Upanyasa - VNU451

ವಿಭೀಷಣಪಾಲ

02/05/2017

ಒಬ್ಬ ಮನುಷ್ಯನಿಗೆ ಮತ್ತೊಬ್ಬನು ತೊಂದರೆ ಮಾಡಿದರೆ ತೊಂದರೆ ಮಾಡಿದವನ ಇಡಿಯ ಕುಲವನ್ನು ಮನುಷ್ಯರು ದೂರ ಇಡುತ್ತಾರೆ, ದ್ವೇಷ ಮಾಡುತ್ತಾರೆ. ಅಂತಹುದರಲ್ಲಿ ತನ್ನ ಹೆಂಡತಿಯನ್ನೇ ಅಪಹಾರ ಮಾಡಿದ ರಾವಣನ ತಮ್ಮನನ್ನು ತನ್ನವನ್ನಾಗಿ ಭಗವಂತ ಸ್ವೀಕಾರ ಮಾಡಿದ, ಹೀಗಾಗಿ “ಎಷ್ಟು ಮಾಡಿದರೇನು ಮುನ್ನ ತಾ ಪಡೆಯವಷ್ಟೆಯೆಂಬುದ ಲೋಕದೊಳು ಮತಿಗೆಟ್ಟ ಮಾನವಾರುಡುತಿಹರು” ಎಂಬ ಜನರ ಆಕ್ಷೇಪ ಹುರುಳಿಲ್ಲದ್ದು. ನಮ್ಮ ಸ್ವಾಮಿಗೆ ಮನುಷ್ಯರ ಹೋಲಿಕೆ, ಧಣಿಗಳ ಹೋಲಿಕೆ ಸಲ್ಲ ಎಂಬ ತತ್ವವನ್ನು ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸುತ್ತಾರೆ. 

ಶ್ರೀಮನ್ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣದ ವಚನಗಳ ಉಲ್ಲೇಖದೊಂದಿಗೆ ಇಲ್ಲಿ ವಿಭೀಷಣಮಹಾರಾಜರ ಕಥೆಯ ನಿರೂಪಣೆಯಿದೆ. 

ನಿನ್ನ ಸತಿಗಳಿಪಿದ ದುರಾತ್ಮನ
ಬೆನ್ನಿನಲಿ ಬಂದವನ ಕರುಣದಿ
ಮನ್ನಿಸಿದ ಕಾರಣ ದಯಾಪರಮೂರ್ತಿಯೆಂದೆನುತ |
ನಿನ್ನ ಭಜಿಸಿದ ಸಾರ್ವಭೌಮರಿ-
ಗಿನ್ನು ಇಹಪರವುಂಟು ಸದ್ಗುಣ-
ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ ॥ ೪೩ ॥Play Time: 36:09

Size: 6.76 MB


Download Upanyasa Share to facebook View Comments
2898 Views

Comments

(You can only view comments here. If you want to write a comment please download the app.)
 • Sowmya,Bangalore

  5:07 PM , 05/10/2021

  🙏🙏🙏
 • Prasanna Kumar N S,Bangalore

  10:26 AM, 20/03/2019

  Vibheeshana, Shambhukarna(Sri Raghavendra guru rayaru) avara avatara allave gurugale

  Vishnudasa Nagendracharya

  Sarvatha alla. 
 • Santosh Patil,Gulbarga

  9:06 AM , 20/03/2019

  Gurugalige Anant Dannyavadgalu.... 🙏🙏
 • Varuni Bemmatti,Bangalore

  5:42 PM , 09/03/2018

  Vishesha reetiyalli Haribhaktisaravannu unabadisuttiruva gurugalige ananta bhaktipoorvaka vandanegalu.
 • Ashok Prabhanjana,Bangalore

  2:17 PM , 04/05/2017

  ಗುರುಗಳೇ, ವಿಭೀಷಣನು ಸ್ವರೂಪತಹ ಯಾರ ಅಂಶ / ಅವತಾರ? ಅವರು ಯಾವ ಕಕ್ಷೆಯಲ್ಲಿ ಬರುತಾರೆ? ದಯವಿಟ್ಟು ತಿಳಿಸಿ

  Vishnudasa Nagendracharya

  ವಿಭೀಷಣಮಹಾರಾಜರು ಕುಬೇರನ ಸೇನಾಪತಿ. 
  
  ರಾಮದೇವರ ಅನುಗ್ರಹದಿಂದ ಈಗ ನಡೆಯುತ್ತಿರುವ ಸಮಗ್ರ ದಿನಕಲ್ಪದಲ್ಲಿ ರಾಕ್ಷಸರಿಗೆ ಅಧಿಪತಿಯಾಗಿರುತ್ತಾರೆ. 
  
  ವಿಭೀಷಣಶ್ಚ ಧರ್ಮಾತ್ಮಾ
  ರಾಘವಾಜ್ಞಾಪುರಸ್ಕೃತಃ ।
  ಸೇನಾಪತಿರ್ಧನೇಶಸ್ಯ
  ಕಲ್ಪಮಾವೀತ್ ಸ ರಾಕ್ಷಸಾನ್ । 
  
  ಎಂದು ಆಚಾರ್ಯರು ತಿಳಿಸಿದ್ದಾರೆ. 
  
 • Gayathri ravindranath,Bangalore

  12:48 PM, 11/05/2017

  Hari preethi