Upanyasa - VNU395

ತ್ರಿಪುರಾಸುರಸಂಹಾರ — 1 — ತ್ರಿಪುರಾಸುರರಿಗೆ ವರ

19/02/2017

ತ್ರಿಪುರಾಸುರಸಂಹಾರದ ಕುರಿತು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ನಿರ್ಣಯಗಳೊಂದಿಗೆ ಉಪನ್ಯಾಸ ಆರಂಭವಾಗುತ್ತದೆ. 

ತಾರಕಾಸುರನಿಗೆ ಮೂರು ಜನ ಮಕ್ಕಳು — ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲೀ ಎಂದು. ಮೂರೂ ಜನರು ಘೋರ ತಪಸ್ಸನ್ನು ಮಾಡಿ ಬ್ರಹ್ಮದೇವರಿಂದ ಮೂರು ಅಭೇದ್ಯವಾದ ಊರುಗಳನ್ನು ನಿರ್ಮಾಣ ಮಾಡಿಕೊಳ್ಳುವ ವರವನ್ನು ಪಡೆದುಕೊಳ್ಳುತ್ತಾರೆ. 

“ದೇವತೆಗಳಿಗೆ ಬುದ್ಧಿಯಿಲ್ಲ, ತಾವೇ ರಾಕ್ಷಸರಿಗೆ ವರ ಕೊಡುತ್ತಾರೆ. ಆ ನಂತರ ಅದೇ ವರದಿಂದ ರಾಕ್ಷಸರು ದೇವತೆಗಳಿಗೆ ತೊಂದರೆ ಕೊಡುತ್ತಾರೆ. ಮತ್ತೆ ದೇವತೆಗಳು ಏನೋ ತಂತ್ರ ಮಾಡಿ ಅವರನ್ನು ಕೊಲ್ಲುತ್ತಾರೆ. ಒಟ್ಟಾರೆ ಈ ಪುರಾಣಗಳು ಕಾಗಕ್ಕ ಗುಬ್ಬಕ್ಕಗಳ ಕಟ್ಟು ಕಥೆ” ಎಂದು ಇಂದಿನವರು ಮಾಡುವ ಆಕ್ಷೇಪಕ್ಕೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿರುವ ಯುಕ್ತಿಯುಕ್ತವಾದ ಅದ್ಭುತವಾದ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ. ಸಾಧನಜೀವನದ ಅದ್ಭುತ ಸಂವಿಧಾನದ ಚಿತ್ರಣದೊಂದಿಗೆ. ತಪ್ಪದೇ ಕೇಳಿ. 

Play Time: 38:10

Size: 6.58 MB


Download Upanyasa Share to facebook View Comments
4300 Views

Comments

(You can only view comments here. If you want to write a comment please download the app.)
  • No Comment