Upanyasa - VNU1065

ಅಪಹರಣದ ವಿಡಂಬನೆಯೇ ಏಕೆ?

ಶ್ರೀಮದ್ ರಾಮಾಯಣಮ್ — 178

ರಾಮ ಸೀತೆಯರಿಗೆ ಮಾಯಾಮೃಗವು ಮಾರೀಚನ ಮಾಯೆ ಎಂದೇಕೆ ತಿಳಿಯಲಿಲ್ಲ?

ಇಬ್ಬರೂ ಏಕೆ ಮೋಹಕ್ಕೊಳಗಾದರು?

ಮಾರೀಚ ಹೇಳಿದ ಒಳ್ಳೆಯ ಮಾತನ್ನು ಕೇಳದೇ ಇದ್ದದ್ದು ರಾವಣನ ತಪ್ಪು ಎನ್ನುವದಾದರೆ ಲಕ್ಷ್ಮಣರು ಹೇಳಿದ ಒಳ್ಳೆಯ ಮಾತನ್ನು ರಾಮ ಸೀತೆಯರು ಕೇಳದೇ ಇದ್ದದ್ದು ತಪ್ಪಲ್ಲವೇ?

ಮಾರೀಚ ಕೂಗಿಕೊಂಡಾಗ, ರಾಮನೂ ಸಹ ಕೂಗಿಕೊಂಡು ವಿಷಯವನ್ನು ತಿಳಿಸಬಹುದಿತ್ತಲ್ಲವೇ? ಅಷ್ಟೂ ಸಹ ರಾಮನಿಗೆ ತಿಳಿಯದೇ ಹೋಯಿತೇ?

ಭಕ್ತೋತ್ತಮರಾದ ನಿಷ್ಕಲ್ಮಷ ಮನಸ್ಸಿನ ಲಕ್ಷ್ಮಣರನ್ನು ಸೀತೆ ಅನುಮಾನಿಸಿದ್ದು ತಪ್ಪಲ್ಲವೇ?

ಸೀತೆ ಲಕ್ಷ್ಮೀದೇವಿಯ ಅವತಾರವೇ ಆಗಿದ್ದರೆ, ನಾನು ರಾವಣ ಎಂದು ಸಂನ್ಯಾಸಿ ಹೇಳಿದಾಗ, ಅವನನ್ನೇಕೆ ಭಸ್ಮ ಮಾಡಿಬಿಡಲಿಲ್ಲ?

ಒಟ್ಟಾರೆ ಈ ಸೀತಾಪಹರಣದ ಘಟನೆಯೇ ಯಾಕಾಗಿ ನಡೆಯಬೇಕಾಗಿತ್ತು ?

ಮುಂತಾದ ಪ್ರಶ್ನೆಗಳಿಗೆ ಉತ್ತರ ಪಡೆಯುವದರೊಂದಿಗೆ, ಲೈಂಗಿಕ ಅಪರಾಧಗಳಿಂದ ಉಂಟಾಗುವ ಮಹತ್ತರ ದುಷ್ಫಲಗಳು, ಪಾಪ ಕಳೆದುಕೊಳ್ಳುವ ರೀತಿ, ಭೋಗವನ್ನು ಅನುಭವಿಸುವ ಇಚ್ಛೆಯಿದ್ದರೆ ದೇವರನ್ನೇ ಪ್ರಾರ್ಥಿಸಿ ಪಡೆಯಬೇಕೇ ಹೊರತು ವಾಮಮಾರ್ಗದಿಂದ ಪಡೆಯತಕ್ಕದ್ದಲ್ಲ ಇತ್ಯಾದಿ ವಿಷಯಗಳ ನಿರೂಪಣೆ ಇಲ್ಲಿದೆ. ಸೀತಾಪಹರಣದ ವಿಡಂಬನೆಯಿಂದ ಸ್ವಾಮಿ ನಮಗೆ ಕಲಿಸುತ್ತಿರುವ ಪಾಠದ ನಿರೂಪಣಯೊಂದಿಗೆ. 


01:52 ತತ್ವಗಳನ್ನು ತಪ್ಪಾಗಿ ತಿಳಿದರೆ ಅನರ್ಥವುಂಟಾಗುತ್ತದೆ

02:45 ಸೀತಾಪಹರಣದ ಕುರಿತು ಇರುವ ಅನೇಕ ಪ್ರಶ್ನೆಗಳು 

05:11 ದೇವತೆಗಳು ಮನುಷ್ಯರಾಗಿ ಅವತರಿಸಿದಾಗ ಮನುಷ್ಯರಂತೆಯೇ ವರ್ತಿಸುತ್ತಾರೆ. 

