(You can only view comments here. If you want to write a comment please download the app.)
Ravi Teja S Joshi,Hyderabad
7:51 PM , 29/01/2019
ದೇವರ ಪೆಟ್ಟಿಗೆ ನಲ್ಲಿ ಏನು ಏನು ಇರಬೇಕು.. ಸುದರ್ಶನ್, ವಾಸುದೇವ್ ಮತ್ತು ರತ್ನ ಗರ್ಭ ಇವು ಸಮಸಂಖ್ಯೆಯ or ಬೆಸ ಸಾಂಖ್ಯ ಲೆಕ್ಕಕ್ಕೆ ಬರುತ್ತೆ?
ಸುದರ್ಶನ ಶ್ರೀ. ಲ.,ಬೆಂಗಳೂರು
10:39 AM, 16/07/2017
ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
ಯಾಕೆ ಹೃದಯಕಮಲದಲ್ಲಿ ಶ್ರೀ ಭೂಸಮೇತನಾದ ನಾರಾಯಣನನ್ನು, ಅಂದರೆ ಈ ರೂಪವನ್ನು ಚಿಂತನೆ ಮಾಡಬೇಕು?
ದುರ್ಗಾಸಮೇತವಾಗಿ ಭಗವದ್ರೂಪದ ಚಿಂತನೆ ಮಾಡಲು ಹೇಳಿಲ್ಲ ಯಾಕೆ ?
ನನ್ನ ಪ್ರಶ್ನೆ ಸರಿಯಿಲ್ಲದಿದ್ದರೆ ಕ್ಷಮಿಸಿ.
ದಯಮಾಡಿ ಉತ್ತರ ತಿಳಿಸಿ.
Vishnudasa Nagendracharya
ದುರ್ಗಾಸಮೇತನಾದ ಭಗವಂತನ ಧ್ಯಾನವನ್ನು ನಿಷೇಧಿಸಿಲ್ಲ.
ಸರ್ವರಿಗೂ ಸಾಮಾನ್ಯವಾದ ಶ್ರೀ ಭೂ ಸಮೇತ ರೂಪವನ್ನು ಧ್ಯಾನಮಾಡಲು ಆಚಾರ್ಯರು ವಿಧಿಸಿದ್ದಾರೆ.
ಹೃದಯಕಮಲದಲ್ಲಿರುವದು ಅಂತರ್ಯಾಮಿ ರೂಪ. ನಮ್ಮ ನಿಯತ ಗುರುಗಳು ದೊರಕಿ ಅವರು ನಮಗೆ ಉಪದೇಶ ಮಾಡುವವರೆಗೆ ನಾವು ಆಚಾರ್ಯರು ತಂತ್ರಸಾರದಲ್ಲಿ ತಿಳಿಸಿದ ರೂಪವನ್ನೇ ಧ್ಯಾನ ಮಾಡಬೇಕು.
B. Suresh Kumar,Chennai
12:07 AM, 12/06/2017
Aha aha excellent idhu kelidhe Pooja manasali maadidhanga idhe thumba Dhanyavadagalu Guruji
ಪ್ರಮೋದ,ಬೆಂಗಳೂರು
7:26 AM , 17/04/2017
ಧನ್ಯವಾದಗಳು
Suresh Shastri,Hubli
8:29 AM , 17/04/2017
ಅತ್ಯುಪಯುಕ್ತ ಉಪನ್ಯಾಸ
Raghoottam Rao,Bangalore
10:16 AM, 17/04/2017
ಗುರುಗಳೇ, ತಮ್ಮ ಪಾದಾರವಿಂದಗಳಿಗೆ ಕೋಟಿ ನಮಸ್ಕಾರಗಳನ್ನು ಮಾಡಿದರೂ ಕಡಿಮೆಯೇ.
ನಿಮ್ಮ ಜ್ಞಾನದ ಅಮೃತಧಾರೆಯಿಂದ ನಮ್ಮನ್ನು ಉದ್ಧಾರ ಮಾಡುತ್ತಿದ್ದೀರಿ.
