Upanyasa - VNU434

ಗೋಪೀ-ಕೃಷ್ಣರ ಶೃಂಗಾರ

19/04/2017

“ಬಗೆಬಗೆಯ ರತಿಕಲೆಯಲಿ ಕೂರುಗುರ ನಾಟಿಸಿ ಈ ಜಗಕೆ ಪಾವನನಾದೆ” ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಭಗವಂತನೆಡೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಮಾಡುವ ಭಾಗ, ದೇವರ ಮಹಾಮಾಹಾತ್ಮ್ಯವನ್ನು ನಮಗೆ ಪರಿಚಯಿಸುವ ಭಾಗ ಗೋಪಿಕಾ-ಕೃಷ್ಣರ ರಾಸಲೀಲೆಯ ಪ್ರಸಂಗ. ಗೋಪಿಗೀತೆಯ ಅನೇಕ ಪದ್ಯಗಳ ಅರ್ಥಾನುಸಂಧಾನವೂ ಇಲ್ಲಿದೆ. ತಪ್ಪದೇ ಕೇಳಿ. 

ಮಗನ ಕೊಂದವನಾಳುವಂತಹ
ಸುಗಣೆಯರು ಹದಿನಾರು ಸಾವಿರ
ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ |
ಬಗೆಬಗೆಯ ರತಿಕಲೆಗಳಲಿ ಕೂ-
ರುಗರ ನಾಟಿಸಿ ಮೆರೆದು ನೀನೀ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ	॥ ೩೯ ॥

Play Time: 30:55

Size: 5.86 MB


Download Upanyasa Share to facebook View Comments
3761 Views

Comments

(You can only view comments here. If you want to write a comment please download the app.)
 • Sowmya,Bangalore

  3:40 PM , 22/09/2021

  🙏🙏🙏
 • Abhi,Banglore

  6:35 PM , 20/06/2020

  ಗುರುಗಳಿಗೆ 🙏, ಇತ್ತೀಚೆಗೆ ನಾವು ಕೃಷ್ಣ ರಾಧಾ ಕಥೆಗಳನ್ನು ಧಾರಾವಾಹಿ ಇನ್ನಿತರ ಮಾದ್ಯಮದಲ್ಲಿ ಹೆಚ್ಚಾಗಿದೆ . ಮತ್ತು ರಾಧಾ ಕೃಷ್ಣರ iskon temples ಕೂಡ ನಾವು ಬಹಳಷ್ಟು ಕಡೆ ನೋಡಿದ್ದವೇ (ರಾಧಾ ಕೃಷ್ಣರ ಈ ಕಥೆಗಳು 12 ನೆ ಶತಮಾನದ ಜೈದೇವ್ ಅನ್ನೋ ಕವಿ ಬರೆದಿದ್ದಾನೆ ಅನ್ನೋದು ತಿಳಿದಿದೆ) ಆದ್ರೆ ಇದು ಎಷ್ಟು ಸತ್ಯ ? ರಾಧಾ ಕೃಷ್ಣರು ಮದುವೆ ಆಗಿಲ್ಲ , ಪ್ರೀತಿಸುತ್ತಿದ್ದರು ಮತ್ತು ರಾಧಾ ಕೃಷ್ಣರ iskon ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ . ದಯವಿಟ್ಟು .

  Vishnudasa Nagendracharya

  ದಯವಿಟ್ಟು ಒಂದು ಪ್ರಶ್ನೆಯನ್ನು ಒಂದೇ ಕಡೆಯಲ್ಲಿ ಕೇಳಿ. ಎಲ್ಲ ಕಡೆಯಲ್ಲಿಯೂ Post ಮಾಡಬೇಡಿ. 
  
  ಈಗಾಗಲೇ ಅಧಿಕಮಾಸದ ಉಪನ್ಯಾಸಗಳಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿಯಾಗಿದೆ. 
  
  ಸಮಯ ದೊರೆತ ತಕ್ಷಣ ಪ್ರತ್ಯೇಕವಾಗಿಯೂ ಇದಕ್ಕೆ ಉತ್ತರವನ್ನು ಆಡಿಯೋ ರೂಪದಲ್ಲಿ ಪ್ರಕಟಿಸುತ್ತೇನೆ. 
  
