Upanyasa - VNU1071

ಜಟಾಯುವಿನ ಮಹಾ ಪರಾಕ್ರಮ

ಶ್ರೀಮದ್ ರಾಮಾಯಣಮ್ — 184

ಸ್ವಾರ್ಥಕ್ಕಾಗಿ ಹೋರಾಡದೇ, ಧರ್ಮಕ್ಕಾಗಿ ಹರಿಭಕ್ತಿಯಿಂದ ಹೋರಾಡಿದ ಜಟಾಯು ರಾವಣನ ರಥ, ಕತ್ತೆ, ಆಯುಧಗಳನ್ನೂ ನಾಶ ಮಾಡಿ, ಅವನ ಹತ್ತು ಎಡಗೈಗಳನ್ನು ಮುರಿದು ಹಾಕಿ ಪರಾಕ್ರಮ ಮೆರೆದು ರಾವಣನನ್ನೂ ಕಂಗೆಡಿಸಿ, ಕಡೆಗೆ ರೆಕ್ಕೆ ಕಾಲ್ಗಳನ್ನು ಕಳೆದುಕೊಂಡು ನೆಲಕ್ಕುರುಳಿ ಬಿದ್ದ ಘಟನೆಗಳ ಚಿತ್ರಣ. 

01:02 ರಾವಣನಿಗೆ ಬುದ್ಧಿ ಹೇಳಿದ ಜಟಾಯು

04:33 ಧಾರ್ಮಿಕ ಅಧಾರ್ಮಿಕರು ಪರಸ್ಪರರಿಗೆ ಅರ್ಥವಾಗುವದಿಲ್ಲ

12:59 ಇಷ್ಟು ಸುದೀರ್ಘ ಉಪದೇಶ ಯಾಕೆ?

15:02 ಇಂದ್ರಿಯಜಯವನ್ನು ಪಡೆಯುವ ಸರ್ವಶ್ರೇಷ್ಠ ಮಾರ್ಗ 

22:00 ತನ್ನ ಸಾವು ಖಚಿತ ಎಂದು ತಿಳಿದಿದ್ದರೂ ಯುದ್ಧಕ್ಕೆ ಆಹ್ವಾನ ನೀಡಿದ ಜಟಾಯು

25:13 ಜಟಾಯುವಿನ ಮಹಾಪರಾಕ್ರಮದ ಯುದ್ಧದಿಂದ ಬಳಲಿದ ರಾವಣ

41:06 ಬ್ರಹ್ಮದೇವರಿಂದ ವರ ಪಡೆದಿರುವನನ್ನು ಒಂದು ಸಾಮಾನ್ಯ ಪಕ್ಷಿ ಹೇಗೆ ಹಿಂಸಿಸಲು ಸಾಧ್ಯ?

42:49 ಸೀತೆಯನ್ನು ಹಿಡಿದಿದ್ದ ಹತ್ತೂ ಎಡಗೈಗಳನ್ನು ಕತ್ತರಿಸಿದ ಜಟಾಯು

46:12 ಜಟಾಯುವಿನ ರೆಕ್ಕೆ ಕಾಲ್ಗಳನ್ನು ಕತ್ತರಿಸಿದ ರಾವಣ

48:32 ಸೀತಾದೇವಿಯರ ವಿಲಾಪ

51:40 ಮಾಯಾಸೀತೆಯನ್ನು ಎತ್ತೊಯ್ಯುವಾಗ ಬ್ರಹ್ಮದೇವರ ಉದ್ಗಾರ

53:25 ಪ್ರಾಣ ಹೋಗುವ ಪರಿಸ್ಥಿತಿಯಲ್ಲಿಯೂ ನಮ್ಮ ಕರ್ತವ್ಯವನ್ನು ಬಿಡಬಾರದು

Play Time: 55:36

Size: 3.84 MB


Download Upanyasa Share to facebook View Comments
7106 Views

Comments

(You can only view comments here. If you want to write a comment please download the app.)
 • Sowmya,Bangalore

  1:49 PM , 23/11/2022

  ಗುರುಗಳಿಗೆ ನಮಸ್ಕಾರ 🙏🙏🙏
  ರಾಮಾಯಣದ ಪ್ರತೀ ಘಟನೆ ನಮಗೆ ಪಾಠ. ಸ್ವಾಮಿ ಶ್ರೀರಾಮಚಂದ್ರ ತನ್ನ ತಂದೆಯ ಬಳಿ ನಡೆದುಕೊಳ್ಳತಿದ್ದ ರೀತಿ ಮತ್ತು ಗುರು ಭಕ್ತಿ, ತಾಯಿ ಸೀತಮ್ಮ ಅತ್ತೆಯರ ಬಳಿ ನಡೆದುಕೊಳ್ಳತಿದ್ದ ರೀತಿ, ಅನುಸೂಯದೇವಿಯರ ಬಳಿಯಲಿ ತೋರುತ್ತಿದ್ದ ವಿನಯ, ಲಕ್ಷ್ಮಣ ದೇವರ ರಾಮಭಕ್ತಿ, ಜಟಾಯುವಿನ ಕರ್ತವ್ಯ ನಿಷ್ಠೆ ಮತ್ತು ಧರ್ಮ ಮಾರ್ಗ ಪ್ರತೀ ಕಾರ್ಯ ಅದ್ಭುತ.. ಇದನ್ನು ಕೇಳುವುದು ನಮ್ಮ ಸೌಭಾಗ್ಯ.. ಅನಂತ ವಂದನೆಗಳು🙏🙏🙏
 • RAMAMARUTHY,UDUPI

