Upanyasa - VNU1073

ಹನುಮಂತರು ರಾವಣನನ್ನು ಕೊಲ್ಲದಿರಲು ಮೂರು ಕಾರಣಗಳು

ಸೀತಾದೇವಿಯರನ್ನು ರಾವಣ ಅಪಹಾರ ಮಾಡುತ್ತಿರುವದನ್ನು ಹನುಮಂತದೇವರು ಕಣ್ಣಾರೆ ಕಂಡರೂ, ಏಕೆ ತಡೆಯಲಿಲ್ಲ, ರಾವಣನನ್ನು ಏಕೆ ಕೊಲ್ಲಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

ದೇವಕಾರ್ಯ ಎನ್ನುವ ಶಬ್ದವನ್ನು ಶಾಸ್ತ್ರದಲ್ಲಿ ಅನೇಕ ಕಡೆ ಕೇಳುತ್ತೇವೆ, ಅದರ ಅರ್ಥ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕ್ರಮದ ನಿರೂಪಣೆ ಇಲ್ಲಿದೆ. 

ಶ್ರೀಮದ್ ರಾಮಾಯಣಮ್ — 186


01:02 ಕೊಲ್ಲ ಹೊರಟ ಹನುಮಂತರನ್ನು ಬೇಡ ಎಂದು ಸುಗ್ರೀವರು ತಡೆಯುವದು ನಿಮಿತ್ತ ಮಾತ್ರ, ವಾಸ್ತವಿಕ ಕಾರಣವಲ್ಲ.

03:08 ಶ್ರೀಮದಾಚಾರ್ಯರು ನೀಡಿದ ಮೂರು ಕಾರಣಗಳು

05:18 ವಿಡಂಬನೆ ಎಂಬ ಶಬ್ದದ ಅರ್ಥ

06:41 ರಾವಣ-ಶಿಶುಪಾಲರನ್ನು ಕೊಲ್ಲ ಹೊರಟದ್ದು ಹನುಮಂತ ಭೀಮಸೇನರ ವಿಡಂಬನೆಯಲ್ಲ., ವಾಸ್ತವ 
ಎಂತಾದರೆ, ಮತ್ತೊಬ್ಬರು ತಡೆದರು ಎಂದು ಸುಮ್ಮನಾದದ್ದು ಎಷ್ಟರ ಮಟ್ಟಿಗೆ ಸರಿ?

09:18 ದೇವಕಾರ್ಯ ಎಂಬ ಮೊದಲ ಕಾರಣದ ವಿವರಣೆ

18:23 ದುರ್ಯೋಧನಾದಿ ಕೌರವರ ಜನನದ ಪ್ರಸಂಗದ ವಿವರಣೆ

19:57 ಆಯಾ ಜೀವದ ಸ್ವಭಾವದ ಅನಾವರಣವೇ ಸೃಷ್ಟಿಯ ಹಿಂದಿನ ರಹಸ್ಯ, ದೇವಕಾರ್ಯ

23:16 ಜಟಾಯು ರಾವಣರನ್ನು ತಕ್ಕಡಿಗೆ ಹಾಕಿದಾಗ!

25:44 ಮತ್ತೊಬ್ಬರೇ ಮಾಡಬೇಕಾದ ಕಾರ್ಯವನ್ನು ನಾವು ಮಾಡಬಾರದು

29:02 ರಾವಣನನ್ನು ಹನುಮಂತರೇ ಕೊಂದರೆ ಶ್ರೀರಾಮರಿಗೆ ಅಪಯಶಸ್ಸುಂಟಾಗುತ್ತದೆ

32:07 ಪಾಂಡವರು, ಅಂಬರೀಷ ಮಾಡಬೇಕಾದ ಕಾರ್ಯವನ್ನು ದೇವರು ಮಾಡಲಿಲ್ಲ

35:50 ಒಬ್ಬರು ಮಾಡಬೇಕಾದ್ದನ್ನು ಮತ್ತೊಬ್ಬರು ಏಕೆ ಮಾಡಬಾರದು? ಶ್ರೀಮದಾಚಾರ್ಯರ ಉತ್ತರ.

36:51 ಶಾಪಗ್ರಸ್ತ ಜಯ-ವಿಜಯರನ್ನು ಕೊಂದು ಪಾಪಪರಿಹಾರ ಮಾಡುತ್ತೇನೆ ಎಂದು ಶ್ರೀಹರಿಯೇ ವಚನ ನೀಡಿದ್ದಾನೆ

40:28 ಲಕ್ಷಣಾದೇವಿಯ ಸ್ವಯಂವರ, ಭೀಮಸೇನದೇವರ ಧರ್ಮನಿಷ್ಠೆ

41:30 ಹಾಗಾದರೆ ಕೊಲ್ಲಲು ಉದ್ಯುಕ್ತರಾದದ್ದು ಏಕೆ?

42:11 ಎಲ್ಲದರ ಸಂಗ್ರಹ

44:34 ಎಷ್ಟು ಸೇವೆ ಪೂಜೆ ಮಾಡಿದರೂ ಕಷ್ಟ ತೀರದಿದ್ದಾಗ ಏನು ಮಾಡಬೇಕು?