  
 • Vishwanath,Bangalore

  7:40 PM , 14/03/2019

  Please gopikageetam pata vivaravagi pata Kodi😊🙏, svalpa Alla purna roopa vagi Kodi 🙏🙏
 • Jayashree,Bangalore

  11:49 AM, 20/04/2017

  Hare Krishna Acharyare, would you mind giving us the song written by Sri vidyaprasanna thirtharu, pl?About krishnana kolalu ?
  Many thanks.

  Vishnudasa Nagendracharya

  ಮುರಳಿಯ ನಾದವ ಕೇಳಿ ಬನ್ನೀ
  ಮಧುರನಾಥನು ಮುರಳಿಯನೂದಲು
  
  ಸುರಿವುದಾನಂದ ಜಲಾ ನಯನದಲೀ
  ಸುರಿವುದಾನಂದ ಜಲಾ
  
  ಕಂಗೊಳಿಸುವ ಬೆಳದಿಂಗಳಾ ಸೊಬಗಿರಿ
  ತಂಗಾಳಿಯ ಸುಖದೀ ಶ್ರೀ ರಂಗನಾ
  
  ಶ್ಯಾಮಲಾಂಗನು ತನ್ನ ಕೋಮಲ ಕರದಲ್ಲೀ
  ಆ ಮುರಳಿಯ ಹಿಡಿಯೇ
  ಶ್ರೀ ದಯದಲಿ ಪ್ರೇಮವ ತುಂಬುವುದೂ
  
  ಪಂಚಬಾಣನ ಪಿತ ಮುರಳಿಯ ಮಧುರಸ
  ಹಂಚಲೇಮಗೆ ರೋಮಾಂಚವಾಗುವುದು
  
  ರಜನೀಕಾಂತನ ಕುಲದಲಿ ಜನಿಸೀ
  ವ್ರಜಜನಗಳಿಗಧಿಕಾ
  ಪ್ರಸನ್ನನಾ ಮುರಳಿಯ ನಾದವ ಕೇಳಿ 
  
  ........................
  
  
  ಮುರಳಿಯಧರ ಶ್ರೀ ಕೃಷ್ಣನ ನೋಡಲು
  ಏನೋ ಸಂತೋಷ ಏನೋ ವಿನೋದ ಪ
  
  ಹರಿವಳು ಯಮುನೆಯು ಮೆಲ್ಲನೆ ನೋಡಲು
  ಗೋವಿಂದನನು ಪರಮಾನಂದದಿ ಅ.ಪ
  
  ಕೊಳಲೂದಲು ಶ್ರೀಕೃಷ್ಣನು ನಾದದ
  ಸುಳಿ ಬಾಡುವುದೆಂಬುವ ಭೀತಿಯಲಿ
  ಜಲ ಮೂಲನು ಬೆಳದಿಂಗಳ ಕರಗಳ
  ತಳಿರುಗಳಿಂದಲಿ ತಳ ಸೇರಿಸುವ 1
  
  ಶರಧಿ ತರಂಗಗಳೆದ್ದವು
  ರಂಗನ್ನ ವದನ ಶಕಾಂಕನ್ನ ನೋಡಿ
  ಅಂಗನೆಯರು ತಮ್ಮಂಗಗಳಲಿ
  ಭಂಗವ ಪಡೆದರನಂಗನ ಶರದಿ 2
  
  ಭುವನವ ತುಂಬಿತು ಗಗನವು ತುಂಬಿತು
  ದಿವಿಜರ ಲೋಕಗಳೆಲ್ಲವು ತುಂಬಿತು
  ಕವಿಗಳು ಬೆರಗಾದರು ವರ್ಣಿಸಲೀ
  ಸವಿ ಮುರುಳಿಯು ನಾದದ ಪ್ರವಹನನು 3
  
