Upanyasa - VNU473

05/10 ಲಕ್ಷ್ಮೀದೇವಿ ಯಾರಿಗೆ ಸಂಪತ್ತನ್ನು ನೀಡುತ್ತಾರೆ?

ಅಂಭೃಣೀಸೂಕ್ತದ ಎರಡನೆಯ ಋಕ್ಕಿನ ಉತ್ತರಾರ್ಧದ ಅರ್ಥಾನುಸಂಧಾನ

ಲಕ್ಷ್ಮೀದೇವಿಯ ಅನುಗ್ರಹ ನಮ್ಮ ಮೇಲಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ತಾನು ಯಾರ ಮೇಲೆ ಅನುಗ್ರಹ ಮಾಡುತ್ತೇನೆ ಎಂದು ಸ್ವಯಂ ಮಹಾಲಕ್ಷ್ಮೀದೇವಿಯೇ ಹೇಳಿರುವ ಮಾತಿನ ವಿವರಣೆ ಇಲ್ಲಿದೆ. 

ಮಹಾಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯುತ್ತಾರೆ. ನನ್ನ ಬಳಿ ಸಂಪತ್ತು ಯಾಕಾಗಿ ಇದೆ ಎನ್ನುವದಕ್ಕೆ ಶ್ರೀ ಮಹಾಲಕ್ಷ್ಮೀದೇವಿಯರು ನೀಡಿರುವ ಉತ್ತರದ ವಿವರಣೆ ಹಾಗೂ 

ಸಂಸಾರದ ತಾಪದಿಂದ ಬಸವಳಿದು ಹೋದ ನಮಗೆ ಸಾಧನೋತ್ಸಾಹವನ್ನು ಕರುಣಿಸುವ ದಿವ್ಯ ಅರ್ಥಗಳನ್ನು ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಇಲ್ಲಿನ ಸುಪ್ರಾವ್ಯೇ ಮುಂತಾದ ಶಬ್ದಗಳಿಗೆ ಹೇಳಿದ್ದಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

Play Time: 45:20

Size: 7.78 MB


Download Upanyasa Share to facebook View Comments
5903 Views

Comments

(You can only view comments here. If you want to write a comment please download the app.)
 • Chethan.G,Bengaluru

  1:48 PM , 09/08/2022

  ಆಚಾರ್ಯರೇ ಮಹಾಲಕ್ಷ್ಮೀ ದೇವಿಯನ್ನು ಚಿಂತಿಸದೆ ಭಗವಂತ ಒಲಿಯುವುದಿಲ್ಲ ಎಂದು ಹೇಳಿದಿರಿ, ಹಾಗಾದರೆ ಸಾಧನೆ ಮಾಡುವ ಯೋಗಿಗಳು ಸಮಾಧಿ ಸ್ಥಿತಿಯಲ್ಲಿ, ಭಗವಂತನನ್ನು ಲಕ್ಷ್ಮೀ ಸಮೇತನಾಗಿ ಚಿಂತಿಸಿ ಧ್ಯಾನ ಮಾಡುತ್ತಾರೆಯೇ..? ಅಥವಾ ನಾರದರ ಕಥೆಯಲ್ಲಿ ವರ್ಣಿಸಲ್ಪಟ್ಟ ಚಿದಾನಂದ ಭಗವದ್ರೂಪದ ಚಿಂತನೆ ಮಾಡುವರೇ..?

  Vishnudasa Nagendracharya

  ಭಗವಂತನ ಯಾವ ರೂಪವೂ ಲಕ್ಷ್ಮೀರಹಿತವಾಗಿ ಇಲ್ಲ. ನಾರದರು ವರ್ಣಿಸಿದ ಚಿದಾನಂದರೂಪವೂ ಲಕ್ಷ್ಮೀಸಮೇತವೇ. ವಿವಾದವಿಲ್ಲ. 
  