ನಿಮ್ಮ ಉಪನ್ಯಾಸಗಳು ಮುಖ್ಯವಾಗಿ ಶ್ರೀ ಮಧ್ವವಿಜಯದ ಉಪನ್ಯಾಸಗಳು ನಮ್ಮ ಜೀವನವನ್ನೇ ಬದಲಿಸಿವೆ.
ಈ ದೇವರ ಪೂಜೆಯ ಉಪನ್ಯಾಸ ಅಮೋಘವಾಗಿದೆ. ಇಡಿಯ ದೇವರ ಪೂಜೆ ಕಣ್ಣ ಮುಂದೆ ನಡೆದಂತಿದೆ ಗುರುಗಳೇ.
ನಿಮ್ಮ ಕೃಪೆ ನಮ್ಮ ಮೇಲೆ ಹೀಗೇ ಇರಲಿ.
Vishnudasa Nagendracharya
ನನ್ನ ಲೇಖನ ಉಪನ್ಯಾಸಗಳು ಸಜ್ಜನರ ಮೇಲೆ ಪರಿಣಾಮ ಮಾಡಿದರೆ, ನನ್ನ ಶ್ರಮ ಸಾರ್ಥಕ.
ಶ್ರೀಮದಾಚಾರ್ಯರು, ಶ್ರೀಮಧ್ವಾನುಜಾಚಾರ್ಯರು, ಟೀಕಾಕೃತ್ಪಾದರು, ಚಂದ್ರಿಕಾಚಾರ್ಯರು, ಶ್ರೀಮದ್ವಾದಿರಾಜರು, ಮಂತ್ರಾಲಯಪ್ರಭುಗಳು ಮುಂತಾದ ಸಕಲ ಗುರುಗಳ ಅನುಗ್ರಹದಿಂದ ಈ ಜ್ಞಾನಕಾರ್ಯ ನಿರ್ವಿಘ್ನವಾಗಿ ಸಾಗುತ್ತಿದೆ.
Narasimha Rao,Bangalore
6:31 PM , 17/04/2017
ಗುರುಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು.
ನನ್ನ ಪ್ರಶ್ನೆ: ಬೆಂಗಳೂರಿನನಂಥಹ ಪ್ರದೇಶಗಳಲ್ಲಿ ನೀರಿನ ಅಭಾವ, ಅದರಲ್ಲೂ ಬೇಸಿಗೆಯಲ್ಲಿ ನೀರಿನ ಟ್ಯಾಂಕರ್ ಗಳಿಂದ ಜೀವನ ನಡಿ ಸುವ ಪರಿಸ್ಥಿತಿ, ಇಂತಹ ಸಂಧರ್ಭದಲ್ಲಿ ಹೇಗೆ ಮಡಿ ಇಂದ ಪೂಜೆ ಮಾಡುವುದು?
ನರಸಿಂಹ, ಬೆಂಗಳೂರು}
Vishnudasa Nagendracharya
ಟ್ಯಾಂಕ್ ನೀರಿನಿಂದ ಖಂಡಿತ ಮಡಿ ಉಂಟಾಗುವದೇ ಇಲ್ಲ.
ಕನಿಷ್ಠ ಪಕ್ಷ Bore well ಇರಲೇಬೇಕು.
ನಮ್ಮ ಸಾಧನೆಗಾಗಿ ನಾವು ಉತ್ತಮ ನೀರಿರುವ ಪ್ರದೇಶಗಳ ಕಡೆಗೆ ಹೋಗುವದು ಅನಿವಾರ್ಯ.
ತುಂಬ ಗಂಭೀರವಾಗಿ ಯೋಚಿಸಬೇಕಾದ ವಿಷಯ. ಕಾರಣ, ಮನುಷ್ಯ ಜನ್ಮ, ಅದರಲ್ಲಿಯೂ ಬ್ರಾಹ್ಮಣ ಜನ್ಮ ದುಡಿದು ಉಂಡು ಸಾವನ್ನಪ್ಪಲಿಕ್ಕಾಗಿ ಇರುವ ಜನ್ಮವಲ್ಲ. ಸಾಧನೆಗಾಗಿಯೇ ಇರುವದು. ಆ ಸಾಧನೆಗೆ ಅನುಕೂಲವಾದ ಪ್ರದೇಶದಲ್ಲಿಯೇ ವಾಸ ಮಾಡಬೇಕು. ಈ ರೀತಿಯ ಜಾಗೃತಿ ಈಗಾಗಲೇ ಅನೇಕರಲ್ಲಿ ಉಂಟಾಗಿದೆ.
