Upanyasa - VNU1074

ರಾವಣನನ್ನು ಧಿಕ್ಕರಿಸಿದ ಸೀತೆ

ಪತಿವ್ರತೆಯಾದ ಸ್ತ್ರೀ ಎಂದಿಗೂ ಸಂಪತ್ತು ನೋಡಿ ಮದುವೆಯಾಗುವದಿಲ್ಲ, ಎಂತಹ ಆಪತ್ತು ಬಂದರೂ ತನ್ನ ಧರ್ಮವನ್ನು ಬಿಡುವದಿಲ್ಲ ಎನ್ನುವ ತತ್ವಕ್ಕೆ ಜ್ವಲಂತ ನಿದರ್ಶನದ ಭಾಗ.

ಸೀತೆಗೆ ತನ್ನ ಮಹಾವೈಭವವನ್ನು ತೋರಿಸಿ, ಇಡಿಯ ರಾಜ್ಯ ನಿನ್ನದೇ ಎಂದು ಪ್ರಲೋಭನೆ ಒಡ್ಡಿ, ಶ್ರೀರಾಮನಿಗೆ ಲಂಕೆಗೆ ಮನಸ್ಸಿನಿಂದಲೂ ಬರಲು ಸಾಧ್ಯವಿಲ್ಲ ಎಂದು ಹೇಳಿ, ಕಡೆಗೆ ತನ್ನ ಹತ್ತೂ ತಲೆಗಳಿಂದ ಸೀತೆಯ ಕಾಲಿಗೆ ನಮಸ್ಕಾರ ಮಾಡಿ, ತನ್ನನ್ನು ಮದುವೆಯಾಗು ಎಂದು ರಾವಣ ಬೇಡಿಕೊಳ್ಳುವ, ಸೀತಾದೇವಿಯರು ಅವನನ್ನು ಧಿಕ್ಕರಿಸಿ, ಒಂದು ತೃಣವನ್ನು ಮುಂದಿಟ್ಟುಕೊಂಡು ಮಾತನಾಡುತ್ತ, ಶ್ರೀರಾಮದೇವರ ದಿವ್ಯ ಪರಾಕ್ರಮವನ್ನು ಹೇಳಿ ರಾವಣನ ಮೈಯಲ್ಲಿ ನಡುಕ ಹುಟ್ಟಿಸುವ ಘಟನೆಗಳ ಚಿತ್ರಣ. 

ಶ್ರೀಮದ್ ರಾಮಾಯಣಮ್  — 187

02:15 ರಾವಣನ ಸೀತಾಕಾಮ

05:41 ಸಂಪತ್ತನ್ನು ನೋಡಿ ಮದುವೆಯಾಗುವ ಹೆಣ್ಣು ಸಾತ್ವಿಕಳಲ್ಲ

08:14 ತನ್ನ ಮತ್ತು ತನ್ನ ಮನೆಯ ವೈಭವವನ್ನು ಸೀತೆಗೆ ಬಲವಂತವಾಗಿ ತೋರಿಸಿದ ರಾವಣ

14:29 ರಾಮನಿಗೆ ಲಂಕೆಗೆ ಮನಸ್ಸಿನಿಂದಲೂ ಬರಲು ಸಾಧ್ಯವಿಲ್ಲ ಎಂದ ರಾವಣ

16:49 "ನನಗೂ ಲಂಕೆಗೂ ಎಲ್ಲರಿಗೂ ನೀನೇ ಒಡತಿಯಾಗು" ರಾವಣನ ಪ್ರಲೋಭನೆ

21:18 ಸೀತೆಯ ಕಾಲಿಗೆರಗಿ ಮದುವೆಯಾಗೆಂದ ರಾವಣ

23:53 ಹುಲ್ಲುಕಡ್ಡಿಯನ್ನು ಮುಂದಿಟ್ಟು ನಿರ್ಭಯವಾಗಿ ಮಾತನಾಡಿದ ಸೀತೆ

34:59 ಸೀತೆಯ ಮಾತಿನಿಂದ ಭೀತನಾದ ರಾವಣ

36:00 ಸೀತೆಗೆ ಹನ್ನೆರಡು ತಿಂಗಳ ಗಡುವು ನೀಡಿದ ರಾವಣ

36:59 ಸೀತೆಯ ಅಹಂಕಾರವನ್ನು ಅಡಗಿಸಲು ರಾಕ್ಷಸಿಯರಿಗೆ ಆದೇಶ

38:54 ಅಶೋಕವನದಲ್ಲಿ ಬಂಧನ

40:47 ರಾಕ್ಷಸಿಯರು ನೀಡಿದ ಹಿಂಸೆ



Play Time: 44:47

Size: 3.84 MB


Download Upanyasa Share to facebook View Comments
6896 Views

Comments

(You can only view comments here. If you want to write a comment please download the app.)
  • Sowmya,Bangalore

