Upanyasa - VNU1069

ಪ್ರತಿಕೃತಿಯ ನಿರ್ಮಾಣ

ಶ್ರೀಮದ್ ರಾಮಾಯಣಮ್ — 182

ರಾವಣ ಅಪಹಾರ ಮಾಡಿದ್ದು ಸೀತಾದೇವಿಯರನ್ನಲ್ಲ, ಸೀತೆಯ ಪ್ರತಿಕೃತಿಯನ್ನು ಎಂದು ಶ್ರೀಮದಾಚಾರ್ಯರು ನಿರ್ಣಯಿಸಿದ್ದಾರೆ. ಈ ನಿರ್ಣಯಕ್ಕೆ ಆಧಾರವಾದ ಪ್ರಮಾಣಗಳ ನಿರೂಪಣೆಯೊಂದಿಗೆ ಪ್ರತಿಕೃತಿಯ ನಿರ್ಮಾಣದ ಅದ್ಭುತ ಘಟನೆಯ ಚಿತ್ರಣ ಇಲ್ಲಿದೆ. 

ಶ್ರೀಮಟ್ಟೀಕಾಕೃತ್ಪಾದರ ಕುರಿತು ಅಪಾರ ಭಕ್ತಿ ಗೌರವಗಳನ್ನು ಮೂಡಿಸುವ ಭಾಗ. 


02:19 ರಾಮಾಯಣದ ಕಥೆ ಎಲ್ಲೆಲ್ಲಿ ಬಂದಿದೆ

05:34 ರಾವಣ ಅಪಹರಿಸಿದ್ದು ಸೀತಾಪ್ರತಿಕೃತಿಯನ್ನು, ಸೀತಾದೇವಿಯರನ್ನಲ್ಲ

07:15 ಶ್ರೀಕೃಷ್ಣದೇವರೂ ತಮ್ಮ ಪ್ರತಿಕೃತಿಯನ್ನು ನಿರ್ಮಾಣ ಮಾಡಿದ ಘಟನೆ

08:34 ಸೀತಾದೇವಿಯರಿಂದ ಪ್ರತಿಕೃತಿಯ ನಿರ್ಮಾಣದ ಕ್ರಮ

09:26 ಗೀತಾಭಾಷ್ಯದಲ್ಲಿ ಆಚಾರ್ಯರು ನೀಡಿದ ಸೂಚನೆ

11:26 ಪ್ರತಿಕೃತಿಯ (ಮಾಯಾಸೀತೆಯ) ಕುರಿತು ಶ್ರೀಮಟ್ಟೀಕಾಕೃತ್ಪಾದರು ಉಲ್ಲೇಖಿಸಿದ ಕೂರ್ಮಪುರಾಣದ ವಚನ

12:28 ಈ ವಚನದ ಪ್ರಾಮಾಣಿಕತೆ

12:55 ಪತಿವ್ರತೆಯರಿಗೆ ಎಂದಿಗೂ ಪರಾಭವವುಂಟಾಗುವದಿಲ್ಲ 

17:18 ಆಶ್ರಮದಲ್ಲಿನ ಅಗ್ನಿಯ ಬಳಿಗೆ ಓಡಿ ಬಂದ ಸೀತಾದೇವಿಯರು

19:19 ಸೀತಾದೇವಿ ಮಾಡಿದ ಅಗ್ನಿಸ್ತೋತ್ರ (ಅಗ್ನ್ಯಷ್ಟಕ) ಮತ್ತು ವಿಷ್ಣುಪರವಾದ ಅರ್ಥ

25:25 ಶಿವ ಅಗ್ನಿಗಳ ಪರವಾಗಿ ಅರ್ಥ

26:10 ಮೈದಾಳಿ ಬಂದ ಅಗ್ನಿ, ಶಿವ, ನಾರಾಯಣರು

27:17 ಪ್ರತಿಕೃತಿಯ ನಿರ್ಮಾಣ

28:18 ಅಗ್ನಿ, ಬ್ರಹ್ಮವೈವರ್ತಪುರಾಣಗಳಲ್ಲಿಯೂ ಇದರ ದಾಖಲೆ

29:17 ಮೊದಲು ಅಗ್ನಿಲೋಕ, ನಂತರ ಕೈಲಾಸಕ್ಕೆ ತೆರಳಿದ ಸೀತಾದೇವಿಯರು

31:36 ಪ್ರತಿಕೃತಿಯಲ್ಲಿ ಇಂದ್ರದೇವರ ಸನ್ನಿಧಾನ, ಏಕೆ?