  ಬ್ರಹ್ಮದೇವರಿಂದ ಆರಂಭಿಸಿ, ತೃಣದವರೆಗಿನ ದೇವತೆ-ಋಷಿ-ಪಿತೃ-ಚಕ್ರವರ್ತಿ-ಮನುಷ್ಯೋತ್ತಮ ಎಂಬ ವಿಭಾಗವುಳ್ಳ ಸಮಸ್ತ ಸಜ್ಜನರೂ ಲಕ್ಷ್ಮೀಸಮೇತನಾದ ಭಗವಂತನನ್ನೇ ಉಪಾಸನೆ ಮಾಡುವದು. ಆ ರೀತಿ ಉಪಾಸನೆ ಮಾಡಿದರೆ ಮಾತ್ರ ಮೋಕ್ಷ. ಪ್ರಕೃತಿಯ ಬಂಧ ಕಳೆಯುವದೇ ಲಕ್ಷ್ಮೀನಾರಾಯಣರ ಚಿಂತನೆಯಿಂದ. 
  
 • Chethan.G,Bengaluru

  1:48 PM , 09/08/2022

  ಆಚಾರ್ಯರೇ ಮಹಾಲಕ್ಷ್ಮೀ ದೇವಿಯನ್ನು ಚಿಂತಿಸದೆ ಭಗವಂತ ಒಲಿಯುವುದಿಲ್ಲ ಎಂದು ಹೇಳಿದಿರಿ, ಹಾಗಾದರೆ ಸಾಧನೆ ಮಾಡುವ ಯೋಗಿಗಳು ಸಮಾಧಿ ಸ್ಥಿತಿಯಲ್ಲಿ, ಭಗವಂತನನ್ನು ಲಕ್ಷ್ಮೀ ಸಮೇತನಾಗಿ ಚಿಂತಿಸಿ ಧ್ಯಾನ ಮಾಡುತ್ತಾರೆಯೇ..? ಅಥವಾ ನಾರದರ ಕಥೆಯಲ್ಲಿ ವರ್ಣಿಸಲ್ಪಟ್ಟ ಚಿದಾನಂದ ಭಗವದ್ರೂಪದ ಚಿಂತನೆ ಮಾಡುವರೇ..?
 • Ashok Prabhanjana,Bangalore

  4:54 PM , 20/10/2017

  ಮಹಾಲಕ್ಷ್ಮಿಯು ಕಾಲ ಕಾಲಕ್ಕೆ ಯಾವ ರೀತಿಯ jnana ಅಭಿವ್ರುಧ್ಹಿಯನ್ನು ಪರಮಾತ್ಮನ ಕುರುತು ಪಡೆಯುತ್ತಾರೆ? ಕೆಲವರು ಗುಣ ವಿಷೇಶಗಳನ್ನು ಕಾಣುತಾರೆ ಎಂದು, ಮತ್ತು ಕೆಲವರು ಕ್ರಿಯಾ ವಿಶೇಷ ಗಳನ್ನು ಮಾತ್ರ ಕಾಣುತಾರೆ ಎಂದು, ಇನ್ನೊಂದು ಪಕ್ಷ ದವರು ಅವೆರಡನೂ ಕಾಣುತಾರೆ ಎಂದು ಹೇಳುತ್ತಾರೆ. ಈ. ಮೂರರಲ್ಲಿ ಯಾವುದು ಸರಿ ದಯವಿಟ್ಟು ತಿಳಿಸಿ ಕೊಡಿ ಗುರುಗಳೇ ()
 • savitha kiran rao,dubai

  10:17 PM, 01/07/2017

  Acharyarige nanna koti koti vandanegalu.  I am blessed to hear this Paramá mangala pravachana rendered by you.  I am a layman with no basic gnana on topic of this kind. While hearing your lectures there opens a different spiritual world which takes you on a different level. Thank you so much for offering this to us.  May lakshmi Srinivasa devaru and samasta tat an human I debate gal I and our acharyaru bless allbof us in this pursuit.
 • P N Deshpande,Bangalore

