Upanyasa - VNU475

ಪೇಜಾವರರು ಮತ್ತು ಇಫ್ತಾರ್ ಕೂಟ

ಸಮಗ್ರ ಹಿಂದೂಗಳ ಶ್ರದ್ಧಾಕೇಂದ್ರವಾದ ಶ್ರೀಮದುಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀ ಪೇಜಾವರ ಸ್ವಾಮಿಗಳು ಮುಸಲ್ಮಾನರಿಗೆ ಇಫ್ತಾರ್ ಕೂಟ ನೀಡಿದ್ದು ಒಬ್ಬ ಸಾಮಾನ್ಯ ಹಿಂದೂವಿನ ಮತ್ತು ಭಗವದ್ಗೀತೆಯ ದೃಷ್ಟಿಯಿಂದ ಯಾಕಾಗಿ ತಪ್ಪು ಎನ್ನುವದರ ನಿರೂಪಣೆ ಇಲ್ಲಿದೆ. ವೇದಧರ್ಮಗಳಲ್ಲಿ ವಿಶ್ವಾಸವಿಟ್ಟ ಒಬ್ಬ ಸಾಮಾನ್ಯ ಮನುಷ್ಯನಿಗೆ ಇದರಿಂದ ಯಾಕಾಗಿ ಆಘಾತವಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

Play Time: 40 Minutes

Size: 7.14 MB


Download Upanyasa Share to facebook View Comments
11780 Views

Comments

(You can only view comments here. If you want to write a comment please download the app.)
 • Samarth,Bengaluru

  10:05 PM, 24/06/2018

  Excellent👏👏🙏
 • Dps,Mysore

  6:57 AM , 08/01/2018

  ನಮಸ್ಕಾರಗಳು 
  ನೀವು   ಗೌರವ ಮತ್ತು ವಿನ ಯಗಲಿಂದ ಯಾಕೆ ಅವರ್ ಮುಂದೆ ವಿಮರ್ಶೆ ಮಾಡಬಾರದು.ಹೊರತು ಈ ರೀತಿ ಮಾಡುವದರಿಂದ ಅವರಿಗೆ ಮುಖಭಂಗವಲ್ಲವೇ??
 • satish,Bangalore

  1:47 PM , 30/07/2017

  ಆಚಾರ್ಯರಿಗೆ ಪ್ರಣಾಮಗಳು. 
  
  ವಿಷ್ಣುವು ಸರ್ವ ಶಬ್ದ ವಾಚ್ಯ ಎಂದು ತಮ್ಮ ಪ್ರವಚನಗಳಲ್ಲಿ ಕೇಳಿದ್ದೇನೆ.ಹಾಗಾದರೆ "ಅಲ್ಲಾಹು" ಎನ್ನುವುದೂ ವಿಷ್ಣುವೇ ತಾನೇ? 
  
  ಅಜ್ಞಾನದಿಂದ ಕೇಳುತ್ತಿದ್ದೇನೆ, ಕ್ಷಮಿಸಿ
  
  --ಸತೀಶ

  Vishnudasa Nagendracharya

  ಕೆಳಗಿನ ಕಾಮೆಂಟುಗಳಲ್ಲಿ ಈ ಪ್ರಶ್ನೆಗಳನ್ನು ಈಗಾಗಲೇ ಕೇಳಿದ್ದಾರೆ. ಉತ್ತರಿಸಿದ್ದೇನೆ. 
 • Raghavendra,Bengaluru

  10:14 AM, 07/07/2017

  From Whatsapp 2: ನಮ್ಮ ಅವರ ಸೌಹಾರ್ದ ವೈದಿಕಧರ್ಮದ ಸಂರಕ್ಷಣೆ ಗಾಗಿ
  
  ಇನ್ನು ಸಂಧ್ಯಾಕಾಲದ ಭೋಜನ ಅಶಾಸ್ತ್ರೀಯ ಹೌದು ಆದರೆ ಎಷ್ಟೋ ಮಠಗಳಲ್ಲಿ ಗುರುಗಳ ಆರಾಧನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಹಾಸಮಾರಾಧನೆಗಳಲ್ಲಿ ಸಂಧ್ಯಾಕಾಲದ ಭೋಜನ ಸಾಮಾನ್ಯವಾಗಿರುತ್ತದೆ ಮೇಲಾಗಿ ಅಂದು ರಾತ್ರಿ ಉಪಹಾರವಾಗಲೀ, ಊಟವಾಗಲೀ ನಡೆಯುವುದು ಮಧ್ಯರಾತ್ರಿ ಇಂತಹ ಅನೇಕ ನಮ್ಮ ತಪ್ಪುಗಳನ್ನು ನಾವು ಮೊದಲು ಸರಿಪಡಿಸಿಕೊಳ್ಳೋಣ ಸಕಾಲದಲ್ಲಿ ನಾವು ನಮಗೆ ವಿಹಿತವಾದ ಸಾಮಾನ್ಯಧರ್ಮಗಳನ್ನಾದರೂ ಪಾಲಿಸುವ ಪ್ರಯತ್ನ ಮಾಡೋಣ . ಎಲ್ಲಕ್ಕಿಂತ ಮೊದಲು ನಾವು ನಮ್ಮ ಹಿರಿಯರನ್ನು, ಗುರುಗಳನ್ನು ವಿನೀತತಮರಾಗಿ ಜಿಜ್ಞಾಸುವಾಗಿ ಅವರನ್ನು ಸಮೀಪಿಸಿ ಪ್ರಶ್ನಿಸಿ ನಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಾಮಾನ್ಯವಾದ ಸಾಧನೆಯ ಈ ಮೊದಲ ಧರ್ಮವನ್ನು ಪಾಲಿಸೋಣ 
  ಧರ್ಮಃ ಪ್ರೋಜ್ಝಿತಕೈತವಃ 
  ಕಪಟದ ನಡೆನುಡಿಗಳು ಸರ್ವಥಾ ನಮಗೆ ಹಾನಿಕಾರಕ 
  ಅದರಲ್ಲೂ ತಪಸ್ವಿಗಳವಿಷಯದಲ್ಲಿ ಎಷ್ಟು ಜಾಗ್ರತರಾಗಿದ್ದರೂ ಸಾಲದು.

