Upanyasa - VNU1072

ಲಂಕೆ ತಲುಪಿದ ರಾವಣ

ರಾವಣ ತಾನು ಮಾಡಿದ ಅಪಹರಣವನ್ನು ಸಂಭ್ರಮಿಸುತ್ತ ಮಾಯಾಸೀತೆಯನ್ನು ಲಂಕೆಗೆ ಒಯ್ದು ಅಂತಃಪುರದಲ್ಲಿಟ್ಟ ಘಟನೆ, ಸೀತಾದೇವಿಯರು ಆಭರಣಗಳನ್ನು ಗಂಟು ಕಟ್ಟಿ ವಾನರರೆಡೆಗೆ ಎಸೆದ ಘಟನೆಯ ಚಿತ್ರಣದೊಂದಿಗೆ. 

ರಾವಣ ಪರಪತ್ನಿಯನ್ನು ಕದ್ದೊಯ್ಯುತ್ತಿದ್ದರೆ ಇಡಿಯ ಪ್ರಕೃತಿಯಲ್ಲಿ ಯಾವ ರೀತಿಯ ಕ್ಷೋಭವುಂಟಾಯಿತು, ಸಿಂಹ ಹುಲಿ, ಮೊಸಳೆ, ತಿಮಿಂಗಿಲಗಳೂ ಸಹ ಯಾವ ರೀತಿ ಪ್ರತಿಕ್ರಿಯಿಸಿದವು ಎನ್ನುವದನ್ನಿಲ್ಲಿ ಕೇಳುತ್ತೇವೆ. 

ಸ್ತ್ರೀಯರ ಉತ್ತರೀಯ ವಸ್ತ್ರದ ಕುರಿತ ಚಿಂತನೆಯೊಂದಿಗೆ ಸೀತಾದೇವಿಯರು ಆಭರಣಗಳನ್ನು ಗಂಟುಕಟ್ಟಿ ಹನುಮಂತ ಮುಂತಾದ ಐದು ಜನ ವಾನರರು ಇದ್ದ ಪ್ರದೇಶಕ್ಕೆ ಎಸೆದ ವಿವರವೂ ಇಲ್ಲಿದೆ. 

ಶ್ರೀಮದ್ ರಾಮಾಯಣಮ್ — 185

01:02 ಸೀತಾಪಹಾರವನ್ನು ಸಂಭ್ರಮಿಸಿದ ರಾವಣ

03:54 ಕೆಳಗೆ ಬಿದ್ದ ಸೀತಾದೇವಿಯ ಒಂದು ಕಾಲ್ಗೆಜ್ಜೆ

07:08 ಇಡಿಯ ಪ್ರಕೃತಿಯಲ್ಲಿ ಆವರಿಸಿದ ದುಃಖ

12:21 ಮಾಯಾಸೀತೆಯ ಆಕ್ರಂದನ

14:27 ಮಾಯಾಸೀತೆಯ ಆಕ್ರೋಶ, ಧಿಕ್ಕಾರ

17:11 ಗಾಳಿಯಲ್ಲಿ ಹಾರುತ್ತಿದ್ದ ರಾವಣನ ಮೈಯಲ್ಲೂ ನಡುಕ ಬೆವರು ಮೂಡಿಸಿದ ಸೀತಾಮಾತೆಯ ಮಾತು

22:36 ಸೀತೆಯ ಕಣ್ಣಿಗೆ ಕಂಡ ಹನುಮಂತ ಸುಗ್ರೀವ ಮೊದಲಾದ ಐದು ವಾನರರು

24:14 ಉತ್ತರೀಯ ವಸ್ತ್ರದಲ್ಲಿ ಆಭರಣ ಕಟ್ಟಿ ಎಸೆದ ಸೀತಾದೇವಿಯರು

25:34 ಸ್ತ್ರೀಯರ ಉತ್ತರೀಯ ವಸ್ತ್ರ

29:23 ಮಾಯಾಸೀತೆ ಆಭರಣ ಎಸೆದದ್ದು ರಾವಣನಿಗೆ ತಿಳಿಯಲೇ ಇಲ್ಲ!

