Upanyasa - VNU1067

ಮಾಡದ ತಪ್ಪನ್ನು ಒಪ್ಪಿಕೊಳ್ಳಬಾರದು!

ಶ್ರೀಮದ್ ರಾಮಾಯಣಮ್ — 180

ಲಕ್ಷ್ಮಣರು ತಾಯಿ ಸೀತೆಯನ್ನು ಒಂದು ಕ್ಷಣಕಾಲದಲ್ಲಿಯೂ ಕೆಟ್ಟದೃಷ್ಟಿಯಿಂದ ಕಂಡಿಲ್ಲ, ವಿಚಾರ ಮಾಡಿಲ್ಲ, ಆದರೆ ನಮ್ಮಮ್ಮ ಸೀತಾದೇವಿಯರು ಅತ್ಯುಗ್ರವಾದ ಮಾತುಗಳಿಂದ ಲಕ್ಷ್ಮಣರ ಮನಸ್ಸನ್ನು ನೋಯಿಸಿಬಿಡುತ್ತಾರೆ. 

ನಾವು ಆಡೇ ಇರದ ಮಾತನ್ನು, ಮಾಡೇ ಇರದ ಕೆಲಸವನ್ನು, ಆಡಿದ್ದೀರಿ, ಮಾಡಿದ್ದೀರಿ ಎಂದು ಸಮಾಜ ನೋಯಿಸಿದಾಗ ಏನು ಮಾಡಬೇಕು ಎನ್ನುವದರ ವಿವರ ಇಲ್ಲಿದೆ. ಸೀತಮ್ಮನವರ ಚರ್ಯೆಯ ಹಿಂದಿನ ಕಾರಣದ ಚಿಂತನೆಯೊಂದಿಗೆ. 

02:44 ಸೀತಾದೇವಿಯರ ಭಯದ ವಿಡಂಬನೆ

04:04 ನನ್ನನ್ನು ಪಡೆಯಬೇಕೆಂಬ ದುರಾಸೆ ನಿನಗಿದೆ ಎಂಬ ಸೀತೆಯ ತೀಕ್ಷ್ಣ ಮಾತು

05:26 ಸೀತಾದೇವಿಯರ ವರ್ತನೆಯ ಹಿಂದಿನ ಉದ್ದೇಶ

07:34 ಶ್ರೀಮದಾಚಾರ್ಯರ ನಿರ್ಣಯ

10:35 ಲಕ್ಷ್ಮಣರ ಸಾಂತ್ವನದ ಮಾತುಗಳು

14:41 ಸೀತಾದೇವಿಯ ಸಿಟ್ಟು, “ನೀ ಹೋಗಲಿಲ್ಲ ಎಂದರೆ ಪ್ರಾಣತ್ಯಾಗ ಮಾಡುತ್ತೇನೆ”

17:28 ಭಯಕ್ಕೊಳಗಾಗಿ ಹೊರಟ ಲಕ್ಷ್ಮಣರು

23:12 ಲಕ್ಷ್ಮಣರ ಶುದ್ಧ ಮನಸ್ಸನ್ನು ಸೀತಾದೇವಿ ನೋಯಿಸಿದ್ದು ಸರಿಯೇ?

25:14 ಹನುಮಂತ ಲಕ್ಷ್ಮಣರಲ್ಲಿನ ವ್ಯತ್ಯಾಸ

27:25 ಮಾಡದ ತಪ್ಪನ್ನು ಒಪ್ಪಿಕೊಳ್ಳಬಾರದು, ಶ್ರೀಪುರಂದರದಾಸಾರ್ಯರು ಕಲಿಸಿದ ಪಾಠ

37:00 ಲಕ್ಷ್ಮಣರೇಖೆ ಸುಳ್ಳುಕಥೆ, ವಾಸ್ತವವಲ್ಲ

Play Time: 38:19

Size: 3.84 MB


Download Upanyasa Share to facebook View Comments
7404 Views

Comments

(You can only view comments here. If you want to write a comment please download the app.)
 • Sowmya,Bangalore

  1:35 PM , 14/11/2022

  ಗುರುಗಳಿಗೆ ನಮಸ್ಕಾರ, ಎಂಥಹ ಮಾತೃಭಕ್ತಿ ಲಕ್ಷ್ಮಣರದು. ಜಟಾಯು ಹೇಳಿದರು ರಾಮ ಲಕ್ಷ್ಮಣರು ಇಲ್ಲದ್ದಿದಾಗ ಸೀತಾದೇವಿಯನ್ನು ಕಾಯುತ್ತೇನೆ ಎಂದಿದ್ದರಲ್ಲ ಅವರು ಎಲ್ಲಿಗೆ ಹೋದರು? 
   ಶ್ರೀರಾಮಚಂದ್ರ 🙏🙏🙏

