Upanyasa - VNU462

02/08 ಶ್ರೀಪಾದರಾಜರ ವಾತ್ಸಲ್ಯ ಮತ್ತು ಆಕರ್ಷಕ ವ್ಯಕ್ತಿತ್ವ

ಶ್ರೀ ಶ್ರೀಪಾದರಾಜ-ಪಂಚರತ್ನಮಾಲಿಕಾ-ಸ್ತೋತ್ರಮ್ — 02/08

ಶ್ರೀ ಶ್ರೀಪಾದರಾಜರ ಗುಣಮಾಹಾತ್ಮ್ಯಗಳನ್ನು ಚಿಂತನೆ ಮಾಡಹೊರಟಿರುವ ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಗುರುಗಳಲ್ಲಿ ಮೊದಲು ಸ್ತೋತ್ರ ಮಾಡಿದ ಗುಣ — ರುಚಿತಮಹೃದಯಮ್ ಎಂದು. ತಮ್ಮ ಶಿಷ್ಯರ ಮೇಲೆ ವಾತ್ಸಲ್ಯದ ಪೂರವನ್ನು ಹರಿಸುತ್ತಿದ್ದ ಶ್ರೀಪಾದರಾಜರು, ತಮ್ಮ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಸ್ವರ್ಣವರ್ಣತೀರ್ಥಶ್ರೀಪಾದಂಗಳವರು, ವಿಬುಧೇಂದ್ರತೀರ್ಥಶ್ರೀಪಾದಂಗಳವರು ಮುಂತಾದ ತಮಗಿಂತ ದೊಡ್ಡವರ ವಾತ್ಸಲ್ಯವನ್ನು ಪಡೆದು, ಚಂದ್ರಿಕಾಚಾರ್ಯರಾದಿ ಶಿಷ್ಯರಿಗೆ ಆ ವಾತ್ಸಲ್ಯವನ್ನು ಧಾರೆಯೆರೆದ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. 

ಸ್ವರ್ಣವರ್ಣತೀರ್ಥರಿಗೆ ಮತ್ತು ಬ್ರಹ್ಮಣ್ಯತೀರ್ಥರಿಗೆ ತಮ್ಮ ಶಿಷ್ಯರಿಗೆ ಪಾಠ ಹೇಳುವಷ್ಟು ಜ್ಞಾನವಿರಲಿಲ್ಲ, ಅದಕ್ಕಾಗಿಯೇ ಅವರು ಗ್ರಂಥವನ್ನೂ ಬರೆದಿಲ್ಲ, ಆ ಕಾರಣಕ್ಕೆ ನಾವು ಅವರಿಗೆ ನಮಸ್ಕಾರ ಮಾಡುವದಿಲ್ಲ ಎಂದು ಹೇಳುವ ಜನ ಇವತ್ತಿಗೂ ಬದುಕಿದ್ದಾರೆ. ಅಂತಹವರಿಗೆ ಶ್ರೀಮಚ್ಚಂದ್ರಿಕಾಚಾರ್ಯರು ಮತ್ತು ಶ್ರೀ ಶ್ರೀನಿಧಿತೀರ್ಥಶ್ರೀಪಾದಂಗಳವರು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ, ತಪ್ಪದೇ ಕೇಳಿ. 

Play Time: 31:10

Size: 5.44 MB


Download Upanyasa Share to facebook View Comments
4988 Views

Comments

(You can only view comments here. If you want to write a comment please download the app.)
 • Karthik S. V,Bengaluru

  11:27 PM, 15/07/2021

  ಆಚಾರ್ಯರೇ ತಮ್ಮ ಉತ್ತರದಿಂದ ಬಹು ಕಾಲದ ಸಂಶಯ ದೂರ ವಾಯಿತು, ತಮಗೆ ಸಾಷ್ಟಾಂಗ ನಮಸ್ಕಾರಗಳು...
  ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದಂಗಳವರಂತಹ ಮಹಾನುಭಾವರ ಮೇಲೆ ಇರುವ ತಪ್ಪು ತಪ್ಪು ಮಾಹಿತಿಗಳು ಕೇಳಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ...
 • Karthik S. V,Bengaluru

  6:52 PM , 25/06/2021

  ಆಚಾರ್ಯರಿಗೆ ನಮನಗಳು,
  ಶ್ರೀಪಾದರಾಜರಿಗೆ ಶ್ರೀಪಾದರಾಜರು ಎಂಬ ಹೆಸರು ಬಂದದ್ದು ಶ್ರೀ ವಿಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಎಂಬ ವಿಷಯ ಕೇಳಿ ಬಹಳ ಸಂತೋಷ ವಾಯಿತು.
  
