Upanyasa - VNU449

ಗಂಗೆಯ ವ್ಯಾಪ್ತತ್ವ

ಆಚಾರ್ಯರು ಹಸ್ತಿನಾವತಿಯಲ್ಲಿ ಚಾತುರ್ಮಾಸ್ಯಕ್ಕಾಗಿ ಕುಳಿತಾಗ ಗಂಗೆ ಆಚಾರ್ಯರಿದ್ದಲ್ಲಿಗೇ ಹರಿದು ಬಂದ ಘಟನೆಯನ್ನು ಕೇಳುತ್ತೇವೆ. ಉಡುಪಿಯ ಮಧ್ವಸರೋವರಕ್ಕೆ ಬರುವ ಘಟನೆಯನ್ನು ಕೇಳುತ್ತೇವೆ. ಶ್ರೀಪಾದರಾಜಗುರುಸಾರ್ವಭೌಮರಿಗಾಗಿ ನರಸಿಂಹತೀರ್ಥಕ್ಕೆ ಗಂಗೆ ಬಂದ ಘಟನೆಯನ್ನು ಕೇಳುತ್ತೇವೆ. ಅತೀ ಕ್ಷುದ್ರರಾದ ನಾವು ನಮ್ಮ ಮನೆಯಲ್ಲಿ ಸ್ನಾನ ಮಾಡುವಾಗಲೂ ಗಂಗೆಯ ಸ್ಮರಣೆ ಮಾಡಿದರೆ, ಸ್ನಾನದ ನೀರಿನಲ್ಲಿ ಗಂಗೆಯ ಸನ್ನಿಧಾನ ಉಂಟಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ, ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಉತ್ತರ ನೀಡಿದ್ದಾರೆ. ಆ ಪರಮಪವಿತ್ರ ಪ್ರಮೇಯದ ಚಿಂತನೆ ಇಲ್ಲಿದೆ. Play Time: 04:16

Size: 1.33 MB


Download Upanyasa Share to facebook View Comments
4767 Views

Comments

(You can only view comments here. If you want to write a comment please download the app.)
 • Ravindrakumar,Mulgund gadag

  10:53 AM, 01/05/2020

  Acharyare thumba channagi vivarisiddiri. Namaskargalu
 • Hanumantha Rao,Bengaluru

  11:55 AM, 22/02/2019

  Boodhevi (lakshmi) eesa koti odayalu, paramathmana sathi, Ganga devi kintha kadume aaguvadhu yege sathya? Lakshmi sarvabimani, Ganga sarvabimanini illa. Ganga devi Gangabimanini Lakshmi kinta anantha pattu neechalu.. So, neevu yealuva dhara devi yaru? Please answer me ಆಚಾರ್ಯರೇ, namaskara

  Vishnudasa Nagendracharya

  ಮಹಾಲಕ್ಷ್ಮಿಯ ಸ್ವರೂಪರಾದ ಭೂದೇವಿ ಬೇರೆ, ಭೂಮಿಗೆ ಅಭಿಮಾನಿಯಾದ ಭೂದೇವಿ ಬೇರೆ ಎಂಬ ತತ್ವವನ್ನು ಶ್ರೀಮದ್ ಭಾಗವತದ ಪ್ರಥಮಸ್ಕಂಧದ 120ನೆ ಉಪನ್ಯಾಸದಲ್ಲಿ [VNU636] ವಿಸ್ತೃತವಾಗಿ ಪ್ರಮಾಣಗಳ ಸಮೇತವಾಗಿ ವಿವರಿಸಿದ್ದೇನೆ. ಕೇಳಿ. 
 • Nagarajan,Bangalore

  3:14 PM , 22/04/2018

  By
 • Akshata Gopal,Chennai

  10:47 PM, 01/05/2017

  Amazing.....
 • siddaraju,nanjangud

  10:36 PM, 05/05/2017

  ಗಂಗಾ ಮಾತೆಯ ಆ ಹನ್ನೆರಡು ಹೆಸರುಗಳನ್ನು ಬರೆದು ಕೊಳ್ಳಬೇಕು,ಕಮೆಂಟ್ ನಲ್ಲಿ ಸಾಧ್ಯವಾದರೆ ಬರೆಯಿರಿ ಗುರುಗಳೇ

