Upanyasa - VNU1063

ಮಾರೀಚನ ರಾಮಭಯ

ಶ್ರೀಮದ್ ರಾಮಾಯಣಮ್ — 176 

ರ ಎಂಬ ಅಕ್ಷರ ಕೇಳಿದರೇ ನನ್ನ ಮೈಯಲ್ಲಿ ನಡುಕ ಉಂಟಾಗುತ್ತದೆ, ಅಷ್ಟು ತೀಕ್ಷ್ಣವಾಗಿದೆ ರಾಮಬಾಣಗಳು ಎಂದು ಮಾರೀಚ ತನ್ನ ಎರಡು ಅನುಭವಗಳನ್ನು ರಾವಣನ ಜೊತೆ ಹಂಚಿಕೊಂಡು ಶ್ರೀರಾಮನ ವೈರ ಕಟ್ಟಿಕೊಳ್ಳುವದು ಬೇಡ ಎಂದು ಹೇಳಿದಾಗ ಅವನ ಕತ್ತಿನ ಮೇಲೆ ಕತ್ತಿಯನ್ನಿಟ್ಟು ರಾವಣ ತನ್ನ ಕಾರ್ಯಕ್ಕೆ ಮಾರೀಚನನ್ನು ಒಪ್ಪಿಸುವ ಘಟನೆ.

01:46 ಮಾರೀಚನ ದೃಷ್ಟಿಯಲ್ಲಿ ವಿಶ್ವಾಮಿತ್ರರ ಯಜ್ಞದ ಪ್ರಸಂಗ

13:15 “ನಿನ್ನ ಪಾಪದಿಂದ ನಾನೂ ಸಾಯಬೇಕಾಗುತ್ತದೆ” ಎಂದ ಮಾರೀಚ

14:44 ಪರಸ್ತ್ರೀ ಅಪಹಾರದಿಂದ ವಿನಾಶ ನಿಶ್ಚಿತ

18:38 ದಂಡಕಾರಣ್ಯದಲ್ಲಿಯೂ ರಾಮನಿಂದ ಪೆಟ್ಟು ತಿಂದ ಮಾರೀಚ

19:43 ಪಂಚವಟಿಯ ವಾಸಕ್ಕಿಂತ ಮುಂಚೆ ಶ್ರೀರಾಮನ ಸಮಗ್ರ ದಂಡಕಾರಣ್ಯದ ಸಂಚಾರ

26:53 ಮಾರೀಚನಿಗಿದ್ದ ರ ಎಂಬ ಅಕ್ಷರದ ಭಯ

31:04 ತಾನು ಸರ್ವಥಾ ಸಹಾಯ ಮಾಡುವದಿಲ್ಲ ಎಂದ ಮಾರೀಚ

33:32 ಮಾರೀಚನ ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ಸಹಾಯ ಮಾಡು ಎಂದು ರಾವಣನ ಆದೇಶ

44:33 ರಾಮನಿಗೆ ಪ್ರತೀಕಾರ ಮಾಡಲು ಅವಕಾಶವಿದು ಎಂದು ಒಪ್ಪಿಕೊಂಡ ಮಾರೀಚ

Play Time: 48:03

Size: 3.84 MB


Download Upanyasa Share to facebook View Comments
6908 Views

Comments

(You can only view comments here. If you want to write a comment please download the app.)
 • Sowmya,Bangalore

  1:45 PM , 09/11/2022

  ಗುರುಗಳಿಗೆ ನಮಸ್ಕಾರ, ನಮ್ಮ ಸ್ವಾಮಿಯ ಬಗ್ಗೆ ರಾಕ್ಷಸರೇ ಇಷ್ಟು ಚನ್ನಾಗಿ ಹೇಳುಬೇಕಾದರೇ, ಇನ್ನು ದೇವತೆಗಳ ಖುಷಿಗಳ ಬಾಯಲ್ಲಿ ಇನ್ನು ಎಷ್ಟು ಚೆನ್ನಾಗಿರುತ್ತದೆ. ಮಾರೀಚ ಭಯದಿಂದ ಹೇಗೆ ಎಲ್ಲೆಲ್ಲೂ ರಾಮನನ್ನು ಕಾಣುತ್ತಿದ್ದ ಹಾಗೆ ನಾವು ನಮ್ಮ ಸ್ವಾಮಿಯನ್ನ ಸದಾ ಭಕ್ತಿ ಯಿಂದ ಕಾಣುವಂತಾಗಲಿ ಶ್ರೀರಾಮಚಂದ್ರ...🙏🙏🙏
 • Manukumara A,Anthanahalli