  ತುರುಗಳ ಪಯಧರ ಸ್ರವಿಸಿತು ಕ್ಷೀರವ
  ಕರೆದರು ಮೋದದ ಕಂಬನಿಯೆಲ್ಲರು
  ಮರೆತರು ನರಲೋಕದ ಮಂದಿಗಳು
  ಅರಿತು ಮೋಕ್ಷದ ಸುಖವೆಂತೆಂಬುದ 4
  
  ಈಶನು ಕೈಲಾಸದಲಿ ಕುಣಿದನು
  ಶೇಷನು ಸಾಸಿರ ಫಣಿಗಳನಾಡಿದ
  ದೋಷರಹಿತ ವಾಣೀಶನ ವದನ ವಿ
  ಕಾಸವು ಬೆಳಗಿತು ನಾಕು ದಿಕ್ಕುಗಳ 5
  
  ಆ ಸಮಯವ ಇತಿಹಾಸಗಳಲಿ ಕವಿ
  ವ್ಯಾಸರಿಗಲ್ಲದೆ ವರ್ಣಿಸಲಳವೆ
  ಭಾಸುರ ಸುಂದರ ವದನ ಪ್ರಸನ್ನನು
  ರಾಸಕ್ರೀಡೆಯ ರಸವನು ಹರಿಸುತ 6
  
  ಶ್ರೀಮದ್ ವಿದ್ಯಾಪ್ರಸನ್ನತೀರ್ಥಶ್ರೀಪಾದಂಗಳವರು ಇನ್ನೂ ಅನೇಕ ಕೃತಿಗಳನ್ನು ಮರಳೀನಾದದ ಕುರಿತು ರಚಿಸಿದ್ದಾರೆ. 
  
  ಭವದ ಸಂತಾಪವು ಕೊನೆಗಾಣಲಿ, 
  ಭುವಿಯೊಳು ಜೀವನ ಸವಿಯಾಗಲಿ, 
  ನವವಿಧ ಭಕುತಿಯು ಹರಿದಾಡಲಿ, 
  ಕಿವಿ ತುಂಬ ಕೇಳಿ ನಾ ನಲಿಯುವೆ. 
  
  ಮುರಳಿಯ ಬಾರಿಸೋ ಮಾಧವ
  
  ಇತ್ಯಾದಿಯಾಗಿ. 
  
  ಕೊಳಲಿನ ಕುರಿತು ಒಂದು ಪಿ ಎಚ್ ಡಿ ಮಾಡುವಷ್ಟು ವಿಷಯಗಳನ್ನು ಆ ಮಹಾನುಭಾವರು ತಮ್ಮ ಕೃತಿಗಳಲ್ಲಿ ಅನುಗ್ರಹಿಸಿದ್ದಾರೆ. 
  
  “ಶ್ರೀ ವಿದ್ಯಾಪ್ರಸನ್ನತೀರ್ಥರು” ಎಂಬ ಪುಸ್ತಕದಲ್ಲಿ ಶ್ರೀಯುತ ಜಯಸಿಂಹ ಅವರು ಶ್ರೀಗುರುಗಳ ಕೃತಿಗಳನ್ನೆಲ್ಲ ತುಂಬ ಸುಂದರವಾಗಿ ಒಂದು ಕಡೆ ನೀಡಿದ್ದಾರೆ. ಪ್ರತಿಯೊಬ್ಬ ವಿಷ್ಣುಭಕ್ತನ ಮನೆಯಲ್ಲಿರಬೇಕಾದ ಪುಸ್ತಕ. 
  
  
 • Vijay Kumar,Bengaluru

  3:52 PM , 20/04/2017

  ಆಚಾರ್ಯರಿಗೆ ನಮೋ ನಮಃ. ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ. ದಾಸವರ್ಯರಿಗೊಂದಿಪೆ
 • Jayashree,Bangalore

  5:45 PM , 21/04/2017

  Your prompt reply is much appreciated acharyare. Thank you.
 • Ashok Prabhanjana,Bangalore

  2:57 PM , 23/04/2017

  Purusha raagi huTTi paramatmana anga sangha paDeda aa 16000 jana Agni Putraru yaavudakke abhimani devathegaLu? daya maaDi TiLisi GurugaLe -()-

  Vishnudasa Nagendracharya

  ಎಲ್ಲ ದೇವತೆಗಳೂ ತತ್ವಾಭಿಮಾನಿಗಳೇ ಆಗಬೇಕಾಗಿಲ್ಲ. 
  
