Upanyasa - VNU378

ದೇವರ ಜೊತೆ ಮಾತನಾಡುವದು ಹೇಗೆ?

19/12/2016

ಶ್ರೀಹರಿಭಕ್ತಿಸಾರದಲ್ಲಿ ಹದಿನೈದನೆಯ ಪದ್ಯಕ್ಕೆ ನಾಮಸ್ಮರಣದ ವಿಭಾಗ ಮುಗಿಯುತ್ತದೆ. ಹದಿನಾರನೆಯ ಪದ್ಯದಿಂದ ಭಗವಂತನೊಂದಿಗೆ ಸಂಭಾಷಣೆ ನಡೆಸಲು ಆರಂಭಿಸುವ ಭಕ್ತವರೇಣ್ಯರಾದ ಶ್ರೀ ಕನಕದಾಸರು ಭಕ್ತ-ಭಗವಂತರಿಗೆ ಸಂಬಂಧಿಸಿದ ಅದ್ಭುತವಾದ ಪ್ರಪಂಚದ ಅನಾವರಣವನ್ನು ಮಾಡುತ್ತಾರೆ. 

ದೇವರು ನಮ್ಮ ಅಂತರ್ಯಾಮಿ, ನಮ್ಮ ಸರ್ವಸ್ವ. ಹೊರಗಿನ ಪ್ರಪಂಚದಲ್ಲಿಯೇ ಆಸಕ್ತರಾದ ನಾವು ಒಳಗಿರುವ ನಮ್ಮ ಸ್ವಾಮಿಯನ್ನು ಮರೆತಿರುತ್ತೇವೆ. ಅವನೊಡನೆ ಹೇಗೆ ಸಂಪರ್ಕ ಮಾಡಬೇಕು ಎನ್ನುವದನ್ನೇ ಅರಿತಿರುವದಿಲ್ಲ. 
ಯಾರೂ ಸ್ಪರ್ಶ ಮಾಡದ ವಿಷಯಗಳನ್ನು ಕೈಗೆತ್ತಿಕೊಂಡು ಅದ್ಭುತವಾದ ವಿಷಯಗಳನ್ನು ತಿಳಿಸುವದಕ್ಕೆ ಪ್ರಸಿದ್ಧರಾದ ಕನಕದಾಸಾರ್ಯರು ಭಗವಂತ ಮತ್ತು ಭಕ್ತರೊಡಗಿನ ಸಂಬಂಧದ ಅದ್ಭುತ ಪ್ರಪಂಚವವೊಂದನ್ನು ಅನಾವರಣಗೊಳಿಸಿದ್ದಾರೆ. 

ದೇವರ ಜೊತೆ ಹೇಗೆ ಮಾತನಾಡಬೇಕು ಎನ್ನುವದನ್ನು ತಿಳಿಸುವ ಅವರ ದಿವ್ಯಪದ್ಯಗಳ ಅನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ. 

Play Time: 43:19

Size: 5.45 MB


Download Upanyasa Share to facebook View Comments
7320 Views

Comments

(You can only view comments here. If you want to write a comment please download the app.)
 • Sowmya,Bangalore

  7:06 PM , 22/07/2021

  🙏🙏🙏
 • Jyothi Gayathri,Harihar

  11:02 AM, 03/04/2021

  🙏🙏🙏🙏🙏
 • Mukund,Bangalore

  11:34 AM, 20/05/2019

  Samskruta paata continue Madi 🙏🙏🙏
 • Jayashree Karunakar,Bangalore

  4:24 PM , 26/02/2018

  ಗುರುಗಳೆ
  
  " ಇಲ್ಲಿ ರಾಗಿಗಳ ಮಾತೇನು " ಅಂತ ಕನಕದಾಸಾಯ೯ರು ಯಾಕೆ ಹೇಳುತ್ತಾರೆ ?
  
  ಒಬ್ಬ ಬುದ್ಧಿವಂತ ವಿಧ್ಯಾಥಿ೯ಗೆ ಹೆಚ್ಚಿನ ಪಾಠದ ಅವಶ್ಯಯಕತೆ ಇರುವುದಿಲ್ಲ, ಅವನಿಗೆ ತನ್ನ ಸಾಧನೆಯನ್ನು ಯಾವರೀತಿಯಾಗಿ ಮಾಡಿಕೊಳ್ಳಬೇಕುಂತ ಗೊತ್ತಿರುತ್ತದೆ. ಅದು ಬೇಕಾಗಿರುವುದು, ಸುಮ್ಮನೆ ಕಾಲಹರಣಮಾಡುವ ದಡ್ಡ ಶಿಷ್ಯನಿಗಲ್ಲವೆ ?
  
  ಸಜ್ಜನರು ಮಾತ್ರ ಉದ್ಧಾರವಾದರೆ, 
  ಸಂಸಾರದಲ್ಲಿದ್ದುಕೊಂಡು, ಭೋಗಾಸಕ್ತರಾದ ಮಂದಮತಿಗಳ ಉದ್ಧಾರವೆಂತು ಗುರುಗಳೆ ?ಅವರಿಗೆ ಯಾರು ಬುದ್ಧಿ ಹೇಳುತ್ತಾರೆ ?

  Vishnudasa Nagendracharya

  ಉಪನ್ಯಾಸವನ್ನು ಗಮನವಿಟ್ಟು ಕೇಳಿ. 
  
  ಇಲ್ಲಿ, ಲೋಕಾಸಕ್ತರಾದ ಸಜ್ಜನರ ಕುರಿತು ಮಾತಲ್ಲ. ದೇವರು ಬೇಡವೇ ಬೇಡ, ಹಣ-ಹೆಣ್ಣು-ಮಣ್ಣೇ ಸಾಕು ಎಂಬ ಮಧ್ಯಮ ಅಧಮ ಜೀವರ ಕುರಿತು, ಕನಕದಾಸಾರ್ಯರು “ರಾಗಿಗಳ ಮಾತೇನು” ಎಂದು ಹೇಳಿರುವುದು. 
  
  ಕನಕದಾಸರಾಗಲೀ, ಸಮಗ್ರ ದಾಸವರೇಣ್ಯರಾಗಲೀ ಕೃತಿಗಳನ್ನು ರಚಿಸಿರುವದೇ ಲೋಕಾಸಕ್ತರಾದ ಸಜ್ಜನರನ್ನು ಉದ್ಧರಿಸಲು. ಶ್ರೀಜಗನ್ನಾಥದಾಸಾರ್ಯರು ಪ್ರಾಣೇಶದಾಸರನ್ನು ಉದ್ಧರಿಸಿದಂತೆ ನೇರವಾಗಿಯೂ ಮಹಾನುಭಾವರು ಲೋಕಾಸಕ್ತರಾದ ಸಜ್ಜನರನ್ನು ಉದ್ಧರಿಸಿದ್ದಾರೆ.