ಹಳ್ಳಿಗಳಲ್ಲಿ ಬದುಕುವದರಿಂದ ನಮ್ಮ ಧರ್ಮವೂ ಉಳಿಯುತ್ತದೆ. ಹಳ್ಳಿಗಳ ಅಭಿವೃದ್ಧಿಯಾಗಿ ದೇಶವೂ ಉಳಿಯುತ್ತದೆ.
ನಾವು ಬ್ರಾಹ್ಮಣರು. ಹಳ್ಳಿಗಳಲ್ಲಿಯೂ ಸಹ ನಮ್ಮ ಕಾಲ ಮೇಲೆ ನಾವು ಬದುಕಬಲ್ಲೆವು. ಸಾಧನೆಗಾಗಿ ನಾವು ಒಂದು ಹೆಜ್ಜೆ ಮುಂದೆ ಇಟ್ಟರೆ ನಮ್ಮ ಸ್ವಾಮಿ ಸಾವಿರ ಹೆಜ್ಜೆ ಮುಂದಿಟ್ಟು ಬಂದು ನಮ್ಮನ್ನು ರಕ್ಷಿಸುತ್ತಾನೆ.
ಕನಿಷ್ಠಪಕ್ಷ, ಕೆಲಸದಿಂದ ನಿವೃತ್ತಿಯಾದ ಬಳಿಕವಾದರೂ ಮನುಷ್ಯ ಸಾಧನೆಗೆ ಅನುಕೂಲವಾದ ಪ್ರದೇಶದಲ್ಲಿ ವಾಸಮಾಡಬೇಕು.
ನದೀ, ಸರೋವರ, ಬಾವಿ, Bore well ಗಳ ನೀರಿಲ್ಲದೇ ಇದ್ದಾಗ, ಟ್ಯಾಂಕ್ ನೀರಿನಿಂದ ಸರ್ವಥಾ ಪೂಜೆ ಮಾಡಬಾರದು. ಅಂತಹ ಸಂದರ್ಭಗಳಲ್ಲಿ ದೇವರ ಪೆಟ್ಟಿಗೆಗೆ ತುಳಸೀ ಅರ್ಪಿಸಿ, ನೈವೇದ್ಯ ಮಂಗಳಾರತಿ ಮಾಡಿ ಮಾನಸಿಕವಾಗಿ ಪೂಜೆಯನ್ನು ಸಲ್ಲಿಸಬೇಕು.
K Dattatreya,Sandur
8:23 PM , 17/04/2017
ನಮಸ್ಕಾರ ಆಚಾರ್ಯರಿಗೆ
ಉಪನ್ಯಾಸ ತುಂಬಾ ಸರಳವಾಗಿ ಮತ್ತು ಉತ್ತಮವಾಗಿದೆ
ಧನ್ಯವಾದಗಳು
ಉತ್ತಮ ಉಪನ್ಯಾಸ.
ಧನ್ಯವಾದಗಳು.
ದೇವರ ಪೂಜೆಯ ಸಮಯದಲ್ಲಿ ಅಕ್ಷತೆಯನ್ನು ತಯಾರಿಸಿಕೊಂಡಿದ್ದು ಯಾವ ಸಮಯದಲ್ಲಿ ಪೂಜೆಯ ಕಾರ್ಯಕ್ಕೆ ಉಪಯೋಗಿಸಬೇಕು ಎಂದು ತಿಳಿಸಿದರೆ ಉತ್ತಮ.
ಧನ್ಯವಾದಗಳು.
Vishnudasa Nagendracharya
ಪೂಜೆಯ ವಿವರಣೆಯ ಸಂದರ್ಭದಲ್ಲಿ ತಿಳಿಸುತ್ತೇನೆ.
