Upanyasa - VNU469

01/10 ಅಂಭೃಣೀಶಬ್ದದ ಚರ್ಚೆ

ಅಂಭೃಣಿ, ಅಂಭ್ರಣಿ, ಆಂಭ್ರಣಿ ಶಬ್ದಗಳು ತಪ್ಪುಶಬ್ದಗಳೆಂದೂ, ಅಂಭ್ರಿಣೀ ಎಂಬ ಶಬ್ದವೇ ಸರಿಯಾದ ಶಬ್ದವೆಂದೂ ಬನ್ನಂಜೆ ತನ್ನ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಅಂಭ್ರಿಣೀ ಎಂಬ ಶಬ್ದವಿದೆ ಎನ್ನುವದಕ್ಕೆಯಾವ ಆಧಾರವೂ ಇಲ್ಲ ಮತ್ತು ಬನ್ನಂಜೆ ಹೇಳುವ ಅರ್ಥವೂ ಸಹ ವ್ಯಾಕರಣಕ್ಕೆ ವಿರುದ್ಧ ಎಂದು ಇಲ್ಲಿ ಪ್ರತಿಪಾದಿಸಿ ಶ್ರೀವಾದಿರಾಜಗುರುಸಾರ್ವಭೌಮರೇ ಮುಂತಾದ ಮಹನೀಯರು ತಿಳಿಸಿರುವ ಅಂಭೃಣೀ ಎಂಬ ಶಬ್ದದ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ. 

ಇದರ ಲೇಖನ — VNA247

Play Time: 33:16

Size: 5.72 MB


Download Upanyasa Share to facebook View Comments
7642 Views

Comments

(You can only view comments here. If you want to write a comment please download the app.)
 • Ramachar Joshi,Hospet

  1:11 AM , 01/01/2020

  ಗುರುಗಳಿಗೆ ಹೊಸ ವರ್ಷದ ಶುಭಾಶಯಗಳು. ಅದರೂ ನಮಗೆ ಹೊಸ ವಲ್ಳಾ ಲೋಕಾ ರೂಢಿ.
 • prema raghavendra,coimbatore

  2:56 PM , 19/10/2017

  Anantha namaskara! Danyavada!
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:43 AM , 14/06/2017

  Please download once again sir @anil kumar
 • S ANIL KUMAR,BENGALURU

  8:49 AM , 14/06/2017

  Guru bhyo namah, this upanyasa is not complete, it stops abruptly at the VISHWA word stage. Pl advise / upload complete upanyasa. Thanks.
 • Anusha Achyut Mirji,Bangalore

  5:34 PM , 13/06/2017

  Ambhrini sooktada upanyasa mattu lekhanagalu atyadbhutavagive
 • Abhiram Udupa,Bangalore

  10:14 PM, 12/06/2017

  @ Jayaramachar Benakal
  
  Sri Acharyaru has never blamed or done ninda of Sri Bannanje Govindacharya here. 
  
  it is just a review of BG thoughts and presentation of pure knowledge. 
  
  Sri Acharyaru is doing a great job by converting blind followers into deep thinkers.
 • Abhiram Udupa,Bangalore

  10:10 PM, 12/06/2017

  @
 • ಜಯರಾಮಾಚಾರ್ಯ ಬೆಣಕಲ್,ಬೆಂಗಳೂರು.

  2:50 PM , 12/06/2017

  ಅಂಭ್ರಣಿಸೂಕ್ತಕ್ಕಿಂತಹೆಚ್ಚಾಗಿಬನ್ನಂಜೆ ಸೂಕ್ತವೇ ಜಾಸ್ತಿ ಆಯಿತು ಅನಿಸುತ್ತದೆ

  Vishnudasa Nagendracharya

  ನಾವು ಯಾವುದೇ ತತ್ವವನ್ನು ತಿಳಿಯುವಾಗಲೂ ಪರಿಸ್ಪಷ್ಟವಾಗಿ ನಿಸ್ಸಂದಿಗ್ಧವಾಗಿ ತಿಳಿಯಬೇಕು. 
  
  ಅಂಭೃಣೀಸೂಕ್ತದ ಕುರಿತಾಗಿ ಅದರ ಹೆಸರಿನಲ್ಲಿಯೇ ವಿವಾದವಿದೆ. ಹೆಸರನ್ನೇ ನಾವು ಸರಿಯಾಗಿ ತಿಳಿಯದೇ ಸೂಕ್ತವನ್ನೇನು ಸರಿಯಾಗಿ ತಿಳಿಯುತ್ತೇವೆ. 
  
  ವಿಶ್ವನಂದಿನಿಯಲ್ಲಿ ಪ್ರತಿಯೊಂದು ವಿಷಯದ ಕುರಿತ ನಿಷ್ಫಕ್ಷಪಾತ ಮತ್ತು ನಿಸ್ಸಂದಿಗ್ಧ ತತ್ವಗಳನ್ನು (ನನಗೆ ತಿಳಿದ ಮಟ್ಟಗೆ) ನೀಡುವದು ನನ್ನ ಕರ್ತವ್ಯ. 
  
  ಶ್ರೀಮದಾಚಾರ್ಯರು ಮಹಾಭಾರತದ ಅರ್ಥ ನಿರ್ಣಯ ಮಾಡುವದಕ್ಕಿಂತ ಮುಂಚೆ ಮಹಾಭಾರತ ಎಂಬ ಶಬ್ದದರ ಅರ್ಥನಿರ್ಣಯವನ್ನು ಮಾಡುತ್ತಾರೆ. 
  
  ಬ್ರಹ್ಮಸೂತ್ರಗಳಿಗೆ ಅರ್ಥ ಹೇಳುವ ಮುನ್ನ ಬ್ರಹ್ಮಸೂತ್ರಗಳ ಪರಿಶುದ್ಧ ಪಾಠವನ್ನು ನಮಗೆ ನೀಡುತ್ತಾರೆ. 
  
  ನಿಮಗೆ ಇಷ್ಟು ವಿಸ್ತಾರವಾಗಿ ತಿಳಿಯುವ ಆವಶ್ಯಕತೆಯಿಲ್ಲ ಎಂದಲ್ಲಿ ದಯವಿಟ್ಟು ದೂರ ಇರಬೇಕು ಎಂದು ವಿನಂತಿಸುತ್ತೇನೆ. 
  
  ಮತ್ತು ಬನ್ನಂಜೆಸೂಕ್ತ ಎಂದು ಶ್ರೀಮದಂಭೃಣೀಸೂಕ್ತಕ್ಕೆ ಸರಿಸಮಾನವಾಗಿ ಬನ್ನಂಜೆಯ ಮಾತುಗಳನ್ನು ಚಿಂತನೆ ಮಾಡುವ ಹಂಬಲ ನಮಗಿಲ್ಲ. 
  
  
  
 • mudigal sreenath,bangalore

  10:41 AM, 12/06/2017

  haresreenivasa savivaranaathmakavagi ee sukthada arthavannu thilisida acharyarige namaskaragalu