  Vishnudasa Nagendracharya

  ಅಕ್ಷಯತೃತೀಯಾ ಲೇಖನದಲ್ಲಿ ತಿಳಿಸಿದ್ದೇನೆ.  [VNA241]
  
  ನಂದಿನೀ, ನಲಿನೀ, ಸೀತಾ, ಮಾಲಿನೀ, ಮಲಾಪಹಾ, ವಿಷ್ಣುಪಾದಾಬ್ಜಸಂಭೂತಾ, ಗಂಗಾ, ತ್ರಿಪಥಗಾಮಿನೀ, ಭಾಗೀರಥೀ, ಭೋಗವತೀ, ಜಾಹ್ನವೀ, ತ್ರಿದಶೇಶ್ವರೀ 
 • Ashok Prabhanjana,Bangalore

  12:22 PM, 06/05/2017

  ಗುರುಗಳೇ, ನದಿ, ಸರೋವರಗಳ ಅಭಿಮಾನಿ ದೇವತೆಗಳು, ಪರ್ವತಕ್ಕೆ ಅಭಿಮಾನಿ ದೇವ ದೇವತೆಗಳು, ಶುಕ್ಲ ಪಕ್ಷ Krishna ಪಕ್ಷಕ್ಕೆ ಅಭಿಮಾನಿ ದೇವತೆಗಳು, ಇವರೆಲ್ಲರು ತತ್ವಾಭಿಮಾನಿಗಳೆ ? ಅಲ್ಲವೆ ? ದಯವಿಟ್ಟು ತಿಳಿಸಿ

  Vishnudasa Nagendracharya

  ಅಲ್ಲ. 
  
  ತತ್ವ ಎಂದರೆ ಮಹತ್ ತತ್ವದಿಂದ ಆರಂಭಿಸಿ ಪೃಥಿವಿಯರವೆರಿಗಿನ 24 ತತ್ವಗಳು. 
  
  चतुर्विंशतिभिस्तत्त्वैः परीता महदादिभिः ಎಂದು ಭಾಗವತದ ಹತ್ತನೆಯ ಸ್ಕಂಧದಲ್ಲಿದೆ. 
  
  ಮಹತ್ ತತ್ವ
  
  ಬುದ್ಧಿತತ್ವ
  
  ಅಹಂಕಾರತತ್ವ
  
  ಹನ್ನೊಂದು ಇಂದ್ರಿಯಗಳು
  
  ಪಂಚತನ್ಮಾತ್ರಾಗಳು
  
  ಪಂಚಭೂತಗಳು
  
  ಬ್ರಹ್ಮಾಂಡ, ಅವುಗಳ ಒಳಗಿನ ಲೋಕಗಳು, ಅವುಗಳಲ್ಲಿನ ನದೀ, ಸರೋವರ ಮುಂತಾದವುಗಳೆಲ್ಲ ಈ ಇಪ್ಪತ್ನಾಲ್ಕು ತತ್ವಗಳಿಂದ ಹುಟ್ಟಿಬಂದ ಪದಾರ್ಥಗಳು. ಅವುಗಳಿಗೆ ಮಾತ್ರ ಅಭಿಮಾನಿಗಳಾದಲ್ಲಿ ತತ್ವಾಭಿಮಾನಿ ಎಂದು ಕರೆಯಲಾಗುವದಿಲ್ಲ. 
  
  ಶುಕ್ಲಪಕ್ಷ, ಕೃಷ್ಣಪಕ್ಷ ಮುಂತಾದವು ಕಾಲವಿಶೇಷಗಳು. ತತ್ವ ಎಂಬ ಪಾರಿಭಾಷಿಕಶಬ್ದದ ಪ್ರಯೋಗವಿಲ್ಲ.