  6:17 AM , 06/11/2022

  🙏 ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನಮಸ್ಕಾರಗಳು ಗುರುಗಳೇ ಮಾರೀಚನು ಬ್ರಹ್ಮ ದೇವರಿಂದ ವರವನ್ನು ಪಡೆದುಕೊಂಡಿದ್ದಾನೆ , ರಾವಣನೂ ಬ್ರಹ್ಮದೇವರಿಂದ ವರ ಪಡೆದುಕೊಂಡಿದ್ದಾನೆ, ಇಬ್ಬರಿಗೂ ವರ ವನ್ನು ಬ್ರಹ್ಮ ದೇವರು ಕೊಟ್ಟಿದ್ದಾರೆ , ಈಗಿರುವಾಗ ಮಾರೀಚ ರಾವಣನಿಗೆ ಎದುರುವ ಅವಶ್ಯಕತೆ ಇರಲಿಲ್ಲವಲ್ಲ ಹಾಗಿದ್ದರೂ ರಾವಣನಿಗೆ ಮಾರೀಚ ಏಕೆ ಹೆದರಿದ, ಇದರ ಒಳ ಅರ್ಥವೇನು ದಯಮಾಡಿ ತಿಳಿಸಿ ಕೊಡಿ ಗುರುಗಳೇ .🙏🙇🏻‍♂️🙇🏻‍♂️🙇🏻‍♂️
 • Jayashree karunakar,Bangalore

  9:34 PM , 01/11/2022

  ಅಲ್ಲಿ ನೋಡಲು ರಾಮ.... ಇಲ್ಲಿ ನೋಡಲು ರಾಮ..... ಎಲ್ಲೆಲ್ಲಿ ನೋಡಲು ಅಲ್ಲಿ ಶ್ರೀರಾಮ.... ಎಲ್ಲಾ ಸಂಧರ್ಭದಲ್ಲಿ ಯೂ ಅದೆಷ್ಟು ಅರ್ಥಪೂರ್ಣ ವಾದ ಅನುಭವದ ಸಾಲುಗಳು... 
  
  ಮನಸ್ಸಿನಲ್ಲಿ ಭಕ್ತಿ ತುಂಬಿಕೊಂಡಾಗ ಕಾಣುವ ಶ್ರೀರಾಮನಿಗೂ... ಭಯ ತುಂಬಿಕೊಂಡಾಗ ಕಾಣುವ ಶ್ರೀರಾಮನಿಗೂ ಅದೆಂತಹ ವೆತ್ಯಾಸ.... 
  
  ಮಾರೀಚನ ಮನದ ಪರಿಸ್ಥಿತಿಯನ್ನು ತೆರೆದಿಟ್ಟ ರೀತಿ ಅದ್ಭುತವಾಗಿತ್ತು... ಸಮುದ್ರದ ತಟ ದಲ್ಲಿ "ರತ್ನ " .... ರ.... ಶಬ್ದ ಹುಟ್ಟಿಸುವ ಭಯ.... ಅದೆಷ್ಟು ಚೆನ್ನಾಗಿ ಹೇಳಿದಿರಿ.... ಮಾರೀಚನ ಮನಸಿನಲ್ಲಿದ್ದ ರಾಮನ ಭಯ... ರಾಮನ ಶಕ್ತಿ ಸಾಮರ್ಥ್ಯವನ್ನು ಸ್ವತಃ ಕಣ್ಣಾರೆ ಕಂಡು ಭಯಗೊಂಡಿದ್ದ ಮಾರೀಚನ ಅನುಭವವನ್ನು ತಿಳಿಸಿ ಕೊಟ್ಟ ರೀತಿ ಚನ್ನಾಗಿತ್ತು...
 • Rajarao,Banglore

  4:21 AM , 31/10/2022

  🙏🙏🙏🙏🙏