Upanyasa - VNU467

07/08 ಶ್ರೀಪಾದರಾಜರ ಯೋಗಸಾಮರ್ಥ್ಯ

ಧರ್ಮ ಅಧರ್ಮಗಳು ಯಾವುವು ಎಂಬ ನಿರ್ಣಯ ಮೂರು ಸ್ತರದಲ್ಲಾಗುತ್ತದೆ. 

1. ವೇದಗಳು ವಿಧಿಸುವದು ಧರ್ಮ ನಿಷೇಧಿಸುವದು ಅಧರ್ಮ

2. ವೇದಗಳು ನಿಷೇಧ ಮಾಡಿದ್ದರೂ ಸಜ್ಜನರಿಗೆ ಉಪಕಾರಿಯಾದದ್ದು ಧರ್ಮ

3. ಪರಮಾತ್ಮನಿಗೆ ಪ್ರಿಯವಾದದ್ದು ಧರ್ಮ, ಅಪ್ರಿಯವಾದದ್ದು ಅಧರ್ಮ. 

ಅಣ್ಣನಿಗೆ ಮದುವೆಯಾಗದೇ ಇದ್ದಾಗ ತಮ್ಮ ಮದುವೆ ಮಾಡಿಕೊಳ್ಳುವದು ಅಧರ್ಮ. ಆದರೆ, ಸಾಕ್ಷಾದ್ ವೇದವ್ಯಾಸದೇವರೇ ಹೇಳಿದ ಕಾರಣಕ್ಕೆ ಭೀಮಸೇನದೇವರು ಹಿಡಿಂಬೆಯನ್ನು ಮದುವೆಯಾದದ್ದು ಧರ್ಮವೇ. ಅಧರ್ಮವಲ್ಲ. ಕಾರಣ ಅದು ಭಗವಂತನಿಗೆ ಪ್ರಿಯ. ಹಾಗೆ, ಶ್ರೀಪಾದರಾಜರು ರಾಜವೈಭವವನ್ನು ಅನುಭವಿಸುತ್ತಿದ್ದದ್ದು ಪರಮಾತ್ಮನಿಗೆ ಪ್ರಿಯ ಎಂಬ ಕಾರಣಕ್ಕೆ ಅದು ಮಹತ್ತರ ಧರ್ಮವೇ ಹೊರತು ಅಧರ್ಮವಲ್ಲ ಎಂಬ ಉತ್ತರವನ್ನು ಹಿಂದಿನ ಉಪನ್ಯಾಸದಲ್ಲಿ ಪಡೆದುಕೊಂಡೆವು. ಆದರೆ, ಅದು ದೇವರಿಗೆ ಪ್ರಿಯ ಎಂದು ನಿರ್ಣಯಿಸುವದು ಹೇಗೆ, ಯಾರೋ ಏನೋ ಅಧರ್ಮ ಮಾಡಿ ಅದು ದೇವರಿಗೆ ಪ್ರಿಯ ಎಂದು ಹೇಳಬಹುದಲ್ಲವೇ ಎಂಬ ಪ್ರಶ್ನೆಗೆ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ವಿಜಯೀಂದ್ರಗುರುರಾಜರು ಮತ್ತು ಶ್ರೀ ಶ್ರೀನಿಧಿತೀರ್ಥಶ್ರೀಪಾದಂಗಳವರು ನೀಡಿರುವ ಉತ್ತರಗಳ ಸಂಗ್ರಹ ಇಲ್ಲಿದೆ. 

ಶ್ರೀಪಾದರಾಜರ ಪರಮಾದ್ಭುತ ಯೋಗಸಾಮರ್ಥ್ಯದ ಪ್ರತಿಪಾದನೆಯೊಂದಿಗೆ. 

Play Time: 41:46

Size: 7.25 MB


Download Upanyasa Share to facebook View Comments
7633 Views

Comments

(You can only view comments here. If you want to write a comment please download the app.)
 • savitri,Auckland

  9:08 AM , 12/06/2022

  🙏👏
 • Shantha.raghothamachar,Bangalore

  2:05 PM , 05/09/2017

  ಇಡುತ್ತಿದ್ದರು. ನಾನು ಆ ಕ್ರಮವನ್ನೇ ಅನುಸರಿಸುತ್ತೇನೆ. ಅಡಿಗೆ ನೈವೇದ್ಯ ಊಟವಾಗುವವರೆಗೆ ಯಾವ ವಿಘ್ನಗಳು ಬರುವುದಿಲ್ಲ ವೆಂಬ ವಿಶ್ವಾಸ ವಿದೆ.ನಮಸ್ಕಾರ ಗಳು.
 • Shantha.raghothamachar,Bangalore

  2:00 PM , 05/09/2017

  ನನ್ನ ಅಜ್ಜಿ, ಅಮ್ಮ ಒಲೆ ಮೇಲೆ ಪಾತ್ರೆ ಇಡುವುದಕ್ಕೆ ಮುನ್ನ ಶ್ರೀ ಪಾದರಾಜರ ಸ್ಮರಣೆ ಮಾಡಿ
 • H. Suvarna kulkarni,Bangalore

  12:00 AM, 09/06/2017

  ಮನಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು
 • Jayashree karunakar,Bangalore

  2:59 PM , 08/06/2017

  ಮೂಕರಾಗಿ ಬಿಡುತ್ತೇವೆ ಗುರುಗಳ ಮಹಿಮೆಯನ್ನು ಕೇಳಿ.ನಮಗೆ ನಮ್ಮ ಗುರುಗಳಾದ ಶ್ರೀ ವಿಷ್ಣುದಾಸ ನಾಗೇಂದ್ರ ಆಚಾಯ೯ರ ಕೃಪೆಯಿಂದ ನಾವು ನಿತ್ಯವು ಭಗವಂತನ ಮಹಿಮೆಯನ್ನು ಭಕ್ತಿಯಿಂದ ಕೇಳುವ ಸೌಭಾಗ್ಯ ನಮ್ಮದಾಗಲಿ ಎಂದು ವಿನಮ್ರ ಪ್ರಾಥ೯ನೆ.