Upanyasa - VNU436

PN06 ದೇವರ ಮನೆಯ ಸ್ವಚ್ಛತೆ

20/04/2017

ದೇವರ ಮನೆಯನ್ನು ಸ್ವಚ್ಛ ಮಾಡಬೇಕಾದ ಸಮಯ, ಮಾಡುವ ಕ್ರಮ, ಸ್ವಚ್ಛ ಮಾಡಬೇಕಾದರೆ ಇರಬೇಕಾದ ಎಚ್ಚರಗಳು, ಮನಸ್ಸಿಗೆ ಬರಬೇಕಾದ ಅನುಸಂಧಾನಗಳು, ಸ್ವಚ್ಛ ಮಾಡುವ ಈ ಸಾಮಾನ್ಯ ಕ್ರಿಯೆಗೆ ನಮ್ಮ ಸ್ವಾಮಿ ನೀಡುವ ಅಸಾಮಾನ್ಯ ಫಲಗಳು ಇವೆಲ್ಲದರ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ. 

Play Time: 38:18

Size: 3.15 MB


Download Upanyasa Share to facebook View Comments
2274 Views

Comments

(You can only view comments here. If you want to write a comment please download the app.)
 • Geethashyamasunder,Bangalore

  8:39 PM , 24/10/2017

  ,,,,
 • Narasimha Rao,Bangalore

  9:37 AM , 21/04/2017

  ಗುರುಗಳಿಗೆ ನಮಸ್ಕಾರಗಳು.
  1. ದೇವರ ಮನೆ ಯಾವ ದಿಕ್ಕಿಗೆ ಇರಬೇಕು?
  2. ದೇವರ ಮನೆ ಚಿಕ್ಕದಾಗಿದ್ದಲ್ಲಿ ದೇವರ ಪೂಜೆಯನ್ನು ಹಾಲ್ ನಲ್ಲಿ ನೆಲ ಸ್ವಚ್ಛಗೊಳಿಸಿ, ಪೀಠವನ್ನು ಇಟ್ಟು ಪೂಜೆ ಮಾಡಬಹುದೇ?

  Vishnudasa Nagendracharya

  ವಾಸ್ತು ಶಾಸ್ತ್ರದ ದೃಷ್ಟಿಯಿಂದ ನಮ್ಮ ಮನೆಯಲ್ಲಿ ದೇವರ ಮನೆ ಈಶಾನ್ಯಕ್ಕಿರುವದು ತುಂಬ ಶ್ರೇಷ್ಠ. ಕಾರಣ, ಈಶಾನ್ಯದಲ್ಲಿ ಕಸ ಇರಬಾರದು, ಭಾರ ಇರಬಾರದು. ಈಶಾನ್ಯದಲ್ಲಿ ದೇವರ ಮನೆ ಮಾಡಿದಾಗ ಸಹಜವಾಗಿ ಅಲ್ಲಿ ಅನವಶ್ಯಕ ಪದಾರ್ಥಗಳ ಭಾರ ಬೀಳುವದಿಲ್ಲ ಮತ್ತು ಕಸ ಸೇರುವದಿಲ್ಲ. (ಸೇರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ) 
  
  ಆದರೆ ದೇವರ ಪೂಜೆಯ ದೃಷ್ಟಿಯಿಂದ ದೇವರ ಮನೆ ಯಾವ ದಿಕ್ಕಿನಲ್ಲಿ ಇದ್ದರೂ ತೊಂದರೆ ಇಲ್ಲ. ಉಡುಪಿಯ ಪ್ರಾಂತದಲ್ಲಿ ಇರುವಂತೆ ಮಧ್ಯದಲ್ಲಿ ದೇವರ ಮನೆ ಕಟ್ಟಿ ಸುತ್ತಲೂ ನಮ್ಮ ವಾಸದ ಕೊಠಡಿಗಳನ್ನು ಕಟ್ಟಿಕೊಳ್ಳುವದು ಒಂದು ಉದಾತ್ತ ಅನುಸಂಧಾನವನ್ನು ನೀಡುತ್ತದೆ. ದೇವರು ನಮ್ಮ ಮನೆಯಲ್ಲಿ ಪ್ರಧಾನ, ನಮ್ಮ ಸ್ಥಾನ ಸಣ್ಣದ, ಅವನ ರಕ್ಷಣೆಯಲ್ಲಿ ನಾವಿದ್ದೇವೆ ಇತ್ಯಾದಿ ಸುಂದರ ಪರಿಕಲ್ಪನೆ ಆ ರೀತಿಯ ಮನೆಗಳಲ್ಲಿರುತ್ತದೆ. ಆದರೆ ಅದಕ್ಕೆ ವಿಶಾಲವಾದ ಸ್ಥಳವಿರಬೇಕು. 
  