32:30 ವೇದವತೀರೂಪದ ಲಕ್ಷ್ಮೀದೇವಿಯರ ಸನ್ನಿಧಾನ, ಏಕೆ? 

33:28 ಭವಿಷ್ಯೋತ್ತರ ಪುರಾಣ ತಿಳಿಸಿದ ಮಹತ್ತ್ವದ ಪ್ರಮೇಯಗಳು

40:57 ಲಕ್ಷ್ಮೀದೇವಿಯರೂ ಇದ್ದಾರೆ ಎಂದರೆ ದುಃಖದ ಪ್ರಸಕ್ತಿ ಉಂಟಲ್ಲವೇ?

42:51 ತ್ರಿಜಟೆಯ ಉದ್ಧಾರಕ್ಕಾಗಿ ಇಂದ್ರದೇವರು

44:43 ಮಾಯಾಜಿಂಕೆಯಿಂದ ಮೋಸಮಾಡ ಬಂದ ರಾವಣನಿಗೆ ದೊರೆತದ್ದು ಮಾಯಾಸೀತೆ

46:43 ಇಂದ್ರದೇವರ ಜೊತೆಯಲ್ಲಿ ಶಚಿಯ ಸನ್ನಿಧಾನವೂ ಇದೆ, ಬ್ರಹ್ಮವೈವರ್ತಪುರಾಣ

47:59 ದೊಡ್ಡವರ ಸೇವೆಯಿಂದ ಸಕಲ ಆಪತ್ತುಗಳ ಪರಿಹಾರ

Play Time: 50:12

Size: 3.84 MB


Download Upanyasa Share to facebook View Comments
7569 Views

Comments

(You can only view comments here. If you want to write a comment please download the app.)
 • Sowmya,Bangalore

  12:11 PM, 21/11/2022

  ಗುರುಗಳಿಗೆ ನಮಸ್ಕಾರ 🙏🙏🙏 ಎಂಥಹ ಅದ್ಭುತ ಸೀತಾದೇವಿ ಮಾಡಿದ ಸ್ತೋತ್ರ.. Connecting Dots ಅಂತಾರಲ್ಲ ಹಾಗೆ ವೇದವತಿದೇವಿಯ ಸನ್ನಿಧಾನ , ಇಂದ್ರ ದೇವರ, ತ್ರಿಜಟೆಯ ಉದ್ದಾರ 🙏 ತಾಯಿ ಸೀತಾದೇವಿ ಎನು ವಿಡಂಬನೆ ತಾಯಿ. 🙏ನಮ್ಮ ಸ್ವಾಮಿಗೆ ಮಾತ್ರ ಇದನ್ನು ಮಾಡಿಸಲು ಸಾಧ್ಯ. ನಾವು ರಾಮಾಯಣ ಪುಸ್ತಕ ಹಿಡಿದು ಕೂತರೂ ಇದು ಅರ್ಥವಾಗುವುದಿಲ್ಲ.. ಎಷ್ಟು ಚೆನ್ನಾಗಿ ಪದ್ಮಪುರಾಣ, ಭವಿಷ್ಯೋತ್ತರ ಪುರಾಣ ಎಲ್ಲಾ ಆಧಾರವಾಗಿ ಇಟ್ಟುಕೊಂಡು ಹೇಳಿದ್ದಿರಿ. 
  
  ನಮ್ಮ ಸ್ವಾಮಿ ನಿಮ್ಮಿಂದ ನಮಗೆ ಈ ಜ್ಞಾನ ದೂರೆಕಿಸಿ ಕೊಡುತ್ತಿದ್ದಾರೆ..🙏🙏🙏 ಅನಂತ ವಂದನೆಗಳು ನಿಮಗೆ 🙏
 • Sandeep katti,Yalahanka, bengalooru