ತಿಳಿಸಬೇಕಾದ ಸಾಕಷ್ಟು ವಿಷಯಗಳಿವೆ. ವಿವರಣೆಯ ಆವಶ್ಯಕತೆಯಿದೆ. ಕಾಮೆಂಟಿನಲ್ಲಿ ತಿಳಿಸುವದು ಕಷ್ಟ.
Naveen,Bangalore
10:20 PM, 17/04/2017
ವಿಶ್ವನಂದಿನಿ ಇದು ವಸಿಷ್ಟರ ನಂದಿನಿ ಯಂದರೇ ತಪ್ ಅಲ್ಲ.
ನಮ್ಮ ಇಡಿಯ ಸಮಾಜಕ್ಕೆ ಈ ಉಪನ್ಯಾಸ ಅತಿ ಆವಶ್ಯಕ ಆಚಾರ್ಯರೇ
Vishnudasa Nagendracharya
ಗುರುಗಳ ಅನುಗ್ರಹದಿಂದ ಇದು ಸಜ್ಜನರ ಮನೆ ಮನಗಳನ್ನು ಮುಟ್ಟುತ್ತಿದೆ.
Aditya C S,Bangalore
11:04 PM, 17/04/2017
Acharyare,
Mooru saaligramaviddare yava reeti pooje madabeku?. Daya madi tilisikodi.
Vishnudasa Nagendracharya
ಮತ್ತೊಂದು ಸಾಲಿಗ್ರಾಮವನ್ನು ಪಡೆಯಲು ದೇವರನ್ನು ಪ್ರಾರ್ಥಿಸಬೇಕು.
ದೊರೆಯುವವರೆಗೆ ಆ ಸಾಲಿಗ್ರಾಮವನ್ನು ಪ್ರತ್ಯೇಕವಾಗಿ ಎತ್ತಿಡಬೇಕು. ಬೆಸಸಂಖ್ಯೆಯ ಸಾಲಿಗ್ರಾಮಗಳನ್ನು ಒಟ್ಟಿಗೆ ಸರ್ವಥಾ ಪೂಜೆ ಮಾಡಬಾರದು.
ಸಾಲಿಗ್ರಾಮವನ್ನು ಪಡೆಯಲು ಸಾತ್ವಿಕ ಪ್ರಯತ್ನ ಪಡುತ್ತಿರುವ ಉತ್ತಮ ವಿಷ್ಣುಭಕ್ತರಿಗೆ ದಾನ ನೀಡುವದು ಸರ್ವಶ್ರೇಷ್ಠ. ಕಾರಣ ಅವರಿಂದಲೂ ಪೂಜೆ ಮಾಡಿಸಿದ ಪುಣ್ಯ ಒದಗುತ್ತದೆ. ಮತ್ತು ಸಮಗ್ರ ಭೂದಾನದ ಫಲ.
Pattabiraman C L,Bangalore
10:18 PM, 18/04/2017
Pranamas to achraya - wonderful pravachana on devara pooja birds eye view. It helps me to correct many of my mistakes. once again namaskara.
ತುಂಬ ಒಳ್ಳೆಯ ಪ್ರಶ್ನೆ.
ಇಲ್ಲಿ ಶಾಸ್ತ್ರದ ಎರಡು ವಿಧಿಗಳಿವೆ.
1. ಮನೆಯಲ್ಲಿ ಸಾಲಿಗ್ರಾಮವನ್ನು ಪೂಜಿಸದೇ ಇಡಬಾರದು.
2. ಬೆಸಸಂಖ್ಯೆಯ ಸಾಲಿಗ್ರಾಮವನ್ನು ಪೂಜಿಸಬಾರದು.
ಈಗ ಮನೆಯಲ್ಲಿ ಬೆಸಸಂಖ್ಯೆಯ ಸಾಲಿಗ್ರಾಮಗಳಿದ್ದಾಗ ಸಮಸ್ಯೆ. ಪೂಜಿಸಿದರೆ ಒಂದು ವಿಧಿಯ ವಿರೋಧ. ಪೂಜಿಸದಿದ್ದರೆ ಒಂದು ವಿಧಿಯ ವಿರೋಧ.
