Upanyasa - VNU146

BV11 ಸಂನ್ಯಾಸಪದ್ಧತಿಯ ಚರ್ಚೆ

27/08/2016

“ಸಿಂಹಮಾಸೇ ತು ರೋಹಿಣ್ಯಾ ಯುತಾಂ ಕೃಷ್ಣಾಷ್ಟಮೀಂ ಪುಮಾನ್”   ಎಂಬ ಸಂನ್ಯಾಸಪದ್ಧತಿಯ ವಾಕ್ಯ ಇಡಿಯ ಕೃಷ್ಣಾಷ್ಟಮಿಯ ಆಚರಣೆಯ ಕುರಿತ ಚರ್ಚೆಯಲ್ಲಿ ಅತ್ಯಂತ ಮಹತ್ತ್ವದ್ದು. ಈ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ. 

Play Time: 50 Minuts 12 Seconds

Size: 3.12 MB


Download Upanyasa Share to facebook View Comments
2821 Views

Comments

(You can only view comments here. If you want to write a comment please download the app.)
 • B Sudarshan Acharya,Udupi

  10:19 PM, 27/11/2017

  ಆಚಾರ್ಯರೇ ನಾನು ಇಲ್ಲಿ ಬನ್ನಂಜೆಯವರ ಮಾತನ್ನು ಇರಿಸಿಕೊಂಡು ಮಾತನಾಡುತ್ತಿಲ್ಲ. ನಾನು ಸಂಗ್ರಹಿಸಿರುವ ಪ್ರಮಾಣಗಳ ಆಧಾರದಲ್ಲಿ ನಿಮ್ಮಲ್ಲಿ ಮಾತನಾಡುತ್ತಿದ್ದೇನೆ. ಬನ್ನಂಜೆಯವರು ಏನೋ ಹೇಳಿದರು ಇನ್ನೊಬ್ಬರು ಏನೋ ಹೇಳಿದರು ಅದು ನನಗೆ ಅಗತ್ಯವಿಲ್ಲ.
  ಕೃಷ್ಣಜಯಂತಿಗೆ ಮಾಸ ಮುಖ್ಯವೆಂಬುದಕ್ಕೆ ಪ್ರಮಾಣ ಏನು?
  ನಾನು ಪಂಚರಾತ್ರಸಂಹಿತೆಗಳ ಪ್ರಮಾಣಗಳನ್ನು ಮತ್ತು ಇತರ ಗ್ರಂಥಗಳ ಹಲವಾರು ಪ್ರಮಾಣಗಳನ್ನು ನೀಡಿದ್ದೇನೆ. ಕೃಷ್ಣಜಯಂತಿಯನ್ನು ಎಲ್ಲೆಲ್ಲಾ ಹೇಳಿದ್ದಾರೋ ಅಲ್ಲೆಲ್ಲಾ ರೋಹಿಣೀ ಸಹಿತ ಕೃಷ್ಣಪಕ್ಷದ ಅಷ್ಟಮಿಯನ್ನೇ ಹೇಳಿದ್ದಾರೆ. ಶ್ರೀಮದಾಚಾರ್ಯರು ಅದಕ್ಕೆ ಸಂವಾದಿಯಾಗಿ ಶ್ರೀವಿಷ್ಣತೀರ್ಥರು ಶ್ರೀವಾದಿರಾಜರು ಹೇಳಿದ್ದಾರೆ. ತಿಥ್ಯಾದಿ ಅಭಾವವಿದ್ದರೆ ಅದನ್ನು ಆಚರಿಸದೇ ಇರಲು ಬರುವುದಿಲ್ಲ. ಎಲ್ಲಾ ವೃತಾಚರಣೆಗಳಲ್ಲೂ ಕೆಲವೊಮ್ಮೆ ತಿಥ್ಯಾದಿಗಳ ಅಭಾವ ಬರುತ್ತದೆ. ಆದ್ದರಿಂದ ಸಿಗುವುದಿಲ್ಲ ಎಂದು ಸಪ್ರಮಾಣಗಳ ಮಾತನ್ನು ತಿರಸ್ಕರಿಸುವುದು ಸರಿಯಲ್ಲ. ಹೇರಳವಾದ ಪ್ರಮಾಣಗಳು ಜಯಂತಿಯ ಬಗ್ಗೆ ಏಕಾಭಿಪ್ರಾಯವನ್ನು ಹೇಳಿರುವಾಗ ಅದನ್ನು ತಿರಸ್ಕಾರ ಮಾಡುವುದು ಶೋಭೆಯಲ್ಲ.
 • B Sudarshan Acharya,Udupi

  9:11 PM , 27/11/2017

  ಆಚಾರ್ಯರ ಮಾತಿನ ಗಾಂಭೀರ್ಯ ತಿಳಿದೇ ಹೇಳಿದ್ದು ಆಚಾರ್ಯರೇ. ಕೃಷ್ಣಜನ್ಮವನ್ನು ನಿರ್ಣಯಮಾಡುವಾಗ ಮಾಸವನ್ನು ಹೇಳಿದ್ದಾರೆ ಅರ್ಥಾತ್ ಅಲ್ಲಿಗೆ ಪ್ರಸ್ತುತ. ಇಲ್ಲಿ ಜಯಂತಿಯ ಆಚರಣೆಗೆ ಬೇಕಾದದ್ದು ರೋಹಿಣೀ ಸಹಿತ ಕೃಷ್ಣಪಕ್ಷದ ಅಷ್ಟಮೀ ಆದ್ದರಿಂದ ಶ್ರೀಮದಾಚಾರ್ಯರು ಉಲ್ಲೇಖಿಸಿಲ್ಲ. ಇದು ನಮಗೆ ಜಯಂತಿಯೋಗದ ಸ್ಪಷ್ಟತೆಯನ್ನು ನೀಡುತ್ತಿದೆ. ನಾನು ಸ್ಪಷ್ಟವಾಗಿ ಉತ್ತರಿಸಿದ್ದೇನೆ ಇದು ಸೌರಮಾಸದ ಗ್ರಹಿಕೆಯಲ್ಲ ಜಯಂತೀ ಯೋಗದ ಗ್ರಹಿಕೆ. ಇದರ ಗ್ರಹಿಕೆಗೆ ಸಿಂಹಮಾಸ ಅನುಕೂಲವಷ್ಟೇ. ಶ್ರಾವಣೇ ವಾ ನಭಸ್ಯೇ ವಾ ಎಂದಿರುವದನ್ನು ಹೀಗೆ ಗುರುತಿಸಿದ್ದಾರೆ‌. ಪಂಚರಾತ್ರ ಪ್ರಮಾಣವೆಂದು ಆಚಾರ್ಯರು ಹೇಳಿದ್ದಾರೆ ಅಲ್ಲದೇ ಕೃಷ್ಣಜಯಂತಿಯ ಹೇಳುವ ಎಲ್ಲಾ ಪಂಚರಾತ್ರದ ಸಂಹಿತೆಗಳು ಕೃಷ್ಣಜಯಂತಿಯ ಏಕಾಭಿಪ್ರಾಯವನ್ನು ಹೇಳುತ್ತವೆ. ಅಲ್ಲದೇ ಕೃಷ್ಣಾರ್ಘ್ಯಾದಿ ಮಂತ್ರಗಳನ್ನು ಪಂಚರಾತ್ರಸಂಹಿತೆಗಳಲ್ಲಿ ಹೇಳಿದನ್ನೇ ಉಲ್ಲೇಖಿಸಿದ್ದಾರೆ. ಆದ್ದರಿಂದ ಆ ಹಿನ್ನಲೆಯಲ್ಲಿ ಶ್ರೀಮದಾಚಾರ್ಯರ ಜಯಂತಿಯ ನಿರ್ಣಯದ ಮಾತಿಗೆ ನಾನು ಹೇಳಿದಂತೆ ಕೃಷ್ಣಪಕ್ಷದ ರೋಹಿಣೀ ಸಹಿತಾಷ್ಟಮಿ ಪ್ರಧಾನ ಎಂದು ಪ್ರಮಾಣಸಿದ್ಧವಾಗುತ್ತದೆ. 
  
  ಜಯಂತಿ ಯೋಗದ ಆಚರಣೆಯನ್ನು ಸೌರಮಾನದ ಆಚರಣೆಯೆಂದು ಗೊಂದಲ ಮಾಡಿಕೊಂಡಿದ್ದೀರಿ. ಇದು ಯಾಕೆ ಸೌರಮಾನ ಅಲ್ಲ ಎಂಬುದಕ್ಕೆ ಸ್ಪಷ್ಟ ವಿವರಣೆ ಹಿಂದಿನ ಕಮೆಂಟಿನಲ್ಲಿ ಕೊಟ್ಟಿದ್ದೇನೆ.