  Vishnudasa Nagendracharya

  ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಲೇಬೇಕು ಇದರಲ್ಲಿ ಸಂಶಯವೇ ಇಲ್ಲ. 
  
  ಬಡಿಸುವ ಪಾತ್ರೆಯಿಂದ ತಿನ್ನುವದು, ತಿನ್ನಿಸುವದು, ಸಂಧ್ಯಾಕಾಲದಲ್ಲಿ, ಅಪರಾತ್ರಿಯಲ್ಲಿ ಉಣ್ಣುವದು ಈ ಎಲ್ಲವೂ ವಿಕೃತ ಆಚರಣೆಗಳೇ. ಧರ್ಮವಲ್ಲ. ನಾನು ಈಗಾಗಲೇ ಈ ಅಂಶವನ್ನು ಖಂಡಿಸಿಯಾಗಿದೆ. 
  
  ನಾನು ಕಪಟದಿಂದಾಗಲೀ, ಕುಹಕದಿಂದಾಗಲೀ ಯಾರನ್ನೂ ಖಂಡಿಸಿಲ್ಲ. ಖಂಡಿಸುವದೂ ಇಲ್ಲ. ಇದನ್ನು ನಾನು ನಂಬಿದ ಶ್ರೀಮನ್ ಮಧ್ವಶಾಸ್ತ್ರದ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ಕೇಳಿದ ಎಲ್ಲ ಸಜ್ಜನರಿಗೂ ಇದು ಮನವರಿಕೆಯಾಗಿದೆ ಸಹಿತ. 
 • Raghavendra,Bengaluru

