Upanyasa - VNU1046

ಕಾಮದ ಮೂರು ಚಟಗಳು

ಶ್ರೀಮದ್ ರಾಮಾಯಣಮ್ — 158

ಮನುಷ್ಯನನ್ನು ಮಹತ್ತರ ಅನರ್ಥಕ್ಕೀಡು ಮಾಡುವ, ಕಾಮದಿಂದುಂಟಾಗುವ ಮೂರು ಚಟಗಳ ಕುರಿತ ಚರ್ಚೆ

01:37 ಒಂಭತ್ತು ವರ್ಷಗಳಲ್ಲಿ ಮಾಡಿದ ರಾಕ್ಷಸಸಂಹಾರ

06:19 ಸಾತ್ವಿಕ ಕ್ರೋಧದ ಕುರಿತು

07:59 ವನವಾಸದಲ್ಲಿದ್ದಾಗ ರಾಕ್ಷಸರನ್ನು ಕೊಂದದ್ದು ಸರಿಯೇ?

08:35 ದೊಡ್ಡವರೊಂದಿಗೆ ಹೇಗೆ ಮಾತನಾಡಬೇಕು

09:57 ಪಾಪ ಅಂಟಿಕೊಳ್ಳುವದು ತಿಳಿಯುವದೇ ಇಲ್ಲ

10:44 ಸುಳ್ಳು ಮಾತನಾಡುವ ಚಟ

16:29 ಪರಸ್ತ್ರೀ-ಪರಪುರುಷ ಕಾಮ

20:29 ಹಿಂಸೆಯ ಚಟ

25:41 ಶ್ರೀರಾಮರ ಬಗ್ಗೆ ಸೀತೆಗಿದ್ದ ವಿಶ್ವಾಸ

Play Time: 30:42

Size: 3.84 MB


Download Upanyasa Share to facebook View Comments
7367 Views

Comments

(You can only view comments here. If you want to write a comment please download the app.)
 • Nalini Premkumar,Mysore

  2:11 PM , 22/09/2022

  ಧನ್ಯವಾದಗಳು ಗುರುಗಳೇ 🙏🙏🙏
 • Nalini Premkumar,Mysore

  6:07 PM , 21/09/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು         ರಾಮಾಯಣದ ಈ ಭಾಗ ದ ಉಪನ್ಯಾಸ ದಲ್ಲಿ ಶ್ರೀ ರಾಮ ದೇವರ ಮತ್ತು ಸೀತಾ ದೇವಿಯರ ಸಂವಾದ ಪರಮ ಅಧ್ಬುತ ಗುರುಗಳೇ ನಮಗೆ ಅನೇಕ ಅನೇಕ ಪಾಠಗಳನ್ನು ಕಲಿಸುತ್ತದೆ..... ಕಾಮ ದಿಂದ ಉಂಟಾಗುವ ಮೂರು ರೀತಿಯ ಚಟಗಳಿಗೆ ಮನುಷ್ಯ ಹೇಗೆ ಒಳಗಾಗುತ್ತಾನೆ ಎಂಬುದನ್ನು ಅಧ್ಭುತ ವಾಗಿ ಉದಾಹರಣೆಯ ಮೂಲಕ ತಿಳಿಸಿದ್ದಿರಿ ಗುರುಗಳೇ... ಆದರೆ ಕೋವಿಡ್ ಬಗ್ಗೆ ತಿಳಿಸಿದ್ದಿರಲ್ಲ ಅದು ಮನುಷ್ಯನಿರ್ಮಾಣ ವೆ.... ಅನೇಕರು ಆ ರೀತಿ ಹೇಳಿದಾಗ ಅಲ್ಲ ಪ್ರಕೃತಿ ಯಿಂದ ಬಂದದ್ದು ಎಂದು ತಿಳಿದು ಕೊಂಡಿದ್ದೆವು.... ನೀವು ತಿಳಿಸಿದ ರೀತಿಯಲ್ಲೇ ಈ ಸಂವತ್ಸರದಲ್ಲಿ ಕಡಿಮೆ ಯು ಆಯಿತು... .ಇದು ಮನುಷ್ಯ ನಿರ್ಮಾಣ ವ ಗುರುಗಳೇ.... ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏

  Vishnudasa Nagendracharya

  ಕೊರೋನಾ ಅಥವಾ ಕೋವಿಡ್ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಮುಂದೊಂದು ದಿನ ಅದರ ಮೂಲ ಪರಿಸ್ಪಷ್ಟವಾಗಿ ಬಯಲಾಗಿಯೇ ಆಗುತ್ತದೆ. ಅಲ್ಲಿಯವರೆಗೂ ಊಹಾಪೋಹ ಮಾತ್ರ. 
  
   ಮನುಷ್ಯನ ಅಪರಾಧೀ ಲಾಲಸೀ ಹೀನ ಬುದ್ಧಿಯಿಂದ ಕೋವಿಡ್ ಹುಟ್ಟಿದ್ದು ಎನ್ನುವದರಲ್ಲಿ ಸಂಶಯವಿಲ್ಲ. 
 • Sumanyu Jayateertha Katageri,Vijayapur

  8:05 PM , 20/09/2022

  ನಮಸ್ಕಾರ ಗುರುಗಳೇ,
  
  ಒಂದು ಪ್ರಶ್ನೆ
  
  
  ಇತ್ತೀಚಿನ ದಿನಗಳಲ್ಲಿ ಟಿವಿಯಲ್ಲೋ ಅಥವಾ ಮತ್ಯಾವುದೋ ಮಾಧ್ಯಮದಲ್ಲೋ ಬರುವ ಕೆಟ್ಟ ಕಾಮದ ದೃಶ್ಯಗಳನ್ನು ಕಣ್ತಪ್ಪಿ ನೋಡಿದಾಗ ಅಥವಾ ಬಯಸಿ ನೋಡಿದಾಗ
  ಪರಸ್ತ್ರೀ-ಪರಪುರುಷ ಕಾಮಿಸಿದ ಪಾಪ ಬರುವುದೇ?