07:23 ಮನುಷ್ಯರು ತಮ್ಮ ಕುತೂಹಲದಿಂದ ಅನರ್ಥಕ್ಕೂ ಈಡಾಗುತ್ತಾರೆ

11:06 ಮಾಯಾಮೃಗದ ಘಟನೆಯಿಂದ ಸೀತಾರಾಮರಿಗೆ ಅನರ್ಥವಾಗಿಲ್ಲ, ದೇವರಿಗೆ ಅನರ್ಥವುಂಟಾಗುವದಿಲ್ಲ.

13:01 ನಟನೊಬ್ಬ ಸಾವಿನ ನಟನೆ ಮಾಡಿದಂತೆ ಕೇವಲ ನಟನೆಯಿದು

16:34 ರಾವಣ ಬೀಸಿದ ಬಲೆಯಲ್ಲ ಇದು, ಸೀತಾರಾಮರು ಬೀಸಿದ ಬಲೆ

21:00 ಅಪಹರಣದ ಮಾಧ್ಯಮವೇ ಏಕೆ?

21:47 ಸೀತಾದೇವಿಯರಿಗೆ ಕರ್ಮದ ಬಂಧನವಿಲ್ಲ. 

25:27 ಲೈಂಗಿಕ ಅಪರಾಧದ ಫಲಗಳು 

31:42 ಸ್ತ್ರೀಯರನ್ನು ಅಪಹರಣ ಮಾಡಿದ ರಾವಣನಿಗೆ ಅಪಹರಣದಿಂದಲೇ ಶಿಕ್ಷೆ

33:06 ಪಾಪ-ಪುಣ್ಯಕರ್ಮಗಳ ಮೂಲ

39:40 ಸೀತಾದೇವಿಗೆ ತೊಂದರೆ ನೀಡಲು ಯಾರಿಗೂ ಸಾಧ್ಯವಿಲ್ಲ

42:08 ರಮಾನಾರಾಯಣರ ನಟನೆಯಿದು

43:17 ನಮ್ಮ ತಪ್ಪುಗಳಿಗೆ ದೇವರಲ್ಲಿ ಕ್ಷಮೆ ಕೇಳುವ ಕ್ರಮ

48:12 ಕಲಿಯುಗದಲ್ಲಿ ನಾಮಸ್ಮರಣೆಯ ಮಹಿಮೆ

50:12 ಭೋಗದ ಆಸೆಯಿದ್ದಲ್ಲಿ ದೇವರನ್ನು ಪ್ರಾರ್ಥಿಸಬೇಕು, ಪಾಪ ಮಾಡಬಾರದು 

Play Time: 56:56

Size: 3.84 MB


Download Upanyasa Share to facebook View Comments
8228 Views

Comments

(You can only view comments here. If you want to write a comment please download the app.)
 • Jayashree karunakar,Bangalore

  10:56 PM, 05/11/2022

  ಗುರುಗಳೇ 
  
  ರಾವಣ ದೇವತಾ ಸ್ತ್ರೀಯರನ್ನು, ಇತರ ಋಷಿ ಪತ್ನಿಯರನ್ನು ಅಪಾಹಾರ ಮಾಡಿದ್ದು, ಆ ಸ್ತ್ರೀಯರ ಆ ರೀತಿಯಾದ ಒಂದು ಕರ್ಮವೂ ಇತ್ತು, ರಾವಣನಿಗೂ ಶಿಕ್ಷೆ ಯಾಗಬೇಕಿತ್ತು. ಹಾಗಾಗಿ ಘಟನೆಗೆ ತಕ್ಕದಾದ ಶಿಕ್ಷೆಯಾಯಿತು. 
  
