Upanyasa - VNU1040

ದುಷ್ಟ ಗಂಡ ದೊರೆತಾಗ ಏನು ಮಾಡಬೇಕು

ಶ್ರೀಮದ್ ರಾಮಾಯಣಮ್ — 153

ಮನುಷ್ಯ ಸ್ತ್ರೀಯರನ್ನು ಬಾಧಿಸುವ ಈ ಮಹತ್ತರ ಪ್ರಶ್ನೆಗೆ ಸೀತಾ ಅನಸೂಯಾ ಸಂವಾದದಲ್ಲಿ ಉತ್ತರವಿದೆ. 

01:58 ಗಂಡ ದುಷ್ಟಾವಸ್ಥೆಯಲ್ಲಿದ್ದಾಗಲೂ ಬಿಡಬಾರದು

04:56 ಗಂಡ ದುಷ್ಟನಾದರೂ ಸಹನೆ ಮಾಡು ಎನ್ನುವದು ತಪ್ಪಲ್ಲವೇ?

06:18 ದುಷ್ಟಳಾದ ಹೆಂಡತಿಯನ್ನು ಗಂಡನಾದವನೂ ಬಿಡುವಂತಿಲ್ಲ

08:58 ದುಷ್ಟ ಸಂಗಾತಿ ದೊರೆಯಲು ಕಾರಣ

11:48 ನಿಯತಪತಿಯನ್ನು ಪಡೆಯುವ ಮಾರ್ಗ

15:47 ನಿಯತಪತ್ನಿ ಬೇಕೆಂದು ತಪಸ್ಸು ಮಾಡಿದ ಗಂಡಸರು

18:25 ಹೆಣ್ಣಿನ ತಪಸ್ಸು

22:57 ಉತ್ತಮ ಪತಿಯ ಗುಣಗಳು

25:05 ದುಷ್ಟ ಸ್ತ್ರೀಯರು

34:34 ಪತ್ನಿಯ ಪೂರ್ಣ ಪ್ರೇಮ ಬೇಕಾದರೆ ಏನು ಮಾಡಬೇಕು

41:38 ಹೆಣ್ಣಿನ ಮಹಾಕರ್ತವ್ಯPlay Time: 49:01

Size: 3.84 MB


Download Upanyasa Share to facebook View Comments
7681 Views

Comments

(You can only view comments here. If you want to write a comment please download the app.)
 • Manukumara A,Anthanahalli

  10:32 AM, 21/09/2022

  ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನಮಸ್ಕಾರಗಳು ಗುರುಗಳೇ ಇತ್ತೀಚಿನ ದಿನಗಳಲ್ಲಿ ಮದುವೆ ಗಳು ಉತ್ತಮ ಜಾತಿಯವರು ಕೇಳ ಜಾತಿ ಯವರನ್ನು , ಕೇಳ ಜಾತಿ ಯವರು ತಮಗಿಂತ ಉತ್ತಮ ಕುಲಕ್ಕೆ ಮದುವೆ ಯಾಗುತ್ತರೆ , ಮತ್ತು ನೀಚ ಧರ್ಮಕ್ಕೂ ಮದುವೆ ಯಗುತ್ತಾರೆ . ಈ ರೀತಿ ಮದುವೆಯೂ ಸಹ ಭಗವಂತನ ಇಚ್ಚೇ ಯೆ ಅನ್ಯ ಜಾತಿಗಳ ಮದುವೆ ಯಾನ್ನು ಭಗವಂತ ನಿರ್ಣಯ ಮಾಡಿ ನೀಡುತ್ತಾನೆ ಯೇ ದಯಮಾಡಿ ತಿಳಿಸಿ ಕೊಡಿ ಗುರುಗಳೇ .
 • Jayashree karunakar,Bangalore

  11:40 AM, 11/09/2022

  ಗುರುಗಳೇ 
  
  ಒಂದು ಸಣ್ಣ ವಿಷಯಗಳ ಚರ್ಚೆಗಳು ವಿಕೋಪಕ್ಕೆ ತಿರುಗಿ ವಾಗ್ವಾದಕ್ಕಿಳಿದು ಶತ್ರುಗಳಂತೆ ಜಗಳವಾಡಿಕೊಂಡು, ವಿಚ್ಚೇಧನದಲ್ಲಿಯೋ ಕೊಲೆಯಲ್ಲಿಯೋ ಕೊನೆಗೊಳ್ಳುವ ಇಂದಿನ ಗಂಡ ಹೆಂಡತಿಯರ ಸಂಭಂದಗಳಿಗೆ, ಔಷಧಿಯಂತಿದೆ ಈ ಭಾಗದ ಉಪನ್ಯಾಸ... 
  
  ಯಾವ ಹಿರಿಯರ ಮಾತುಗಳಿಗೂ ಬಗ್ಗದ ಬುದ್ಧಿಯು ಇಂತಹ ಉಪಾಯಸಗಳನ್ನು ಕೇಳಿದಾಗ ಭಗವಂತನ ಚಿಂತನೆಯೊಂದಿಗೆ ಎಂತಹ ಸಮಸ್ಯೆಗಳೂ ಬಗೆಹರಿದು, ಮನಸ್ಸು ಭಕ್ತಿಯೊಂದಿಗೆ ಪರಮಾತ್ಮನ ಕಡೆಗೆ ವಾಲುತ್ತದೆ... ಕೋರ್ಟ್ ಕೌಂಸೇಲ್ಲಿಂಗ್ಗಳಿಗೆ ಮೊರೆಹೋಗಬೇಕಾಗಿಲ್ಲ... 
  
