ಅಂಭೃಣೀ ಸೂಕ್ತದ ದ್ರಷ್ಟಾರರಾದ ಋಷಿ ಯಾರು, ಪ್ರತಿಪಾದ್ಯದೇವತೆ ಯಾರು, ಛಂದಸ್ಸುಗಳು ಯಾವುವು ಮತ್ತು ಅಂಭೃಣೀ ಸೂಕ್ತದ ಪಠಣ-ಪಾಠಣ ಶ್ರವಣ ಅಧ್ಯಯನ ಅಧ್ಯಾಪನಗಳಿಂದ ದೊರೆಯುವ ಫಲಗಳ ಕುರಿತ ವಿವರಣೆ ಇಲ್ಲಿದೆ.
ಶಂಖಕ್ಕೆ ಅಭಿಷೇಕ ಮಾಡುವಾಗ ಶ್ರೀಸೂಕ್ತವನ್ನು ಪಠಿಸುವದು ಪದ್ಧತಿ.
Dr.Guruprasad,Mussoorie
2:28 PM , 13/06/2017
Shri Gurubhyo namaha
Should we change from
Aatma devata to Shri devata??
Vishnudasa Nagendracharya
ಆತ್ಮ ಎನ್ನುವ ಶಬ್ದಕ್ಕೆ ತಾನು ಎಂದೂ ಅರ್ಥವಿರುವದರಿಂದ ನಾವು ಆತ್ಮಾ ದೇವತಾ ಎಂದು ಪಠಿಸಬಹುದು. ಸೂಕ್ತದ ಋಷಿಯಾದ ಮಹಾಲಕ್ಷ್ಮೀದೇವಿಯರು ತನ್ನನ್ನು ತಾನೇ ಸ್ತೋತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಅದರ ಅರ್ಥವಾಗುತ್ತದೆ. ಉಪನ್ಯಾಸದಲ್ಲಿ ವಿವರಿಸಿದ್ದೇನೆ.
ನಮಗೆ ಪರಿಸ್ಪಷ್ಟವಾಗಿ ಅರ್ಥವಾಗಲು ಶ್ರೀರ್ದೇವತಾ ಎಂದು ಹೇಳಿದರೆ ತಪ್ಪೇನಿಲ್ಲ.