  Vishnudasa Nagendracharya

  ನಮಗೆ ಸರ್ವಥಾ ಗೊಂದಲವಿಲ್ಲ. ಸಕಲ ಪ್ರಮಾಣಗಳನ್ನೂ ಅನುಸರಿಸಿಯೇ ನಿರ್ಣಯ ಮಾಡಿಕೊಂಡಿದ್ದೇವೆ. 
  
  ಜಯಂತಿಯ ಆಚರಣೆಗೆ ಮಾಸದ ಆವಶ್ಯಕತೆಯಿಲ್ಲ ಎನ್ನುವದು ಬನ್ನಂಜೆಯ ಹೊಸದಾದ ದುರ್ವಾದ. (ಇತ್ತೀಚಿನ ಪುಸ್ತಕದಲ್ಲಿ ಬರೆದುಕೊಂಡದ್ದು. ಮೊದಲಿಗೆ ಈ ಮಾತು ಇರಲಿಲ್ಲ.) ಈಗ ನೀವದನ್ನು ಅನುಸರಿಸುತ್ತಿದ್ದೀರಿಯಷ್ಟೆ. ತನ್ನ ಮಾತನ್ನು ಏನಾದರೂ ಮಾಡಿ ಕಾಪಾಡಿಕೊಳ್ಳಬೇಕು ಎಂಬ ಭರದಲ್ಲಿ ಬನ್ನಂಜೆ ಮಾಸ ಮುಖ್ಯವೇ ಅಲ್ಲ ಎಂದು ಬರೆದುಕೊಂಡಿದ್ದಾರೆ. 
  
  ಯಾವುದೇ ವ್ರತದ ಆಚರಣೆಗೆ ಮಾಸ ಅತ್ಯಂತ ಆವಶ್ಯಕ. ಚೈತ್ರದ ಯುಗಾದಿಯಿಂದ ಆರಂಭಿಸಿ, ಗೌರಿ, ಗಣಪತಿ, ಪಿತೃಪಕ್ಷ, ದೀಪಾವಳಿ, ಶಿವರಾತ್ರಿ ಸೇರಿಸಿ, ಹೋಲಿಕಾಪೂರ್ಣಿಮೆಯ ವರೆಗೆ ಎಲ್ಲದಕ್ಕೂ ಮಾಸದ ಆವಶ್ಯಕತೆಯಿದೆ. ಇಲ್ಲಿ ಪ್ರತಿಯೊಂದು ವ್ರತಕ್ಕೂ ಒಂದೊಂದು ವಿಶೇಷಯೋಗವಿದೆ. ಜನ್ಮಾಷ್ಟಮಿಗೆ ಜಯಂತೀಯೋಗವಿದ್ದಂತೆ. ಆ ಯೋಗಗಳು ಬಂದಾಗ ಅವು ವಿಶೇಷ ಫಲಪ್ರದ. 
  
  ಆಚಾರ್ಯರು ಕೃಷ್ಣ ಹುಟ್ಟಿದ್ದನ್ನು ನಿರ್ಣಯಿಸಿದ್ದಾರೆ, ಅಲ್ಲಿಗೆ ಮಾತ್ರ ಮಾಸ, ಆಚರಣೆಗೆ ಮಾಸ ಬೇಡ ಎನ್ನುವದು ವಿದ್ವತ್-ಸಂಸತ್ತಿನಲ್ಲಿ ಶೋಭಿಸುವ ಮಾತಲ್ಲ. 
  
  ಶಾಸ್ತ್ರದ ವಚನಗಳನ್ನು ಪಾಲಿಸುವಲ್ಲಿ ತಾತ್ಪರ್ಯ. ತ್ಯಾಗ ಮಾಡುವಲ್ಲಿ ಅಲ್ಲ. 
  
  ಇನ್ನು ಕೃಷ್ಣಪಕ್ಷದ ರೋಹಿಣಿ ಸಹಿತಾಷ್ಟಮಿ ಎಂಬ ನಿಮ್ಮ ಪಕ್ಷವನ್ನೇ ಹಿಡಿದರೂ, ಸಿಂಹಮಾಸವಿದ್ದಾಗಲೂ ರೋಹಿಣಿಯ ಸಂಪರ್ಕ ಅಷ್ಟಮಿಗೆ ಬಾರದೆ ಇದ್ದದ್ದು ಇದೆ. ಬನ್ನಂಜೆಯೂ ಒಪ್ಪಿದ್ದಾರೆ. ಇತ್ತೀಚಿಗೆ ಸಹ ಹಾಗೆಯೇ ಹಾಗಿತ್ತು. ಅಂದ ಮೇಲೆ ಸಿಂಹವನ್ನು ಹಿಡಿದರೂ ರೋಹಿಣೀ ಸಿಗುತ್ತದೆ ಎಂಬ ನಿಯಮವಿಲ್ಲ. ಆದ್ದರಿಂದ, ದೇವರು ಅವತರಿಸಿದ ಶ್ರಾವಣವನ್ನು ನಾವು ತ್ಯಾಗ ಮಾಡುವದಿಲ್ಲ, ಶ್ರಾವಣದಲ್ಲಿಯೇ ಜನ್ಮಾಷ್ಟಮಿ. ರೋಹಿಣಿ ಬಂದರೆ ಜಯಂತಿ. 
 • B Sudarshan Acharya,Udupi

  2:05 PM , 27/11/2017

  ಆಚಾರ್ಯರೇ ಇಲ್ಲಿ ಶ್ರಾವಣೇ ವಾ ನಭಸ್ಯೇ ವಾ ರೋಹಿಣೀ ಸಹಿತಾಷ್ಟಮೀ | 
  ಯದಾಕೃಷ್ಣಾ ನರೈರ್ಲಬ್ದಾ ಜಯಂತೀತಿ ಪ್ರಕೀರ್ತಿತಾ || 
  ಎಂಬ ಪಂಚರಾತ್ರಾಗಮದ ನಾರದಸಂಹಿತೆಯ ಮಾತು ಸ್ಪಷ್ಟವಾಗಿದೆ. ಇದೇ ಹಿನ್ನಲೆಯಲ್ಲಿ ಪಂಚರಾತ್ರದ ಶೇಷಸಂಹಿತೆ ನೇರವಾಗಿ "ಸಿಂಹಮಾಸೇ" ಎಂದು ಹೇಳಿದೆ. ಶ್ರಾವಣದಲ್ಲಿ ಅಥವಾ ಭಾದ್ರಪದಲ್ಲಿ ಎಂಬುದನ್ನು ನೇರವಾಗಿ ಸೌರಸಿಂಹಮಾಸದಲ್ಲಿ ಎಂದು ಹೇಳಿದ್ದಾರೆ.
  ರೋಹಿಣ್ಯಾ‌ಂ ಅರ್ಧರಾತ್ರೇತು ಯದಾ ಕಾಳಾಷ್ಟಮೀ ಭವೇತ್ |
  ಇಲ್ಲೂ ಸ್ಪಷ್ಟವಾಗಿ ಜಯಂತಿಯ ಆಚರಣೆಗೆ ಬೇಕಾದ ಮೂರನ್ನೂ ಶ್ರೀಮದಾಚಾರ್ಯರು ನೇರವಾಗಿ ಹೇಳಿದ್ದಾರೆ. ಮಾಸಮುಖ್ಯವಲ್ಲ ಅದಕ್ಕೆ ಹೇಳಲಿಲ್ಲ. ಇದರ ಜೊತೆಗೆ 
  ಯಸ್ಯಾಂ ಜಾತೋ ಹರಿಃ ಸಾಕ್ಷಾತ್ 
  ಪರಮಾತ್ಮನ ಜನ್ಮಸಂದರ್ಭವನ್ನು ಹೇಳುವುದು ಶ್ರೀಮದಾಚಾರ್ಯರ ಮುಖ್ಯ ಆಶಯ. ಈ ಮೂರೂ ಪ್ರಧಾನವೇ ಅಪ್ರಧಾನ ಯಾವುದೂ ಇಲ್ಲ. ಈ ಹೆನ್ನಲೆಯಲ್ಲೇ ಶ್ರೀವಿಷ್ಣುತೀರ್ಥರು, ಶ್ರೀವಾದಿರಾಜ ತೀರ್ಥರು ಸಿಂಹಮಾಸದಲ್ಲಿ ಈ ಯೋಗಪ್ರಾಪ್ತಿ ಆದ್ದರಿಂದ ಸಿಂಹಮಾಸೇ ಎಂದು ಹೇಳಿದ್ದಾರೆ. ಹಾಗಂದಾಕ್ಷಣ ಇದು ಸೌರಮಾನದ ಆಚರಣೆಯಾಗುವುದಿಲ್ಲ. ಇದು ಸರ್ವಥಾ ಚಾಂದ್ರಮಾನದ ಆಚರಣೆ. ನೀವು ಹೇಳಿದಂತೆ ದೇವ ಪಿತೃಕಾರ್ಯಗಳಿಗೆ ಚಾಂದ್ರಮಾನವೇ ಗ್ರಾಹ್ಯ.

