Upanyasa - VNU184

ಅಂಗಗಳ ಕಸಿಯನ್ನು ಶಾಸ್ತ್ರೀಯವಾಗಿ ಹೇಗೆ ಒಪ್ಪಲು ಸಾಧ್ಯ?

26/06/2016

ಸತ್ತ ದೇಹದಲ್ಲಿರುವ ಯಾವ ಇಂದ್ರಿಯಗಳೂ ಕಾರ್ಯ ಮಾಡುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ, ಆದರೆ ಸತ್ತ ದೇಹದಿಂದ ಕಣ್ಣು ಮುಂತಾದವನ್ನು ತೆಗೆದು ಕಣ್ಣಿಲ್ಲದವರಿಗೆ ಕಸಿ ಮಾಡಿದಾಗ ಕಣ್ಣು ಕೆಲಸ ಮಾಡುವದು ಕಂಡಿದೆ. ಹೀಗಾಗಿ ಶಾಸ್ತ್ರ ಹೇಳುವದನ್ನು ಹೇಗೆ ಒಪ್ಪಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ಈ ಲೇಖನದಲ್ಲಿದೆ. 

Play Time: 11 Minuts 20 Seconds

Size: 6.99 MB


Download Upanyasa Share to facebook View Comments
4065 Views

Comments

(You can only view comments here. If you want to write a comment please download the app.)
 • Soundarya,Bangalore

  11:23 PM, 22/10/2020

  🙏🙏🙏ಧನ್ಯವಾದಗಳು. ತಮ್ಮಿಂದ ವಿಜ್ಞಾನ ಹಾಗೂ ಶಸ್ಗ ಎರಡನ್ನೂ ತಿಳಿಸಿದೆವು. ನಿಮ್ಮ ಅನುಗ್ರಹ ನಮ್ಮ ಮೇಲೆ ಇರಲಿ ಆಚಾರ್ಯರೆ.
 • Prasanna Kumar N S,Bangalore

  8:39 PM , 20/10/2017

  ನಿಮ್ಮ ವಿಚಾರಧಾರೆ, ವ್ಯಾಪ್ತಿ, ಸೂಕ್ಷ್ಮತೆ ನೋಡಿ 
  
  ಬೆರಗಾಗಿದ್ದೇನೆ. ನಿಮ್ಮ ಮೇಲೆ ಶ್ರೀಮನ್ 
  
  ಮಧ್ವಾಚಾರ್ಯರ ಸಂಪೂರ್ಣ ಅನುಗ್ರಹ ಇದೆ 
  
  ಎಂಬುದಕ್ಕೆ ಬೇರೆ ಸಾಬೀತು ಅನಾವಶ್ಯಕ.
 • Shamala R,Bangalore

  10:40 AM, 02/10/2017

  ಸ್ವಾಮೀ... ಸತ್ತ ವ್ಯಕ್ತಿಯ ರೆಟಿನಾ ತೆಗೆದು ಕೊಳ್ಳಲು ಅನುಮತಿ ನೀಡುವುದು ಶಾಸ್ತ್ರ ಸಮ್ಮತವೇ?????

  Vishnudasa Nagendracharya

  ಸತ್ತ ವ್ಯಕ್ತಿಯ ಅಂಗಗಳು ಸರ್ವಥಾ ದಾನಕ್ಕೆ ಯೋಗ್ಯವಲ್ಲ. ಹೀಗಾಗಿ ಸತ್ತ ವ್ಯಕ್ತಿಯ ಅಂಗಾಂಗಗಳ ನೀಡುವಿಕೆ ದಾನದ ಪರಿಧಿಯಲ್ಲಿ ಖಂಡಿತ ಬರುವದಿಲ್ಲ. 
  
  ಸತ್ತ ವ್ಯಕ್ತಿಯ ಅಂಗಗಳನ್ನು ತೆಗೆದರೆ ಮುಂದಿನ ಜನ್ಮದಲ್ಲಿ ಆ ಅಂಗದ ನ್ಯೂನತೆ ಉಂಟಾಗುತ್ತದೆ ಎನ್ನುವದು ತಪ್ಪು. ಹಾಗೇನೂ ಉಂಟಾಗುವದಿಲ್ಲ. 
  