  ಒಂದು ಸಂಶಯ,
  ಶ್ರೀಪಾದರಾಜರು ಎಂಬ ಹೆಸರು ಶ್ರೀ ರಘುನಾಥತೀರ್ಥ ರಿಂದ ಎಂಬ ವಾದವೂ ಇದೆಯೆಲ್ಲ, ಇದೂ ಸರಿಯಾ?
  
  ಪ್ರಶ್ನೆ ತಪ್ಪಿದ್ದರೆ ದಯಮಾಡಿ ಕ್ಷಮಿಸಿ🙏🏻

  Vishnudasa Nagendracharya

  ಶ್ರೀ ಶ್ರೀಪಾದರಾಜಗುರುಸಾರ್ವಭೌಮರು ಅವತರಿಸಿದ್ದು 1406 ರಲ್ಲಿ. ಸಂನ್ಯಾಸವಾದದ್ದು 1412ರಲ್ಲಿ. 
  
  ಉತ್ತರಾದಿಮಠದ ದಾಖಲೆಗಳ ಪ್ರಕಾರವೇ ವಿದ್ಯಾನಿಧಿಗಳು ವಿಷ್ಣುಶಾಸ್ತ್ರಿ ಎಂಬ ಅದ್ವೈತಿಗೆ ಸಂನ್ಯಾಸ ನೀಡಿ ಅವರನ್ನು ರಘುನಾಥತೀರ್ಥರು ಎಂದು ಮಾಡಿದ್ದು 1444ರಲ್ಲಿ, ಮತ್ತೊಬ್ಬರ ಪ್ರಕಾರ 1448ರಲ್ಲಿ. 
  
  ಶ್ರೀಮದಾಚಾರ್ಯರ ಕಾಲದಿಂದ ಶ್ರೇಷ್ಠ ವೈಷ್ಣವಧರ್ಮವನ್ನು ಆಚರಿಸಿಕೊಂಡು ಬರುತ್ತಿದ್ದ ಉತ್ತಮೋತ್ತಮ ಷಾಷ್ಟೀಕಕುಲದಲ್ಲಿ ಜನಿಸಿ, 
  
  ಬಾಲ್ಯದಲ್ಲಿಯೇ ಶ್ರೀ ಸ್ವರ್ಣವರ್ಣತೀರ್ಥರ ಕಾರುಣ್ಯಕ್ಕೆ ಪಾತ್ರರಾಗಿ, ಅವರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ, ಆ ಮಹಾಗುರುಗಳಿಂದಲೇ ನಾಲ್ಕೂ ವೇದಗಳ ಉಪದೇಶವನ್ನು ಅರ್ಥಸಹಿತವಾಗಿ ಪಡೆದು, 
  
  ಇಡಿಯ ಭರತಭೂಮಂಡಲದಲ್ಲಿ ಶ್ರೀಪದ್ಮನಾಭತೀರ್ಥರಂತೆ ಸಂಚರಿಸಿ ಸಕಲ ದುರ್ವಾದಗಳ ಖಂಡನೆಯನ್ನು ಮಾಡಿ ವಿದ್ವಚ್ಚಕ್ರವರ್ತಿಗಳು, ಜ್ಞಾನಿಕುಲಭೂಷಣರು ಎಂದು ಪ್ರಸಿದ್ಧರಾಗಿದ್ದ ಮತ್ತು ವಿದ್ಯೆಯಲ್ಲಿ ಶ್ರೀಮಟ್ಟೀಕಾಕೃತ್ಪಾದರ ನೇರ ಪ್ರಶಿಷ್ಯರಾದ, ಶ್ರೀ ವಿಬುಧೇಂದ್ರತೀರ್ಥಗುರುಸಾರ್ವಭೌಮರ ಬಳಿಯಲ್ಲಿ ಅಧ್ಯಯನ ಮಾಡಿ 
  