ಇದಕ್ಕೆ ಮೂರು ಪರಿಹಾರಗಳಿವೆ.
ಪ್ರಥಮ ಪರಿಹಾರ -
ಒಂದು ಸಾಲಿಗ್ರಾಮವನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಸಮಸಂಖ್ಯೆಯ ಸಾಲಿಗ್ರಾಮಗಳನ್ನು ಪೂಜಿಸಬೇಕು.
ಸಾಲಿಗ್ರಾಮವನ್ನು ಪೂಜಿಸದೇ ಇಡಬಾರದು ಎನ್ನುವ ವಿಧಿಯ ತಾತ್ಪರ್ಯ, ಆಲಸ್ಯದಿಂದ ದೇವರ ಪೂಜೆಯನ್ನು ಮಾಡದೇ ಇರಬಾರದು ಎಂದು. ನಾವು ಇಲ್ಲಿ ಆಲಸ್ಯದಿಂದ ಅಗೌರವದಿಂದ ಪೂಜಿಸದೇ ಇಡುತ್ತಿಲ್ಲ. ಬೆಸಸಂಖ್ಯೆಯ ಸಾಲಿಗ್ರಾಮಗಳನ್ನು ಪೂಜಿಸಬಾರದು ಎಂಬ ಶಾಸ್ತ್ತವಚನಕ್ಕೆ ಗೌರವವನ್ನು ಕೊಟ್ಟು ಒಂದನ್ನು ಪೂಜೆ ಮಾಡದೇ ತೆಗೆದಿಡುತ್ತಿದ್ದೇವೆ.
ಮತ್ತು, ಯಾವಾಗಲೂ ಒಂದೇ ಸಾಲಿಗ್ರಾಮವನ್ನು ತೆಗೆದಿಡದೇ, ಇವತ್ತು ಒಂದನ್ನು ತೆಗೆದಿಡುವದು, ನಾಳೆ ಮತ್ತೊಂದನ್ನು ಸಂಪುಷ್ಟದಲ್ಲಿಟ್ಟು ನೆನ್ನೆಯದಕ್ಕೆ ಪೂಜೆ ಮಾಡುವದು. ಹೀಗೆ ಮಾಡಿದಲ್ಲಿ ಎಲ್ಲ ಸಾಲಿಗ್ರಾಮಗಳಿಗೂ ಪೂಜೆ ಸಲ್ಲಿಸಿದಂತಾಗುತ್ತದೆ. ಶ್ರೀಹರಿ ನಮ್ಮ ಹೃದ್ಗತಾರ್ಥವನ್ನು ತಿಳಿದು ಅನುಗ್ರಹಿಸುತ್ತಾನೆ.
ಆದಷ್ಟು ಬೇಗ ಮತ್ತೊಂದು ಸಾಲಿಗ್ರಾಮ ದೊರೆಯಲಿ, ಎಲ್ಲ ಸಾಲಿಗ್ರಾಮಗಳನ್ನೂ ಒಟ್ಟಿಗೇ ಪೂಜೆ ಮಾಡುವಂತಾಗಲಿ ಎಂದು ಪ್ರಾರ್ಥಿಸುತ್ತಿರಬೇಕು.
ಎರಡನೆಯದು -
ಸಾಲಿಗ್ರಾಮದ ದಾನ ಮಹಾದಾನ. ಸಮಗ್ರ ಭೂಮಂಡಲವನ್ನು ದಾನ ಮಾಡಿದ ಪುಣ್ಯ. ಶ್ರೀಹರಿಯ ನಿತ್ಯಸನ್ನಿಧಾನವಿರುವ ಆ ಶ್ರೇಷ್ಠಶಿಲೆಯನ್ನು ದಾನ ಮಾಡಿದರೆ ಉಂಟಾಗುವ ಫಲವನ್ನು ಎಣಿಸಲು ಸಾಧ್ಯವೇ. ಹೀಗಾಗಿ ಪ್ರತೀನಿತ್ಯ ಸಾಲಿಗ್ರಾಮ ಪೂಜೆ ಮಾಡುವ, ಮಾಡಲು ಬಯಸುವ ಶ್ರೇಷ್ಠ ವಿಷ್ಣುಭಕ್ತರಿಗೆ ದಾನ ಮಾಡಬೇಕು.