  ಆದರೆ, ಇಲ್ಲಿ ಸೀತಾ ಅಪಹರಣವೆಂಬುದು ರಾವಣನ ಲೆಕ್ಕದಲ್ಲಿ ನಡೆದಿದೆಯೇ ಹೊರತು, ಭಗವಂತನ ಲೆಕ್ಕದಲ್ಲಿ ನಡೆದಿಲ್ಲ. ಸೀತಾಪಹರಣ ಎಂಬ ಘಟನೆಯಿಂದ ಫಲ(ನಾರಾಯಣನಿಂದ ವಿಯೋಗ ) ಸೀತೆಗೆ ಆಗಿಲ್ಲ. ಅದರ ಫಲ ರಾವಣನಿಗೆ (ಅಪಹರಣ ಮಾಡಿದ್ದೇನೆ ಎನ್ನುವ ತೃಪ್ತಿ ಮಾತ್ರ )ಆಗಿದೆ.. 
  ಭಗವಂತನ ಲೆಕ್ಕದಲ್ಲಿ ಘಟನೆಯೇ ನಡೆದಿಲ್ಲ ಅಂದಾಗ, ಸೀತಾಪಹರಣ ವಿಷಯದಲ್ಲಿ ರಾವಣನಿಗೆ ಭಗವಂತ ಶಿಕ್ಷೆ ಹೇಗೆ ನೀಡಲು ಸಾಧ್ಯ?

  Vishnudasa Nagendracharya

  ಒಂದು ದೃಷ್ಟಾಂತ ನೋಡಿ -
  
  ಒಬ್ಬ ವ್ಯಕ್ತಿ ಒಂದು ಮಗುವನ್ನು ಕೊಲ್ಲಲು ಬರುತ್ತಿದ್ದಾನೆ. ಆ ಮಗುವಿನ ತಂದೆಗೆ ಈ ವಿಷಯದ ಅರಿವಾಯಿತು. ಆ ವ್ಯಕ್ತಿಯ ದುಷ್ಟ ಬುದ್ಧಿಯನ್ನು ತೋರಿಸಲು, ಮಗು ಮಲಗಿರುವ ಸ್ಥಳದಲ್ಲಿ, ಮಗುವಿನಷ್ಟು ದೊಡ್ಡದಾದ ಬೊಂಬೆಯಿಟ್ಟು ಪಕ್ಕದಲ್ಲಿ ನಿಂತು ಅವನ ಕುಕೃತ್ಯವನ್ನು ದಾಖಲಿಸುತ್ತಿದ್ದಾನೆ. ಆ ವ್ಯಕ್ತಿ ಬಂದವನೇ ಆ ಮಗುವಿನ ಮೇಲೆ ಕಲ್ಲನ್ನು ಹಾಕಿದ. ಮಗು ಸಾಯಲಿಲ್ಲ. ಆದರೆ ಮಗುವನ್ನು ಸಾಯಿಸಲು ಹೊರಟ ಅವನ ದುರ್ಬುದ್ಧಿಗೆ ಸರಕಾರ ಶಿಕ್ಷೆ ನೀಡಿತು. 
  
  ಇದು ಕಾಲ್ಪನಿಕ ಕಥೆಯಲ್ಲ. ಧೃತರಾಷ್ಟ್ರರು ಭೀಮಸೇನದೇವರನ್ನು ಕೊಲ್ಲುವ ಇಚ್ಚೆಯಿಂದ ಅಪ್ಪಿಕೊಳ್ಳುತ್ತಾರೆ. ಗಟ್ಟಿಯಾಗಿ ಅಪ್ಪಿ ಕೊಲ್ಲುವ ಉದ್ದೇಶ ಅವರದು. ಆದರೆ, ಧೃತರಾಷ್ಟ್ರರ ಅಪ್ಪುಗೆಯಿಂದ ಭೀಮ ಸಾಯುವದಿಲ್ಲ, ಹೀಗಾಗಿ ಧೃತರಾಷ್ಟ್ರರ ದುರ್ಬುದ್ಧಿ ಜನರಿಗೆ ತಿಳಿಯುವದಿಲ್ಲ ಎಂದು ಅರಿತ ಶ್ರೀಕೃಷ್ಣದೇವರು ಭೀಮಸೇನದೇವರ ಲೋಹದ ಪ್ರತಿಮೆಯನ್ನು ಅಲ್ಲಿರಿಸುತ್ತಾರೆ. ಧೃತರಾಷ್ಟ್ರ ಅದನ್ನು ಅಪ್ಪಿದಾಗ ಅದು ಪುಡಿಪುಡಿಯಾಗುತ್ತದೆ. ಅಯ್ಯೋ ಭೀಮ ಸತ್ತ ಎಂದು ಧೃತರಾಷ್ಟ್ರ ಅತ್ತರೆ, ಭೀಮ ಸತ್ತಿಲ್ಲ ಇದು ನಿನ್ನ ದುರ್ಬುದ್ಧಿ ಎಂದು ಶ್ರೀಕೃಷ್ಣದೇವರು ಎಲ್ಲರ ಮುಂದೆ ನಿಂದಿಸುತ್ತಾರೆ. 
  