  ಅಗ್ನಿದೇವತೆಯ ಪುತ್ರರವರು. ದೇವತೆಗಳು. 
 • Ashok Prabhanjana,Bangalore

  5:03 PM , 23/04/2017

  yaavudakkU abhimanigaLallada aadare manusyothamarigintha RishigaLigintha hechu hechu paramathmana GuNagaLa upasaneyannu maaDu devathegaLa gumpu ideya GurugaLe ? dayaviTTu vivarisi -()-

  Vishnudasa Nagendracharya

  ಗಣಪತಿಗೆ ಸಮಾನನಾದ ವಿಷ್ವಕ್ಸೇನ, ಜಯವಿಜಯಾದಿ ದ್ವಾರಪಾಲಕರು, ಸೂರ್ಯಸಾರಥಿಯಾದ ಅರುಣ, ರುದ್ರವಾಹನನಾದ ನಂದಿ, ಐರಾವತ ಮುಂತಾದವರು ಯಾರೂ ತತ್ವಾಭಿಮಾನಿ ದೇವತೆಗಳಲ್ಲ. ಆದರೂ ದೇವತಾಗಣಪ್ರವಿಷ್ಟರು. 
  
  ನಾರದರು, ಭೃಗುಋಷಿಗಳು, ವಿಶ್ವಾಮಿತ್ರ ಮತ್ತು ವಸಿಷ್ಠಾದಿ ಸಪ್ತರ್ಷಿಗಳು ಮುಂತಾದವರು ತತ್ವಾಭಿಮಾನಿ ದೇವತೆಗಳಲ್ಲ. ಆದರೂ ಗಣಪತಿ ಮುಂತಾದ ತತ್ವಾಭಿಮಾನಿ ದೇವತೆಗಳಿಗಿಂತ ದೊಡ್ಡವರು. 
  
  ಹಾಗೆಯೆ ಅನೇಕ ಸಂಖ್ಯೆಯ ದೇವತಾಪುತ್ರರು ದೇವತೆಗಳೇ. ಆದರೆ ತತ್ವಾಭಿಮಾನಿ ದೇವತೆಗಳಲ್ಲ. 
 • Ashok Prabhanjana,Bangalore

  7:12 PM , 23/04/2017

  GurugaLe taava heLida TatvaabhimanigaLallada Vishwaksena, Jaya Vijayaadi dwarapalakaru, AruNa, Nandi, Surabhi, Iravatha, Naradaadi Rishi gaLu VyaaptOpasakare ? athava VyaaptOpasakaragallikke TatvaabhimanigaLaagirale bekamba niyamavideyE? dayaviTTu tiLisi GurugaLe 
  -()-

  Vishnudasa Nagendracharya

  ವ್ಯಾಪ್ತೋಪಾಸನೆ ಎನ್ನುವ ಶಬ್ದಕ್ಕೆ ನೀವೇನು ಅರ್ಥ ಮಾಡಿಕೊಂಡಿದ್ದೀರಿ. ಯಾವ ಅರ್ಥದಲ್ಲಿ ಅದನ್ನು ಬಳಸುತ್ತೀದ್ದೀರಿ. 
 • Ashok Prabhanjana,Bangalore

  7:38 AM , 24/04/2017

  ವ್ಯಾಪ್ತೂಪಸನೆ ಎಂದರೆ ಹ್ರುದಯದಲ್ಲಿ ಇರುವ ಬಿಂಬನನ್ನೆ ಸರ್ವತ್ರ ಅಂದರೆ ದೇಹದ ಒಳಗೂ ಹೊರಗೂ ಬೇರೆ ಬೇರೆ ಬೇರೆ ಅಧಿಸ್ಟಾಣದಲ್ಲಿ ಕಾಣುವುದು. ನಾನು ಅರ್ಥ ಮಾಡಿಕೊಂಡದ್ದು ಸರಿಯೆ ಗುರುಗಳೆ ? ದಯ ಮಾಡಿ ವಿವರಿಸಿ