ಅದರಲ್ಲಿಯೂ ಯಾರ ಬಳಿ ಸಾಲಿಗ್ರಾಮ ಇಲ್ಲವೋ ಅವರಿಗೆ ದಾನ ಮಾಡುವದು ಶ್ರೇಷ್ಠ.
ಅವರಿಂದ ನಿತ್ಯ ಪೂಜೆ ಮಾಡಿಸಿದ ಪುಣ್ಯ ಬಂದೊದಗುತ್ತದೆ.
ಈ ಪುಣ್ಯ ಅತಿಶಯವಾದದ್ದು.
ಮೂರನೆಯದು -
ದಾನ ಮಾಡಲು ಸಾಧ್ಯವಿಲ್ಲದ ಪಕ್ಷದಲ್ಲಿ (ತಲೆತಲಾಂತರದಿಂದ ಸಾಲಿಗ್ರಾಮಗಳು ಬಂದಾಗ ದಾನ ಮಾಡಲು ಕಷ್ಟವಾಗುತ್ತದೆ, ಮುಂದಿನ ತಲೆಗೆ ಉಳಿಸುವದು ಧರ್ಮವಾಗುತ್ತದೆ) ಮತ್ತೊಬ್ಬರಿಗೆ ಪೂಜೆ ಮಾಡಲು ನೀಡಬಹುದು. (ಒಂದೇ ಮನೆಯಲ್ಲಿ ಎರಡು ಪೂಜೆ ನಡೆಯುವಂತಿಲ್ಲ. ಮತ್ತೊಬ್ಬರ ಮನೆಗೆ ನೀಡಬಹುದು.)
ದಾನವಾಗಿ ನೀಡುವದು ಬೇಡ. ಆದರೆ ಸ್ವಲ್ಪ ದಿವಸ ಪೂಜೆ ಮಾಡುತ್ತಿರಿ ಎಂದು ತಿಳಿಸಿ ನಮ್ಮ ವಿಶ್ವಾಸಿಕರಿಗೆ ನೀಡಬಹುದು. ತೆಗೆದುಕೊಳ್ಳುವವರ ವಿಶ್ವಾಸವನ್ನು ಪರೀಕ್ಷಿಸಿ ನೀಡಿ. ಕಾರಣ, ಆ ಬಳಿಕ ಸಾಲಿಗ್ರಾಮವನ್ನು ಕಳೆದುಕೊಂಡು ಮನಸ್ಸಿಗೆ ವ್ಯಥೆ ಮಾಡಿಕೊಳ್ಳುವದು, ಸಂಬಂಧವನ್ನು ಹಿಂಸೆ ಮಾಡುವದು ಬೇಡ. ಬೇರೆ ಮನೆಯಲ್ಲಿರುವ ಮಗನಿಗೆ, ಅಳಿಯನಿಗೆ, ಅಣ್ಣ ತಮ್ಮಂದಿರಿಗೆ, ಅವರ ಮಕ್ಕಳಿಗೆ, ಅಥವಾ ನಮ್ಮಲ್ಲಿ ವಿಶ್ವಾಸ ಮಾಡುವ ಕೊಟ್ಟ ಮಾತಿಗೆ ನಡೆದು ಕೊಳ್ಳುವ ವಿಷ್ಣುಭಕ್ತರಿಗೆ ನೀಡಬಹುದು.
ಈ ಮೂರನೆಯ ಪಕ್ಷದಲ್ಲಿ ಸಾಲಿಗ್ರಾಮವೂ ಕೈಬಿಟ್ಟು ಹೋಗುವದಿಲ್ಲ. ಪೂಜೆಯೂ ತಪ್ಪುವದಿಲ್ಲ.
ಆದರೂ ದಾನದ ಪಕ್ಷ ಅತಿಶಯವಾದದ್ದು.
ದಾನ ನೀಡುವ ಸೌಭಾಗ್ಯ ಯಾರಿಗೂ ದೊರೆಯುವಂತದ್ದಲ್ಲ.