  Vishnudasa Nagendracharya

  “ಮಾಸದ ವಿಷಯದಲ್ಲಿ ಎರಡು ರೀತಿಯ ವಚನಗಳಿವೆ, ಅವನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು “ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ” ಎಂಬ ತಾತ್ಪರ್ಯನಿರ್ಣಯದ ವಾಕ್ಯದಲ್ಲಿ ನಿರ್ಣಯಿಸಲಾಗಿದೆ, ಆ ಕ್ರಮದಲ್ಲಿಯೇ ತಿಳಿಯತಕ್ಕದ್ದು” ಎಂಬ ಅಭಿಪ್ರಾಯದಿಂದ ಆಚಾರ್ಯರು ಜಯಂತೀಕಲ್ಪದಲ್ಲಿ ಮಾಸವನ್ನು ಉಲ್ಲೇಖಿಸಿಲ್ಲ. ಒಂದೇ ವಾಕ್ಯವನ್ನಿಟ್ಟುಕೊಂಡು ಎಂದಿಗೂ ಸರ್ವಥಾ ನಿರ್ಣಯ ಮಾಡಬಾರದು. ಅದಕ್ಕೆ ಸಂಬಂಧ ಪಟ್ಟ ಎಲ್ಲ ವಾಕ್ಯಗಳನ್ನೂ ನೋಡಬೇಕು. 
  
  ಕೃಷ್ಣಾದಿ-ಶುಕ್ಲಾದಿಗಳ ಉಕ್ತಿಯನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಆಚಾರ್ಯರು ನಿರ್ಣಯಿಸಿ ತಿಳಿಸಿದರು. 
  
  ಸೌರಮಾಸ-ಚಾಂದ್ರಮಾಸಗಳ ಉಕ್ತಿಯನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಮಧ್ವಾನುಜಾಚಾರ್ಯರು ತಿಳಿಸಿದರು. 
  
  ನಿರ್ಣಯಕ್ರಮ ಅತ್ಯಂತ ಸುಗಮವಾಗಿರುವದನ್ನು ತೋರಿಸಿಯೇ, ಇಬ್ಬರೂ ಸಹ ಭಾದ್ರಪದ-ಸಿಂಹಮಾಸ ಎಂಬ ಶಬ್ದಗಳನ್ನೇ ಬಳಸಿದರು. ಹೀಗಾಗಿ ಮಾಸದ ವಿಷಯದಲ್ಲಿ ಗೊಂದಲವೇ ಇಲ್ಲ. ಆದ್ದರಿಂದಲೇ ಆಚಾರ್ಯರು ಜಯಂತೀಕಲ್ಪದಲ್ಲಿ ಮಾಸವನ್ನು ಉಲ್ಲೇಖಿಸಿಲ್ಲ. ಆಚಾರ್ಯರ ವಾಕ್ಯದ ನಡೆಯ ಗಾಂಭೀರ್ಯವಿದು. 
  
  ಇನ್ನು ಸಿಂಹಮಾಸದ ಆಚರಣೆಯೂ ಚಾಂದ್ರದ ಆಚರಣೆ ಎಂಬ ನಿಮ್ಮ ಮತ್ತು ಗೋವಿಂದಾಚಾರ್ಯರ ಮಾತು ಹಾಸ್ಯಾಸ್ಪದ. ಸಿಂಹಮಾಸ ಎನ್ನುತ್ತೀರಿ. ಸೌರಮಾನ ಅಲ್ಲ ಎನ್ನುತ್ತೀರಿ. ತಪ್ಪಲ್ಲವೇ. ನಿಧಾನವಾಗಿ ಆಲೋಚಿಸಿ. 
  
  ನಾವು ಧನುರ್ಮಾಸದ ಆಚರಣೆ ಮಾಡುತ್ತೇವೆ. ಅದು ಸೌರಮಾನದ ಆಚರಣೆಯೇ. ನಾವು ಮುಹೂರ್ತಗಳನ್ನು ಹುಡುಕಲು ಸೌರಮಾಸಗಳನ್ನೇ ಮೊದಲು ಪರಿಗಣಿಸುವದು. ಅದು ಸೌರಮಾನದ ಆಚರಣೆಯೇ. ಸೌರಮಾನವನ್ನು ಅನುಸರಿಸಿ ನಾವು ಚಾಂದ್ರಮಾನದ ಆಚರಣೆ ಎನ್ನುವದಿಲ್ಲ. ಸೌರಮಾನವನ್ನು ಎಲ್ಲಿ ಗ್ರಹಿಸಬೇಕೋ ಅಲ್ಲಿ ಅವಶ್ಯವಾಗಿ ಗ್ರಹಿಸುತ್ತೇವೆ. 
  
 • B Sudarshan Acharya,Udupi

  11:47 AM, 27/11/2017

  ಶ್ರಾವಣೇನ ಭವೇದ್ಯೋಗೋ ನಭಸ್ಯೇ ತು ಭವೇತ್ ಧ್ರುವಮ್ | ತದಭಾವೇ ಸಿಂಹಗೇsರ್ಕೇ ಕೃಷ್ಣಾಷ್ಟಮ್ಯೇವ ಗೃಹ್ಯತೇ || 
    ಶ್ರಾವಣದ ಕೃಷ್ಣಪಕ್ಷದಂದು ಅಷ್ಟಮಿಯೇ ಸಿಗದಿದ್ದರೆ ಆಚರಿಸದೇ ಇರಲಾಗುವುದೋ ಇಲ್ಲವಲ್ಲ. ಹಾಗೆಯೇ ನಕ್ಷತ್ರ ಅಥವಾ ತಿಥಿ ಪರಿಪೂರ್ಣವಾಗಿ ಸಿಗದಿದ್ದರೂ ಎರಡೂ ಇರುವ ದಿನ ಆಚರಣೆಗೆ ಸೂಕ್ತವಾಗುವು. ಏಕಾದಶಿ ತಿಥಿ ಅಭಾವ ಇದೆ ಆಚರಿಸುವುದಿಲ್ಲ ಎಂದ ಹಾಗೆ ಆಗುತ್ತದೆ.ಉಪನ್ಯಾಸ ಕೇಳಿದ್ದಕ್ಕೆ ಹೇಳಿದ್ದೇನೆ ಆಚಾರ್ಯರೇ‌. ಅಲ್ಲಿ ವಾದದ ಸಾಧಿಸುವ ಪ್ರಯತ್ನ ಮಾಡಿದ್ದೀರಷ್ಟೇ.

  Vishnudasa Nagendracharya

  ಅಲ್ಲಿ ಸೌರ-ಚಾಂದ್ರ ಮಾಸಗಳ ಸಮೀಕರಣವನ್ನು ಶಾಸ್ತ್ರೀಯ ಆಧಾರದಿಂದ ಪ್ರತಿಪಾದಿಸಿದ್ದೇನೆ. ಅದು ತಪ್ಪು ಯಾಕೆ ಹೇಳಿ. 
 • B Sudarshan Acharya,Udupi

  11:26 AM, 27/11/2017

  ಸ್ಮೃತಿಮುಕ್ತಾವಲ್ಯಾದಿಗಳಲಿಲ್ಲ ಆದ್ದರಿಂದ ಅಪ್ರಮಾಣ ಎಂದಾಗುವುದಿಲ್ಲ. ಇಲ್ಲಿ ಸೌರಸಿಂಹಮಾಸದ ಉಲ್ಲೇಖ ಜಯಂತೀಯೋಗ ನಿರ್ಣಾಯಕ್ಕಾಗಿ ಹೇಳಿದ್ದು ಇತರ ಪ್ರಮಾಣಗಳಂತೆ ಕೊಟ್ಟಿದ್ದಾರೆ. ಇಲ್ಲಿ ಸಿಂಹಮಾಸವನ್ನು ಕೃಷ್ಣಪಕ್ಷದ ಅಷ್ಟಮಿಯಜೊತೆ ಕೂಡಿಸಿ ಆಚರಣೆ ಎಂಬ ವಾದವೇ ಅಸಮಂಜಸವಾಗುತ್ತದೆ. ಸಿಂಹಮಾಸ ಎಂದರೆ ಶ್ರಾವಣ ಯಾಕೆಂಬುದಕ್ಕೆ ಸಮರ್ಪಕ ಉತ್ತರ ಕೊಟ್ಟಿಲ್ಲ ಉಪನ್ಯಾಸದಲ್ಲಿ. ಕೃಷ್ಣಪಕ್ಷದ ಅಷ್ಟಮಿ ಎಂದಿದ್ದಾರೆ ಆದ್ದರಿಂದ ಇದು ಶ್ರಾವಣ ಎಂದು ವಾದಿಸಿದ್ದೀರಿ ಹೊರತು ನಿರ್ಣಾಯಕವಲ್ಲ.

