Upanyasa - VNU471

03/10 ಮಹಾಲಕ್ಷ್ಮೀ ವೈಭವ

ಸಮಸ್ತ ದೇವತಾಸಮುದಾಯದಿಂದ ಸಂಸೇವ್ಯಮಾನರಾದವರು ಶ್ರೀ ಮಹಾಲಕ್ಷ್ಮೀದೇವಿಯರು, ಮತ್ತು ಸಮಸ್ತ ದೇವತೆಗಳಿಗೂ ವಿಜಯಪ್ರದರು ಎಂಬ ಅವರ ಮಹಾಮಹಾತ್ಮ್ಯದ ಚಿಂತನೆ ಇಲ್ಲಿದೆ. 

ಇಲ್ಲಿ ಹೇಳಿರುವ ಚಿಂತನೆಯನ್ನು ನಿರಂತರ ಮಾಡುವದರಿಂದ ತನ್ನೆಲ್ಲ ಕಾರ್ಯದಲ್ಲಿ ಶ್ರೇಷ್ಠ ವಿಜಯವನ್ನು ಮತ್ತು ತನ್ನವರ ಮಧ್ಯದಲ್ಲಿ ಮುಖ್ಯಸ್ಥನಾಗುವ ಫಲವನ್ನು ಪಡೆಯುತ್ತೇವೆ, ಶ್ರೀಹರಿಯ ಕಾರುಣ್ಯವನ್ನು ಪಡೆಯುತ್ತೇವೆ. 

ಅಂಭೃಣೀಸೂಕ್ತದ ಮೊದಲನೆಯ ಋಕ್ಕಿನ ಮೊದಲ ಅರ್ಧರ್ಚದ ಅರ್ಥಾನುಸಂಧಾನ.

Play Time: 45 Minutes

Size: 8.45 MB


Download Upanyasa Share to facebook View Comments
4280 Views

Comments

(You can only view comments here. If you want to write a comment please download the app.)
 • Ashok Prabhanjana,Bangalore

  10:34 PM, 08/10/2017

  ಗುರುಗಳೇ, ಮಹಾಲಕ್ಶ್ಮಿಯು ಬ್ರಹ್ಮ ವಾಯುಗಳಿಗಿಂತ ಎಷ್ಟು ಗುಣ ಅಧಿಕಳು? ಕೆಲವರು ಕೋಟಿ ಗುಣ ಅಧಿಕಳೆಂದು ಇನ್ನು ಕೆಲವರು ಅನಂತ ಗುಣ ಅಧಿಕಳೆಂದು ಹೇಳುತ್ತಾರೆ, ಯಾವುದು ಸರಿ? ರುಜುಗಳಿಗಿಂತ ಆ ಜಗದಂಬಿಕೆ  ಎಷ್ಟು ಎತ್ತರದಲ್ಲಿ ಇರುವಳು? ಎನ್ನುವುದನ್ನು ದಯವಿಟ್ಟು ತಿಳಿಸಿ ಕೊಡಿ ಗುರುಗಳೇ -( )-

  Vishnudasa Nagendracharya

  ಎರಡೂ ಸರಿ. 
  
  ಋಜುಗಳಲ್ಲಿರುವ ಆನಂದ-ಶಕ್ತಿ ಮುಂತಾದ ಗುಣಗಳಿಂದ ಕೋಟಿಗುಣ ಅಧಿಕವಾದ ಆನಂದ-ಶಕ್ತಿ ಮುಂತಾದವು ಲಕ್ಷ್ಮೀದೇವಿಯರಲ್ಲಿದೆ. 
  
  ಋಜುಗಳಲ್ಲಿರುವ ಜ್ಞಾನಕ್ಕಿಂತ ಅನಂತಪಟ್ಟು ಮಿಗಿಲಾದ ಜ್ಞಾನ ಲಕ್ಷ್ಮೀದೇವಿಗಿದೆ. 
  
  ಇನ್ನು ಲೋಕದಲ್ಲಿ ಪ್ರಸಿದ್ಧವೇ ಅಲ್ಲದ, ನಮಗ್ಯಾರಿಗೂ ತಿಳಿಯದ ಜ್ಞಾನ ಆನಂದ ಶಕ್ತ್ಯಾದಿ ಗುಣಗಳಿವೆ. ಇವನ್ನು ವಿಜಾತೀಯ ಗುಣಗಳು ಎನ್ನುತ್ತಾರೆ. ಈ ವಿಜಾತೀಯ ಜ್ಞಾನ-ಆನಂದ-ಶಕ್ತ್ಯಾದಿ ಸಮಸ್ತಗುಣಗಳೂ ಬ್ರಹ್ಮದೇವರಲ್ಲಿರುವ ಸಜಾತೀಯಗುಣಗಳ ಸಂಖ್ಯೆಗಿಂತ ಅನಂತ ಪಟ್ಟು ಮಿಗಿಲಾಗಿದೆ. 
  