    3:08 PM , 26/11/2022

    ಸೀತಾದೇವಿಯ ಮಾತು ಅದ್ಭುತ🙏🙏🙏ಶ್ರೀರಾಮಚಂದ್ರ 🙏🙏🙏
  • Nalini Premkumar,Mysore

    2:51 PM , 26/11/2022

    🙏🙏🙏
  • Nalini Premkumar,Mysore

    2:51 PM , 26/11/2022

    🙏🙏🙏
  • H.Suvarna kulkarni,Bangalore

    11:24 AM, 26/11/2022

    🙏😊ಗುರುಗಳೆ ಈ ಭಾಗ ಕೇಳಿದೆ...ಮತ್ತೊಮ್ಮೆ ಕೇಳುತ್ತೇನೆ...ಹೌದು ನೀವು ಹೇಳಿರುವುದು ನಿಜ..ನಮ್ಮಲ್ಲಿ ಸತ್ಯ ಪ್ರಾಮಾಣಿಕತೆ.. ಇದ್ದಾಗ ಖಂಡಿತ ಧೈರ್ಯ ವಿರುತ್ತದೆ...ನಾವು ರಾಮಾಯಣ ಕೇಳುತ್ತಾ ಎಷ್ಟೋ ಜೀವನದ ಪಾಠಗಳನ್ನು ತಿಳಿಯುತ್ತಿದ್ದೇವೆ..
    
    ಧನ್ಯವಾದಗಳು🙏🙏
  • Chethan.G,Bengaluru

    10:13 PM, 25/11/2022

    ಆಚಾರ್ಯರಿಗೆ ಪ್ರಣಾಮಗಳು 🙏
    ತಾವು ಕೈಕಸಿಯ ಪ್ರಸಂಗದ ಉಪನ್ಯಾಸದಲ್ಲಿ ಸಾತ್ವಿಕ ಹೆಣ್ಣುಮಗಳಲ್ಲಿ ರೂಪ ಭಾಗವದ್ಭಕ್ತಿಯ ಪ್ರತೀಕ ಎಂದು ತಿಳಿಸಿದಿರಿ, ಆದರೆ ಅದೇ ಹೆಣ್ಣಿನ ರೂಪವನ್ನು ನೋಡಿ ಮದುವೆಯಾಗುವ ಪುರುಷ ಏಕೆ ಸಾತ್ವಿಕನಾಗಿರಲಾರ ?
    ಕೃಪೆ ಮಾಡಿ ತಿಳಿಸಿಕೊಡಿ. 🙏

    Vishnudasa Nagendracharya

    ನೋಡಿ ಸಾತ್ವಿಕ ಸ್ತ್ರೀಯರೂ ಸಂಪತ್ತನ್ನು ಅಪೇಕ್ಷಿಸುತ್ತಾರೆ, ಸಾತ್ವಿಕ ಪುರುಷರೂ ರೂಪವನ್ನು ಅಪೇಕ್ಷಿಸುತ್ತಾರೆ. ಆದರೆ, ಕೇವಲ ರೂಪವನ್ನು ಕಂಡು, ಗುಣದ ಬಗ್ಗೆ ವಿಚಾರ ಮಾಡದೆ ಮದುವೆಯಾಗುವದಿಲ್ಲ. ಗುಣದ ಜೊತೆಯಲ್ಲಿ ರೂಪವಿರಬೇಕು. 
    
    ಹಾಗೆಯೇ ಸಾತ್ವಿಕ ಸ್ತ್ರೀ ಸಹಿತ ಗುಣದ ಜೊತೆ ಇರುವ ಸಂಪತ್ತನ್ನು ಅಪೇಕ್ಷಿಸುತ್ತಾರೆ. ಕೇವಲ ಸಂಪತ್ತಿನ ಆಸೆಗೆ ಮದುವೆಯಾಗುವದಿಲ್ಲ. 
    
    ಕೇವಲ ರೂಪ, ಕೇವಲ ಸಂಪತ್ತನ್ನು ಕಂಡು ಆಸೆ ಪಡುವ ಜನರ ಕುರಿತು ಇಲ್ಲಿ ಚರ್ಚೆ.