Upanyasa - VNU1066

ಮಾರೀಚನ ಸಂಹಾರ

ಶ್ರೀಮದ್ ರಾಮಾಯಣಮ್ — 179

ಮಾಯಾಮೃಗವನ್ನು ನೋಡಿ ಆಸೆ ಪಟ್ಟಿದ್ದು ಸೀತೆ ಎಂದು ಹೆಚ್ಚು ಪ್ರಚಾರದಲ್ಲಿರುವದು, ಆದರೆ, ವಾಸ್ತವಿಕವಾಗಿ ಆ ಆಸೆಯ ವಿಡಂಬನೆಯನ್ನು ಶ್ರೀರಾಮರೇ ಹೆಚ್ಚಿಗೆ ಮಾಡಿದ್ದು. ಕುಳಿತಲ್ಲಿ ಕಾಕಾಸುರನನ್ನು ನಿಗ್ರಹಿಸಿದ ಆ ಮಹಾಪರಾಕ್ರಮಿ ಶ್ರೀರಾಮರು, ಮಾಯಾಮೃಗದ ಹಿಂದೆ ಓಡೋಡಿ ಹೋಗಿ, ಮಾರೀಚ ರಾವಣರಿಗೆ ಪೂರ್ಣ ಭ್ರಮೆ ಹುಟ್ಟಿಸಿ, ಆ ಮಾಯಾಮೃಗವನ್ನು ಕೊಲ್ಲುತ್ತಾರೆ.  ಮಾರೀಚ ಮಾಡಿದ ಧ್ವನಿಯಿಂದ ವಿಚಲಿತರಾದಂತೆ ನಟಿಸುತ್ತಾರೆ. ಆ ಜಗನ್ನಾಟಕಸೂತ್ರಧಾರಿಯ ಅದ್ಭುತ ನಟನೆಯ ಚಿತ್ರಣ ಇಲ್ಲಿದೆ. 

02:05 ಮೃಗವನ್ನು ಹಿಡಿದು ತರಲು ಸೀತಾದೇವಿಯರ ಪ್ರಾರ್ಥನೆ

06:35 ಶ್ರೀರಾಮರ ಲೋಭದ ವಿಡಂಬನೆ

13:09 ಮೃಗಶಿರಾ ನಕ್ಷತ್ರ

14:00 ಇದು ರಾಕ್ಷಸನ ಮಾಯೆಯಾಗಿದ್ದರೆ ಕೊಲ್ಲಲೇಬೇಕು

19:41 ಮಾರೀಚನ ಬೆನ್ನಟ್ಟಿದ ಶ್ರೀರಾಮರು

24:46 ಮಾರೀಚನ ಸಂಹಾರ

27:36 ರಾಮದೇವರ ಧ್ವನಿಯಂತೆ ಧ್ವನಿಮಾಡಿ ಕಿರುಚಿದ ಮಾರೀಚ

29:42 ಶ್ರೀರಾಮರಿಂದ ಭಯ, ವಿಷಾದಗಳ ವಿಡಂಬನೆ

Play Time: 33:46

Size: 3.84 MB


Download Upanyasa Share to facebook View Comments
7107 Views

Comments

(You can only view comments here. If you want to write a comment please download the app.)
  • Sowmya,Bangalore

    4:48 PM , 12/11/2022

    ಗುರುಗಳಿಗೆ ನಮಸ್ಕಾರ, ಶ್ರೀರಾಮಚಂದ್ರ ಎನು ನಿನ್ನ ಲೀಲೆ.. ಎಲ್ಲರಿಗೂ ಮೋಹ ನೀಡುವ ನಿನಗೆ ಈ ಜಿಂಕೆ ಮೇಲೆ ಮೋಹದ ವಿಡಂಬನೆ.. ಸ್ವಾಮಿ ಶ್ರೀರಾಮಚಂದ್ರ ತಾಯಿ ಸೀತಾದೇವಿ🙏🙏🙏