(You can only view comments here. If you want to write a comment please download the app.)
B Sudarshan Acharya,Udupi
2:08 PM , 27/11/2017
ಇದಕ್ಕೆ ಸ್ಪಷ್ಟ ಉತ್ತರ ಕೊಟ್ಟಿದ್ದೇನೆ
B Sudarshan Acharya,Udupi
11:59 AM, 27/11/2017
ನಮಗೆ ಶ್ರೀಮದಾಚಾರ್ಯರ ನಿರ್ಣವೇ ಪ್ರಧಾನ. ಅವರ ಪರಂಪರೆಯ ಇತರರು ಹೇಳಿದರು ಅದರ ಪೂರ್ವಾಪರ ವಿಮರ್ಷೆ ಮಾಡಿ ಹೌದೆಂದು ಒಪ್ಪುತ್ತೇವೆ
Vishnudasa Nagendracharya
ಆಚಾರ್ಯರ ನಿರ್ಣಯ ಪ್ರಧಾನ ಎನ್ನುವವರು
ತಸ್ಮಾತ್ ಸೌಮ್ಯಾಬ್ದಮೇವಾತ್ರ ಮುಖ್ಯಮಾರ್ಹುರ್ಮನೀಷಿಣಃ
ಸೌಮ್ಯಂ ಕಾಲಂ ತತೋ ಯಜ್ಞೇ ಗೃಹ್ಣಂತಿ ನತು ಸೂರ್ಯಜಮ್
ಚಾಂದ್ರಮಾನವನ್ನೇ ಜ್ಞಾನಿಗಳು ಮುಖ್ಯ ಎನ್ನುತ್ತಾರೆ, ಆದ್ದರಿಂದಲೇ ದೇವ-ಪಿತೃಯಜ್ಞಗಳಲ್ಲಿ ಚಾಂದ್ರಮಾನವನ್ನೇ ಗ್ರಹಿಸುತ್ತಾರೆ
ಎಂಬ ಆಚಾರ್ಯರ ನೇರ ನಿರ್ಣಯವನ್ನು ಏಕಾಗಿ ಒಪ್ಪುವದಿಲ್ಲ.
ಇದಕ್ಕೆ ವ್ಯಾಖ್ಯಾನ ಮಾಡುವಾಗ ರಾಜರು ಚಾಂದ್ರಮಾನವೇ ಗ್ರಾಹ್ಯ ಎಂದು ನಿರ್ಣಯಿಸಿದ್ದಾರೆ. ಅದನ್ನೇಕೆ ಒಪ್ಪುವದಿಲ್ಲ.
ಶ್ರೀ ವೇದಾಂಗತೀರ್ಥರು ಶ್ರಾವಣದಲ್ಲಿಯೇ ಅವತಾರ ಎಂದು ತಿಳಿಸಿದ್ದಾರೆ. ಅದನ್ನೇಕೆ ಒಪ್ಪುವದಿಲ್ಲ.
ಯಾವ ವಾಕ್ಯ ಸರಿಯಿಲ್ಲ ಎಂದು ಬನ್ನಂಜೆಯೇ ಹೇಳಿದ್ದಾರೆಯೋ, ಯಾವದರಲ್ಲಿ ಸಮಸ್ಯೆ ಇದೆಯೋ ರಾಜರ ಆ ವಾಕ್ಯ ಮಾತ್ರ ನಿಮಗೆ ಪ್ರಮಾಣವಾಗುತ್ತದೆಯಾ? ಉಳಿದ ಸ್ಪಷ್ಟ ವಾಕ್ಯಗಳನ್ನು ಕೈಬಿಡುತ್ತೀರಾ?
B Sudarshan Acharya,Udupi
10:32 AM, 27/11/2017
ನಾನು ಬನ್ನಂಜೆಯವರು ಹೇಳಿದನ್ನು ಒಪ್ಪುವುದಿಲ್ಲ ಇತರರ ಮಾತು ಒಪ್ಪುವುದಿಲ್ಲ. ವಿಮರ್ಷಿಸಿ ಸಮರ್ಪಕ ಉತ್ತರ ದೊರತರೆ ಮಾತ್ರ ಒಪ್ಪುವುದು.
Vishnudasa Nagendracharya
ಅವಶ್ಯವಾಗಿ ವಿಮರ್ಶಿಸಿ. ಸರಿಯಾದ ಮಾರ್ಗ.
ಆದರೆ, ಶ್ರೀಮದಾಚಾರ್ಯರ ನಿರ್ಣಯವೇ ಪ್ರಧಾನ ಎನ್ನುವದನ್ನು ಮರೆಯಬೇಡಿ.
B Sudarshan Acharya,Udupi
10:30 AM, 27/11/2017
ಉಪನ್ಯಾಸ ಕೇಳಿದ್ದೇನೆ. ಬನ್ನಂಜೆಯವರು ಹೇಳಲಿ ಅದು ಅವರ ಅಭಿಪ್ರಾಯ.
B Sudarshan Acharya,Udupi
10:44 PM, 26/11/2017
ಸಿಂಹಮಾಸ ಶ್ರಾವಣ ಹೇಗಾಗುತ್ತದೆ.