  Vishnudasa Nagendracharya

  ಹೌದು. 
  
  ಕಾಮದಲ್ಲಿ ಮೂರು ವಿಧ. ಮಾನಸಿಕ, ವಾಚಿಕ , ದೈಹಿಕ, ಎಂದು. 
  
  ಮಾನಸಿಕ ಎಂದರೆ ಮನಸ್ಸಿನಲ್ಲಿ ಕಾಮಿಸುವದು. 
  
  ವಾಚಿಕ ಎಂದರೆ ಮಾತಿನಲ್ಲಿ ಕಾಮಿಸುವದು. 
  
  ದೈಹಿಕ ಎನ್ನುವದು ಎರಡು ವಿಧ. ಸಂಭೋಗ ಮತ್ತು ಸ್ಪರ್ಶ ಎಂದು. 
  
  ಕಣ್ಣಿಂದ ನೋಡುವದು, ಮುಟ್ಟುವದು, ಮೂಸುವದು ಮುಂತಾದವು ಸ್ಪರ್ಶಕಾಮ. 
  
  ಸಂಭೋಗ ಎಂದರೆ ಮೈಥುನ. 
  
  ಇದರಲ್ಲಿ ಮಾನಸಿಕ ವಾಚಿಕ ಪಾಪಕ್ಕಿಂಕ, ದೈಹಿಕ ಪಾಪ ಹೆಚ್ಚು. 
  
  ದೈಹಿಕದಲ್ಲಿಯೂ ಸ್ಪರ್ಶಕ್ಕಿಂತ ಸಂಭೋಗ ಹೆಚ್ಚು ಪಾಪ. 
  
  ನೋಡುವದು ಸ್ಪರ್ಶಪಾಪಕ್ಕೆ ಸೇರುತ್ತದೆ. 
  
  "ಪರರ ಹೆಣ್ಣಿನ ಪರರ ಗಂಡಿನ
  ಹರೆಯ ದೇಹವ ಕಾಮದಿಂದಲಿ
  ಪರಿಕಿಸುತ ದಿಟ್ಟಿಸಿ ನೋಡಿ ಸುಖಿಸುವ ದುಷ್ಟ ದುಷ್ಕರ್ಮ
  ಕರೆಸುವದು ಕ್ಷುದ್ರ ಪಾತಕವೆಂದು ಪಾ-
  ಮರ ಮತಿಯೆ ತಿಳಿಯೋ ಒಂದು ಸಾ-
  ವಿರ ವರ್ಷ ನರಕವು ನೋಟ ಚಪಲಕ್ಕೆ"
  
  ಪರಸ್ತ್ರೀ ಪರಪುರುಷರನ್ನು ಕಾಮದಿಂದ ನೋಡಿದರೆ ಒಂದು ಸಾವಿರ ವರ್ಷ ನರಕವುಂಟು. 
 • Chethan.G,Bengaluru

  11:30 PM, 20/09/2022

  ಹಾಗಾದರೆ ಪ್ರೇಮ ವಿವಾಹ ಪರಸ್ತ್ರೀ -ಪರಪುರುಷ ಕಾಮವೇ..?

  Vishnudasa Nagendracharya

  ಮದುವೆಗಿಂತ ಮುಂಚೆ ಶಾಸ್ತ್ರಬದ್ಧವಾದ ರೀತಿಯಲ್ಲಿ ಹುಡುಗ ಹುಡುಗಿ ಪರಸ್ಪರ ಇಷ್ಟಪಡುವದು ( ಬ್ರಾಹ್ಮಣರೇ ಆದ ರುರು ಪ್ರಮದ್ವರೆಯರು ಇಷ್ಟಪಟ್ಟಂತೆ) ಸರ್ವಥಾ ತಪ್ಪಲ್ಲ. ಮದುವೆಗಿಂತ ಮುಂಚೆ ದೇಹಸಂಪರ್ಕ ಮಾಡುವದು ಪರಸ್ತ್ರೀಕಾಮ, ಪರಪುರುಷಕಾಮವೇ ಆಗುತ್ತದೆ. ಕನ್ಯಾದೂಷಣ ಎಂಬ ದೋಷ ಹುಡುಗನಿಗೆ ಬರುತ್ತದೆ, ಸ್ತ್ರೀಗೆ ಶೀಲನಾಶವುಂಟಾಗುತ್ತದೆ. 
  
 • Sumanyu Jayateertha Katageri,Vijayapur

  8:05 PM , 20/09/2022

  ನಮಸ್ಕಾರ ಗುರುಗಳೇ,
  
  ಒಂದು ಪ್ರಶ್ನೆ
  
  
  ಇತ್ತೀಚಿನ ದಿನಗಳಲ್ಲಿ ಟಿವಿಯಲ್ಲೋ ಅಥವಾ ಮತ್ಯಾವುದೋ ಮಾಧ್ಯಮದಲ್ಲೋ ಬರುವ ಕೆಟ್ಟ ಕಾಮದ ದೃಶ್ಯಗಳನ್ನು ಕಣ್ತಪ್ಪಿ ನೋಡಿದಾಗ ಅಥವಾ ಬಯಸಿ ನೋಡಿದಾಗ
  ಪರಸ್ತ್ರೀ-ಪರಪುರುಷ ಕಾಮಿಸಿದ ಪಾಪ ಬರುವುದೇ?