  ದೇವರ ಮನೆ ಹೇಗೇ ಕಟ್ಟಿದರೂ ಕೆಳಕಂಡ ನಿಯಮಗಳನ್ನು ಪಾಲಿಸಲೇ ಬೇಕು. 
  
  ಪೂಜೆ ಮಾಡುವವರು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಪೂಜೆ ಮಾಡುವಂತಿರಬೇಕು. ಪಶ್ಚಿಮ ದಕ್ಷಿಣ ದಿಕ್ಕಿಗೆ ಕುಳಿತು ಪೂಜೆ ಮಾಡಬಾರದು. 
  
  ದೇವರು ದಕ್ಷಿಣ, ಪಶ್ಚಿಮ ಅಭಿಮುಖವಾಗಿದ್ದರೆ ಸರ್ವಥಾ ದೋಷವಿಲ್ಲ. 
  
  ಇನ್ನು ಮನೆಯ ಹಾಲಿನಲ್ಲಿ ಸ್ವಚ್ಛ ಮಾಡಿಕೊಂಡು ಪೂಜೆ ಮಾಡಬಹುದೇ ಎಂದು ಕೇಳಿದ್ದೀರಿ. ಉತ್ತರ ಹೀಗಿದೆ -
  
  ಕೆಳಕಂಡ ನಿಯಮಗಳನ್ನು ಅನುಸರಿಸಿದಲ್ಲಿ ಅವಶ್ಯವಾಗಿ ಮಾಡಬಹುದು. 
  
  1. ಹಾಲಿನಲ್ಲಿ ಸಾಮಾನ್ಯವಾಗಿ ಊಟ ಮಾಡುತ್ತೇವೆ. ಹೀಗಾಗಿ ಎಂಜಲು ಗೋಮ ಸರಿಯಾಗಿ ಆಗಿರುವದನ್ನು ಖಚಿತ ಪಡಿಸಿಕೊಳ್ಳಬೇಕು. ದೇವರ ಪೂಜೆಗಿಂತ ಮುಂಚೆ ಒಮ್ಮೆ ನೀರಿನಿಂದ ನೆಲವನ್ನು ವರೆಸಲೇ ಬೇಕು. 
  
  2. ಹಾಲಿನಲ್ಲಿ ಮನೆಯ ಸದಸ್ಯರು ಓಡಾಡುತ್ತಿರುತ್ತಾರೆ. ದೇವರ ಪೂಜೆಯ ಸಂದರ್ಭದಲ್ಲಿ ಅವರಿಂದ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. 
  
  ಈ ಸಮಸ್ಯೆಗಳು ಪರಿಹಾರವಾದಲ್ಲಿ, ಹಾಲಿನಲ್ಲಿ ಅವಶ್ಯವಾಗಿ ಪೂಜೆ ಮಾಡಬಹುದು. 
  
 • Narasimha Rao,Bangalore

  5:58 PM , 21/04/2017

  ತುಂಬಾ ಧನ್ಯವಾದಗಳು ಗುರುಗಳೆ.
 • P N Deshpande,Bangalore

  1:37 PM , 24/04/2017

  Beautiful one with maximum worth information will help for all
 • Nagendra koushik.s,Mulbagal kolar

  11:45 AM, 26/04/2017

  ನಮಸ್ಕಾರ ಆಚಾರ್ಯರೆ.
  ಪ್ರಾತಃ ಸ್ತೋತ್ರಗಳನ್ನು ಹೇಳಿಕೊಂಡು ದೇವರಮನೆಯ ಸ್ವಚ್ಛತೆಯನ್ನು ಮಾಡಬೇಕು ಅಂತ ಹೇಳಿದಿರಲ್ಲ, ಆ ಪ್ರಾತಃ ಸ್ತೊತ್ರಗಳು ಯಾವುವು?
  ಯಾವ ಸ್ತೋತ್ರಗಳನ್ನು ಹೇಳಿಕೊಂಡು ದೇವರಮನೆಯ ಸ್ವಚ್ಛತೆಯನ್ನು ಮಾಡಬೇಕು ಎಂದು ತಿಳಿಸಿಕೊಡಿ.
  ಧನ್ಯವಾದಗಳು.
 • Rushasri,Chennai

  8:40 AM , 29/04/2017

  Namaskara achare .nimma eee aeva bhala adbutha