Upanyasa - VNU1041

ಸೀತೆಗೆ ಅನಸೂಯೆಯರಿಂದ ಸತ್ಕಾರ

ಶ್ರೀಮದ್ ರಾಮಾಯಣಮ್ — 154

ತಮ್ಮ ತಪಃಶಕ್ತಿಯಿಂದ ದಿವ್ಯವಾದ ಆಭರಣಾದಿಗಳನ್ನು ಸೃಜಿಸಿ ಅನಸೂಯಾದೇವಿಯರು ಸೀತಾದೇವಿಗೆ ನೀಡಿ ಸ್ವಯಂವರದ ಕಥೆಯನ್ನು ಸೀತಾದೇವಿಯ ಮುಖದಿಂದಲೇ ಕೇಳುವ ಸಂಭ್ರಮದ ಭಾಗ. 

01:02 ಅನಸೂಯಾದೇವಿಯ ಸತ್ಕಾರದ ಅಪೇಕ್ಷೆ

06:47 ತಪಃಶಕ್ತಿಯಿಂದ ಪದಾರ್ಥಗಳ ಸೃಷ್ಟಿ

10:08 ವಿದುರರು ಮಾಡಿದ ಪ್ರೀತಿಯ ಸತ್ಕಾರ

12:46 ಸೀತಾದೇವಿಯ ವಿನಯ

15:26 ಸ್ವಯಂವರದ ಕುರಿತ ಪ್ರಶ್ನೆ

17:10 ಸೀತೆಯ ಮಾತಲ್ಲಿ ಸ್ವಯಂವರದ ಕಥೆ

25:10 ದೇವರು ಮಾಡಿದ ಕಾರ್ಯವನ್ನು ಬ್ರಹ್ಮಾದಿಗಳು ಮನಸ್ಸಿನಲ್ಲಿಯೂ ಮಾಡಲು ಸಾಧ್ಯವಿಲ್ಲ

46:48 ವಸ್ತುವಿಗೆ ಬೆಲೆಯಲ್ಲ, ಭಾವನೆಗಳಿಗೆ ಬೆಲೆ

53:30 ಋಷಿಗಳ ಪ್ರಾರ್ಥನೆ

Play Time: 58:11

Size: 3.84 MB


Download Upanyasa Share to facebook View Comments
6886 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  3:09 PM , 15/09/2022

  ಆಚಾರ್ಯ....
  ನೀವು ಪ್ರತ್ಯಕ್ಷವಾಗಿ ಅಲ್ಲಿ ಇದ್ದಂತೆ ಆನಂದಾಸ್ವಾದನೆ ಮಾಡುತ್ತಾ ....
  ಅತ್ಯದ್ಭುತವಾಗಿ ಹೇಳುವ ನಿಮ್ಮ ಪಾದಗಳೆಗೆ🙏🙏🙏🙏🙏🙏🙏🙏🙏🙏🙏🙏🙏
 • Jayashree karunakar,Bangalore

  10:59 PM, 13/09/2022

  ಗುರುಗಳೇ 
  
  "ಜಗಜ್ಜನನಿಯೇ ತನ್ನೆದುರಿಗೆ ಬಂದಿದ್ದಾರೆ ಅನ್ನುವ ಎಚ್ಚರವಿದೆ ಅನಸೂಯಾದೇವಿಗೆ"
   ನಿಮ್ಮ ಇಂತಹ ಎಚ್ಚರದ ಮಾತುಗಳೇ ಸಾಕು ನಮ್ಮ ಅಜ್ಞಾನವು ಹೋಗಿ ಭಗವಂತನ ಗುಣ ಮಹಾತ್ಮ್ಯದ ಅರಿವಾಗುವಂತೆ ಮಾಡುತ್ತದೆ... 
  
  ಅಬ್ಬಾ ಅದೆಂತಹ ಪರಮ ಮಂಗಲವಾದ ಸನ್ನಿವೇಶ... ಅದೆಂತಹ ಭಾಗ್ಯವೋ ಅನಸೂಯಾದೇವಿಯರದು.... ಕೇಳುತ್ತಿರುವ ನಾವೇ ಧನ್ಯರು... 
  
  "ಮುತೈದೆಗೆ ಮಂಗಳಕರವಾದ ವಸ್ತುಗಳನ್ನು ನೀಡುವಾಗ, ಒಳಗೆ ಇರುವ ಲಕ್ಷ್ಮೀದೇವಿಗೆ ನೀಡುತ್ತಿದ್ದೇವೆ ಅನ್ನುವ ಅನುಸಂಧಾನದಿಂದ ನೀಡಬೇಕು, ಇಲ್ಲಿ ಸಾಕ್ಷಾತ್ ಮಹಾಲಕ್ಷ್ಮೀದೇವಿಗೆ ನೀಡುತ್ತಿದ್ದಾರೆ"....ಈ ಮಾತು ತುಂಬಾ ಇಷ್ಟವಾಯಿತು.... 
  