  Vishnudasa Nagendracharya

  ನಾನು ಮತ್ತೆಮತ್ತೆ ಹೇಳುತ್ತಿದ್ದೇನೆ. ಉಪನ್ಯಾಸದಲ್ಲಿ ಅತ್ಯಂತ ವಿಸ್ತೃತವಾಗಿ ಶ್ರಾವಣವನ್ನು ಸಿಂಹ ಎಂದೇಕೆ ಕರೆಯುತ್ತಾರೆ ಎನ್ನುವದನ್ನು ಪ್ರಮಾಣಗಳ ಸಮೇತ ವಿವರಿಸಿದ್ದೇನೆ. ಉಪನ್ಯಾಸ ಕೇಳದೇ ಮಾತನಾಡುವದು ತಪ್ಪಲ್ಲವೇ. 
  
  ಸೌರಮಾಸ ಮತ್ತು ಚಾಂದ್ರಮಾಸಗಳ ಸಮೀಕರಣ ಹೇಗೆ ಎನ್ನುವದರ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದೇನೆ. 
  
  ಕೃಷ್ಣಪಕ್ಷದ ಅಷ್ಟಮಿಯಾದರೆ ಶಾ್ರವಣ ಏಕಾಗಬೇಕು? ಆ ರೀತಿಯಾಗಿ ನಾನೆಲ್ಲಿಯೂ ಹೇಳಿಲ್ಲ. ಹನ್ನೆರಡು ಮಾಸಗಳಲ್ಲಿ ಹನ್ನೆರಡು ಕೃಷ್ಣಪಕ್ಷದ ಅಷ್ಟಮಿಗಳಿವೆ. 
 • B Sudarshan Acharya,Udupi

  10:36 AM, 27/11/2017

  ದಧಿ ಹೇಳಲಿಲ್ಲ ಆದ್ದರಿಂದ ಇದು ಶ್ರಾವಣದಲ್ಲೇ ಆಚರಿಸಬೇಕೆಂದು ಹೇಳಿದ್ದೀರಿ‌. ಶ್ರೀವಿಷ್ಣುತೀರ್ಥರು ನೇರವಾಗಿ ಶ್ರಾವಣ ಎನ್ನದೆ ಸಿಂಹಮಾಸೇ ಎಂದು ಹೇಳಲು ಕಾರಣ ಏನೆಂದು ಹೇಳಲಿಲ್ಲ

  Vishnudasa Nagendracharya

  ಹೇಳಿದ್ದೇನೆ. 
  
  ಧರ್ಮಶಾಸ್ತ್ರಗಳಲ್ಲಿ ಸೌರಮಾಸಗಳನ್ನು ಉಲ್ಲೇಖ ಮಾಡಿದಾಗ ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು ಎನ್ನುವದನ್ನು ಸೂಚಿಸುತ್ತಿದ್ದಾರೆ ಎಂದು ಪಿತೃಪಕ್ಷದ ಉದಾಹರಣೆಯೊಂದಿಗೆ ಸಮರ್ಥಿಸಿದ್ದೇನೆ. 
  
  ಶ್ರೀ ಮಧ್ವಾನುಜಾಚಾರ್ಯರ ಸಂನ್ಯಾಸಪದ್ಧತಿ ಪ್ರಮಾಣಗಳನ್ನು ಸಂಗ್ರಹಿಸುವ ಗ್ರಂಥ ಅಲ್ಲ. ಈ ರೀತಿಯ ನೂರಾರು ಪ್ರಮಾಣಗಳ ಅರ್ಥವನ್ನು ನಿರ್ಣಯಿಸುವ ಗ್ರಂಥ. 
 • B Sudarshan Acharya,Udupi

  10:03 AM, 27/11/2017

  ಇದು ಸೌರಮಾನದ ಆಚರಣೆಯೇ ಅಲ್ಲ ಜಯಂತಿ ಯೋಗದ ಕುರಿತು ಎಲ್ಲಾ ಪ್ರಮಾಣಗಳು ಒಂದೇ ರೀತಿ ಹೇಳುತ್ತವೆ. ಸಿಂಹಮಾಸದಲ್ಲಿ ಆಚರಿಸುತ್ತಿರುವುದರಿಂದ ಸೌರಮಾನದ ಆಚರಣೆ ಎಂದು ಹೇಳುತ್ತಿದ್ದೀರ.
  
  ಯತ್ತು ಶ್ರಾವಣೇ ವಾ ನಭಸ್ಯೇ ವಾ ರೋಹಿಣೀ ಸಹಿತಾಷ್ಟಮೀ |
  ಯದಾ ಕೃಷ್ಣಾ ನರೈರ್ಲಬ್ಧಾ ಸಾ ಜಯಂತೀತಿ ಕೀರ್ತಿತಾ || - ಪುರುಷಾರ್ಥಚಿಂತಾಮಣಿ
  
  ಮಾಸಿ ಭಾದ್ರಪದೇsಷ್ಟಮ್ಯಾಂ ನಿಶೀಥೇ ಕೃಷ್ಣಪಕ್ಷಗೇ |
  ಶಶಾಂಕೇ ವೃಷರಾಶಿಸ್ಥೇ ಋಕ್ಷೇ ರೋಹಿಣೀ ಸಂಜ್ಞಿತೇ |
  ಯೋಗೇsಸ್ಮಿನ್ವಸುದೇವಾದ್ಧಿ ದೇವಕೀ ಮಾಮಜೀಜನತ್ |
  ತಸ್ಮಾನ್ಮಾಂ ಯಜಯೇತ್ತತ್ರ ಶುಚಿಃ ಸಮ್ಯಗುಪೋಷಿತಃ |
  ಭಗವತ್ಯಾಶ್ಚ ತತ್ರೈವ ಕ್ರೀಯತೇ ಸಮಹೋತ್ಸವಃ |
  ಯುಗೇsಸ್ಮಿನ್ ಕಥಿತೇsಷ್ಟಮ್ಯಾಂ ಸಿಂಹರಾಶಿಗತೇ ರವೌ || - ಭವಿಷ್ಯೋತ್ತರ ಪುರಾಣ
  
  ದ್ವಾಪರಾಂತೇ ಸಿಂಹಮಾಸೇ ರೋಹಿಣ್ಯಾಂ ಚ ವಿದೂದ್ಭವೇ ||
  ಕೃಷ್ಣಾವತಾರೋ ಹ್ಯಾಭವತ್ ಕೃಷ್ಣಪಕ್ಷೇsಷ್ಟಮಿಯುತೇ ||
  - ಪಂಚರಾತ್ರೇ ಶೇಷಸಂಹಿತಾ
  
  ಮಾಸಿ ಭಾದ್ರಪದೇ ಕೃಷ್ಣೇ ರೋಹಿಣೀಸಹಿತಾಷ್ಟಮೀ | ಜಯಂತೀ ನಾಮ‌ ಸಾ ತತ್ರ ರಾತ್ರೌ ಜಾತೋ ಜನಾರ್ದನಃ |
  ಉಪೋಷ್ಯ ಜನ್ಮಚಿಹ್ನಾನಿ ಕುರ್ಯಾಜ್ಜಾಗರಣಂ ಚ ಯಃ | ಅರ್ಧರಾತ್ರಯುತಾಷ್ಟಮ್ಯಾಂ ಸೋಶ್ವಮೇಧಫಲಂ ಲಭೇತ್ ||
  ರೋಹಿಣೀಸಹಿತಷ್ಟಮ್ಯಾಂ ಶ್ರಾವಣೇ‌ ಮಾಸಿ ವಾ ತಯೋಃ |
  ಶ್ರಾವಣೇ ಮಾಸಿ ವಾ ಕುರ್ಯಾತ್ ರೋಹಿಣೀಸಹಿತಾ ತಯೋಃ || - ನಾರದಸಂಹಿತಾ
  