Play Time: 55:01

Size: 3.84 MB


Download Upanyasa Share to facebook View Comments
8191 Views

Comments

(You can only view comments here. If you want to write a comment please download the app.)
 • Aprameya N D S,Milpitas California

  11:43 PM, 28/11/2022

  Sri Gurubhyo Namaha 
  Wonderful 🙏 🙏 🙏
 • Aprameya N D S,Milpitas California

  11:43 PM, 28/11/2022

  Sri Gurubhyo Namaha 
  Wonderful 🙏 🙏 🙏
 • Naveen ulli,Ilkal

  10:44 AM, 24/11/2022

  ಈ ಪ್ರವಚನ ತುಂಬಾ ಚೆನ್ನಾಗಿತ್ತು ಗುರುಗಳೇ 🙏. ಕೊನೆಯ ಭಾಗ ಅಂತೂ ಇನ್ನು ಚೆನ್ನಾಗಿತ್ತು... ಕೊನೆಯಲ್ಲಿ ನೀವು ತಿಳಿಸಿದ ದೋಷ ಪರಿಹಾರದ ವಿಷಯ... ಈ ರೀತಿ ಪರಿಹಾರ ಮಾಡು ಸ್ವಾಮಿ ಅಂತ ಕೇಳಬಹುದು ಅನ್ನೋ ವಿಚಾರ ನನ್ನ ಮನಸಿನಲ್ಲಿ, ಕನಸಿನಲ್ಲಿ ಕೂಡಾ ಬಂದಿರಲಿಲ್ಲ....
   ಈ ರೀತಿ ಜ್ಞಾನದಿಂದ ಶರಣಾಗಾತಿ ಭಾವದಿಂದ ಪಾಪ ಪರಿಹಾರ ಮಾಡಿಕೊಳ್ಳುವ ದಾರಿ ತೋರಿದ ನಿಮಗೆ ಅನಂತ ಭಕ್ತಿಪೂರ್ವಕ ನಮಸ್ಕಾರಗಳು.... 🙏🙏
 • Nalini Premkumar,Mysore

  11:22 PM, 23/11/2022

  ಹರೆ ಶ್ರೀನಿವಾಸ ಗುರುಗಳೇ        ರಾಮಾಯಣದ ಈ ಭಾಗ ಪರಮ ಅಧ್ಬುತ ವಾಗಿದೆ ಗುರುಗಳೇ       ದೇವ ಕಾರ್ಯದ ಬಗ್ಗೆ...... ಜೀವದ ಸ್ವಭಾವ ಬಗ್ಗೆ..... ನಾವು ಕಲಿಯ ಬೇಕಾದ ಪಾಠ.... ಅಪಾರ ವಾದ ಕಷ್ಟ ದ ಬಗ್ಗೆ..... ಸ್ವಭಾವ ದ ಅಭಿವ್ಯಕ್ತಿ..... ಎನಗೂ ಆಣೆ ರಂಗ... ನಿನಗೂ ಆಣೆ... ಕಷ್ಟದಲ್ಲೆ ದೋಷ ಪರಿಹಾರ.... ಎಲ್ಲ ವೂ ಅಧ್ಭುತ ಗುರುಗಳೇ ಬಹಳ ಚೆನ್ನಾಗಿ ತಿಳಿಸಿದ್ದಿರಿ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Jagannath Kulkarni,Bengaluru

  4:47 PM , 23/11/2022

  ಕಷ್ಟಗಳ ಪರಿಹಾರಕ್ಕೆ ಹೇಳಿದ ಪ್ರವಚನ ಅದ್ಭುತವಾಗಿತ್ತು
 • rammurthy kulkarni,Bangalore

  7:48 AM , 23/11/2022

  ಗುರುಗಳೇ, ಆದರೆ, ಹನುಮಂತ ದೇವರು ವಾಲಿಯನ್ನು ಕೊಲ್ಲಬಹುದಿತ್ತಲ್ಲವೇ? ಮಂತ್ರಿಯಾಗಿ ರಾಮದೇವರು ಕಿಷ್ಕಿಂಧೆಗೆ ಬರುವ ಮುಂಚೆಯೇ ತನ್ನ ರಾಜನಾದ ಸುಗ್ರೀವನ ಸಹಾಯ ಮಾಡಬಹುದಿತ್ತು. ಇಲ್ಲಿ ಯಾವ ಕಾರಣಕ್ಕಾಗಿ ರಾಮದೇವರಿಗಾಗಿ ಕಾಯಬೇಕಾಯಿತು?

  Vishnudasa Nagendracharya

  ಸುಗ್ರೀವರು ವಾವಿಯನ್ನು ಕೊಲ್ಲು ಎಂದು ಹನುಮಂತದೇವರನ್ನು ಕೇಳಿಲ್ಲ. ರಾಮದೇವರನ್ನು ಸುಗ್ರೀವರು ಪ್ರಾರ್ಥನೆ ಮಾಡಿದ್ದು. 
  
  ಹನುಮಂತರಿಗೂ ಸುಗ್ರೀವರಿಗೂ ವೈಯಕ್ತಿಕ ವೈರವಿಲ್ಲವೇ ಇಲ್ಲ. ವೈರವಿಲ್ಲದೇ ಕೊಲ್ಲಬಾರದು ಎಂದು ಈಗಾಗಲೇ ಕೇಳಿದ್ದೇವೆ. 
  
  ಮುಂದೆ ಕಿಷ್ಕಿಂಧಾಕಾಂಡದಲ್ಲಿ ಮತ್ತಷ್ಟು ವಿವರ ದೊರೆಯುತ್ತದೆ.