  A divine path by doing given duty for ladies, to reach god is expained very clearely this upanyasa. 
  
  God is staying in ur throat gurugale.. 
  
  Bhakthipuravaka namaskara to you 
  A best gift of sri hari to madhwa math through you gurugale...
 • Srikar K,Bengaluru

  9:14 PM , 08/09/2022

  Gurugale, namaskaragalu. This pravachana is very informative and thought provocative. A query - yava karana kku hendathi yannu tyaga mada baradu endide. Dasharatha maharaja rantha shretaru tamma Kone kaala dalli hendathi yada Kaikeyi yannu tyaga madiddaralla. Idu sariyo ?

  Vishnudasa Nagendracharya

  ತಂದೆ ತಾಯಿಗಳನ್ನು ಸರ್ವಥಾ ತೊರೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ಅದೇ ಶಾಸ್ತ್ರ "ಆತ್ಮಾರ್ಥೇ ಪೃಥಿವೀಂ ತ್ಯಜೇತ್" ಎನ್ನುತ್ತದೆ. ದೇವರನ್ನು ಕಾಣುವ ಸಾಧನೆ ಮಾಡುವದಕ್ಕಾಗಿ ಎಲ್ಲವನ್ನೂ ತೊರೆಯಬೇಕು ಎಂದೂ ಹೇಳುತ್ತದೆ. 
  
  ಹಾಗೆಯೇ ಲೌಕಿಕ ಕಾರಣಗಳಿಂದ, ಸಮಸ್ಯೆಗಳಿಂದ ಹೆಂಡತಿಯನ್ನು ತೊರೆಯತಕ್ಕದ್ದಲ್ಲ. ಆದರೆ ದೇವರಿಗೇ ವಿರೋಧ ಮಾಡುವ ಅಧರ್ಮಮಾರ್ಗದಲ್ಲಿ ನಡೆಯುತ್ತಿದ್ದಾಳೆ ಎಂದು ನಿರ್ಣಯವಾದಾಗ ತೊರೆಯಲೇಬೇಕು ಎನ್ನುವದನ್ನು ದಶರಥರು ತೋರಿಸಿಕೊಟ್ಟರು. ಕೈಕಯಿಯ ಒಂದು ವರ್ತನೆ ಸಮಗ್ರ ರಾಷ್ಟ್ರವನ್ನು ದುಃಖದಲ್ಲಿ ಮುಳುಗಿಸಿತು, ಇಕ್ಷ್ವಾಕುಕುಲಕ್ಕೇ ಅವಮಾನಕರವಾದ ಘಟನೆ, ಭರತರೇ ಒಪ್ಪದ ದುರ್ಘಟನೆ, ಸ್ವಯಂ ಗಂಡ ದಶರಥರಿಗೆ ಪರಮ ಅಪ್ರಿಯವಾದ ಘಟನೆ. ಹೀಗಾಗಿ ದಶರಥರು ತ್ಯಾಗ ಮಾಡಿದರು. 
  
  ಎಲ್ಲದಕ್ಕೂ ಅಪವಾದಗಳು ಇದ್ದೇ ಇರುತ್ತವೆ. 
  
  ರಾಜನನ್ನು ಕೊಲ್ಲಬಾರದು. ರಾಜ ಹೇಳಿದಂತೆ ನಡೆಯಬೇಕು. ಆದರೆ ವೇನನಿಗೆ ವಿರುದ್ಧವಾಗಿ ಋಷಿಗಳು ನಡೆಯಲಿಲ್ಲವೇ ಹಾಗೆ. 
 • Nalini Premkumar,Mysore

  1:24 PM , 09/09/2022

  ಅನಂತ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Nalini Premkumar,Mysore

  1:23 PM , 09/09/2022

  ಹರೆ ಶ್ರೀನಿವಾಸ ಗುರುಗಳೇ ರಾಮಾಯಣದ ಈ ಭಾಗ ಪರಮ ಪರಮ ಅಧ್ಬುತ ವಾಗಿದೆ ಗುರುಗಳೇ ನೀವು ಮನ ಮುಟ್ಟುವಂತೆ ತಿಳಿಸಿದ್ದಿರಿ ಎಲ್ಲರೂ ಕೇಳಲೇ ಬೇಕಾದ ಉಪನ್ಯಾಸ....... ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಓದಿರುತ್ತಾರೆ ಅವರು ಹಣ ಸಂಪಾದನೆ ಮಾಡುತ್ತಿರುತ್ತಾರೆ ಜೀವನ ದಲ್ಲಿ ಹೊಂದಾಣಿಕೆ ಇರುವುದಿಲ್ಲ ವಿವಾಹ ವಿಚ್ಛೇದನ ಗಳು ಹೆಚ್ಚಾಗುತ್ತಿದೆ ಇದಕ್ಕೆಲ್ಲ ಏನು ಕಾರಣ ಗುರುಗಳೇ
 • Niranjan Kamath,Koteshwar

  10:14 AM, 08/09/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಪರಮ ಪರಮ ಧರ್ಮಾಚರಣೆಯ ಉಪನ್ಯಾಸ. ಧನ್ಯೋಸ್ಮಿ