  ಶ್ರಾವಣೇ ವಾ ನಭಸ್ಯೇ ವಾ ರೋಹಿಣೀಸಹಿತಾಷ್ಟಮೀ ಯದಾ ಕೃಷ್ಣಾ ನರೈರ್ಲಬ್ಧಾ ಸಾ ಜಯಂತೀತಿ ಕೀರ್ತಿತಾ || ಶ್ರಾವಣೇ ನ ಭವೇದ್ಯೋಗಃ ನಭಸ್ಯೇತು ಭವೇದ್ದ್ರುವಮ್ ||
  - ವಸಿಷ್ಠಸಂಹಿತೆ
  
  ಶ್ರಾವಣೇನ ಭವೇದ್ಯೋಗೋ ನಭಸ್ಯೇತು ಭವೇತ್ ಧ್ರುವಮ್ |
  ತದಭಾವೇ ಸಿಂಗೇsರ್ಕೇ ಕೃಷ್ಣಾಷ್ಟಮ್ಯೇವ ಗೃಹ್ಯತೇ | - ಗಣಿತನಿರ್ಣಯ
  
  ಶ್ರಾವಣ್ಯಾಂ ಪ್ರೌಷ್ಠಪದ್ಯಾಂ‌ ವಾ ಯದಾ ಸಿಂಹಗತೋ ರವಿಃ |
  ಜಯಂತ್ಯಾರಾಧನಂ ಕುರ್ಯಾನ್ನತು ಕರ್ಕಟಕನ್ಯಯೋಃ | - ಜ್ಯೋತಿಷ್ಯಾರ್ಣವ
  
  ಕೃಷ್ಣಾಷ್ಟಮ್ಯಾಂ ಭವೇದ್ಯತ್ರ ಕಾಲೈಕಾ ರೋಹಿಣೀ ಯದಿ ಜಯಂತೀ ನಾಮ ಸಾ ಪ್ರೋಕ್ತಾ ಉಪೋಷ್ಯೈವ ಪ್ರಯತ್ನತಃ || - ನಾರದೀಯ 
  
  ಹೀಗೆ ಅಧಿಕ ಎಲ್ಲಾ ಪ್ರಮಾಣಗಳು ಜಯಂತಿ ನಿರ್ಣಯವನ್ನು ಒಂದೇ ರೀತಿ ನೀಡಿವೆ. ಇಲ್ಲಿ ಮಾಸ ಪ್ರಧಾನ ಅಲ್ಲ. ರೋಹಿಣೀ ಸಹಿತ ಕೃಷ್ಣಪಕ್ಷದ ಅಷ್ಟಮಿಯಯೋಗವು ಪ್ರಧಾನ. ಈ ಯೋಗ ಸಿಂಹಮಾಸದಲ್ಲೇ ಬರುವ ಕಾರಣದಿಂದ ಶ್ರೀವಿಷ್ಣುತೀರ್ಥರು,  ಶ್ರೀವಾದಿರಾಜತೀರ್ಥರು, ಪಂಚರಾತ್ರದ ಶೇಷಾದಿ ಸಂಹಿತೆಗಳು, ಶಾಸ್ತ್ರಕಾರರು ಸಿಂಹಮಾಸದಲ್ಲಿ ಎಂದು ಹೇಳಿ ಗೊಂದಲ ಪರಿಹಾರ ನೀಡಿದ್ದಾರೆ.

  Vishnudasa Nagendracharya

  ನಾನು ಮೊದಲೇ ತಿಳಿಸಿದಂತೆ ಈ ವಾಕ್ಯಗಳು ಸ್ಮೃತಿಮುಕ್ತಾವಳಿ ಮುಂತಾದ ಗ್ರಂಥಗಳಲ್ಲಿಲ್ಲ. 
  
  ಮತ್ತು ಏಕಾಕರಕವಾದ (ಒಂದೇ ಆಕರದಲ್ಲಿ ದೊರೆಯುವ) ವಾಕ್ಯಗಳನ್ನು ಪೂರ್ಣವಾಗಿ ಪ್ರಮಾಣ ಎಂದು ಧರ್ಮಶಾಸ್ತ್ರಜ್ಞರು ಒಪ್ಪುವದಿಲ್ಲ. ಸಂವಾದಿ ಪ್ರಮಾಣ ಬೇಕೇ ಬೇಕು. 
  
  ರೋಹಿಣೀ ಸಹಿತ ಅಷ್ಟಮೀ ಯೋಗ ಸಿಂಹಮಾಸದಲ್ಲಿಯೂ ನಿಯಮೇನ ಬರುವದಿಲ್ಲ. ಆಗ ನೀವು ಮಾಡುವದೇ ಇಲ್ಲವೇನು? 
  
  ದೇವರು ಅವತಾರ ಮಾಡಿದ್ದು ಶ್ರಾವಣದಲ್ಲಿ. ಶ್ರಾವಣದಲ್ಲಿ ರೋಹಿಣೀ ಸಹಿತಾಷ್ಟಮೀ ಬಂದಾಗ ಜಯಂತಿ. ಬಾರದಿದ್ದಾಗ, ಜನ್ಮಾಷ್ಟಮಿ. ಭಾದ್ರಪದ ಕೃಷ್ಣದ ಅಷ್ಟಮಿಯಲ್ಲಿ ಅನ್ವಷ್ಟಕಾ ಶ್ರಾದ್ಧ. ಹೀಗೆ ಗೊಂದಲವೇ ಇಲ್ಲ. 
 • B Sudarshan Acharya,Udupi

  11:03 PM, 26/11/2017

  ಏಕಾದಶೀ ವ್ರತಾದ್ರಾನ್ ಅಧಿಕಂ ರೋಹಿಣೀವ್ರತಮ್ |
  ತತೋsಪಿ ದುರ್ಲಭಂ ಮತ್ವಾ ತಸ್ಯಾ ಯತ್ನಂ ಸಮಾಚರೇತ್ || - ಬ್ರಹ್ಮ
  ರೋಹಿಣ್ಯಾ ಸಹಿತಾಂ ತ್ಯಕ್ತ್ವಾ ಯೋನ್ಯಸ್ಯಾಂ ಆಚರೇತ್ ಕ್ವಚಿತ್|
  ಸಸರ್ವೈಃ ಸುಕೃತಿರ್ಹೀನಃ ತಿರ್ಯಗ್ಯೋನಿಷು ಜಾಯತೇ ||
  ಎಂಬುದಾಗಿ ರೋಹಿಣೀ ಪ್ರಧಾನವನ್ನೇ ಹೇಳಿದ್ದಾರೆ

  Vishnudasa Nagendracharya

  ಶ್ರೀಕೃಷ್ಣ ಭಾದ್ರಪದದಲ್ಲಿ ಅವತರಿಸಿಯೇ ಇಲ್ಲ ಎಂದಾದಬಳಿಕ, (ಅವತರಿಸಿದ್ದಾನೆ ಎಂದರೆ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ) 
  
  ಸೌರಮಾನದ ರೀತಿಯ ಆಚರಣೆ ದೈವಯಜ್ಞ ಪಿತೃಯಜ್ಞಗಳಲ್ಲಿ ಬಳಸಲೇ ಬಾರದು ಎಂದಾದ ಬಳಿಕ
  
  ಸಿಂಹಮಾಸದಲ್ಲಿಯೇ ಆಚರಿಸುವದು ಆಚಾರ್ಯರಿಗೆ ವಿರುದ್ಧ. ನೀವು ಉಲ್ಲೇಖಿಸುವ ಈ ರೀತಿಯ ವಚನಗಳು ಹೇಮಾದ್ರಿ, ವೀರಮಿತ್ರೋದಯದಂತಹ ಸುವಿಸ್ತೃತ ಧರ್ಮಶಾಸ್ತ್ರಸಂಗ್ರಹಗ್ರಂಥಗಳಲ್ಲಾಗಲೀ, ಮಾಧ್ವರ ಸ್ಮೃತಿಮುಕ್ತಾವಳಿಯಲ್ಲಾಗಲೀ ಕಂಡುಬರುವದಿಲ್ಲ. 
  
