Upanyasa - VNU1070

ಸೀತಾ ಪ್ರತಿಕೃತಿಯ ಅಪಹಾರ

ಶ್ರೀಮದ್ ರಾಮಾಯಣಮ್ — 183

ರಾವಣ ಸೀತಾದೇವಿಯರನ್ನು ಅಪಹಾರ ಮಾಡಲಿಕ್ಕಾಗದೇ ಇಡಿಯ ಆಶ್ರಮವನ್ನು ಹೊತ್ತೊಯ್ದ ಎನ್ನುವ ಘಟನೆಗೆ ಆಧಾರವಿಲ್ಲ ನಾವು ಮತ್ತೊಬ್ಬರಿಗೆ ಮೋಸ ಮಾಡಲು ಹೋದರೆ, ದೈವ ನಮಗೇ ಮೋಸ ಮಾಡುತ್ತದೆ ಎಂಬ ತತ್ವಗಳ ನಿರೂಪಣೆಯೊಂದಿಗೆ,  ರಾವಣನ ಕ್ರೌರ್ಯ ಮತ್ತು ಮಾಯಾಸೀತೆಯ ದುಃಖದ ಆಕ್ರಂದನಗಳ ಚಿತ್ರಣ ಇಲ್ಲಿದೆ. 

03:37 ಭಯಂಕರ ರೂಪದ ರಾವಣನಿಂದ ಸೀತಾಪ್ರತಿಕೃತಿಯ ಅಪಹಾರ

06:39 ಆಶ್ರಮದ ಅಪಹಾರದ ಘಟನೆಗೆ ಯಾವ ಆಧಾರವಿಲ್ಲ

08:10 ಅಪಹಾರದಿಂದ ಅಗ್ನಿಪ್ರವೇಶದವರೆಗೆ ಸೀತಾಪ್ರತಿಕೃತಿಯೇ, ಸೀತಾದೇವಿಯರಲ್ಲ

10:27 ಮಾಯಾಮೃಗದಿಂದ ಅಪಹಾರ ಮಾಡಬಂದವನಿಗೆ ದೊರೆತದ್ದು ಮಾಯಾಸೀತೆ!

11:44 ದೇವರಿಗೆ ನಾವೇನು ನೀಡುತ್ತೇವೆಯೋ ಅದನ್ನೇ ಪಡೆಯುತ್ತೇವೆ 
	  “ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್”

16:46 ಗಂಡು ಹೆಣ್ಣಿನ ಸಂಗಮದಲ್ಲಿ ಪ್ರಾಧಾನ್ಯ ಹೆಣ್ಣಿನ ಮನಸ್ಸಿಗೆ. 

18:09 ವಚನಭ್ರಷ್ಟನಾದ ರಾವಣ 

18:42 ಮಾಯಾಸೀತೆಯ ದುಃಖ

21:08 ಅಹಂಕಾರಕ್ಕೆ ಫಲ ತಕ್ಷಣ ದೊರೆಯುವದಿಲ್ಲ

24:17 ವನದೇವತೆ, ಗೋದಾವರಿಗಳಿಗೆ ಮಾಯಾಸೀತೆಯ ಪ್ರಾರ್ಥನೆ

27:18 ಮಾಯಾಸೀತೆಯ ಕಣ್ಣಿಗೆ ಬಿದ್ದ ಜಟಾಯು

Play Time: 32:48

Size: 3.84 MB


Download Upanyasa Share to facebook View Comments
7321 Views

Comments

(You can only view comments here. If you want to write a comment please download the app.)
 • Sowmya,Bangalore

  1:32 PM , 22/11/2022

  ಶ್ರೀರಾಮಚಂದ್ರ🙏🙏🙏
 • Nalini Premkumar,Mysore

  10:33 PM, 17/11/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ರಾಮಾಯಣ ವನ್ನು ಕೇಳುತ್ತಿರುವ ನಾವೆ ಪುಣ್ಯವಂತರು ಗುರುಗಳೇ ಹೇಳುವ ಪುಣ್ಯ ನಿಮ್ಮದು ಗುರುಗಳೇ ನಿಮ್ಮಂಥ ಗುರುಗಳಿಂದ ಕೇಳುತ್ತಿರುವ ನಾವೆ ಪುಣ್ಯವಂತರು ಭಗವಂತ ಶ್ರೀ ರಾಮ ದೇವರು ಜನ್ಮ ಜನ್ಮ ಕ್ಕೂ ಇಂತಹ ಭಾಗ್ಯ ಕರುಣಿಸಲಿ..... ಧನ್ಯವಾದಗಳು ಗುರುಗಳೇ ಕೋಟಿ ಕೋಟಿ ಪ್ರಣಾಮಗಳು 🙏🙏🙏
 • Jagannath Kulkarni,Bengaluru

  4:57 PM , 17/11/2022

  ಎಲ್ಲಿಯೂ ಪ್ರಶ್ನೆಗೆ ಅವಕಾಶ ಇಲ್ಲದಂತೆ ಸ್ಪಷ್ಟವಾದ ವಿವರದೊಂದಿಗೆ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ನಮಸ್ಕಾರಗಳು.
 • Laxmi Padaki,Pune

  4:06 PM , 17/11/2022

  ಧನ್ಯೊಸ್ಮಿ ,ಶ್ರೀ ಪರಮ ಪೂಜ್ಯ ಆಚಾರ್ಯರೆ.ಕೇಳುತ್ತಿದ್ದರೆ ಇಷ್ಟು ಬೇಗ ಮುಗಿದುಹೋಯ್ತಾ ನಿಮ್ಮ ಉಪನ್ಯಾಸಗಳು ಎನಿಸುತ್ತದೆ. ಅದ್ಭುತ ವರ್ಣನೆ. ವಿಶೇಷವಾದ ಸತ್ಯಾಂಶವನ್ನು ತಿಳಿಸುತ್ತೀರಿ.ಆ ಭಗವಂತನು ಮತ್ತು ನಿಮ್ಮ ಶ್ರೀ ಗುರುಗಳ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥನೆ ಮಾಡುವೆ. ನಮೋ ನಮಃ.👌👌🙇🙇
 • Roopa,Bengaluru

  9:58 AM , 17/11/2022

  Sri gurubhyo namah 
  Gurugale, pishaachagala mukhagalu hegirutthave ?

  Vishnudasa Nagendracharya

  ಶ್ರೀಮಧ್ವವಿಜಯದ ಎರಡನೆಯ ಸರ್ಗದಲ್ಲಿ ಪಿಶಾಚಿಗಳ ಕುರಿತು, ಅವುಗಳ ದೇಹ, ಆಹಾರ ಇತ್ಯಾದಿಗಳ ಕುರಿತು ವಿವರವಾಗಿ ತಿಳಿಸಿದ್ದೇನೆ. ಅದನ್ನು ಕೇಳಿ.