  ಹಾಗೆ, ಸೀತಾದೇವಿಯರನ್ನು ಅಪಹಾರ ಮಾಡುವದಿರಲಿ, ಮುಟ್ಟಲೂ ಸಹ ರಾವಣನಿಗೆ ಸಾಧ್ಯವಿಲ್ಲ. ಹೀಗಾಗಿ, ಪ್ರತಿಕೃತಿಯ ನಿರ್ಮಾಣ. 
  
  ರಾವಣನ ದೃಷ್ಟಿಯಿಂದ ಅದು ಸೀತಾಪಹಾರವೇ. ನಾವು ಫಲ ಪಡೆಯುವದು ನಮ್ಮ ದೃಷ್ಟಿಯಿಂದ ತಾನೇ. 
  
  ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡಿದರೆ ಸತ್ಫಲ ಪಡೆಯುತ್ತೇವೆ. ದಾಂಭಿಕತೆಯಿಂದ ಮಾಡಿದರೆ ದುಷ್ಫಲ ಪಡೆಯುತ್ತೇವೆ. ಅಂದರೆ ಸತ್ಫಲ ಮತ್ತು ದುಷ್ಫಲಗಳಿಗೆ ಕಾರಣವಾದದ್ದು ನಮ್ಮಲ್ಲಿನ ಭಕ್ತಿ, ದಾಂಭಿಕತೆಗಳು. 
  
  ಹಾಗೆ ರಾವಣನೊಳಗಣ ದೈತ್ಯ ಸೀತೆಯನ್ನು ಕಾಮಿಸಿದ್ದಕ್ಕಾಗಿ ಶಿಕ್ಷೆ ಪಡೆದ. ಅಪಹರಿಸಿದ್ದು ಮಾಯಾಸೀತೆಯನ್ನು. ಮನಸ್ಸಿನಿಂದ ಕಾಮಿಸಿದ್ದು ಸೀತಾದೇವಿಯರನ್ನು. ಹೀಗಾಗಿ ಶಿಕ್ಷೆ ಪಡೆದ. 
  
  
 • Sowmya,Bangalore

  8:35 PM , 11/11/2022

  ಗುರುಗಳಿಗೆ ನಮಸ್ಕಾರ, ಎಂದೆಂದಿಗೂ ಹರಿ ನಾಮ ಸಮ್ಮರಣೆ ಬಿಡದಂತಾಗಲಿ ಭಗವಂತ... ದಿನ ದಿನ ಹರಿನಾಮ ಸಮ್ಮರಣೆ ಹಸಿವು ಜಾಸ್ತಿಯಾಗಲಿ.. ಅದ್ಭುತವಾದ ಸ್ತೋತ್ರ ತುಂಬಾ ಚನ್ನಾಗಿದೆ 🙏🙏🙏
 • Nalini Premkumar,Mysore

  4:08 PM , 05/11/2022

  ಭಗವಂತನ ನಾಮ ಸ್ಮರಣೆ ಯೊಂದಿಗೆ ನಮ್ಮ ಪಾಪ ಗಳನ್ನು ಕಳೆಯಲು ಸಾಧ್ಯ ನಿನ್ನ ವರ ಮಧ್ಯ ದಲ್ಲಿ ಇರಿಸು.... ಎಲ್ಲವು ಪರಮ ಅಧ್ಬುತ ಗುರುಗಳೇ ಹೇಳಲು ಪದಗಳಿ ಲ್ಲ... ಭಗವಂತ ನಿಮ್ಮಂಥ ಗುರುಗಳನ್ನು ನಮಗೆ ಕರುಣಿಸಿದ್ದಾನೆ ಅದೆ ಪುಣ್ಯ... ಜನ್ಮ ಜನ್ಮ ಕ್ಕೂ ಇದನ್ನೆ ಕೊಡಲಿ.... ಸಜ್ಜನರ ಮದ್ಯದಲ್ಲಿ ನಮ್ಮನು ಇಡಲಿ ಈಗೆ ನಾವು ಭಗವಂತನ ತತ್ವಗಳನ್ನು ಕೇಳುವ ಹಾಗೆ ಆಗಲಿ.... ನೀವು ಭಕ್ತಿಯಿಂದ ಹೇಳುವ ರೀತಿ ಯೆ ಅಧ್ಭುತ ಗುರುಗಳೇ ಅನಂತ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Nalini Premkumar,Mysore