  ಆಚಾರ್ಯರು ನೀಡಿರುವ ನಿರ್ಣಯದ ಅನುಸಾರಿಯಾಗಿ ಪುರಾಣಗಳನ್ನು ಅರ್ಥ ಮಾಡಿಕೊಳ್ಳಬೇಕೇ ಹೊರತು, ಕೇವಲ ಪುರಾಣ ವಾಕ್ಯಗಳನ್ನಿಟ್ಟುಕೊಂಡು ತತ್ವನಿರ್ಣಯಕ್ಕೆ ಮುಂದಾಗಬಾರದು. 
  
  ಆಚಾರ್ಯರ ವಾಕ್ಯಗಳಲ್ಲಿ ಸರ್ವಥಾ ಗೊಂದಲವಿಲ್ಲ. ಸುಸ್ಪಷ್ಟವಾಗಿ ಶ್ರಾವಣವೇ ಎಂದು ನಿರ್ಣಯಿಸಿದ್ದಾರೆ ಎನ್ನುವದನ್ನು ಶ್ರೀ ವೇದಾಂಗತೀರ್ಥಶ್ರೀಪಾದಂಗಳವರೇ ಮೊದಲಾದವರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. 
  
  ಶ್ರೀ ವೇದಾಂಗತೀರ್ಥರೇ ಶ್ರಾವಣದಲ್ಲಿ ಶ್ರೀಕೃಷ್ಣ ಅವತರಿಸಿದ್ದು ಎಂದು ನಿರ್ಣಯಿಸಿದರೂ ಒಪ್ಪದಿರುವದು ಹೇಗೆ. ದೊಡ್ಡವರು ನಡೆದ ಹಾದಿಯಲ್ಲಿ ನಡೆಯುವವರು ನಾವು. 
  
  ಚಾಂದ್ರಮಾನವೇ ಆಚರಣೆಗೆ ಯೋಗ್ಯ ಎಂದು ಶ್ರೀ ವಾದಿರಾಜಗುರುಸಾರ್ವಭೌಮರು ನಿರ್ಣಯಿಸಿದ ಬಳಿಕ ಅದನ್ನೇ ಅನುಸರಿಸುವವರು ನಾವು. 
 • kishan rao,bengaluru

  10:30 PM, 26/11/2017

  ಮಾಸಿ ಭಾದ್ರಪದೇ ಕೃಷ್ಣೇ ರೋಹಿಣೀಸಹಿತಾಷ್ಮೀ | ಜಯಂತೀ ನಾಮ‌ ಸಾ ತತ್ರ ರಾತ್ರೌ ಜಾತೋ ಜನಾರ್ದನಃ |
  ಉಪೋಷ್ಯ ಜನ್ಮಚಿಹ್ನಾನಿ ಕುರ್ಯಾಜ್ಜಾಗರಣಂ ಚ ಯಃ | ಅರ್ಧರಾತ್ರಯುತಾಷ್ಟಮ್ಯಾಂ ಸೋಶ್ವಮೇಧಫಲಂ ಲಭೇತ್ ||
  ರೋಹಿಣೀಸಹಿತಷ್ಟಮ್ಯಾಂ ಶ್ರಾವಣೇ‌ ಮಾಸಿ ವಾ ತಯೋಃ |
  ಶ್ರಾವಣೇ ಮಾಸಿ ವಾ ಕುರ್ಯಾತ್ ರೋಹಿಣೀಸಹಿತಾ ತಯೋಃ || - ನಾರದಸಂಹಿತಾ

  Vishnudasa Nagendracharya

  ಈ ವಾಕ್ಯದ ವಿರೋಧವೇ ನಮಗಿಲ್ಲ. 
  
  ಕಡೆಯ ಶ್ಲೋಕದಲ್ಲಿ ಅನ್ವಯವೇ ಕೂಡುವದಿಲ್ಲ. 
 • B Sudarshan Acharya,Udupi

  10:37 PM, 26/11/2017

  ಉತ್ತರಕ್ಕಿಂತ ಮತ್ತಷ್ಟು ಗೊಂದಲಗಳಿಗೆ ನೂಕುತ್ತದೆ. 
  ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್
  ಎಂದು ಹೇಳಿರುವಾಗ ಶ್ರಾವಣದಲ್ಲಿ ಆಚರಿಸುವುದಾದರೆ ರೋಹಿಣೀಸಹಿತ ಚಂದ್ರನಿಗೆ ಅರ್ಘ್ಯ ಹೇಗಾಗುತ್ತದೆ ? 
  ಆದ್ದರಿಂದ ಅರ್ಘ್ಯಕ್ಕೆ ರೋಹಿಣೀ ಪ್ರಧಾನವೆಂದಾಗುತ್ತದೆ.

  Vishnudasa Nagendracharya

  ರೋಹಿಣೀ ಚಂದ್ರನ ಪತ್ನಿ. ಪತ್ನಿಯರಲ್ಲೇ ಕಿಂಚಿದಧಿಕಳೂ ಸಹಿತ. ರೋಹಿಣಿ ಇದ್ದಾಗಲೇ ಶ್ರೀಕೃಷ್ಣದೇವರು ಅವತರಿಸಿದ್ದು. ಹೀಗಾಗಿ ಪತ್ನೀಸಮೇತನಾಗಿ ಸ್ವೀಕರಿಸು ಎಂದರ್ಥ. 
  
  ದೇವಕ್ಯಾ ಸಹತೋ ಹರೇ ಎಂದು ಅರ್ಘ್ಯವನ್ನು ನೀಡುತ್ತೇವೆ. ನಿಮ್ಮ ಪ್ರಕಾರ ದೇವಕಿಯನ್ನು ಎಲ್ಲಿಂದ ತರುವದು ಈಗ? 
  
  ಕೆಲವು ಬಾರಿ ಮಧ್ಯರಾತ್ರಿಗಿಂತ ಮುಂಚೆ ಚಂದ್ರೋದಯವಾಗಿರುತ್ತದೆ, ಆಗ ಅರ್ಧರಾತ್ರೇ ಎಂಬ ಮಾತಿಗೆ ಅರ್ಥವೇನು? 
  
  ಅಷ್ಟೇಕೆ ಪ್ರತೀ ಶ್ರಾವಣದಲ್ಲಿ ಶ್ರೀಕೃಷ್ಣ ಅವತರಿಸುವದಿಲ್ಲವಲ್ಲ? ಅರ್ಘ್ಯ ಹೇಗೆ. 
  
  ಅರ್ಘ್ಯದ ಹೇಗೆಂದರೆ, ಅವತಾರಕಾಲದ ಕೃಷ್ಣ-ದೇವಕೀ-ಚಂದ್ರ-ರೋಹಿಣಿ ಮುಂತಾದವರ ಚಿಂತನೆಯೇ ಅರ್ಘ್ಯದ ಚಿಂತನೆ. 
  
  ಅವತಾರಕಾಲದಲ್ಲಿ ಶ್ರೀಕೃಷ್ಣ ದೇವಕೀ ಸಮೇತನಾಗಿದ್ದ. ಅವನಿಗೆ ಅರ್ಘ್ಯ. 
  
  ಅವತಾರಕಾಲದಲ್ಲಿ ಚಂದ್ರ ರೋಹಿಣೀಸಮೇತನಾಗಿದ್ದ. ಅವನಿಗೆ ಅರ್ಘ್ಯ. 
  
  ಮಧ್ಯರಾತ್ರಿ, ಶ್ರಾವಣ, ಅಷ್ಟಮೀ, ಚಂದ್ರ, ರೋಹಿಣಿಗಳೂ ಕ್ರಮವಾಗಿ ದೊರೆಯುತ್ತವೆ. ಎಲ್ಲವೂ ದೊರೆತಾಗ ಮಹಾಯೋಗ. ದೊರೆಯದಿದ್ದಾಗ ಇಲ್ಲದಿದ್ದಾಗ ಅವುಗಳ ಚಿಂತನೆಯೊಂದಿಗೆ ಅರ್ಘ್ಯ. 
  
  ಅದಕ್ಕಾಗಿಯೇ ಪ್ರತೀಮಾಸದ ಜನ್ಮಾಷ್ಟಮೀ ವ್ರತವೂ ಇದೆ. ಆಗ ಶ್ರಾವಣವೂ ಇರುವದಿಲ್ಲ, ರೋಹಿಣಿಯೂ ಇರುವದಿಲ್ಲ. ಅಷ್ಟಮೀ ಮಧ್ಯರಾತ್ರಿ ಮತ್ತು ಚಂದ್ರ ಮಾತ್ರ. ಆದರೂ ಸಹಿತ ಅರ್ಘ್ಯಾದಿಗಳು ಇದ್ದೇ ಇರುತ್ತವೆ. 
  