  Vishnudasa Nagendracharya

  ಶ್ರೀರಾಮರು ಮತ್ತು ಲಕ್ಷ್ಮಣರು ಇಬ್ಬರೂ ಸಹ ಆಶ್ರಮದಲ್ಲಿದ್ದ ಕಾರಣಕ್ಕೆ ಜಟಾಯು ಹತ್ತಿರದಲ್ಲಿರಲಿಲ್ಲ. ರಾಮಲಕ್ಷ್ಮಣರಿಬ್ಬರೂ ಸಹ ಇದ್ದಕ್ಕಿದ್ದ ಹಾಗೆ ಆಶ್ರಮದಿಂದ ಹೊರಟದ್ದು. ಹೀಗಾಗಿ ಇದು ಜಟಾಯುವಿಗೆ ತಿಳಿಯಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಈ ಘಟನೆ ನಡೆಯಬೇಕಾಗಿದೆ. ಹೀಗಾಗಿ ಅದಕ್ಕೆ ತಕ್ಕಂತೆಯೇ ಎಲ್ಲರಿಗೂ ಬುದ್ಧಿಪ್ರೇರಣೆಯಾಗುತ್ತಿದೆ. 
 • Laxmi Padaki,Pune

  11:40 AM, 10/11/2022

  ಅದ್ಭುತ, ತಮ್ಮ ಉಪನ್ಯಾಸ ಗಳಿಂದ ನಮ್ಮ ತಪ್ಪು ಕಟ್ಟುಕಥೆಗಳ ಬಗ್ಗೆ ಅರಿವಯ್ತು.ಧನ್ಯವಾದಗಳು ಶ್ರೀ ಆಚಾರ್ಯರಿಗೆ. ನಮೋ ನಮಃ. ಶ್ರೀ ಲಕ್ಷಣ ರೇಖೆ ಇಷ್ಟು ಸಾಮಾನ್ಯವಾಗಿ ವಾಗಿ ರೂಢಿಯಲ್ಲಿದೆ. ಈಗ ಸತ್ಯ ತಿಳಿಯಿತು. ಕೋಟಿ ಕೋಟಿ ಪ್ರಣಾಮಗಳು.
 • M V Lakshminarayana,Bengaluru

  3:24 PM , 08/11/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ಸುಗ್ರೀವಾಜ್ಞೆ ಲಕ್ಷ್ಮಣರೇಖೆ ರಾಮಬಾಣ ಎಂಬ ನುಡಿಗಟ್ಟುಗಳು ಜನಜನಿತವಾಗಿವೆ. ಲಕ್ಷ್ಮಣರೇಖೆ ಇಲ್ಲದಿದ್ದರೆ ರಾವಣನಿಗೆ ಒಳಗೆ ಬಂದು ಭಿಕ್ಷೆ ಸ್ವೀಕರಿಸಲು ಏಕೆ ಸಾಧ್ಯವಾಗಲಿಲ್ಲ?
  ಇಂತಿ ನಮಸ್ಕಾರಗಳು

  Vishnudasa Nagendracharya

  ಜನಜನಿತವಾದ ಮಾತ್ರಕ್ಕೆ ಅದು ಸತ್ಯವಾಗಿರಬೇಕು ಎಂಬ ನಿಯಮವಿಲ್ಲ. 
  
  ರಾಮಹನುಮಯುದ್ಧ, ಲವಕುಶರು ರಾಮನೊಡನೆ ಮಾಡುವ ಯುದ್ಧ ಈ ಕಥೆಗಳೂ ಇವೆ. ಇವೆಲ್ಲವೂ ಕಾಲ್ಪನಿಕ. ಶ್ರೀಮದ್ ರಾಮಾಯಣದಲ್ಲಿ ಇವುಗಳ ಉಲ್ಲೇಖವೇ ಇಲ್ಲ.
  
  ಪ್ರಮಾಣವಿರುವದನ್ನು ಒಪ್ಪಬೇಕು. ಪ್ರಮಾಣವಿಲ್ಲದ್ದನ್ನು ಒಪ್ಪಲು ಸಾಧ್ಯವೇ ಇಲ್ಲ. 
  
  ರಾಮಬಾಣ, ಸುಗ್ರೀವಾಜ್ಞೆಗಳು ಪ್ರಮಾಣಗಳಿಂದ ಸಿದ್ಧವಾದ ವಿಷಯಗಳು. 
  
  ಸೀತಾದೇವಿಯರು ಹಣ್ಣು ಹಂಪಲುಗಳನ್ನು ತಂದು ರಾವಣನ ಮುಂದಿಡುತ್ತಾರೆ. ರಾವಣ ಭಿಕ್ಷೆ ಸ್ವೀಕರಿಸಲು ಬಂದಿಲ್ಲವಾದ್ದರಿಂದ ಸ್ವೀಕರಿಸುವದಿಲ್ಲವೇ ಹೊರತು, ಅವನಿಗೆ ಬರಲಿಕ್ಕೆ ಸಾಧ್ಯವಾಗಲಿಲ್ಲ ಎಂದಲ್ಲ. 
  
  ಆಶ್ರಮದ ಹೊರಗಲ್ಲ,, ರಾವಣ ಆಶ್ರಮದೊಳಗೆ ನುಗ್ಗಿಯೇ ಸೀತಾಪ್ರತಿಕೃತಿಯನ್ನು ಅಪಹಾರ ಮಾಡುತ್ತಾನೆ. ಮುಂದಿನ ಉಪನ್ಯಾಸಗಳಲ್ಲಿ ಆ ವಿವರ ಬರುತ್ತವೆ.