03/06/2017
ಶ್ರೀ ಶ್ರೀಪಾದರಾಜ-ಪಂಚರತ್ನಮಾಲಿಕಾ-ಸ್ತೋತ್ರಮ್ — 03/08 ಶ್ರೀ ಪದ್ಮನಾಭತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಾದ ಶ್ರೀ ಲಕ್ಷ್ಮೀಧರತೀರ್ಥರಿಗೆ ಆಚಾರ್ಯಕರಾರ್ಚಿತವಾದ ಒಂದೂ ಪ್ರತಿಮೆಯನ್ನೂ ನೀಡಲಿಲ್ಲವೆಂದೂ, ಶ್ರೀಪಾದರಾಜ ಮಠದಲ್ಲಿ ಯಾವುದೂ ಆಚಾರ್ಯಕರಾರ್ಚಿತ ಪ್ರತಿಮೆ ಇಲ್ಲವೆಂದೂ, ತಾವೇ ದೊಡ್ಡವರು ಎಂಬ ಭ್ರಾಂತಿಯಲ್ಲಿರುವ ಕೆಲವರು ತಮ್ಮ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಸುಳ್ಳನ್ನೇ ಪರಂಪರೆಯಾಗುಳ್ಳ ಈ ಜನರಿಗೆ ಶ್ರೀ ವಾದಿರಾಜಗುರುಸಾರ್ವಭೌಮರು ಉತ್ತರ ನೀಡಿದ್ದಾರೆ. ಗೋಪೀನಾಥಪ್ರತಿಮೆ ಕೇವಲ ಆಚಾರ್ಯಕರಾರ್ಚಿತವಲ್ಲ, ಶ್ರೀ ವೇದವ್ಯಾಸದೇವರಿಂದಲೇ ನೀಡಲ್ಪಟ್ಟಿದ್ದು ಎಂಬ ಐತಿಹಾಸಿಕ ನಿರ್ಣಯವನ್ನು ಶ್ರೀ ರಾಜರು ನೀಡಿದ್ದಾರೆ. ಅದರ ವಿವರಣೆ ಮತ್ತು ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಪೂಜಾವೈಭವದ ಚಿತ್ರಣ ಈ ಉಪನ್ಯಾಸದಲ್ಲಿದೆ. “ಪೂಜಿತಶ್ರೀಸಹಾಯಮ್” ಎಂಬ ಚಂದ್ರಿಕಾಚಾರ್ಯರ ವಚನದ ಅರ್ಥಾನುಸಂಧಾನರೂಪವಾಗಿ.
Play Time: 40:59
Size: 7.12 MB