  ಇನ್ನು ಸತ್ತ ವ್ಯಕ್ತಿಯ ಅಂಗಾಂಗಗಳನ್ನು ನೀಡುವದು ಮಹತ್ತರ ಉಪಕಾರದ ಕೆಲಸ. ಮತ್ತೊಬ್ಬರ ಜೀವನವೇ ಅದರಿಂದ ನಡೆಯುತ್ತದೆ. ಹೀಗಾಗಿ ಶಾಸ್ತ್ರದ ಪರಿಧಿಯಲ್ಲಿ ನೀಡಲು ಸಾಧ್ಯವೇ ಎನ್ನುವದನ್ನು ಸಂಶೋಧನೆ ಮಾಡಬೇಕು. 
  
  ಕೆಲವರು ನೀಡುವ ಶಿಬಿಮಹಾರಾಜರ ದೃಷ್ಟಾಂತ ಇಲ್ಲಿಗೆ ಸರ್ವಥಾ ಹೊಂದಾಣಿಕೆಯಾಗುವದಿಲ್ಲ. ಶಿಬಿರಾಜರು ಬದುಕಿದ್ದಾಗಲೇ ತಮ್ಮ ದೇಹವನ್ನು ಕತ್ತರಿಸಿ ದಾನ ಮಾಡಿದರು. ಆದರೆ ಇಲ್ಲಿ ಚರ್ಚೆಯಿರುವದು ಸತ್ತ ವ್ಯಕ್ತಿಯ ಅಂಗಾಂಗಗಳ ದಾನದ ಕುರಿತು. ದೇಹ ಸತ್ತ ಬಳಿಕ ಮೈಲಿಗೆಯಾಗುತ್ತದೆ. (ಇವತ್ತಿನ ಜನ ಈ ಮೈಲಿಗೆ ಮಡಿಯನ್ನು ಒಪ್ಪಲಿ ಬಿಡಲಿ, ನಮಗೆ ಅವರ ಮಾತಿನ ಕುರಿತು ಬೆಲೆಯಿಲ್ಲ. ಶಾಸ್ತ್ರ ಅದನ್ನು ಮೈಲಿಗೆಯೆನ್ನುತ್ತದೆ, ಹೀಗಾಗಿ ಅದು ಸರ್ವಥಾ ಮೈಲಿಗೆಯೇ) ಆ ಮೈಲಿಗೆಯ ಪದಾರ್ಥವನ್ನು ಮತ್ತೊಬ್ಬರಿಗೆ ನೀಡುವದು ಹೇಗೆ ಮತ್ತು, ಹೆಣದ ದೇಹದಿಂದ ತೆಗೆದ ಆ ಪದಾರ್ಥಕ್ಕೆ ಸಂಸ್ಕಾರವಾಗುವದಿಲ್ಲ. ಅಂದ ಮೇಲೆ ಉಳಿದ ಸಂಸ್ಕಾರಗಳು ಉಪಪನ್ನವಾಗುತ್ತವೆಯೇ ಎನ್ನುವ ಪ್ರಶ್ನೆಗಳಿವೆ. 
  
  ಇದರ ಕುರಿತು ಸಂಶೋಧನೆ ನಡೆಸಿದ್ದೇನೆ. ಶಾಸ್ತ್ರ ಪ್ರಪಂಚದಲ್ಲಿ ಉತ್ತರವಿದ್ದೇ ಇರುತ್ತದೆ ಮತ್ತು ನಮ್ಮ ಶಾಸ್ತ್ರಗಳು ಎಂದಿಗೂ ಉಪಕಾರವನ್ನು ಎತ್ತಿ ಹಿಡಿಯುವ ಉನ್ನತ ಗ್ರಂಥಗಳು. ನನಗೆ ಉತ್ತರ ದೊರೆತ ತಕ್ಷಣ ವಿಸ್ತೃತವಾಗಿ ಬರೆದು ಪ್ರಕಟಿಸುತ್ತೇನೆ. 
 • Vadiraja,Dharawad

  8:29 PM , 31/05/2017

  Namo Namaha