  ಶಾಸ್ತ್ರ ಅತ್ಯಂತ ಸ್ಪಷ್ಟವಾಗಿದೆ. ಪೂರ್ವಾಗ್ರಹಗಳಿದ್ದಾಗ ಗೊಂದಲಗಳುಂಟಾಗುತ್ತವೆ. 
 • B Sudarshan Acharya,Udupi

  10:41 PM, 26/11/2017

  ಇಲ್ಲಿ ಸಿಂಹಮಾಸ ಎಂದಿರುವುದು ಕೃಷ್ಣಜಯಂತಿಯ ಕುರಿತು ಸನ್ಯಾಸ ಪದ್ಧತಿಯಲ್ಲಿ. ಅದರ ಔಚಿತ್ಯ ಕೇಳಿದ್ದು ಆಚಾರ್ಯರೇ.

  Vishnudasa Nagendracharya

  ಸಂನ್ಯಾಸಪದ್ಧತಿಯಲ್ಲಿನ ಸಿಂಹಮಾಸೇ ಎಂಬ ಪ್ರಯೋಗದ ಔಚಿತ್ಯವನ್ನೇ ನಾನು ಉಪನ್ಯಾಸದಲ್ಲಿ ಸಮರ್ಥಿಸಿರುವದು. 
 • kishan rao,bengaluru

  10:48 PM, 26/11/2017

  ವ್ರತಗಳು ನಮಗೆ ದೇವರಿಗಲ್ಲ. ಹಾಗಿದ್ದಮೇಲೆ ಕ್ಷೀರ ಪಾಯಸ ಮಧ್ವಾದಿಗಳನ್ನು ನೈವೇದ್ಯ ಮಾಡುವದರಲ್ಲಿ ತಪ್ಪೇನು.?
  ನಮಗೆ ವ್ರತವಿದೆ ಎಂದು ಭಗವಂತನಿಗೆ ಪ್ರಿಯವಾದುದನ್ನು ಸಮರ್ಪಿಸದೆ ಇರುವುದು ಎಷ್ಟು ಸರಿ?
  ಏಕಾದಶಿ ದಿನಗಳಲ್ಲಿ ನಾವು ಉಪವಾಸ ವ್ರತ ಮಾಡಿದರೂ ನಾವು ದೇವರಿಗೆ ನೈವೇದ್ಯ ಸಮರ್ಪಣೆ ಮಾಡದೆ ಇರುವುದಿಲ್ಲವಲ್ಲ.?
  ಮೊಸರನ್ನು ನೈವೇದ್ಯದಲ್ಲಿ ಮೊಸರನ್ನು ನೈವೇದ್ಯ ಮಾಡುವ ಪದ್ಧತಿ ಎಲ್ಲಿದೆ ಗುರುಗಳೆ?

  Vishnudasa Nagendracharya

  ಮೊಸರನ್ನು ನೈವೇದ್ಯ ಮಾಡುವ ಪದ್ಥತಿ ಅವಶ್ಯವಾಗಿ ಇದೆ. 
  
  ನೈವೇದ್ಯ ಮಾಡದೇ ಇದ್ದರೆ ಅದನ್ನು ಉಣ್ಣುವದು ಹೇಗೆ. ಇವತ್ತಿನವರಂತೆ ಅನ್ನವನ್ನೋ ಸಕ್ಕರೆಯನ್ನೋ ಮಾತ್ರ ನೈವೇದ್ಯ ಮಾಡಿ, ಉಳಿದದ್ದನ್ನು ನೈವೇದ್ಯ ಮಾಡದೇ ಉಣ್ಣುವದು ಸತ್ಸಂಪ್ರದಾಯವನ್ನಲ್ಲ. ಕುಡಿಯುವ ನೀರಿನಿಂದ ಆರಂಭಿಸಿ ಎಲ್ಲವನ್ನೂ ದೇವರಿಗೆ ನಿವೇದಿಸಿಯೇ ಸ್ವೀಕರಿಸಬೇಕು. 
  
  ದೇವರ ಬಲಭಾಗದಲ್ಲಿ ಮಂಡಲವನ್ನು ಮಾಡಿ ಎಲೆಯನ್ನು ಬಡಿಸಿ, ಉಪ್ಪಿನಿಂದ ತುಪ್ಪದವರೆಗೆ ಎಲ್ಲವನ್ನೂ ಬಡಿಸಿ ನೈವೇದ್ಯ ಮಾಡಬೇಕು. ಹಾಲು ಮೊಸರು ಮುಂತಾದವನ್ನು ನೈವೇದ್ಯಕ್ಕಿಡಬೇಕು. 
  
  ವಿಧಿಗಳು ನಮಗೇ ನಿಜ. ದೇವರು ವಿಧಿಬದ್ಧನಲ್ಲ. ಆದರೆ ನಾವು ಏನನ್ನು ಸ್ವೀಕರಿಸುತ್ತೇವೆಯೋ ಅದನ್ನೇ ದೇವರಿಗೆ ಸಮರ್ಪಿಸಬೇಕು. ಹೊರತು ವ್ರತ ನಮಗೆ ಎಂದು ಚಾತುರ್ಮಾಸ್ಯದಲ್ಲಿ ನಿಷಿದ್ಧವಾದುದನ್ನೂ ದೇವರಿಗೆ ಸಮರ್ಪಿಸುವಂತಿಲ್ಲ. ಏಕಾದಶಿಯಂದೂ ಸಹ ಹಣ್ಣು ಹಾಲಿನ ನೈವೇದ್ಯವೇ ಹೊರತು ಅನ್ನಾದಿಗಳ ನೈವೇದ್ಯವಿಲ್ಲ. 
  
  ಕಾರಣ ದೇವರಿಗೆ ವಿಹಿತವಾದುದನ್ನೇ ಸಮರ್ಪಿಸಬೇಕು. ನಿಷಿದ್ಧವಾದುದನ್ನಲ್ಲ. 
  
  ಇನ್ನು, ದೇವರು ದುರ್ಗಂಧವನ್ನೂ ಅನುಭವಿಸುತ್ತಾನೆ. ಹೊಲಸನ್ನೂ ಅನುಭವಿಸುತ್ತಾನೆ. ಅದರೊಳಗಿನ ಸ್ವಾಖ್ಯಾದಿ ಪದಾರ್ಥಗಳ ಭೋಗ ಭಗವಂತನಿಗೆ. ಅದರಲ್ಲಿನ ದೋಷವನ್ನು ಉಣ್ಣುವದಿಲ್ಲ. ಹಾಗೆಂದು ದೇವರಿಗೆ ಹೊಲಸು ಪದಾರ್ಥಗಳ ನೈವೇದ್ಯ ಮಾಡಲಾಗುತ್ತದೆಯೇ? 
  
  ನನಗೆ ಪತ್ರ ಪುಷ್ಪಗಳನ್ನರ್ಪಿಸಿದರೂ ಸ್ವೀಕರಿಸುತ್ತೇನೆ ಎಂಬ ಭಗವದ್ಗೀತೆಯ ಕೃಷ್ಣನ ಮಾತಿಗೆ, ಆಚಾರ್ಯರು ವಿಹಿತವಾದ ಪತ್ರ ಪುಷ್ಪಾದಿಗಳು ಎಂದೇ ಅರ್ಥವನ್ನು ತಿಳಿಸಿದ್ದಾರೆ. 
  
  ಶ್ರೀಮದಾಚಾರ್ಯರನ್ನೂ ಮೀರಿ ನಾವು ದೇವರಿಗೆ ನಿಷಿದ್ಧ ಪತ್ರ ನಿಷಿದ್ಧ ಪುಷ್ಪಗಳನ್ನೂ ಅರ್ಪಿಸುತ್ತೇವೆ, ಚಾತುರ್ಮಾಸ್ಯದಲ್ಲಿ ನಿಷಿದ್ದವಾದ ಪದಾರ್ಥಗಳನ್ನೂ ಅರ್ಪಿಸುತ್ತೇವೆ ಎಂದರೆ ಆಗ ನಾವು ಮಾಧ್ವರೇ ಅಲ್ಲ. ಮಾಧ್ವರು ಎಂದರೆ ಆಚಾರ್ಯರು ತೋರಿಕೊಟ್ಟ ದಾರಿಯಲ್ಲಿ ನಡೆಯುವವರು. 
 • B Sudarshan Acharya,Udupi

  8:57 PM , 26/11/2017

  ಶ್ರೀವಿಷ್ಣುತೀರ್ಥರು "ಸಿಂಹಮಾಸೇ" ಎಂದು ಪ್ರಯೋಗ ಮಾಡಿದುದರ ಔಚಿತ್ಯವೇನು ಎಂಬುದನ್ನು ಹೇಳಲಿಲ್ಲ. ಶ್ರಾವಣ ಎಂದು ನೇರವಾಗಿ ಹೇಳದೆ ಸಿಂಹಮಾಸವೆಂದು ಹೇಳಿದರ ಒಳಾರ್ಥ ಏನು ?