  12:59 PM, 19/11/2022

  ಗುರುಗಳಿಗೆ ನಮಸ್ಕಾರ ಜಟಾಯು ಯಾವ ದೇವತೆಯ ಅವತಾರ ಮತ್ತು ಜಟಾಯುಗೆ ಮುಂದಿನ ಯುಗದಲ್ಲಿ ಅವತಾರವಿತ್ತೆ ದಯವಿಟ್ಟು ತಿಳಿಸಿ.

  Vishnudasa Nagendracharya

  ಜಟಾಯು ಮೂಲರೂಪದಲ್ಲಿಯೂ ಪಕ್ಷಿಯೇ. ಯಾವ ದೇವತೆಯ ಅವತಾರವಲ್ಲ. ಮುಕ್ತಿಯಲ್ಲಿಯೂ ಪಕ್ಷಿಯಾಗಿಯೇ ಇರುವ ಚೇತನ. 
 • Vishwnath MJoshi,Bengaluru

  9:02 PM , 19/11/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
  ಇಂದಿನ ಉಪನ್ಯಾಸದಲ್ಲಿ ಜಟಾಯು ಪಕ್ಷಿಯ ವಯಸ್ಸು 60000 ವರುಷ ಎಂದು ಹೇಳಿದೆ. ತ್ರೇತಾಯುಗದಲ್ಲಿ ಆಯಸ್ಸು 10000 ವರುಷ ಅಂದಮೆಲೆ ಜಟಾಯುಗೆ‌ ಹೇಗೆ
   60000 ವರುಷ. ದಯವಿಟ್ಟು ತಿಳಿಸಿಕೊಡಿ
   ಧನ್ನವಾದಗಳು

  Vishnudasa Nagendracharya

  ಎರಡು ಉತ್ತರಗಳಿವೆ. 
  
  ತ್ರೇತಾಯುಗದಲ್ಲಿ ಮನುಷ್ಯರ ವಯಸ್ಸು ಹತ್ತು ಸಾವಿರ ವರ್ಷಗಳು. ಆದರೆ ಪಕ್ಷಿ ಪ್ರಾಣಿ ವೃಕ್ಷಗಳಿಗೆ ಮನುಷ್ಯರಿಗಿಂತ ಹೆಚ್ಚು ಕಡಿಮೆ ಇದ್ದೇ ಇರುತ್ತದೆ. 
  
  ಉದಾಹರಣೆಗೆ, ಕಲಿಯುಗದಲ್ಲಿ ಮನುಷ್ಯನ ಆಯುಷ್ಯ ನೂರು ವರ್ಷಗಳು. ಆದರೆ, ಹಸು ಮುಂತಾದ ಪ್ರಾಣಿಗಳು ಕೇವಲ ಇಪ್ಪತ್ತು ಇಪ್ಪತ್ತೈದು ವರ್ಷಗಳು ಮಾತ್ರ ಬದುಕುತ್ತವೆ. ಕಾಗೆಗಳೂ ಮುನ್ನೂರಕ್ಕೂ ಹೆಚ್ಚು ವರ್ಷ ಇರುತ್ತವೆ. 
  
  ಎರಡನೆಯ ಉತ್ತರ. 
  
  ಶ್ರೀರಾಮಾವತಾರ ತ್ರೇತಾಯುಗದ ಆರಂಭದ ಹತ್ತಿಪ್ಪತ್ತು ಸಾವಿರ ವರ್ಷಗಳಲ್ಲಿ ನಡೆದಂತೆ ತೋರುತ್ತದೆ. (ರಾಮಾವತಾರದ ನಿಖರ ಕಾಲದ ಕುರಿತು ಸಂಶೋಧನೆ ನಡೆಸಿದ್ದೇನೆ. ನಿರ್ಣಯ ದೊರೆತ ಬಳಿಕ ಪ್ರಕಟಿಸುತ್ತೇನೆ.) ಹೀಗಾಗಿ ಕೃತಯುಗದ ಅಂತ್ಯದಲ್ಲಿ ಹುಟ್ಟಿದ್ದ ಸಂಪಾತಿ ಜಟಾಯು ಇತ್ಯಾದಿ ಚೇತನರ ಉಲ್ಲೇಖ ತ್ರೇತಾಯುಗದಲ್ಲಿಯೂ ಕಂಡು ಬರುತ್ತದೆ.