  10:13 AM, 07/07/2017

  From Whatsapp: ವಿಷ್ಣುದಾಸಾಚಾರ್ಯರ ಭಯಂಕರ ಭಾಷಣದಲ್ಲಿ ಎಷ್ಟು ಪ್ರಶ್ನೆಗಳಿವೆ ? ಭಾವುಕರಾಗದೇ ವಿವೇಕಿಗಳಾಗಿ ಆಲೋಚಿಸಿದರೆ ....
  ಶ್ರೀ ಗಳು ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಶ್ರೀ ಗಳ ಉತ್ತರಗಳನ್ನು ಸಂಪೂರ್ಣ ಉಲ್ಲೇಖಿಸದೇ  ಒಂದೇ ಅಭಿಪ್ರಾಯದ ಹಲವು ಡೈಲಾಗ್ ಗಳನ್ನು ಪುಂಖಾನುಪುಂಖವಾಗಿ ಉದುರಿಸಿದ್ದಾರೆ. ಇಂತಹ ಭಾವಪ್ರಧಾನವಾದ ಉತ್ತಮ ಡೈಲಾಗ್ ಡೆಲಿವರಿಗೆ ಈಗಾಗಲೇ ಹೆಸರುವಾಸಿಗಳಾದ ಈ ಆಚಾರ್ಯರು ಜಿಜ್ಞಾಸುವಾಗಿ ಪ್ರಶ್ನೆ ಮಾಡಿದ್ದರೆ ಶ್ರೀ ಗಳು ಈಗಾಗಲೇ ಕೊಟ್ಟ ಉತ್ತರ ಸಾಕು. ಯಾವ ಶಿಷ್ಯರ ಸಹಕಾರದ ಅಗತ್ಯವಿಲ್ಲ. ಇಲ್ಲಿ ಆಚಾರ್ಯರು ಪ್ರಶ್ನೆಯನ್ನೇ ಮಾಡಿಲ್ಲ ಶ್ರೀಗಳವರ ಜೀವನದ ವಿಮರ್ಶೆ ಮಾಡಿ ?ತಮ್ಮ ಉದಾತ್ತ ಸಲಹೆ ? ನೀಡಿದ್ದಾರೆ. ಯಾವುದೇ ಧರ್ಮದ ಮುಖಂಡರು ನಡೆಸುವ ಕೆಲವು ಕಾರ್ಯಗಳು ಸಮಕಾಲೀನರಾದ ಅವರ ಸಮಾಜದವರೆಲ್ಲರಿಗೂ ಒಪ್ಪಿಗೆಯಾಗುವುದು ಕಷ್ಟಸಾಧ್ಯ . ವಿಚಾರ ನಡೆಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ರಾಮ ಕೃಷ್ಣಾದಿ ದೇವರ ಮತ್ತು ಅವರ ನಡೆಯ ಬಗ್ಗೆಯೇ ವಿಚಾರನಡೆಸುವ ಸ್ವಾತಂತ್ರ್ಯ ಭಾರತೀಯ ದರ್ಶನಗಳ ವೈಶಿಷ್ಟ್ಯ. ಹಾಗಿರುವಾಗ ನಮ್ಮ ಸ್ವಾಮಿಗಳ ಕಾರ್ಯವನ್ನು ವಿಮರ್ಶಿಸುವ ಸ್ವಾತಂತ್ರ್ಯ ನಿಮಗಿದೆ . ಕಾರಣ ಅವರು ಸಂಪತ್ತು ಕೂಡಿಹಾಕಿ ಮಠಕಟ್ಟಿದ ಸ್ವಾಮಿಗಳಲ್ಲ. ಸಮಾಜಮುಖಿಯಾಗಿ ನಮ್ಮಂತಹವರು ಇಂದಿಗೂ ಹಿಂದುಧರ್ಮದ ಬಗ್ಗೆ ಮಾತನಾಡುವ ಅವಕಾಶ ಉಳಿಸಿದವರು. ಕೆಲವು ಮಾಧ್ವ ತದಿತರ ಕೆಲವು ಮಠಗಳ ಮಾನ ಹರಾಜಿಗೆ ಬಿದ್ದಾಗ ಸಂರಕ್ಷಣೆ ಮುಂದಾದವರು. ಲಕ್ಷಾಂತರ ಹಿಂದುಗಳು ಹಿಂದುಗಳಾಗಿ ಉಳಿಯಲು ಕಾರಣರಾದವರು ಅನೇಕ ಬ್ರಾಹ್ಮಣರು ಬ್ರಾಹ್ಮಣರಾಗಿದ್ದು ಓದಿ, ಬರೆದು ಉದ್ಯೋಗಪಡೆಯಬೇಕೆಂದು ಮಾಧ್ವ ಹಾಸ್ಟೇಲ್ ಗಳನ್ನು ನಿರ್ಮಿಸಿ ಅವುಗಳ ಮತ್ತು ವಿದ್ಯಾಪೀಠಗಳ ಸಂರಕ್ಷಣೆಗಾಗಿ ಸ್ವಮತೀಯರ ಶ್ರೀಮಂತ ಮಠಗಳ ವಿರೋಧದ ಪರಾಕಾಷ್ಟೆಯಲ್ಲೂ ಮನೆ ಮನೆಗೆ ತಿರುಗಾಡಿ ಭಿಕ್ಷೆಬೇಡಿದವರು. ಅವರನ್ನು ವಿಮರ್ಶೆ ಮಾಡುವ ಸ್ವಾತಂತ್ರ್ಯ ಖಂಡಿತವಾಗಿಯೂ ಇದೆ. ಆದರೆ ವಿಮರ್ಶೆ ಪ್ರಾಮಾಣಿಕವಾಗಿದ್ದರೆ ಸ್ವಾಗತ . ಅವರು ಮಾಡಿದ ಕಾರ್ಯ ಎಲ್ಲರಿಗೂ ಸರಿತೋರಬೇಕೆಂದು ಅವರು ಪ್ರತಿಜ್ಞೆ ಮಾಡಿಲ್ಲ. ತಾವು ಪ್ರಾಮಾಣಿಕವಾದ ಪವಿತ್ರವಾದ ಮನಸ್ಸಿನಿಂದ ಈ ಕೆಲಸ ಮಾಡಿದ್ದಾಗಿ, ತಿಳಿಸಿದ್ದಾರೆ. ಈ ಮಾತು ಕೇವಲ ಪ್ರಕೃತ ನಿಮ್ಮ ವಿವಾದಕ್ಕೆಡೆಯಾದ ಕಾರ್ಯಕ್ಕೆ ಮಾತ್ರವಲ್ಲ ಅವರ ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ್ದು . ಕಾರಣ ಅದು ಅವರ ಹುಟ್ಟು ಗುಣ
  
  ಅಲ್ಲದೇ ಮಧ್ವಸಿದ್ಧಾಂತಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ಹೊಂದಿದವರಿಗೆ ಆ ರೀತಿ ಅನುಷ್ಠಾನವಿರುವವರ ಪ್ರಾರ್ಥನೆ ಗೆ ಕೃಷ್ಣಮಠದಲ್ಲಿ ಅವಕಾಶ ನೀಡಬಾರದು ಎಂಬುದಕ್ಕೆ ಶ್ರೀಗಳು ಸೂಕ್ತ ಉತ್ತರ ನೀಡಿದ್ದಾರೆ. ಆಚಾರ್ಯ ಮಧ್ವರ ತತ್ವಗಳನ್ನು ಒಪ್ಪದ ಆಚಾರ್ಯ ರಿಗೆ ಸಮ್ಮತವಲ್ಲದ ತತ್ವಗಳನ್ನೇ ಸರಿ ಎಂದು ವಾದಮಾಡುವ ವಿದ್ವಾಂಸರನ್ನು ಕರೆದು ಅವರ ಜೊತೆ ವಾದಮಾಡಿದರೂ ಅವರಿಗೆ ಸಂಭಾವನೆ ಸಮ್ಮಾನಗಳನ್ನು ನೀಡುವ ಪದ್ಧತಿ ಮಾಧ್ವ ಮಠಗಳಲ್ಲಿ ಪ್ರಾಚೀನಕಾಲದಿಂದಿದೆ ನಮ್ಮ ಅವ

  Vishnudasa Nagendracharya

  ನಿಂದೆ ಮಾಡಿ ಬರೆಯುವವರ ಬರೆಹಗಳನ್ನು ಇಲ್ಲಿ ಯಾಕೆ ಹಾಕುತ್ತೀರಿ. 
  