  10:37 AM, 16/11/2022

  ಪೂಜ್ಯ ಗುರುಗಳಿಗೆ, ಸಾಷ್ಟಾಂಗ ಪ್ರಣಾಮಗಳು. ಅಗ್ನಿ ದೇವರು ಸೀತಾ ದೇವಿಯವರನ್ನು ಹೇಗೆ ಕರೆದುಕೊಂಡು ಹೋದರು? ರಥದಲ್ಲಿಯೋ ಅಥವಾ ಪುಷ್ಪಕದಲ್ಲೋ? ಅಂಥ ಪರಮ ಭಾಗ್ಯ ಅಗ್ನಿ ದೇವರಿಗೆ ದೊರೆಯಲು ಕಾರಣವೇನು?
  ಸೀತಾ ದೇವಿಯರು ಕೈಲಾಸಕ್ಕೆ ಹೋಗಲು ಕಾರಣವೇನು?
  ದಯವಿಟ್ಟು ಉತ್ತರ ನೀಡಿ ಎಂದು ಪ್ರಾರ್ಥನೆ.

  Vishnudasa Nagendracharya

  ಹಿಂದೆ ಶರಭಂಗರ ಕಥೆಯಲ್ಲಿ, ಖರಾಸುರನ ಸಂಹಾರದ ಕಾಲದಲ್ಲಿ ಕೇಳಿದ್ದನ್ನು ನೆನಪಿಸಿಕೊಳ್ಳಿ. ದೇವತೆಗಳು ತಮ್ಮ ವಾಹನ ರಥ ವಿಮಾನಗಳಲ್ಲಿಯೇ ಅಲ್ಲಿಗೆ ಬಂದಿರುತ್ತಾರೆ. ಆದರೆ ಆ ವಾಹನಗಳು ಮನುಷ್ಯರ ಕಣ್ಣಿಗೆ ಗೋಚರವಾಗಿ, ಭೂಮಿಯಲ್ಲಿ ಚಲಿಸಬೇಕಾಗಿಲ್ಲ. ಅದೃಶ್ಯವಾಗಿಯೇ ಎಲ್ಲವೂ ನಡೆಯುತ್ತದೆ. 
  
  ಹಾಗೆ, ಅಗ್ನಿದೇವರೂ ಸಹ ಸೀತಾದೇವಿಯರನ್ನು ರಥ ಅಥವಾ ಶ್ರೇಷ್ಠ ವಿಮಾನದಲ್ಲಿಯೇ ಕರೆದೊಯ್ದಿರುತ್ತಾರೆ. ಸಂಶಯವಿಲ್ಲ. ಸಾಮಾನ್ಯನಾದ ಜೀವನನ್ನು ಸ್ವರ್ಗ, ಮುಕ್ತಿಗೆ ಹೋಗಬೇಕಾದರೇ ವಿಮಾನಗಳಲ್ಲಿ ದೇವದೂತರು ಕರೆದೊಯ್ಯುತ್ತಾರೆ, ಇನ್ನು ಸಕಲಸೌಭಾಗ್ಯದೇವತೆಯನ್ನು ಸರ್ವಶ್ರೇಷ್ಠ ವಾಹನದಲ್ಲಿಯೇ ಕರೆದೊಯ್ದಿರುತ್ತಾರೆ ಎನ್ನುವದರಲ್ಲಿ ಸಂಶಯವಿಲ್ಲ.
  
  ಅಗ್ನಿದೇವರು ಆ ರೀತಿಯಾದ ಸೌಭಾಗ್ಯ ಪಡೆಯಲು ಮಹತ್ತರ ಸಾಧನೆಯನ್ನೇ ಮಾಡಿರುತ್ತಾರೆ. ಪುರಾಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ವಿವರ ದೊರೆಯಬಹುದು. 
 • C Guru Raja Rao,Hyderabad

  1:00 PM , 16/11/2022

  ಆಚಾರ್ಯರೇ..
  ಮಹಾಲಕ್ಷ್ಮಿಯ ಸನ್ನಿಧಾನವುಳ್ಳ ವೇದವತಿಯನ್ನಾದರೂ ...
  ರಾವಣ ಅಪಹಾರಮಾಡುವದು ಹೇಗೆಸಾಧ್ಯ??

