Upanyasa - VNU372

ಪ್ರಾಯಿಕತ್ವ ಶಬ್ದಾರ್ಥ ವಿಚಾರ

ಶ್ರೀ ಕಂಬಾಲೂರು ರಾಮಚಂದ್ರತೀರ್ಥಶ್ರೀಪಾದಂಗಳವರ ವ್ಯಾಖ್ಯಾನದ ಮೇಲಿನ ಆಕ್ಷೇಪಕ್ಕೆ ಉತ್ತರ

ಶ್ರೀಮದಾಚಾರ್ಯರು ಮತ್ತು ಶ್ರೀಮಟ್ಟೀಕಾಕೃತ್ಪಾದರು ಪ್ರಯೋಗ ಮಾಡಿರುವ ಪ್ರಾಯಿಕತ್ವ ಎನ್ನುವ ಶಬ್ದಕ್ಕೆ ಪ್ರಾಚುರ್ಯ ಎಂದು ಶ್ರೀಮದ್ ರಾಮಚಂದ್ರತೀರ್ಥಗುರುಸಾರ್ವಭೌಮರು ಮತ್ತು ಶ್ರೀಮದ್ ಭಾಷ್ಯದೀಪಿಕಾಚಾರ್ಯರು ಅರ್ಥವನ್ನು ಹೇಳಿದ್ದಾರೆ. ಆ ಅರ್ಥವನ್ನು ಮತ್ತು ಅದರ ವಿವರಣೆಯ ಕುರಿತು ಕೆಲವರು ಮಾಡಿರುವ ಆಕ್ಷೇಪಕ್ಕೆ ಇಲ್ಲಿ ವಿಸ್ತೃತವಾದ ಉತ್ತರವನ್ನು ನೀಡಿ, ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಕೋಶಗ್ರಂಥಗಳ ಮತ್ತು ಲೌಕಿಕಪ್ರಯೋಗಗಳ ಆಧಾರವನ್ನು ನೀಡಿ ಪ್ರಾಯಿಕತ್ವ ಎಂಬ ಶಬ್ದಕ್ಕೆ ಪ್ರಾಚುರ್ಯ ಎನ್ನುವದೇ ವಾಚ್ಯಾರ್ಥ, ಪ್ರಾಧಾನ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿ ಶ್ರೀಪದ್ಮನಾಭತೀರ್ಥಶ್ರೀಪಾದಂಗಳವರ ಸನ್ನ್ಯಾಯರತ್ನಾಯವಲೀ ಮುಂತಾದ ಆಧಾರಗಳನ್ನು ನೀಡಿ ಶ್ರೀರಾಮಚಂದ್ರತೀರ್ಥಗುರುಸಾರ್ವಭೌಮರು ಹೇಳಿದ ಅರ್ಥ ಸಾಂಪ್ರದಾಯಿಕ ಅರ್ಥ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. 

ಇದರ ಕುರಿತ ಲೇಖನದ ಸಂಖ್ಯೆ VNA214

Play Time: 54:54

Size: 9.72 MB


Download Upanyasa Share to facebook View Comments
3991 Views

Comments

(You can only view comments here. If you want to write a comment please download the app.)
 • Pandurang,Bangalore

  3:58 PM , 28/07/2019

  ಎಕಾದಶಿ ಯಲ್ಲಿ ಮಠ ಬೇಧ ಬಂದಾಗ ಬೇರೆ ಮಠದ ಅತಿಥಿ ಗಳು ಬಂದಾಗ ಏನು ಮಾಡಬೇಕು?

  Vishnudasa Nagendracharya

  ಮಠಭೇದದಿಂದ ಏಕಾದಶಿ ಇದ್ದಾಗ
  
  1. ಊಟ ಮಾಡಿದವರು ಊಟ ಮಾಡದವರ ಮನೆಗೆ ಸರ್ವಥಾ ಹೋಗಬಾರದು. ಮತ್ತೊಬ್ಬ ಬ್ರಾಹ್ಮಣ ಉಪವಾಸವಿದ್ದಾಗ, ನಾವು ಅವರ ಮನೆಗೆ ಊಟಕ್ಕೆ ಹೋಗುವದು, ಅಥವಾ ಊಟ ಮಾಡಿ ಹೋಗುವದು ತಪ್ಪು. 
  
  2. ಇನ್ನು ಅನಿವಾರ್ಯವಾಗಿ, ನಾವು ಉಪವಾಸ ಮಾಡುವಾಗ, ಉಪವಾಸವಿಲ್ಲದವರು ನಮ್ಮ ಮನೆಗೆ ಬಂದಾಗ ಅವರಿಗೆ ತಿನ್ನಲು ಏನನ್ನೂ ಮಾಡಿಕೊಡಬಾರದು. ಅದರಿಂದ ನಮ್ಮ ಉಪವಾಸದ ವ್ರತ ಭಂಗವಾಗುತ್ತದೆ. 
 • Shantha.raghothamachar,Bangalore

  8:52 AM , 21/11/2017

  ನಮಸ್ಕಾರ ಗಳು