  ಶ್ರೀ ಪೇಜಾವರಶ್ರೀಗಳಿಗೆ ನಾನು ವಿನಯ ಮತ್ತು ಗೌರವದಿಂದಲೇ ಪ್ರಶ್ನೆ ಮಾಡಿದ್ದೇನೆ. ಅದರಲ್ಲಿ ಕುಹಕ ಕುಚೋದ್ಯಗಳಿದ್ದರೆ ತೋರಿಸಿಕೊಡಿ. 
  
  ಹಿಂದೂ ಧರ್ಮದ ಸಮರ್ಥಕರು ಮತ್ತು ಪೇಜಾವರ ಶ್ರೀಗಳ ಬೆಂಬಲಿಗರು, ಹಾಗೂ ಶ್ರೀಗಳೇ ಹೇಳಿದಂತೆ ಅವರ ಆತ್ಮೀಯರೇ ಇದಕ್ಕೆ ವಿರೋಧ ಒಡ್ಡುತ್ತಿದ್ದಾರೆ ಎಂದರೆ ಪರಿಸ್ಥಿತಿಯ ಗಾಂಭೀರ್ಯ ಅರ್ಥವಾಗಬೇಕಲ್ಲವೇ. 
  
  ಪ್ರಮೋದ್ ಮುತಾಲಿಕ್ ರಿಂದ ಆರಂಭಿಸಿ ಧರ್ಮದಲ್ಲಿ ಶ್ರದ್ಧೆಯಿರುವ ಪ್ರತಿಯೊಬ್ಬ ವ್ಯಕ್ತಿಯ ವರೆಗೆ ಇದನ್ನು ವಿರೋಧಿಸುವಾಗ, ಮತ್ತು ತಾತ್ವಿಕವಾಗಿ ಹಾಗೂ ವಿನಯದಿಂದ ಪೇಜಾವರ ಶ್ರೀಗಳನ್ನು ಪ್ರಶ್ನಿಸಿದಾಗಲೂ ಈ ರೀತಿಯ ನಿಂದೆ ಮತ್ತು ಕುಚೋದ್ಯದ ಮಾತುಗಳನ್ನು ಫೇಸ್ಬುಕ್ಕಿನಲ್ಲಿ ಫೇಕೈಡಿಯ ಮುಖಾಂತರ ಆಡುತ್ತಿದ್ದಾರೆ ಎಂದರೆ ಅವರಲ್ಲಿ ಸಮರ್ಥನೆ ಮಾಡಿಕೊಳ್ಳಲು ಯಾವ ಅಂಶವೂ ಇಲ್ಲ ಎನ್ನುವದನ್ನು ಮನಗಾಣಿಸುತ್ತದೆ. 
  
  ಇನ್ನು ಪರಮತೀಯ ವಿದ್ವಾಂಸರಿಗೆ ಮಠದಲ್ಲಿ ಊಟ ಹಾಕುವದಕ್ಕೂ, ಮುಸಲ್ಮಾನರಿಗೆ ಊಟ ಹಾಕುವದಕ್ಕೂ ಪೇಜಾವರಶ್ರೀಗಳು ಸಮೀಕರಣ ಮಾಡಿದ್ದಾರೆ. ಸ್ಮಾರ್ತರು, ಶ್ರೀವೈಷ್ಣವರು, ಮಾಧ್ವರಲ್ಲಿ ಏನೇ ಮತಬೇಧವಿದ್ದರೂ, ಪರಸ್ಪರರಲ್ಲಿ ಮದುವೆಯ ಸಂಬಂಧವಿದೆ, ಗುರು ಶಿಷ್ಯಭಾವದ ಸಂಬಂಧವೂ ಇದೆ. ಅದೂ ಇದೂ ಒಂದೇ ಎಂದು ಮಾಡಲು ಹೊರಟಿರುವವರ ಹುನ್ನಾರ ಏನು ಎನ್ನುವದು ಈಗ ಸ್ಪಷ್ಟವಾಗಿ ಅರ್ಥವಾಗುತ್ತದೆ. 
  
  ಮತ್ತು ಪೇಜಾವರ ಶ್ರೀಗಳ ಕೋಟಿ ಧರ್ಮಾಚರಣೆಗಳನ್ನು ತಂದು ಈ ಕಪ್ಪು ಚುಕ್ಕೆಯನ್ನು ಅಳಿಸಲು ಸಾಧ್ಯವಿಲ್ಲ, ಅದು ಸರಿಯಾದ ಮಾರ್ಗವಲ್ಲ ಎಂದು ಹೇಳಿಯೇ ಇದ್ದೇನೆ. ಸಾವಿರ ದೇಶಭಕ್ತಿಯ ಕೆಲಸ ಮಾಡಿ ಒಂದು ದೇಶದ್ರೋಹದ ಕೆಲಸ ಮಾಡಿದರೂ ಹೇಗೆ ಸಹನೆ ಮಾಡಲು ಸಾಧ್ಯವಿಲ್ಲವೋ, ಹಾಗೆ ಹಿಂದೂ ಧರ್ಮಕ್ಕೆ ಅಪಚಾರವಾಗಿರುವ ಈ ಅಂಶವನ್ನು ಒಪ್ಪಲು ಸಾಧ್ಯವೇ ಇಲ್ಲ. 
  
