್ರತಿಯೊಬ್ಬರ ಸಾಧನೆಯಲ್ಲಿಯೂ ವಿಘ್ನಗಳಿದ್ದೇ ಇರುತ್ತವೆ. 
  
  ಅವರು ಮಾಡಿದ ಕರ್ಮಗಳಿಂದ ದುಃಖ, ಕಷ್ಟಗಳ ಪ್ರಮಾಣ, ಮತ್ತು ರೀತಿ ನಿಗದಿಗೊಳ್ಳುತ್ತವೆ. 
 • Anand K Havanur,Dharwad

  2:11 PM , 10/08/2022

  ಗುರುಗಳೇ, ತಮಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ತಮ್ಮ ಉಪನ್ಯಾಸದ ಶೈಲಿ ಅತ್ಯಂತ ವಿಶಿಷ್ಟವಾಗಿದೆ. ತಾವು ಅತೀ ತನ್ಮಯತೆಯಿಂದ ವಿಷಯದಲ್ಲಿ ತಲ್ಲಿನರಾಗಿ, ಆವೇಶಭರಿತರಾಗಿ ಪ್ರತಿ ಪ್ರಸಂಗಗಳನ್ನು ನಮ್ಮ ಕಣ್ಣೆದುರು ನಡೆಯುತ್ತಿರುವಂತೆ ವೀಕ್ಷಕ ವಿವರಣೆಯಂತೆ ವಿವರಿಸುತ್ತಿರಿ. ಇದರಿಂದ ನಮಗೂ ಸಹ ಆಸಕ್ತಿ ಉಂಟಾಗಿ ಪ್ರತಿ ಪ್ರಸಂಗವೂ ಮನದಟ್ಟವಾಗುತ್ತದೆ.
  ಧನ್ಯವಾದಗಳು 🙏🙏🙏
 • Vikram Shenoy,Doha

  10:49 PM, 09/08/2022

  ಬಹು ಸುಂದರವಾಗಿ ಬಂದಿದೆ. ನಿಮ್ಮ ಪಾದರವಿಂದಕ್ಕೆ ಕೋಟಿ ನಮನಳು
 • Vikram Shenoy,Doha

  10:49 PM, 09/08/2022

  ಬಹು ಸುಂದರವಾಗಿ ಬಂದಿದೆ. ನಿಮ್ಮ ಪಾದರವಿಂದಕ್ಕೆ ಕೋಟಿ ನಮನಳು
 • Niranjan Kamath,Koteshwar

  11:55 AM, 09/08/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಅಧ್ಬುತ ಅತ್ಯದ್ಬುತ, ಪರಮಾದ್ಭುತ್, ನವಿರೇಳಿಸುವ ಪ್ರಸಂಗ. ಇಡಿಯ ಉಪನ್ಯಾಸ ಒಂದೇ ಸಮನೆ , ಒಂದೇ ರೀತಿಯ ಅದ್ಭುತ ಶೈಲಿಯ ಯುದ್ದ ಪ್ರಸಂಗದ ಘೋರ ಪರಿಣಾಮವಾದ ವೈವಿಧ್ಯ ಭರಿತ ವರ್ಣನೆ. ಎಸ್ಟೊಂದು ವಿಚಾರ, ಅಧ್ಯಯನ, ಅಭ್ಯಾಸ ಪೂರ್ವಕವಾಗಿ ಮಂಡಿಸಿದ್ದಿರಿ.ಧನ್ಯೋಸ್ಮಿ ಧನ್ಯೋಸ್ಮಿ.
 • Narasimha Murthy,Bangalore

  9:15 AM , 09/08/2022

  ಗುರುಗಳಿಗೆ ಹೃತ್ಪೂರ್ವಕ ವಂದನೆಗಳು.. ನೀವು ಉಪನ್ಯಾಸಗಳನ್ನು ಮನಮುಟ್ಟುವಂತೆ ಅತ್ಯಂತ ತರ್ಕಬದ್ಧವಾಗಿ ಸುಸ್ಪಷ್ಟವಾಗಿ ತಿಳಿಸಿ ಕೊಡುತ್ತಿದ್ದೀರಿ..... ಹಾಗೆಯೇ ರಾಮಾಯಣ ದಲ್ಲಿ ಬರುವ. ರಾವಣನ ಕಥೆಯಲ್ಲಿ.. ರಾವಣನು ರುದ್ರ ದೇವರಿಂದ ಆತ್ಮಲಿಂಗವನ್ನು ಪಡೆದುಕೊಂಡ ಎಂಬ ಕಥೆ ಯುಪಚಲಿತ ದಲ್ಲಿದೆ... ಇದರ ಬಗ್ಗೆ ಸಾಕಷ್ಟು ಗೊಂದಲಗಳು ಇವೆ.. ಆತ್ಮಲಿಂಗ ವೆಂದರೇನು ಇದರ ಬಗ್ಗೆ ತಿಳಿಸಿ ಕೊಡಿ ಗುರುಗಳೇ