  4:02 PM , 05/11/2022

  ಹರೆ ಶ್ರೀನಿವಾಸ ಗುರುಗಳೇ ಈ ಭಾಗ ದ ರಾಮಾಯಣ ಪರಮ ಅಧ್ಬುತ ಗುರುಗಳೇ ಅನೇಕ ವಿಷಯಗಳನ್ನು ತಿಳಿದುಕೊಂಡೆ ವು ಸೀತಾರಾಮ ರು ಲಕ್ಷ್ಮಿ ನಾರಾಯಣರ..... ಅವರು ಮಾಡುತ್ತಿರುವುದು ವಿಡಂಬನೆ... ನಾಟಕ... ರಾಮನನ್ನು ಕೊಲ್ಲಲು ಎಣೆದ ಬಲೆ..... ರಾವಣನ ಕರ್ಮ ದಿಂದ ಇದು ನಡೆಯುತ್ತಿದೆ... 
  ಪಾಪ ಪುಣ್ಯ ಗಳ ಸರಪಳಿ.... ಭಗವಂತನಲ್ಲಿ ನಾವು ಅಪರಾಧ ಮನ್ನಿಸು ಎಂದು ಬೇಡಿಕೊಳ್ಳಬೇಕು... ಮನ್ನಿಸುತ್ತಾನೆ ಸ್ವಾಮಿ...
 • Jayashree karunakar,Bangalore

  10:33 PM, 04/11/2022

  ಶ್ರೇಷ್ಠ ಗ್ರಂಥಗಳಲ್ಲಿ ಮಾಡಿರುವ ನಿರ್ಣಯಗಳನ್ನು ಉದಾಹರಿಸಿ, ತತ್ವಗಳನ್ನು ತಿಳಿಸುವ ರೀತಿ ತುಂಬಾ ಚೆನ್ನಾಗಿದೆ ಗುರುಗಳೇ... 
  
  ರಾಮಾಯಣವನ್ನು ನಾವು ನಿಮ್ಮಿಂದ  ಶ್ರವಣ ಮಾಡುತ್ತಿರುವ ರೀತಿಯೇ ವಿಶೇಷ ವಾಗಿದೆ... 
  
  ಅಶೋಕವನದಲ್ಲಿ ಮಾತ್ರವಲ್ಲ, ಸಮಗ್ರ ಸಾವರಣ ಬ್ರಹ್ಮಾಂಡದಲ್ಲಿ ವ್ಯಾಪಿಸಿದ್ದಾರೆ ಲಕ್ಷ್ಮೀದೇವಿಯು.... ಅಬ್ಬಾ ಎಂತಹ ಭಕ್ತಿ ಭರಿತ ಮಾತು... 
  
  ಅಂಭ್ರಣೀ ಸೂಕ್ತ ದ ತತ್ವಗಳೊಂದಿಗೆ ವಿವರಣೆಗೊಂಡ ಈ ಭಾಗದ ರಾಮಾಯಣದ ವೈಭವವನ್ನು ಯಾವ ಶಬ್ದ ಗಳಿಂದ ವರ್ಣಿಸಲಿ?... 
  
  ಭಾಗವತದಲ್ಲಿ ಹೇಳಿದ ಶಕ್ತಿಗೀತೆಯನ್ನು 
   ನೆನಪಿಸಿದ ರೀತಿಯೇ ಚೆಂದ... 
  
  ಸೀತಾಪಹರಣದ ಘಟನೆ ನಡೆದಿದೆ ಎಂದರೆ ಅಲ್ಲಿ ಸೀತಾದೇವಿಯ ಕರ್ಮವಿಲ್ಲ... ಎಂತಹ ಎಚ್ಚರಿಕೆಯ ಮಾತು.... ನಾವು ತಿಳಿಯಲೇ ಬೇಕಾದ ವಿಷಯ... ಈ ವಿಷಯವನ್ನು ನೀವು ಸೀತಾಪಹರಣದ ಘಟನೆಯನ್ನು ನಮಗೆ ಪ್ರವಚನಕ್ಕಿಂತ ಮೊದಲೇ ತಿಳಿಸಿದ್ದು ತುಂಬಾ ಒಳ್ಳೆದಾಯಿತು ಗುರುಗಳೇ.... ಸಂಶಯವನ್ನು ಪರಿಹರಿಕೊಂಡು ಇನ್ನಷ್ಟು ಭಕ್ತಿಯಿಂದ ಆಲಿಸುವಂತಾಯಿತು.... 
  