  ಮತ್ತು, ಆ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಅನಿಸಿದೆ, ಇಲ್ಲಿ ಏನನ್ನೂ ಸಮರ್ಥನೆ ಮಾಡಲಾಗಿಲ್ಲ ಎಂದು. ಪರಧರ್ಮಸಹಿಷ್ಣುತೆಯ ವ್ಯಾಖ್ಯಾನವನ್ನು ಮಾಡಹೊರಟ ಶ್ರೀಗಳು ಅದನ್ನು ತಿಳಿಸದೇ ವಿಷಯಾಂತರ ಮಾಡಿದ್ದಾರೆ. ಪರಧರ್ಮಸಹಿಷ್ಣುತೆ ಎಂದರೆ ಬೇರೆಯವರು ಮಾಡುವ ಧರ್ಮಾಚರಣೆಗೆ ವಿರೋಧ ಮಾಡದೇ ಸಹನೆ ಮಾಡುವದು ಎನ್ನುವ ಅರ್ಥವನ್ನು ಇಡಿಯ ಸಮಾಜ ಒಪ್ಪಿದೆ. ಅಲ್ಲಿರುವದು ಸಹಿಷ್ಣುತೆ. ಪರಧರ್ಮಪ್ರೋತ್ಸಾಹ ಎಂಬ ಶಬ್ದವಿಲ್ಲ. ಶ್ರೀಗಳು ಮಾಡಿರುವದು ಪರಧರ್ಮಪ್ರೋತ್ಸಾಹ ಮತ್ತು ಸಂವರ್ಧನೆ. ಅದಕ್ಕೆ ನಮ್ಮ ವಿರೋಧವಿದೆ. 
 • Raghavendra,Bengaluru

  10:35 PM, 06/07/2017

  https://youtu.be/osiz-XOwP84 latest answer.
   Any comments acharya?
 • Permude Rao,Hyderabad

  10:30 PM, 06/07/2017

  Uttara
 • Manjunath Bhat,Sirsi

  4:13 PM , 06/07/2017

  ಸರ್ವ ದೇವ ನಮಸ್ಕಾರಮ್ 
           ಕೇಶವಂ ಪ್ರತಿಗಚ್ಛತಿ.....
  
  
  ಹರಿಯೇ ಎಲ್ಲಾ ಹರನೇ ಬಲ್ಲ.......
  
  ಹರಿಹರಾರ್ಪಣಮಸ್ತು.............
 • Manjunath Bhat,Sirsi

  4:07 PM , 06/07/2017

  ನಾನು ನಿಮ್ಮ ಉಪನ್ಯಾಸ
  ಅಪೇಕ್ಷಿಸುವ ಕಟ್ಟಾ ಅಭಿಮಾನಿ
  ಹಾಗೂ ನಿಮ್ಮ ಶಿಷ್ಯ...........
 • Manjunath Bhat,Sirsi

  4:06 PM , 06/07/2017

  ಶ್ರೀ ವಿಷ್ಣು ದಾಸ ನಾಗೇಂದ್ರಾಚಾರ್ಯ ಗುರುಗಳು ಇಫ್ತಾರ್ ಕೂಟದ ಬಗ್ಗೆ ಹೇಳಿದ ಒಂದೊಂದು ಪದ ಕೂಡ ನನಗೆ ಮನಸಿಗೆ ತ್ರಪ್ತಿ ತಂದಿದೆ.........
 • Ravindra M R,Mysore

  2:38 PM , 06/07/2017

  Neevu Heliddu sariyage Ide... Namagu Iftihar koota Shock tandide..... Nimma Bembalakke Neevu jote idivi.....
 • Sudhir.Anantrao.Desai,Dharwad

  9:43 PM , 05/07/2017

  /?.-/
 • Bindu madhava VK,Bangalore

  6:47 AM , 03/07/2017

  Acharyare audio file open aaguttilla.dayavittu saripadisi.

  Vishnudasa Nagendracharya

  It’s working fine. Just checked. 
 • K vasnath padmaraj,Navigation mumbai

  2:18 PM , 05/07/2017

  Achariyare neevu heliddu sari
  Pescara swamigalinda thappagide absinthe
  Adare namaju mado vishya avarige gothiralila ansuthe
 • Madhusudhanachar,Shimogga

  11:15 AM, 05/07/2017

  ಖಂಡಿತ, ಶ್ರೀಗಳು ನಮ್ಮೆಲ್ಲ ಬ್ರಾಹ್ಮಣರ ಮನಸ್ಸಿಗೆ ನೋವುಂಟು ಮಾಡಿದ್ದಾರೆ
 • Naveen,Mangalore

  8:52 PM , 03/07/2017

  ಕೃಷ್ಣ ದೇವಸ್ಥಾನಕ್ಕೆ ಚಿಕ್ಕ ವಯಸ್ಸಿನಿಂದ ನಿರ್ಮಲ ಭಕ್ತಿಯಿಂದ ಸೇವೆಯನ್ನು ಮಾಡಿಕೊಂಡು banddiddene. ಸ್ವಾಮೀಜಿಗಳ ಈ ನಡವಳಿಕೆಯಿಂದ ಮನಸ್ಸಿಗೆ ತುಂಬಾ ಸಂಕಟವಾಗಿದೆ. ಇವರಿಗೆ ಅಲ್ಲಿ ಇಫ್ತಾರ್ ಕೂಟ ಆಯೋಜಿಸಲು ಯಾರು ಅಧಿಕಾರ ಕೊಟ್ಟರು? ಪರ್ಯಯದಲಿ ಇದ್ದೀವಿ ಅಂತ ಅವರು ಸ್ವತಂತ್ರವಾಗಿ  ದೇವಸ್ಥಾನದ ಜಾಗವನ್ನು ಸಮಾಜದೊಂದಿಗೆ samalochisade ಮಾಡಿರುವುದು ತಪ್ಪು. ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟು ಸಮಾಜದ ಅಭಿಪ್ರಾಯ ಸಂಗ್ರಹಿಸಿ ಮುಂದುವರಿಯ ಬೇಕಿತ್ತು. ಸ್ವಾಮಿಗಳು ತ್ವರಿತವಾಗಿ ಒಂದು ದಿನ novaagiruva ಭಕ್ತರನ್ನು ಉಡುಪಿಗೆ ಕರೆದು ಸಮಾಲೋಚಿಸಿ ನಮ್ಮ ನೋವಿಗೆ ತಮ್ಮ ಜ್ಞಾನದ ಬೆಳಕಿನಿಂದ nivaraneyannu ಒದಗಿಸುವುದು ಸೂಕ್ತ. 
  