  8:20 AM , 22/06/2017

  S.Namaskargalu
 • Jayashree Karunakar,Bangalore

  4:12 PM , 19/06/2017

  ಗುರುಗಳೆ ಈ ಭಾಗದ ಪ್ರಥಮ ಉಪನ್ಯಾಸದಲ್ಲಿ ಲಕ್ಷೀದೇವಿಯು ತಾನು ರುದ್ರ ವಸು ಆದಿತ್ಯ ಮಿತ್ರ ಮುಂತಾದ ದೇವತೆಯರ ಉಲ್ಲೇಖ ಮಾಡಿ ಅವರ ಜೂತೆಗೆ ಸಂಚಾರ ಮಾಡುತ್ತೇನೆ ಎಂದು ತಿಳಿಸಿ
  
  ನಂತರ ಎರಡನೆ ಉಪನ್ಯಸದಲ್ಲಿ ಮಿತ್ರ ವರುಣ ಸೋಮ ವಿಶ್ವಕಮ೯ ಮುಂತಾದ ದೇವತೆಯರ ಉಲ್ಲೇಖಮಾಡಿ ಅವರೆಲ್ಲರನ್ನು ಧಾರಣೆ ಮಾಡಿರುವುದಾಗಿ ತಿಳಿಸಿದ್ದಾರೆ.
  ಆದರೆ ಈ ಭಾಗದಲ್ಲಿ ಯೋಗ್ಯತೆಯ ಅನುಸಾರದಲ್ಲಿ ಸಂಪತ್ತನ್ನು ನಾನು ಕೂಡುತ್ತೇನೆ ಎಂದು ಹೇಳುವಾಗ ಅವರ ಪತಿಯಾದ ನಾರಾಯಣನ ಜೋತೆ ಕೂಡಿ ಕೂಡುತ್ತೇನೆ ಎಂದು ಯಾಕೆ ಉಲ್ಲೇಖ ಮಾಡಿಲ್ಲ.

  Vishnudasa Nagendracharya

  ತಮ್ಮ ಎಲ್ಲ ವಿಧವಾದ ಮಾಹಾತ್ಮ್ಯವನ್ನು ತಿಳಿಸಿ ಕಡೆಗೆ ಆ ಸರ್ವವೂ ಭಗವಂತನಿಂದಲೇ ಎಂದು ಹೇಳುತ್ತಾರೆ. 
 • Jayashree Karunakar,Bangalore

  4:18 PM , 19/06/2017

  ಹಾಗೆ ಇನ್ನೂಂದು ಪ್ರಶ್ನೆ ಗುರುಗಳೆ
  ಆರಾಧನೆ ಮತ್ತು ಉಪಾಸನೆ ಗಳ ವೆತ್ಯಾಸವೇನು
  ಸಂಕಲ್ಪ ಮತ್ತು ಅನುಸಂಧಾನ
  ಸಾಧನೆ ಮತ್ತು ಅನುಷ್ಟಾನಗಳ ವೆತ್ಯಾಸಗಳನ್ನು ದಯವಿಟ್ಟು ತಿಳಿಸಿಕೂಡಿ
 • Abhiram Udupa,Bangalore

  3:31 PM , 19/06/2017

  ondakkinta ondu adbhuta pravachanagaLu.🙏🏻🙏🏻🙏🏻
 • mangala gowri,Bangalore

  12:19 PM, 19/06/2017

  Adhbutha🙅
 • Madhukar Jorapur,Thane

  10:57 AM, 19/06/2017

  Aacharyari ge namskar. whethere shall we a
  get any audio track of Ambhruni sukta Upnyasa?

  Vishnudasa Nagendracharya

  The post in which you have commented itself is the 5th audio track of Ambhruni Sukta. 
  
  So far 5 tracks published.