20/01/2017
ಶ್ರೀಹರಿಭಕ್ತಿಸಾರದ 19ನೆಯ ಪದ್ಯದ ಉತ್ತರಾರ್ಧ ದೇವರ ಕುರಿತು ಒಂದು ಹಾಡನ್ನೋ, ಕೃತಿಯನ್ನೋ, ಸ್ತೋತ್ರವನ್ನೋ ಬರೆಯಬೇಕು ಎನ್ನುವ ತವಕ ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಇದ್ದೇ ಇರುತ್ತದೆ. ಅನೇಕರು ಪ್ರಯತ್ನವನ್ನೂ ಪಡುತ್ತಾರೆ. ಆ ರೀತಯ ಭಕ್ತ ಸ್ತೋತ್ರ ರಚಿಸುವ ಮುನ್ನ, ಹಾಡು ಬರೆಯುವ ಮುನ್ನ ಯಾವ ಎಚ್ಚರಗಳನ್ನಿಟ್ಟುಕೊಳ್ಳಬೇಕು ಎನ್ನುವದನ್ನು ಶ್ರೀಕನಕದಾಸರು ನಮಗೆ ಅದ್ಭುತವಾದ ಕ್ರಮದಲ್ಲಿ ತಿಳಿ ಹೇಳುತ್ತಾರೆ. ಶ್ರೀಹರಿಭಕ್ತಿಸಾರವನ್ನು ರಚಿಸಹೊರಟಿರುವ ಶ್ರೀ ಕನಕದಾಸರು “ಬಳಸುವರು ಸತ್ಕವಿಗಳು ಅವರಗ್ಗಳಿಕೆ ಎನಗಿನಿತಿಲ್ಲ” ಎಂದು ಶ್ರೀಹರಿಯ ಮುಂದೆ ತಮ್ಮ ವಿನಯವನ್ನು ನಿವೇದಿಸಿಕೊಳ್ಳುತ್ತಾರೆ. ಈ ಪ್ರಸಂಗದಲ್ಲಿ ಶ್ರೀವಾದಿರಾಜರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ಶ್ರೀಪಾದರಾಜರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು ರಚಿಸಿರುವ ಸ್ತೋತ್ರಗಳ ಸೊಬಗಿನ ಚಿಂತನೆ ಈ ಉಪನ್ಯಾಸದಲ್ಲಿದೆ.
Play Time: 42:50
Size: 7.91 MB