  ಇದು ಸಮಾಜದ ಗುರುಗಳಾಗಿ ಅವರು ಈಗ ಮಾಡ ಬೇಕಾದ ಆದ್ಯ ಕರ್ತವ್ಯ.
  
  ಈ ಮೂಲಕ ನಾನು ಪೇಜಾವರ ಶ್ರೀ ಗಳನ್ನು ಬೇಗ ಒಂದು ದಿನ ನೋವುಂದ ಭಕ್ತರನ್ನು ತಮ್ಮಲ್ಲಿ bhettigagi ಆಹ್ವಾನಿಸಿ ಎಂದು ಆಘ್ರಹಿಸುತ್ತೇನೇ
 • Seshagiri Rao Desai,Juratagi

  1:06 PM , 03/07/2017

  ಶ್ರೀ ವಿಷ್ಣುದಾಸ ನಾಗೇಂದ್ರಾಚಾಯ೯ರ ಪಾದಾರವಿಂ ದಗಳಿಗೆ ಕೋಟಿ ಕೋಟಿ ಪ್ರಣಾಮಗಳು ನಿಮ್ಮಂತಹ ಗುರುಗಳು ಇಂದಿನ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ. ಮೋದಿಯವರಂತೆ ನಿಮ್ಮಂಥಹ ಸಾರಥಿ ನಮ್ಮ ರವರಿಗೆ ಈಗ ಬೇಕಾಗಿದೆ ಗುರುಗಳೆ.
 • Guru Charan,Madikeri

  11:40 AM, 03/07/2017

  Yes sir u r right ...no any comments ...thank you
 • Sunil Salian,Muscat

  1:04 AM , 03/07/2017

  Namaskara gurugale....
  Neevu helidha prathiyundhu maathu sariyagidhe, Neevu namma noovina dhwaniyagidheera. Einellu e tarahada acharane agadirali hindhugalu ondhagi eintha keta acharane yanu prarambha aguwa muncheye nillisuwa.
  Hari om
 • Madhavi m,Bangalore

  12:52 AM, 03/07/2017

  Your point are clear.. exactly in our minds..,,,😫
 • SRINIDHI,Bengaluru

  7:20 PM , 02/07/2017

  Namaste acharyare, Namma maneyalli indu hiriyaru seriddaru sahajavagi Iftaar kootada bagge charche shuru aytu... Adare adara antyadalli nanna dodappanavaru "vedagalalli moorthy pooje madbeku anta yellu illappa" anta helidaru... nanage ee vishayadalli Ajnana ide, addarinda naanu vaada Mundu varesalu saadhyavagalilla... Nivu audio li helidiri musalmanaru moorthy pooje oppolla, maaduvavara jothe serbardu anta namaz madtare anta... 
  
  Nanna prashne : Vedadalli moorthy pooje ya pratipaadane idiya...???
  
  Krishnarapanamastu.
 • Shrinivas udupa,Mumbai

  5:30 PM , 02/07/2017

  Ivattu namaz maadlikke bitru idu prati varsha beku andre en madodu. nanna manassigu novagide .aadre hege helkollodu anta idde. Neevu nanna manassina bhavaneyannu helidri dhanyavadagalu
 • ಸಂದೀಪ್ ಪಿ ಎಂ,ಚಿತ್ರದುರ್ಗ

  2:44 PM , 02/07/2017

  ತುಂಬಾ ಅದ್ಬುತವಾಗಿ ವ್ಯಕ್ತ ಮಾಡಿದಿರಿ ಗುರುಗಳೇ ,ಒಬ್ಬ ಸಾಮಾನ್ಯ ಹಿಂದೂ ಆಗಿ ಒಬ್ಬ ಹಿಂದಿಸ್ತಾನಿ ಆಗಿ ನನ್ನದು ಅದೇ ಪ್ರಶ್ನೆಗಳು ಪೇಜಾವರ ಶ್ರೀ ಗಳಿಗಳಿಗೆ.
  ಸಮಸ್ತ ಹಿಂದೂಗಳ ಪರವಾಗಿ ಅತ್ಯುತ್ತಮವಾಗಿ ಪ್ರಶ್ನಿಸಿಧಿರಿ .ಧನ್ಯವಾದಗಳು
 • Nithinchandra,Atmakur

  10:17 AM, 02/07/2017

  Aacharya D.Prahalaadacharya ra sanyaas ada bagge Adhikrutha maahithi sikkide ala..
 • ವೀರಣ್ಣ ಸಿಂಪಿಗೇರ್,ಕೊಪ್ಪಳ

  12:01 PM, 01/07/2017

  ತಾವು ಇಫ್ತಾರ್ ಕೂಟದ ಕುರಿತು ತಾವು ಪೇಜಾವರಶ್ರೀಗಳನ್ನು ಮೇಲಿನ ಆಡಿಯೋದಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳನ್ನು ನಾನೂಕೂಡ ಒಬ್ಬಹಿಂದುವಾಗಿ ಕೇಳಬಯಸುತ್ತೇನೆ.
 • PRAHLAD ACHARYA SONDUR,UDUPI

  11:02 AM, 01/07/2017

  ನಮಸ್ಕಾರ ಗಳು
 • ಆರ್. ಅಭಿಷೇಕ್,ಕಲ್ಬುರ್ಗಿ

  7:36 PM , 30/06/2017

  ಆಚಾರ್ಯರೆ.
  
