Upanyasa - VNU135

ರಾಮಾಯಣದ ಕಾಲ ನಿರ್ಣಯ

28/05/2016

ಬನ್ನಂಜೆ ಗೋವಿಂದಾಚಾರ್ಯರ ಪ್ರಕಾರ ರಾಮಾಯಣ ನಡೆದದ್ದು 24ನೆಯ ತ್ರೇತಾಯುಗದಲ್ಲಿ. ಶ್ರೀ ಯಾದವಾರ್ಯರು 28ನೆಯ ಮಹಾಯುಗದಲ್ಲಿಯೇ ರಾಮಾಯಣ ನಡೆದದ್ದು ಎನ್ನುತ್ತಾರೆ. ಶ್ರೀಮದಾಚಾರ್ಯರ ವಚನಗಳ ಆಧಾರ ಮತ್ತು ಯುಕ್ತಿಗಳ ಆಧಾರದಿಂದ 28ರಲ್ಲಿಯೇ ರಾಮಾವತಾರವಾದದ್ದು ಎಂದು ಇಲ್ಲಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನ VNA135

Play Time: 48 Minuts and 10 Seconds

Size: 11.19 MB


Download Upanyasa Share to facebook View Comments
4390 Views

Comments

(You can only view comments here. If you want to write a comment please download the app.)
 • Shamantha,Udupi

  5:38 PM , 11/07/2020

  ಆಚಾರ್ಯರೇ 🙏,ದೂರ್ವಾಸ ಮುನಿಗಳ ಕಾಲದ ಬಗ್ಗೆ ತಿಳಿಸಿ ಹಾಗೂ ದತ್ತಾತ್ರೇಯರ ಕಾಲದ ಬಗ್ಗೆಯೂ ಕೂಡ... 
  ಈ ಪ್ರಶ್ನೆ ಕೆಲವು ವರ್ಷದಿಂದ ನನ್ನನ್ನು ಕಾಡುತ್ತಿದೆ... ದಯವಿಟ್ಟು ಸಂದೇಹವನ್ನು ಪರಿಹರಿಸಿ. 🙏

  Vishnudasa Nagendracharya

  ನನ್ನ ಕಣ್ಣಿನ ಆರೋಗ್ಯ ಸುಧಾರಿಸಿದ ನಂತರ ಬರೆಯುತ್ತೇನೆ. 
 • Shamantha,Udupi

  4:37 PM , 11/07/2020

  ಆಚಾರ್ಯರಿಗೆ ಪ್ರಣಾಮಗಳು🙏
  
  ದಯವಿಟ್ಟು ಸಪ್ತಋಷಿಗಳ ಬಗ್ಗೆಯೂ ತಿಳಿಸಿ, ಪ್ರತಿಯೊಂದು ಮಹಾಯುಗಕ್ಕೂ ಬೇರೆಬೇರೆ ಸಪ್ತಋಷಿಗಳು ಇರುವರೋ? ಅಥವಾ ಒಂದು ಮನ್ವಂತರಕ್ಕೆ ಒಂದು ಸಪ್ತಋಷಿಗಳೋ?
 • Tirumal Mutalikdesai,Dharwad

  11:34 PM, 15/12/2017

  Andare madhya esto mahayugagalalli bhagavantana avatara ve agilla ve gurugale ?
  4 kku adhika avatara galu 28 ne mahayugadalli agive andare..ee mahayuga dalli mukhyavagi ee 28 ne kaliyugadalli(that is immediate after the great avatar as) huttida naavu parama bhagyashaaligalallave ?
  Avataragalillada kaaladalli bhagavantha yaava roopadalli bandu upadeshanugraha galannu maduttane ? Idara ullekha galu elli siguttave ?

  Vishnudasa Nagendracharya

  ಸ್ಕಂದಪುರಾಣದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗಿ ನಿರೂಪಿತವಾಗಿದೆ. 
  