  ರಾಮಾಯಣದ ಉಪನ್ಯಾಸದಲ್ಲಿ 
  ಸನ್ನಿವೇಶಗಳನ್ನು ಮಾತ್ರವಲ್ಲ ನಾವು ನೋಡುತ್ತಿರುವದು... 
  
  ಸೀತಾ ದೇವಿಯರ ಮೈಗೆ ಅಂಟಿದ ಸಣ್ಣ ಸಣ್ಣ ಧೂಳಿನ ಕಣಗಳನ್ನೂ ಕೂಡ.... !!!!! ಅದೆಂತಹ ವರ್ಣನೆ... 
  
  ಮನಸ್ಸಿನಿಂದ ಮಾಡುವ ಕಲ್ಪನೆಯ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ... 
  
  ವಾಲ್ಮೀಕಿ ಋಷಿಗಳ ಮಾತಿನಲ್ಲಿಯೂ ಸೀತಾಸ್ವಯಂವರ ಕೇಳಿದ್ದೆವು... ಈಗ ಸೀತಾದೇವಿಯರ ಮಾತಿನಲ್ಲಿ ಕೇಳುತ್ತಿದ್ದೇವೆ... ಒಂದಕ್ಕಿಂತ ಒಂದು ರಸವತ್ತಾಗಿದೆ... 
  
  ಅಲಂಕರಿಸಿಕೊಂಡ ಮಹಾಲಕ್ಷ್ಮಿ ದೇವಿಯರನ್ನು ನಾವೂ ನಮ್ಮ ಯೋಗ್ಯತೆಯಂತೆ ಕಣ್ಣುತುಂಬಿಸಿಕೊಂಡಂತಾಯಿತು... 
  
  ಗೆಜ್ಜೆಯ ಶಬ್ದಕೇಳಿಸಿಕೊಂಡಾಗ,  ಶ್ರೇಷ್ಠವಾದ ಮಾತುಗಳನ್ನು ಮಾತನಾಡುವ ರಾಮಚಂದ್ರ, ಏನೂ ಮಾತನಾಡದೆ ಸುಮ್ಮನಾಗಿಬಿಡುತ್ತಾನೆ... ಕಣ್ಣುಗಳು ಸಂಧಿಸುತ್ತದೆ... ಎಲ್ಲವನ್ನೂ ಕಣ್ಣಿನಿಂದಲೇ ಹೇಳಿಬಿಡುತ್ತಾನೆ ಪರಮಾತ್ಮ... ಓಹ್... !!!ಹೇಳಲು ಪದಗಳೇ ಇಲ್ಲ.... ವಾಲ್ಮೀಕಿ ಋಷಿಗಳ ಪದಗಳನ್ನು, ಅದನ್ನು ರಸವತ್ತಾಗಿ ನಮಗೆ ತಿಳಿಸಿದ ನಿಮ್ಮ ಉಪನ್ಯಾಸದ ಸೊಬಗನ್ನು... 
  
  Yes gurugale, Words adjectives, hardly do justice if one to talk about your upanyasa..
 • Roopavasanth,Banglore

  10:35 AM, 11/09/2022

  Adbuthavaada pravachana. 
  Namma ramadevaru seethammarige namo namha
 • Nalini Premkumar,Mysore

  11:38 PM, 10/09/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ                    ಈ ಭಾಗ ದ ರಾಮಾಯಣ ಪ್ರವಚನ ಪರಮ ಪರಮ ಅಧ್ಬುತ ಗುರುಗಳೇ ಹೇಳಲು ಪದಗಳಿಲ್ಲ...... ವಸ್ತು ವಿಗೆ ಬೆಲೆಯಲ್ಲ ಭಾವನೆಗಳಿಗೆ ಬೆಲೆ...... ಖಂಡಿತ ಗುರುಗಳೇ ನಿಮ್ಮಂಥ ಗುರುಗಳಿಂದ ರಾಮಾಯಣ ಕೇಳುತ್ತಿರುವುದು ಬೆಲೆ ಕಟ್ಟಲು ಸಾಧ್ಯವಿಲ್ಲ...... ನಾವೆ ಪುಣ್ಯವಂತರು ಗುರುಗಳೇ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Niranjan Kamath,Koteshwar