  ಈ ನಡೆದ ಘಟನೆಯನ್ನ ನೋಡಿ ಹೀಗೆ ಹೇಳಬಹುದೇ?
  
  ಅಲ್ ತಕ್ಕಿಯಾ ಯಶಸ್ವಿಯಾಗಿದೆ.
  
  ಈಗ ನಡೆದದ್ದು ದಾರುಲ್ ಹರಬ್ ನ ಮೊಟ್ಟ ಮೊದಲನೆಯ ಹೆಜ್ಜೆ
  
  ಮುಂದೆ ಉಳಿದಿದ್ದು ದಾರುಲ್ ಇಸ್ಲಾಂ.
  
  
  
  ತಪ್ಪಾಗಿದ್ದರೆ ಕ್ಷಮಿಸಬೇಕಾಗಿ ವಿನಂತಿ.
 • Manjunath,Bangalore

  1:56 PM , 30/06/2017

  ಆಚಾರ್ಯರೆ ಇದು ನನ್ನ ವೈಯಕ್ತಿಕ ಪ್ರಶ್ನೆ ತಿಳಿದುಕೊಳ್ಳಲು ಕೇಳುತ್ತಿದ್ದೇನೆ ಅಷ್ಟೇ 
  ತಪ್ಪಿದ್ದರೆ ಕ್ಷಮಿಸಬೇಕು
  
  ಅಲ್ಲಾಹು ಎಂಬ ಪ್ರತ್ಯೇಕ ದೇವತೆ ಇದ್ಯಾ

  Vishnudasa Nagendracharya

  ಇಲ್ಲ. 
 • Anilkumar B Rao,Bangalore

  3:51 PM , 30/06/2017

  ಆಚಾರ್ಯರಲ್ಲಿರುವ ಶಾಸ್ತ್ರ ಜ್ಞಾನ, ತತ್ವ ನಿಷ್ಠೆ, ಧೈರ್ಯ ಇವೆಲ್ಲಕ್ಕೂ ನಮೊ ನಮಃ ನಮೋ ನಮಃ
 • Harikishan,Bangalore

  9:39 AM , 30/06/2017

  Acharyare namaskaragalu, 🙏
  
  Krishnana sannidhiyalle intha ghatane aagide andare krishnana aagne indallave!? Naavu prashne maaduvudhu sariye? 
  
  Thappu iddare kshmisabeku. 🙏

  Vishnudasa Nagendracharya

  ತಿರುಪತಿಯಲ್ಲಿಯೂ ದೇವರ ಸನ್ನಿಧಾನವಿದೆ. ಹಿಂದೆ ಕ್ರಿಶ್ಚಿಯನ್ನರು ಆ ಬೆಟ್ಟಗಳನ್ನು ತಮ್ಮದಾಗಿ ಮಾಡಿಕೊಳ್ಳಲು ಪ್ರಯತ್ನ ಪಟ್ಟರು. ಆಗ ಹಿಂದೂಗಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿ ಆದನ್ನು ನಿಲ್ಲಿಸಿದರು. 
  
  ತಿರುಪತಿಯಲ್ಲಿ ದೇವರ ಸನ್ನಿಧಾನವಿದೆ, ದೇವರ ಆಜ್ಞೆ ಇದೆ ಎಂದು ಯಾಕೆ ಸುಮ್ಮನಾಗಲಿಲ್ಲ. 
  
  ನಮ್ಮ ಮನೆಯಲ್ಲಿಯೂ ಸಾಲಿಗ್ರಾಮವಿದೆ, ನಿಮ್ಮ ಮನೆಯಲ್ಲಿಯೂ ಸಾಲಿಗ್ರಾಮವಿದೆ. ಅಂದರೆ ದೇವರ ನಿತ್ಯ ಸನ್ನಿಧಾನವಿದೆ. ಹಾಗೆಂದು ನಮ್ಮ - ನಿಮ್ಮ ಮನೆಯಲ್ಲಿ ಅಶಾಸ್ತ್ರೀಯವಾದ, ಕಾನೂನುಬಾಹಿರವಾದ ಘಟನೆಗಳು ನಡೆದರೆ ದೇವರ ಆಜ್ಞೆ ಎಂದು ಸುಮ್ಮನಿರಬೇಕೇ. 
  
  ಭಯೋತ್ಪಾದಕರ ಒಳಗೂ ಅಂತರ್ಯಾಮಿಯಾಗಿ ಇರುವನು ದೇವರೇ. ಅವನೇ ಅವರ ಬುದ್ಧಿಯನ್ನು ಪ್ರೇರಣೆ ಮಾಡುವವನು. ಲಕ್ಷಲಕ್ಷ ಜನರ ಪ್ರಾಣವನ್ನು ತೆಗೆದಾಗ ಅದು ದೇವರ ಆಜ್ಞೆ ಎಂದು ಸುಮ್ಮನಾಗಬೇಕೆ. 
  