  Vishnudasa Nagendracharya

  ಉಪನ್ಯಾಸದಲ್ಲಿ ವಿಸ್ತೃತವಾಗಿ ಉತ್ತರಿಸಿದ್ದೇನೆ. 
  
  ಕನ್ಯಾಮಾಸದಲ್ಲಿ ಪಿತೃಪಕ್ಷ ಮಾಡಬೇಕೋ, ಭಾದ್ರಪದ ಕೃಷ್ಣದಲ್ಲಿ ಪಿತೃಪಕ್ಷ ಮಾಡಬೇಕೋ ಎಂಬ ಶಾಸ್ತ್ರೀಯ ಸಮಸ್ಯೆಗೆ ಉತ್ತರ ನೀಡಲು ಶ್ರೀ ಮಧ್ವಾನುಜಾಚಾರ್ಯರು ಸಿಂಹಮಾಸೇ ಎಂಬ ಶಬ್ದದ ಪ್ರಯೋಗವನ್ನು ಮಾಡಿದ್ದಾರೆ. 
 • kishan rao,bengaluru

  9:54 PM , 26/11/2017

  ಗುರುಗಳೇ 
  ಶ್ರೀಮದಾಚಾರ್ಯರೇ ರೋಹಿಣ್ಯಾ ಮಧ್ಯರೋತ್ರೇತು ಯದಾ ಕೃಷ್ಣಾಷ್ಟಮೀ ಭವೇತ್| ಜಯಂತೀ ನಾಮ ಸಾ ಪ್ರೋಕ್ತಾ ಸರ್ವಪಾಪಪ್ರನಾಶನಂ ||
  ಇಲ್ಲಿ ರೋಹಿಣಿಯ ಯೋಗ ಮುಖ್ಯವಾಗಿ ಹೇಳಿದ್ದಾರೆ ಮತ್ತು ಮಾಸದ ಕುರಿತು ಎಲ್ಲೂ ಹೇಳಿಲ್ಲ.
  ರೋಹಿಣಿ ಬಳಕೆ ಅಪ್ರಧಾನ ಎಂದಾದರೆ ಅದನ್ನು ಬಳಸುವ ಅವಶ್ಯಕತೆ ಏನಿತ್ತು ? ಮತ್ತು ನೀವು ರೋಹಿಣ್ಯಾ ಅಪ್ರಧಾನ ಎಂದು ಹೇಳಿದ್ದೀರಿ ಆದರೆ ಸಿಂಹಮಾಸೆ ಎಂಬ ಪ್ರಯೋಗ ಮಾಡಿದ್ದು ಏಕೆಂದು ಕೃಪೆಮಾಡಿ ಹೇಳಿ.

  Vishnudasa Nagendracharya

  ಇವೆಲ್ಲದಕ್ಕೂ ಉಪನ್ಯಾಸದಲ್ಲಿಯೂ ಉತ್ತರ ನೀಡಲಾಗಿದೆ. 
  
  ನಾವು ರೋಹಿಣಿಯನ್ನು ನಿಷೇಧಿಸುವದಿಲ್ಲ. ಅದು ದೊರೆತಾಗ ಜಯಂತಿಯನ್ನು ಮಾಡುತ್ತೇವೆ. 
  
  
 • B Sudarshan Acharya,Udupi

  7:47 PM , 26/11/2017

  " ಯಸ್ಮಿನ್ ಸಂವತ್ಸರೇsಧಿಮಾಸಪ್ರಾಪ್ತೌ ಸತ್ಯಾಂ ಭಾದ್ರಪದೇ ಮಾಸಿ ರವಿಃ ಸಿಂಹರಾಶಿಂ ಗತೋ ಭವತಿ | ಕೃಷ್ಣಾವತಾರಸಮಯೇ ಗುರುರಪಿ ಸಿಂಹರಾಶಿಸ್ಥೋsಭೂತ್ | ತದಾ ದರ್ಶಮಾಸರೀತ್ಯಾ ಭಾದ್ರಪದಮಾಸೋsಪಿ ಭವತಿ | ಸೌರಮಾಸ್ಯಾರೀತ್ಯಾ ಶ್ರಾವಣಮಾಸಶ್ಚ ಭವತಿ | ತಸ್ಮಿನ್ ಸಂವತ್ಸರೇ ಕೃಷ್ಣಾವತಾರ ಇತಿ ಭಾವೇನ ಯಸ್ಮಿನಬ್ದ ಇತಿ | ಏವಂ ದ್ವಿವಿಧಮಾಸಸಂಪ್ರಯೋಗೋsಧಿಕಮಾಸ ಸಂಪ್ರಾಪ್ತರೇವ ಭವತಿ | ನ ಸರ್ವದಾ | ಏತದ್ಯೋಗಲಾಭೇ ಸಂವತ್ಸರತಿಥೇಃ ಕರ್ತವ್ಯತ್ವಾತ್ ಶ್ರಾವಣ್ಯಾಂ ಚಾಸಿತೇ ಪಕ್ಷೇ ಇತ್ಯಾದಿ ಪ್ರಮಾಣಾನುಸಾರೇಣ ಸೋಮಸಭಾವೇ ಪೂತಿಕಾಗ್ರಹಣವತ್ಕೇವಲ ಸಿಂಹಮಾಸೇsಪಿ ಕ್ರಿಯತೇ || - ವಾದಿರಾಜರ ಟೀಕೆ

  Vishnudasa Nagendracharya

  ತಮ್ಮ ಪೂರ್ವಜರಾದ ಶ್ರೀ ವೇದಾಂಗತೀರ್ಥರ ವ್ಯಾಖ್ಯಾನಕ್ಕೆ ವಿರುದ್ಧವಾಗಿ ಶ್ರೀ ವಾದಿರಾಜಗುರುಸಾರ್ವಭೌಮರು ಬರೆಯಬಲ್ಲರೇ? ಮತ್ತು, ಬನ್ನಂಜೆಯೇ ಈಗ ದೊರೆತಿರುವ ಶ್ರೀ ವಾದಿರಾಜರ ವ್ಯಾಖ್ಯಾನದಲ್ಲಿ ಇದೇ ಭಾಗದಲ್ಲಿ ತಪ್ಪಿದೆ ಎಂದು ತಿದ್ದಿ ತನ್ನ ವ್ಯಾಖ್ಯಾನದಲ್ಲಿ ಬರೆದಿದ್ದಾರೆ. ಶ್ರೀ ವಾದಿರಾಜರ ತಾತ್ಪರ್ಯನಿರ್ಣಯದ ವ್ಯಾಖ್ಯಾನದಲ್ಲಿ ಹೀಗೆ ಪ್ರಕ್ಷೇಪಗಳಾಗಿರುವದು ಸಕಲ ವಿದ್ವಾಂಸರಿಗೂ ತಿಳಿದಿದೆ. ಹೀಗೆ ಸಂಶಯಾಸ್ಪದವಾದ ಈ ವಾಕ್ಯಗಳನ್ನಿಟ್ಟುಕೊಂಡು ನಿರ್ಣಯ ಮಾಡಲು ಸಾಧ್ಯವೇ. 
  
  ಎಲ್ಲದಕ್ಕಿಂತ ಮುಖ್ಯವಾಗಿ ಶ್ರೀ ವಾದಿರಾಜರೇ ಅತ್ಯಂತ ಸ್ಪಷ್ಟವಾಗಿ ಚಾಂದ್ರಮಾನವನ್ನೇ ಅನುಸರಿಸಬೇಕು ಎಂದು ೨೩ನೆಯ ಅಧ್ಯಾಯದ ವ್ಯಾಖ್ಯಾನದಲ್ಲಿ ನಿರ್ಣಯಿಸಿದ್ದಾರೆ.