  ತುಂಬ ಸೂಕ್ಷ್ಮವಾದ ವಿಷಯಗಳಿವು. ಸಂಸ್ಕೃತಸುರಭಿಯ ನಂತರ ಆರಂಭವಾಗುವ ಸ್ವಾಧ್ಯಾಯ ಸುರಭಿಯಲ್ಲಿ ಈ ರೀತಿಯ ಗಂಭೀರ ಮತ್ತು ಸೂಕ್ಷ್ಮ ವಿಷಯಗಳ ಕುರಿತ ಪಾಠಗಳನ್ನು ನೀಡುತ್ತೇನೆ. ವಿಷಯ ಮೇಲೆ ಹೇಳಿದ್ದೇ - ಸಜಾತೀಯ ಗುಣಗಳು ಕೋಟಿ ಪಟ್ಟು ಅಧಿಕ. ಸಜಾತೀಯದಲ್ಲಿಯೂ ಜ್ಞಾನ ಅನಂತ ಪಟ್ಟು ಅಧಿಕ. ವಿಜಾತೀಯಗುಣಗಳು ಅನಂತ ಪಟ್ಟು ಅಧಿಕ. ಆದರೆ ಇವುಗಳನ್ನು ಪೂರ್ಣವಾಗಿ ಅರ್ಥ ಮಾಡಿಸಲು ಸಾಕಷ್ಟು ವಿಸ್ತಾರವಾಗಿ ವಿವರಿಸಬೇಕು. 
 • satish,Bangalore

  10:23 PM, 09/08/2017

  "ಅಹಂ ಚರಾಮಿ" , ನಾನು ಚರಿಸುತ್ತೇನೆ, ಎಂದಾಗ "ಎಲ್ಲಿಗೆ ಹೋಗುತ್ತಿದ್ದಾರೆ ?" ಎಂಬ ಪ್ರಶ್ನೆ ಬರುತ್ತದೆ. ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಎಂಬುದನ್ನು ದಯವಿಟ್ಟು ತಿಳಿಸಿ.
  
  ಎಂದಿನಂತೆ ಅದ್ಭುತ ಉಪನ್ಯಾಸ. ತುಂಬಾ ಧನ್ಯವಾದಗಳು🙏

  Vishnudasa Nagendracharya

  ವಿಶ್ವವೆಲ್ಲ ಸಂಚರಿಸುತ್ತೇನೆ ಎಂದರ್ಥ. 
  
  ಅಹಂ ಗಚ್ಛಾಮಿ ಎಂದರೆ ನಾನು ಹೋಗುತ್ತೇನೆ ಎಂದರ್ಥ. ಆಗ ಎಲ್ಲಿಗೆ ಹೋಗುತ್ತಾನೆ ಎಂಬ ಪ್ರಶ್ನೆ ಬರುತ್ತದೆ. ಆದರೆ ಇಲ್ಲಿರುವದು ಅಹಂ ಚರಾಮಿ ಎಂದು. ಸಂಚರಿಸುತ್ತೇನೆ ಎಂದರ್ಥ. ಈಗ ಪ್ರಶ್ನೆ ಎಲ್ಲಿ ಸಂಚರಿಸುತ್ತಾರೆ ಎಂದು. ವಿಶ್ವವೆಲ್ಲ ಸಂಚರಿಸುತ್ತಾರೆ ಎಂದರ್ಥ. 
  
  
 • ಪ್ರಮೋದ,ಬೆಂಗಳೂರು

  11:40 AM, 14/06/2017

  Ardharcha endharenu? Aacharyare
  Dhayamaadi thilisi🙏🙏🙏

  Vishnudasa Nagendracharya

  ವೇದಗಳಲ್ಲಿನ ಶ್ಲೋಕಕ್ಕೆ ಋಕ್ ಎನ್ನುತ್ತಾರೆ. 
  
  ಆ ಋಕ್ ನ ಅರ್ಧಭಾಗಕ್ಕೆ ಅರ್ಧರ್ಚ ಎನ್ನುತ್ತಾರೆ. 
  
  ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ 
  ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ ದಶಾಂಗುಲಮ್ ಎನ್ನುವದು ಒಂದು ಋಕ್ 
  
  ಇದರಲ್ಲಿಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ ಎನ್ನವದು ಮತ್ತು ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ ದಶಾಂಗುಲಮ್ ಎನ್ನುವದು ಅರ್ಧರ್ಚಗಳು. 
  
  ಅರ್ಧಶ್ಲೋಕ ಎಂದರ್ಥ. 
 • Jayashree karunakar,Bangalore

  12:03 PM, 14/06/2017

  ಗುರುಗಳೆ ಭಗತದ್ಗೀತೆಯಲ್ಲಿ ಪರಮಾತ್ಮ ಸಕಲ ಜೀವ ಮತ್ತು ಜಡ ಪದಾ೯ಥಗಳಲ್ಲಿ ತನ್ನ ವಿಭೂತಿಯನ್ನು ತೋರಿಸಿದ್ದಾರಲ್ಲವೇ. ಆದರೆ ಇದರಲ್ಲಿ ಶ್ರಿ ಮಹಾಲಕ್ಮೀದೇವಿಯರ ಸನ್ನಿದಾನವಿರುವುದಾಗಿ ಹೇಳಿದ್ದಾರೆ.ಹಾಗದರೆ ನಾವು ಹೇಗೆ ಚಿಂತನೆ ಮಾಡಬೇಕು ದಯವಿಟ್ಟು ತಿಳಿಸಿ.

  Vishnudasa Nagendracharya

  ದೇವರು ಯಾವುದೇ ಅನುಗ್ರಹವನ್ನು ಮಾಡಿದರೂ ಲಕ್ಷ್ಮ್ಯಾದಿ ದೇವತೆಗಳ ಮುಖಾಂತರವೇ ಮಾಡುತ್ತಾನೆ. 
  
  ಸೂರ್ಯದೇವರು ಭಗವಂತನ ವಿಶೇಷವಾದ ಅನುಗ್ರಹವನ್ನು ಪಡೆದಿದ್ದಾರೆ ಎಂದರೆ ಲಕ್ಷ್ಮೀ ಪ್ರಾಣಾದಿ ದೇವತೆಗಳ ಮುಖಾಂತರವೇ ಪಡೆದಿದ್ದಾರೆ ಎಂದರ್ಥ. 
 • Rushasri,Chennai

  12:10 PM, 14/06/2017

  Tumba channagide achare.ananta koti dhanyavadagalu