  ಎಷ್ಟೊಂದು ಪ್ರಶ್ನೆಗಳನ್ನು ನೀವೇ ಮಾಡಿಕೊಂಡು, ನಮಗೆ ಉತ್ತರದ ಮೂಲಕ ಸೊಗಸಾಗಿ ಹೇಳಿದಿರಿ... 
  
  ಪರಸ್ತ್ರೀಯರನ್ನು ಅಗ್ನಿಯಂತೆ ಕಾಣಬೇಕು.... ಉದಾಹರಣೆಯ ಮೂಲಕ ತಿಳಿಸಿದ ರೀತಿ !!!ಅಬ್ಬಾ.... ಏನು ಹೇಳೋದು.... ಇಲ್ಲಿ ಹೇಳಿದ ಪ್ರತಿಯೊಂದು ವಿಷಯಗಳೂ ನಮ್ಮನ್ನು ಪಾಪಗಳಿಂದ ಎಚ್ಚರಿಸುತ್ತದೆ.... 
  ನೀವು ವಿಷಯಗಳನ್ನು ತಿಳಿಸಲು ನೀಡುವ ಉದಾಹರಣೆಗಳೇ ಪರಮಾದ್ಭುತ... 
  ಶಬ್ದ ಗಳೇ ಸಾಲದು ಗುರುಗಳೇ.... ಪ್ರತೀ ಶಬ್ದ ಗಳನ್ನು ಕೇಳುತ್ತಾ ಕೇಳುತ್ತಾ ಭಕ್ತಿಯ ನಮಸ್ಕಾರ ಮಾತ್ರ ಮಾಡಲು ಸಾಧ್ಯ... ಮಾತು ಹೊರಡುತ್ತಿಲ್ಲ...
 • M V Lakshminarayana,Bengaluru

  9:46 PM , 04/11/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಅಷ್ಟ ಪಾಪಗಳ ವಿವರ ಬದುಕಿನ ಪಾಠವಾಗಿದೆ
 • Jyothi Gayathri,Harihar

  6:09 PM , 04/11/2022

  ಹರೇ ಶ್ರೀನಿವಾಸ 🙏
  ಆಚಾರ್ಯರಿಗೆ ನಮಸ್ಕಾರಗಳು 🙏
  ಇವತ್ತಿನ ರಾಮಾಯಣ ಪ್ರವಚನದಿಂದ ಅನೇಕ ವಿಚಾರಗಳು ತಿಳಿದೆವು. ನಿಮ್ಮ ರಾಮಾಯಣ ಪ್ರವಚನ ಅಧ್ಬುತ.ಪಾಮರಳಾದ ನಾನು ಏನಂತ ವರ್ಣನೆ ಮಾಡಬೇಕೊ ಗೊತ್ತಿಲ್ಲ. ನನಗೆ ಮಾತುಗಳು ಬರುತಾಯಿಲ್ಲ. ಕಣ್ಣಿನಲ್ಲಿ ನೀರು ಬರುತಾಯಿದೆ. ನಾವು ಮಾಡುವ ತಪ್ಪುಗಳಿಗೆ ಸ್ವಾಮಿ ಹತ್ತಿರ ಕ್ಷಮೆಹೇಗೆ ಕೇಳಬೇಕು ಎಂದು ತಿಳಿಸಿಕೊಟ್ಟಿದ್ದಿರಾ.ಧನ್ಯವಾಧಗಳು. ಆ ಪ್ರಾರ್ಥನೆಯನ್ನು ಹೆಣ್ಣು ಮಕ್ಕಳು ಮಾಡಬಹುದಾ? (ನಮಸ್ತುಭ್ಯಂ ದೇವ ಪ್ರಣತ ಜನ ಕಾರುಣ್ಯ ಜಲಧೇ) ಈ 
  ಶ್ಲೋಕವನ್ನು ಟೈಪ್ ಮಾಡಿಹಾಕಿದರೇ ದಿನಾ ಪ್ರಾರ್ಥನೆ ಮಾಡುವುದಕ್ಕೆ ಚೆನ್ನಾಗಿ ಇರುತ್ತದೆ ಎಂದು ನನ್ನ ಪ್ರಾರ್ಥನೆ.🙏