  Vishnudasa Nagendracharya

   ಉಪನ್ಯಾಸದಲ್ಲಿ ಸ್ಪಷ್ಟವಾಗಿ ವಿವರಿಸಿದ್ದೇನೆ. ಪ್ರತಿಕೃತಿಯ ದೇಹದಲ್ಲಿ ಜೀವನ ಸ್ಥಾನದಲ್ಲಿರುವದು ಇಂದ್ರದೇವರು. ವೇದವತೀದೇವಿಯರದು ಕೇವಲ ಸನ್ನಿಧಾನ ಮಾತ್ರ. ಆ ಸನ್ನಿಧಾನವೂ ಹನುಮಂತ ಮುಂತಾದವರಿಂದ ಸೇವೆ ಸ್ವೀಕರಿಸುವದಕ್ಕಾಗಿ. ರಾವಣ, ಮಾಯಾಸೀತೆ ಶರೀರವನ್ನು ಮುಟ್ಟುತ್ತಿದ್ದಾನೆಯೇ ಹೊರತು ವೇದವತೀ ದೇವಿಯ ಸ್ಪರ್ಶ ಮಾಡುತ್ತಿಲ್ಲ, ವೇದವತಿಯನ್ನು ಅಪಹಾರ ಮಾಡುತ್ತಿಲ್ಲ. 
  
  ಸ್ಪಷ್ಟ ಉದಾಹರಣೆ ನೀಡಬೇಕು ಎಂದರೆ, ನಾವು ನೋಡುವ ನದಿಯ ನೀರು ಏನಿದೆ, ಅದು ಪ್ರಾಕೃತವಾದ ಜಲ ಮಾತ್ರ. ಅದರೊಳಗೆ ಗಂಗಾ-ಕಾವೇರಿ ಮುಂತಾದವರ ಸನ್ನಿಧಾನವಿರುವದು. ಇವತ್ತಿನ ದುಷ್ಟಜನರು ಗಂಗಾ ಕಾವೇರಿಯ ನೀರನ್ನು ಕಲುಷಿತ ಗೊಳಿಸುತ್ತಾರೆ ಎಂದರೆ, ಅಲ್ಲಿರುವ ನೀರನ್ನು ಮಾತ್ರ ಕಲುಷಿತಗೊಳಿಸುತ್ತಾರೆ. ಗಂಗಾ ಕಾವೇರಿಯರನ್ನು ಕಲುಷಿತಗೊಳಿಸಲು ಸಾಧ್ಯವಿಲ್ಲ. ಮಲಿನವಾದ ಆ ನೀರಿನಲ್ಲಿ ಅವರ ಪರಿಪೂರ್ಣ, ಅನುಗ್ರಾಹಕ ಸನ್ನಿಧಾನವೂ ಇರುವದಿಲ್ಲ. ಶುದ್ಧವಾದ ನೀರಿನಿಲ್ಲಿ ಭಕ್ತಿಯಿಂದ ಸ್ನಾನಾದಿಗಳನ್ನು ಮಾಡುವವರಿಗೆ ಅನುಗ್ರಹಿಸುತ್ತಾರೆ. ಹಾಗೆಯೇ ಇದು.
 • Jayashree karunakar,Bangalore

  1:53 PM , 19/11/2022

  ಗುರುಗಳೇ
  
  1.ಸೀತಾದೇವಿ ಕೈಲಾಸಕ್ಕೆ ಯಾಕೆ ಹೋಗಬೇಕು? 
  ಅವ್ಯಕ್ತ ರೂಪದಲ್ಲಿ ಶ್ರೀರಾಮಚಂದ್ರ ದೇವರೊಂದಿಗೆ ಇರಬಹುದಿತ್ತಲ್ಲ? 
  
  2.ಪ್ರತಿಕೃತಿಯಲ್ಲಿ, ವೇದವತೀ ರೂಪದ ಲಕ್ಷ್ಮೀದೇವಿಯ ಸನ್ನಿಧಾನ ಇರುವಾಗ, ರಾವಣನಿಗೆ ಮುಟ್ಟಲು ಹೇಗೆ ಸಾಧ್ಯವಾಯಿತು? ಎರಡೂ ರೂಪಗಳಲ್ಲಿ ಭೇದ ವಿದೆಯಾ? ಭಗವಂತನ ರೂಪಗಳಲ್ಲಿ ಭೇದವಿಲ್ಲ ಅಂತ ತಿಳಿದಿದ್ದೆವಲ್ಲ ಗುರುಗಳೇ