30:51 ಲಂಕೆಯ ಅಂತಃಪುರದಲ್ಲಿ ಸೀತೆಯನ್ನಿರಿಸಿದ ರಾವಣ

34:28 ಪಿಶಾಚಮುಖದ ರಾಕ್ಷಸಿಯರಿಗೆ ರಾವಣನ ಆದೇಶ

36:23 ತಾವಾಡಿದ ಮಾತಿಗೆ ತಾವೇ ಬೆಲೆ ನೀಡದವರು ರಾಕ್ಷಸರು

37:48 ಜನಸ್ಥಾನಕ್ಕೆ ಎಂಟು ರಾಕ್ಷಸರನ್ನು ಕಳುಹಿಸಿದ ರಾವಣ

42:37 ಮೃತ್ಯುವನ್ನು ತಂದು ಮನೆಯಲ್ಲಿಟ್ಟೆ ಗೆದ್ದೆ ಎಂದು ಬೀಗಿದ ರಾವಣ

Play Time: 45:23

Size: 3.84 MB


Download Upanyasa Share to facebook View Comments
7012 Views

Comments

(You can only view comments here. If you want to write a comment please download the app.)
 • Sowmya,Bangalore

  1:46 PM , 24/11/2022

  🙏🙏🙏 ಶ್ರೀರಾಮಚಂದ್ರ🙏🙏🙏
 • Nalini Premkumar,Mysore

  1:45 PM , 22/11/2022

  🙏🙏🙏
 • Srikar K,Bengaluru

  8:45 AM , 21/11/2022

  ಗುರುಗಳೇ ನಮಸ್ಕಾರಗಳು. ಎಂದಿನಂತೆ ನಿಮ್ಮ ಪ್ರವಚನ ಅದ್ಭುತವಾಗಿದೆ. ಹಿಂದಿನ ಪ್ರವಚನ ಒಂದರಲ್ಲಿ. ಲಂಕೆಯು ಭೂಮಿಯ ಮೇಲ್ಭಾಗಕ್ಕೆ ಇದೆ ಎಂದು ಅದರ ವಿವರನೆ ಮುಂದೆ ಬರುವುದಿದೆ ಎಂದು ಹೇಳಿದಿರಿ. ಈ ಭಾಗದಲ್ಲಿ ಲಂಕೆಯು ಸಮುದ್ರ ದಾಟಿದ ಮೇಲೆ ಎಂದಿದೆ. ಇದರಾ ಬಗೆ ವಿವರಿಸುವ ಗುರುಗಳೇ?

  Vishnudasa Nagendracharya

  ಲಂಕೆ ಇರುವದು (ಅಥವಾ ಇದ್ದದ್ದು, ಈಗಿನ ಶ್ರೀಲಂಕೆ ಲಂಕೆಯಲ್ಲ) ಭಾರತದ ದಕ್ಷಿಣಭಾಗಕ್ಕೆ, ಇವತ್ತಿನ ಮಾಲಾದ್ವೀಪಗಳ (Maldives) ನ ಕೆಳಗೆ. ಭೂಮಧ್ಯರೇಖೆಯಲ್ಲಿ. 
  
  ಹಿಂದಿನ ಪ್ರವಚನದಲ್ಲಿ ಎಲ್ಲಿ ಆ ರೀತಿ ಹೇಳಲಾಗಿದೆ ಎನ್ನುವದನ್ನು ತಿಳಿಸಿ. 
  
  ಲಂಕೆ, ರಾಮಸೇತು, ಹನುಮಂತದೇವರು ಹಾರಿದ ಸ್ಥಳ ಇವುಗಳ ಕುರಿತು ಒಂದು ವಿಡಿಯೋವನ್ನೇ ಮುಂದೆ ಪ್ರಕಟಿಸುತ್ತೇನೆ. ತಿಳಿಯಬೇಕಾದ ವಿಷಯ ಬಹಳ ಇವೆ.