  9:59 AM , 10/09/2022

  🙏🙏🙏🙏🙏 ಅತ್ಯಂತ ಕರುಣಾಭರಿತ ಉಪನ್ಯಾಸ. ಈ ದೇಹ, ಈ ಪ್ರಪಂಚ, ಎಲ್ಲವೂ ಮರೆತೇ ಹೋಗಿತ್ತು ಎನ್ನುವಷ್ಟು ಮುಳುಗಿ ಹೋಗಿದ್ದೆ. ಈ ಉಪನ್ಯಾಸದಲ್ಲಿ ನೀವು ತೊಡಗಿಸಿಕೊಂಡು ತಲ್ಲೀನರಾಗಿ ವಿವರಿಸಿದ ಅಕ್ಷರ ಅಕ್ಷರಗಳೂ , ಒಂದೊಂದು ಶಬ್ದಗಳು ಪರಮ ಮನೋಹರ, ಭಾವಭರಿತವಾಗಿತ್ತು. ಕಣ್ಣುಗಳಲ್ಲಿ ನೀರು ಸುರಿಸುತ್ತಲೇ ಇಡಿಯ ಉಪನ್ಯಾಸ ಕೇಳುವಂತಾಯಿತು. ಶ್ರೀ ರಾಮ ಸೀತೆಯರ ವರ್ಣನೆ, ಅನುಸೂಯ ದೇವಿಯರ ಭಕ್ತಿ, ಜನಕ ರಾಜರ ವಿಚಾರ, ಕನ್ಯಾದಾನ, ಸೀತಾ ಮಾತೆಯ ಸೌಂದರ್ಯ, ಶ್ರೀ ರಾಮ ದೇವರು ನೋಡಿದ್ದು, ಆಹಾ!! ಧನ್ಯೋಸ್ಮಿ ಗುರುಗಳೇ, ನಿಮ್ಮ ಸಂಘ ದೊರೆಯುವಂತೆ ಮಾಡಿ, ನಿಮ್ಮಿಂದ ಈ ಸತ್ಸಂಗ ನಡೆಯಿಸಿ, ಅದೆಷ್ಟು ಕರುಣೆ ತೋರಿಸುತ್ತಾ ಅಷ್ಟೂ ಜನರ ಉದ್ಧಾರ ಮಾಡಿಸುವ ಆ ದೇವರಿಗೆ ನಮೋ ನಮಃ. ಇಡಿಯ ಉಪನ್ಯಾಸ ಕಣ್ಣಿಗೆ ಕಟ್ಟುವಂತೆ, ನಮ್ಮ ಎದುರಿಗೇ ನಡೆಯುವಂತೆ ವರ್ಣನೆ ಮಾಡಿಸಿದ ಆ ವಾಲ್ಮೀಕಿ ಋಷಿಗಳಿಗೆ, ನಿಮ್ಮ ಈ ಮಧುರ , ಮಹಾ ಪ್ರಯತ್ನ ಪೂರ್ವಕ , ಅತ್ಯಂತ ಸ್ಪಷ್ಟ, ಭಕ್ತಿ ಪೂರ್ವಕ ಉಪನ್ಯಾಸಕ್ಕೆ ಸಹಸ್ರ ಸಹಸ್ರ ನಮನಗಳು.ಧನ್ಯೋಸ್ಮಿ
 • Niranjan Kamath,Koteshwar

  9:04 AM , 10/09/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಕಣ್ಣಲ್ಲಿ ನೀರು ಸುರಿಸುತ್ತಲೇ ಈ ಇಡಿಯ ಉಪನ್ಯಾಸ ಕೇಳಿದೆವು. ಆ ವೈಭವ, ಆ ಉಪನ್ಯಾಸದ ಮಾತುಗಳು, ಆ ದೇವರ ಮಹಿಮೆ, ಅನುಸೂಯ ದೇವಿಯ ಭಕ್ತಿ, ಸೀತಾ ಮಾತೆಯರ ವರ್ಣನೆ, ವಾಲ್ಮೀಕಿಗಳ ನಿರೂಪಣೆ ಋಷಿಗಳ ಶಬ್ದಗಳು, ಭಾವಗಳು ಇವೆಲ್ಲವನ್ನು ಒಂದು ಹೂವಿನ ಹಾರದ ರೂಪದಲ್ಲಿ ನಮ್ಮತಹ ಪಾಮರರು ಕೇಳುವಂತೆ ಮಾಡಿದ ನಿಮ್ಮ ಈ ಯಶಸ್ವೀ ಪ್ರಯತ್ನಕ್ಕೆ ನಮೋ ನಮಃ. ಎಷ್ಟು ಧನ್ಯವಾದ ಹೇಳಿದರೊ ಸಾಕಾಗುವುದಿಲ್ಲ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ. ಧನ್ಯೋಸ್ಮಿ.