  Vishnudasa Nagendracharya

  1 A. ಕಷ್ಟ ಬಂದಾಗ ದೇವರ, ದೇವತೆಗಳ ಸ್ತೋತ್ರವನ್ನು ಮಾಡಿ ಅನುಗ್ರಹ ಪಡೆದು ಪಾರಾಗಬೇಕು ಎನ್ನುವದನ್ನು ಸೀತಾದೇವಿಯರು ಕಲಿಸುತ್ತಿದ್ದಾರೆ. ಪ್ರತಿಕೃತಿಯ ನಿರ್ಮಾಣ ಮಾಡಿ ಅದೃಶ್ಯರಾಗಿಬಿಡಬಹುದಾಗಿದ್ದರೆ, ಅವರು ಅಗ್ನಿಸ್ತೋತ್ರವನ್ನು ಮಾಡುವ ಆವಶ್ಯಕತೆಯೂ ಇರಲಿಲ್ಲ. ಕೈಲಾಸಕ್ಕೆ ಹೋಗುವ ಆವಶ್ಯಕತೆಯೂ ಇರಲಿಲ್ಲ. ಆದರೆ, ದೇವರ, ದೇವತೆಗಳ ಸ್ತೋತ್ರವನ್ನು ಮಾಡಬೇಕು ಎಂಬ ಪಾಠ ಕಲಿಸಬೇಕಾಗಿದೆ, ಅದರ ಫಲ ಏನು ಎನ್ನುವದನ್ನೂ ಜಗತ್ತಿಗೆ ತೋರಬೇಕಾಗಿದೆ. ಅದಕ್ಕಾಗಿ ಸ್ತೋತ್ರ ಮಾಡಿ ಅಗ್ನಿಯಿಂದ ರಕ್ಷಿತರಾದಂತೆ ಸಕಲ ಸಜ್ಜೀವರಿಗೂ ದೃಷ್ಟಾಂತಪೂರ್ವಕವಾಗಿ ತತ್ವವನ್ನು ತಿಳಿಸಿದರು. 
  
  1 B. ಶಿವಪಾರ್ವತಿಯರ ಲೋಕಕ್ಕೆ ಸೀತಾದೇವಿಯರು ತೆರಳಿದ್ದಾರೆ, ಅದಕ್ಕಾಗಿ ಶಿವಪಾರ್ವತಿಯರು ಅನೇಕ ರೀತಿಯ ಸಾಧನೆ ಮಾಡಿದ್ದಾರೆ, ಸೀತಾದೇವಿಯರು ತಮ್ಮಲ್ಲಿ ಬಂದು ಇರಬೇಕು ಎಂದು ಪ್ರಾರ್ಥನೆ ಮಾಡಿದ್ದಾರೆ ಎನ್ನುವದು ನಿಶ್ಟಿತ. ಆ ಸಾಧನೆಗೆ ಫಲ ನೀಡಲು ಸೀತಾದೇವಿಯರು ತೆರಳಿದ್ದಾರೆ. 
  
  1C. ಸೀತಾದೇವಿಯರು ಸರ್ವತ್ರ ವ್ಯಾಪ್ತರಾದುದರಿಂದ, ಅಗ್ನಿಲೋಕ-ಕೈಲಾಸಗಳಿಗೆ ತೆರಳಿದಾಗಲೂ ರಾಮದೇವರಿಗೆ ಗೋಚರರಾಗಿ ಜೊತೆಯಲ್ಲಿ ಇದ್ದೇ ಇದ್ದಾರೆ. ಅವತರಣ ಮಾಡಿ ಬಂದ ವಿಶೇಷ ರೂಪ ಏನಿದೆ ಆ ರೂಪದಿಂದ ಅವರು ಅಗ್ನಿಲೋಕ-ಕೈಲಾಸಗಳಲ್ಲಿದ್ದಾರೆ. ಹಾಗೆಯೇ ರಾಮದೇವರೂ ಸಹ ಸೀತಾದೇವಿಯರೊಡನೆ ಅವ್ಯಕ್ತರಾಗಿ ಆ ಲೋಕಗಳಲ್ಲಿ ಇದ್ದೇ ಇದ್ದಾರೆ. 
  