  ಜ್ಞಾನಮೇರುಗಳಾಗಿದ್ದ ಶ್ರೀ ಲಕ್ಷ್ಮೀನಾರಾಯಣತೀರ್ಥ ಶ್ರೀಪಾದಂಗಳವರಿಗೆ
  
  ಅವರ ಸಂನ್ಯಾಸವಾದ ನಂತರದ ನಾಲ್ಕನೆಯ ದಶಕದಲ್ಲಿ ಯಾರಿಗೆ ಸಂನ್ಯಾಸವಾಗಿದೆಯೋ, 
  
  ಸಂನ್ಯಾಸವಾಗುವವರೆಗೆ ಯಾರು ಅದ್ವೈತವನ್ನು ಅನುಸರಿಸುತ್ತಿದ್ದರೋ ಅಂತಹ ರಘುನಾಥತೀರ್ಥರು, 
  
  ಯಾರು ಬರೆದ ಚರಮಶ್ಲೋಕವೂ ಸಹ ತಪ್ಪಿನಿಂದ ತುಂಬಿದೆ ಎಂದು ಅವರ ಮಠದವರೇ ಹೇಳುತ್ತಾರೆಯೋ 
  (ವಿದ್ಯಾನಿಧಿಗಳು 68ವರ್ಷ ಪೂಜೆ ಮಾಡಿದರು ಎಂದು ರಘುನಾಥತೀರ್ಥರು ಹೇಳುತ್ತಾರೆ, ಉತ್ತರಾದಿಮಠದವರೇ ಆ ಮಾತನ್ನು ತಿರಸ್ಕರಿಸುತ್ತಾರೆ, ಒಪ್ಪುವದಿಲ್ಲ)
  ಅಂತಹವರು ಶ್ರೀಪಾದರಾಜರು ಎಂದು ಬಿರುದು ನೀಡಿದರು ಎಂದು ಹೇಳುವದು ಹಾಸ್ಯಾಸ್ಪದವಲ್ಲವೇ? 
  
  ಇನ್ನು ಅವರು ಬರೆದುಕೊಂಡಿರುವ ಪುಸ್ತಕಗಳಲ್ಲಿ ಲಕ್ಷ್ಮೀನಾರಾಯಣತೀರ್ಥರು ಬಾಲಕರಾಗಿದ್ದಾಗ ರಘುನಾಥತೀರ್ಥರ ಬಳಿಯಲ್ಲಿ ಪರೀಕ್ಷೆ ನೀಡಿದರು ಎಂದು ಬರೆದುಕೊಂಡಿದ್ದಾರೆ. 
  
  ಅದ್ವೈತಿಗಳಾಗಿದ್ದ ವಿಷ್ಣುಶಾಸ್ತ್ರಿಗಳು ರಘುನಾಥತೀರ್ಥರಾಗಿ ಬದಲಾದದ್ದೇ 1444 ರಲ್ಲಿ, ಆಗ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರಿಗೆ 40 ರ ವಯಸ್ಸು ದಾಟಿತ್ತು. ಅವರು ಬಾಲಕರೇ? ಇದಕ್ಕಿಂತ ದೊಡ್ಡ ಸುಳ್ಳು ಬೇಕೇ?
  
  ಇನ್ನು ಅದೊಂದೇ ಮೂಲಮಠ ಎನ್ನುವದು ಅವರ ಸ್ವಗೋಷ್ಠೀನಿಷ್ಠಪ್ರಲಾಪ ಎನ್ನುವದು ಸಕಲ ಸಜ್ಜನರಿಗೂ ತಿಳಿದಿರುವ ವಿಷಯ. ಹೀಗಾಗಿ ಅವರು ಮೂಲಮಠದಲ್ಲಿ ಕುಳಿತಿದ್ದರಿಂದ ಬಿರುದು ನೀಡಿದರು ಎನ್ನುವದು ಹುಟ್ಟಲಿಕ್ಕಿಂತ ಮುಂಚೆಯೇ ಮೃತವಾದ ಮಾತು. 
  
 • Sowmya,Bangalore

  7:10 PM , 22/06/2021

  🙏🙏🙏
 • Vikram Shenoy,Doha

  12:50 AM, 26/06/2019

  ಅತೀ ಉತ್ತಮ. ಆಚಾರ್ಯರಿಗೆ ಹೃದ್ ಪೂರ್ವಕ ಅಭಿನಂದನೆಗಳು..
 • Shantha.raghothamachar,Bangalore

  10:01 AM, 03/09/2017

  ಅಪೂರ್ವ ವಿಷಯ, ಅದ್ಬುತ ಮಂಡನೆ. ನಮಸ್ಕಾರ ಗಳು.
 • P N Deshpande,Bangalore

  8:06 PM , 07/06/2017

  W0rth listing