Vishnudasa Nagendracharya
ಉಪನ್ಯಾಸದಲ್ಲಿ ಪುಸ್ತಕದಲ್ಲಿ ವಿಸ್ತೃತವಾಗಿ ಪ್ರತಿಪಾದಿಸಲಾದ ವಿಷಯಗಳನ್ನು ಮತ್ತೆ ಕೇಳಬೇಡಿ.
ಬನ್ನಂಜೆಯೂ ಸಿಂಹಮಾಸವನ್ನು ಶ್ರಾವಣ ಎಂದೇ ಒಪ್ಪಿದ್ದಾರೆ. ಆದರೆ ಅವರು ಯಾವ ಕಾರಣಕ್ಕಾಗಿ ಸಿಂಹ ಮಾಸವನ್ನು ಶ್ರಾವಣ ಎಂದು ಒಪ್ಪಿದ್ದಾರೆಯೋ ಆ ಕಾರಣ ತಪ್ಪು, ಶಾಸ್ತ್ರೀಯವಾದ ಕಾರಣ ಬೇರೆಯೇ ಇದೆ ಎಂದು ವಿಸ್ತೃತವಾಗಿ ಪ್ರಶ್ನೆ ಮಾಡಿದ್ದೇನೆ.
ಉಪನ್ಯಾಸಗಳನ್ನು ಕೇಳದೇ ಪೂರ್ವಾಗ್ರಹದಿಂದ ಪ್ರಶ್ನೆ ಮಾಡುವದು ತಪ್ಪಲ್ಲವೇ?
B Sudarshan Acharya,Udupi
8:04 PM , 26/11/2017
ಸೌರಮಾನದ ಆಚರಣೆ ಅಲ್ಲ
ದ್ವಾಪರಾಂತೇ ಸಿಂಹಮಾಸೇ ರೋಹಿಣ್ಯಾಂ ಚ ವಿದೂದ್ಭವೇ ||
ಕೃಷ್ಣಾವತಾರೋ ಹ್ಯಾಭವತ್ ಕೃಷ್ಣಪಕ್ಷೇsಷ್ಟಮಿಯುತೇ ||
- ಪಂಚರಾತ್ರೇ ಶೇಷಸಂಹಿತಾ
ಮಾಸಿ ಭಾದ್ರಪದೇ ಕೃಷ್ಣೇ ರೋಹಿಣೀಸಹಿತಾಷ್ಟಮೀ | ಜಯಂತೀ ನಾಮ ಸಾ ತತ್ರ ರಾತ್ರೌ ಜಾತೋ ಜನಾರ್ದನಃ |
ಉಪೋಷ್ಯ ಜನ್ಮಚಿಹ್ನಾನಿ ಕುರ್ಯಾಜ್ಜಾಗರಣಂ ಚ ಯಃ | ಅರ್ಧರಾತ್ರಯುತಾಷ್ಟಮ್ಯಾಂ ಸೋಶ್ವಮೇಧಫಲಂ ಲಭೇತ್ ||
ರೋಹಿಣೀಸಹಿತಷ್ಟಮ್ಯಾಂ ಶ್ರಾವಣೇ ಮಾಸಿ ವಾ ತಯೋಃ |
ಶ್ರಾವಣೇ ಮಾಸಿ ವಾ ಕುರ್ಯಾತ್ ರೋಹಿಣೀಸಹಿತಾ ತಯೋಃ || - ನಾರದಸಂಹಿತಾ
ಶ್ರಾವಣೇ ವಾ ನಭಸ್ಯೇ ವಾ ರೋಹಿಣೀಸಹಿತಾಷ್ಟಮೀ ಯದಾ ಕೃಷ್ಣಾ ನರೈರ್ಲಬ್ಧಾ ಸಾ ಜಯಂತೀತಿ ಕೀರ್ತಿತಾ ||ಶ್ರಾವಣೇ ನ ಭವೇದ್ಯೋಗಃ ನಭಸ್ಯೇತು ಭವೇದ್ದ್ರುವಮ್||
- ವಸಿಷ್ಠಸಂಹಿತೆ
ಹೀಗೆ ಹಲವಾರು ಪ್ರಮಾಣಗಳು ಹೇಳುತ್ತವೆ
Vishnudasa Nagendracharya
ಈ ಪ್ರಮಾಣಗಳಲ್ಲಿನ ಸಿಂಹಮಾಸೇ ಮತ್ತು ಭಾದ್ರಪದಮಾಸ ಎನ್ನುವದಕ್ಕೆ ಶ್ರಾವಣ ಮಾಸ ಎಂದೇ ಅರ್ಥ.
ಆಚಾರ್ಯರ ಸ್ಪಷ್ಟ ನಿರ್ಣಯಕ್ಕೆ ವಿರುದ್ಧವಾಗಿರುವದರಿಂದ, “ಶುಕ್ಲಾದಿಯಾದ ಭಾದ್ರಪದದಲ್ಲಿಯೇ ಜನ್ಮ” “ಶುಕ್ಲಾದಿಯಾದ ಭಾದ್ರಪದದಲ್ಲಿಯೇ ಜಯಂತಿ” ಇತ್ಯಾದಿ ವಚನಗಳಿದ್ದರೆ, ಏಕಾದಶಿಯಂದು ಉಪವಾಸದ ಅಗತ್ಯವಿಲ್ಲ, ಶ್ರಾದ್ಧ ಮಾಡಬಹುದು ಎಂಬ ವಚನಗಳಂತೆ ತ್ಯಾಜ್ಯ.