  2. ಉಪನ್ಯಾಸದಲ್ಲಿ ಸ್ಪಷ್ಟವಾಗಿ ವಿವರಿಸಿದ್ದೇನೆ. ಪ್ರತಿಕೃತಿಯ ದೇಹದಲ್ಲಿ ಜೀವನ ಸ್ಥಾನದಲ್ಲಿರುವದು ಇಂದ್ರದೇವರು. ವೇದವತೀದೇವಿಯರದು ಕೇವಲ ಸನ್ನಿಧಾನ ಮಾತ್ರ. ಆ ಸನ್ನಿಧಾನವೂ ಹನುಮಂತ ಮುಂತಾದವರಿಂದ ಸೇವೆ ಸ್ವೀಕರಿಸುವದಕ್ಕಾಗಿ. ರಾವಣ, ಮಾಯಾಸೀತೆ ಶರೀರವನ್ನು ಮುಟ್ಟುತ್ತಿದ್ದಾನೆಯೇ ಹೊರತು ವೇದವತೀ ದೇವಿಯ ಸ್ಪರ್ಶ ಮಾಡುತ್ತಿಲ್ಲ. 
  
  ಸ್ಪಷ್ಟ ಉದಾಹರಣೆ ನೀಡಬೇಕು ಎಂದರೆ, ನಾವು ನೋಡುವ ನದಿಯ ನೀರು ಏನಿದೆ, ಅದು ಪ್ರಾಕೃತವಾದ ಜಲ ಮಾತ್ರ. ಅದರೊಳಗೆ ಗಂಗಾ-ಕಾವೇರಿ ಮುಂತಾದವರ ಸನ್ನಿಧಾನವಿರುವದು. ಇವತ್ತಿನ ದುಷ್ಟಜನರು ಗಂಗಾ ಕಾವೇರಿಯ ನೀರನ್ನು ಕಲುಷಿತ ಗೊಳಿಸುತ್ತಾರೆ ಎಂದರೆ, ಅಲ್ಲಿರುವ ನೀರನ್ನು ಮಾತ್ರ ಕಲುಷಿತಗೊಳಿಸುತ್ತಾರೆ. ಗಂಗಾ ಕಾವೇರಿಯರನ್ನು ಕಲುಷಿತಗೊಳಿಸಲು ಸಾಧ್ಯವಿಲ್ಲ. ಮಲಿನವಾದ ಆ ನೀರಿನಲ್ಲಿ ಅವರ ಪರಿಪೂರ್ಣ, ಅನುಗ್ರಾಹಕ ಸನ್ನಿಧಾನವೂ ಇರುವದಿಲ್ಲ. ಶುದ್ಧವಾದ ನೀರಿನಿಲ್ಲಿ ಭಕ್ತಿಯಿಂದ ಸ್ನಾನಾದಿಗಳನ್ನು ಮಾಡುವವರಿಗೆ ಅನುಗ್ರಹಿಸುತ್ತಾರೆ. ಹಾಗೆಯೇ ಇದು. 
  
  ಪರಮಾತ್ಮನ ರೂಪಗಳಿಲ್ಲಿಯೂ ಭೇದವಿಲ್ಲ. ಮಹಾಲಕ್ಷ್ಮೀದೇವಿಯರ ರೂಪಗಳಲ್ಲಿಯೂ ಭೇದವಿಲ್ಲ. ಮಾಯಾಸೀತೆ, ವೇದವತಿದೇವಿಯಕ ರೂಪವಲ್ಲ. ವೇದವತೀ ದೇವಿಯರ ಸನ್ನಿಧಾನವಿರುವ ಇಂದ್ರದೇವರ ರೂಪ, ಆ ಮಾಯಾಸೀತೆ. 
 • Laxmi Padaki,Pune

  10:56 AM, 17/11/2022

  👌👌🙇🙇
 • Nalini Premkumar,Mysore

  10:21 PM, 16/11/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ವಾದ ಪ್ರವಚನ ಗುರುಗಳೇ ಧನ್ಯವಾದಗಳು ಗುರುಗಳೇ ಅನೇಕ ವಿಷಯಗಳನ್ನು ತಿಳಿದುಕೊಂಡೆ ವು ಧನ್ಯೋಸ್ಮಿ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