  ಇಪ್ಪತ್ತೆಂಟನೆಯ ಮಹಾಯುಗ, ಅದರಲ್ಲಿಯೂ ಕಲಿಯುಗ ವೈವಸ್ವತ ಮನ್ವಂತರದ ಎಲ್ಲ ಕಲಿಯುಗಗಳಲ್ಲಿಯೂ ಸಹ ವಿಶಿಷ್ಟವಾದದ್ದು. ಕಾರಣ, ನರಸಿಂಹ, ವಾಮನ, ಕೂರ್ಮ, ಧನ್ವಂತರಿ, ಮೋಹಿನಿ, ಪರಶುರಾಮ, ರಾಮ, ಕೃಷ್ಣ, ವೇದವ್ಯಾಸ ಮುಂತಾದ ಅವತಾರಗಳಾಗಿರುವದು ಈ ಮಹಾಯುಗದಲ್ಲಿಯೇ. ಮತ್ತು ಕೇವಲ 28ನೆಯ ಮಹಾಯುಗದಲ್ಲಿ ಮಾತ್ರ ಶ್ರೀಮದಾಚಾರ್ಯರ ಅವತಾರವಾಗುವದು. 
  
  ಕಲಿಯುಗ ಹೊರತು ಪಡಿಸಿ ಉಳಿದ ಯುಗಗಳಲ್ಲಿ ಅವತಾರಗಳು ಇಲ್ಲದ ಕಾಲ ಎಂದಿಲ್ಲ. ಈ ಮಹಾಯುಗದಲ್ಲಿ ಈ ಅವತಾರಗಳಾದಂತೆ ಉಳಿದ, ಯುಗ ಮತ್ತು ಮನ್ವಂತರಗಳಲ್ಲಿ ಬೇರೆಯ ರೂಪದ ಅವತಾರಗಳಾಗುತ್ತವೆ. ನಾವೇನು ವಿಷ್ಣುಸಹಸ್ರನಾಮ, ವಾಸುದೇವ ಸಹಸ್ರನಾಮ ಮುಂತಾದ ಸ್ತೋತ್ರಗಳಲ್ಲಿ ದೇವರ ಹೆಸರು ಕೇಳುತ್ತೇವೆ, ಹಾಗೆಯೇ ಕೇಶವ ನಾರಾಯಣ ಇತ್ಯಾದಿ ಹೆಸರುಗಳು ಇವೆಲ್ಲವೂ ಸಹ ಒಂದೊಂದು ಅವತಾರಗಳೇ. ಬೇರೆಬೇರೆ ಯುಗದಲ್ಲಿ ಆ ಅವತಾರಗಳಾಗಿರುತ್ತವೆ. 
  
  ರಾಮ ಮತ್ತು ಕೃಷ್ಣಾವತಾರಗಳು ಇಡಿಯ ಬ್ರಹ್ಮದೇವರ ದಿವಸದಲ್ಲಿ ಒಂದೇ ಬಾರಿ. ಅದು ಈ ಇಪ್ಪತ್ತೆಂಟನೆಯ ಯುಗದಲ್ಲಿ. 
  
  ಕೃಷ್ಣ, ರಾಮ, ವ್ಯಾಸರೂಪಗಳನ್ನು ಪಡೆದ ಶ್ರೀಮದಾಚಾರ್ಯರನ್ನು ಪಡೆದ, ಇಂದ್ರ, ನಾರದ, ಭೃಗು ಪ್ರಹ್ಲಾದ, ಧ್ರುವ ಮುಂತಾದ ಮಹಾನುಭಾವರು ಅವತರಿಸಿ ಬಂದ ಕಾಲಕ್ಕೆ ತುಂಬ ಸನಿಹದ ಕಾಲದಲ್ಲಿ ಹುಟ್ಟಿ ಬಂದಿರುವ ನಾವೇ ಪರಮಭಾಗ್ಯವಂತರು. 
  
  ಶಾಸ್ತ್ರಾಧ್ಯಯನ, ಭಕ್ತಿ, ಸಾಧನೆಗಳಿಂದ ಈ ಭಾಗ್ಯವನ್ನು ಸಾರ್ಥಕ ಮಾಡಿಕೊಳ್ಳಬೇಕು.