  ದುಃಶಾಸನನ ಒಳಗೆ ಇದ್ದು ಸೀರೆಯನ್ನು ಸೆಳೆಸಿದವನೂ ದೇವರೇ. ದ್ರೌಪದೀದೇವಿಯರ ಒಳಗಿದ್ದು ಪ್ರಾರ್ಥನೆ ಮಾಡಿಸಿದವನೂ ದೇವರೇ. ಮಾನರಕ್ಷಣೆಯನ್ನು ಮಾಡಿದವನೂ ದೇವರೇ. 
  
  ದುಷ್ಟನಾದ ದುರ್ಯೋಧನನ ಒಳಗಿದ್ದು ತಪ್ಪು ಮಾಡಿಸಿದವನೂ ದೇವರೇ. ಉತ್ತಮರಾದ ಭೀಷ್ಮ ದ್ರೋಣರಿಂದಲೂ ತಪ್ಪು ಮಾಡಿಸದವನು ದೇವರೇ. ಭೀಮಾರ್ಜುನರ ಒಳಗಿದ್ದು ಯುದ್ದ ಮಾಡಿಸಿದವನೂ ದೇವರೇ. ಸ್ವಭಾವತಃ ದುಷ್ಟರಿಗೂ, ತಪ್ಪು ಮಾಡಿದ ಸಜ್ಜನರಿಗೂ ಶಿಕ್ಷೆ ಕೊಡಿಸಿದ. 
  
  ಇದರರ್ಥವೇನು. ನಡೆಯುವ ಎಲ್ಲವೂ ದೇವರ ಇಚ್ಛೆಯಿಂದಲೇ ಪ್ರೇರಣೆಯಿಂದಲೇ ನಡೆಯುತ್ತದೆ. ನಾವು ಶಾಸ್ತ್ರದಿಂದ ಪರಮಾತ್ಮನಿಗೆ ಪ್ರಿಯ ಯಾವುದು ಎನ್ನುವದನ್ನು ತಿಳಿದು ಮಾಡಬೇಕು. 
  
  ಪರಮಾತ್ಮನೇ ತಿಳಿಸಿದ ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆ ನಡೆದಾಗ ಯೋಗ್ಯ ರೀತಿಯಲ್ಲಿ ಪ್ರತಿಭಟಿಸಬೇಕು. 
  
  ಅದನ್ನೇ ಇಲ್ಲಿ ಮಾಡಿರುವದು. 
 • Dattatraya V.Kulkarni,Bangalore

  12:05 AM, 30/06/2017

  Gurugalege namaskaragallu. Nima prashanagallege uttara antu sigodilla aadaray nimmanu dushane antu kandita madutare.
 • Jayashree Karunakar,Bangalore

  10:58 PM, 29/06/2017

  ಮೊದಲು ಪೆಜಾವರ ಶ್ರೀಗಳ ವಿಡಿಯೋ ಕೇಳಿದಾಗ ಅವರು ಮಾಡಿದ್ದು ಸರಿ ಹಸಿದವನಿಗೆ ಅನ್ನ ದಾನ ಮಾಡಿದ್ದು ಧಮ೯ಕಾಯ೯ ಅನ್ನಿಸಿತು. 
  ನಂತರ ತಮ್ಮ ಉಪನ್ಯಾಸ ಕೇಳಿದಾಗ ತಪ್ಪು ನಡೆದಿದ್ದು ಎಲ್ಲಿ ಅಂತ ಗೊತಾಯಿತು.
  
  ಸಾಮಾನ್ಯರೂ ಕೂಡ ಗಣಪತಿ ದೇವಸ್ಥಾನಕ್ಕೆ ಹೋದಾಗ ಗಣೇಶನ ಸ್ತೋತ್ರವನ್ನು, ದೇವಿಯ ದೇವಸ್ಥಾನದಲ್ಲಿ ದೇವಿಯ ಸ್ತೋತ್ರ, ಮುಖ್ಯಪ್ರಾಣನ ಸನ್ನಿಧಿಯಲ್ಲಿ ಅವನ ಸ್ತೋತ್ರ ಮಾಡುವುದು ರೂಡಿಯಲ್ಲಿದೆ.
  
  ಹೀಗಾಗಿ ಪೇಜಾವರ ಶ್ರೀಗಳು ಸಂನ್ಯಾಸಿಗಳಾಗಿದ್ದೂ ಕೂಡ ಒಬ್ಬ ಸಾಮಾನ್ಯ ಹಿಂದುಗಳೂ ಕೂಡ ಆಚರಿಸುವ ಧಮ೯ವನ್ನೂ, ತಿಳಿಯದೆ, ಮುಸಲ್ಮಾನರಿಗೆ ಕೃಷ್ಣನ ಸಾನ್ನಿಧ್ಯದಲ್ಲಿ ಅಲ್ಲಾಹು ಅಕ್ಬರ್ ಅಂತ ಹೇಳಿಸಿದ್ದು ಶುದ್ಧ ತಪ್ಪಲ್ಲವೇ..
  
  ಎಲ್ಲಾ ಹಿಂದೂಗಳೂ ಗಂಭೀರವಾಗಿ ಯೋಚಿಸ ಬೇಕಾದ ವಿಷವಲ್ಲವೇ...ಗುರುಗಳೇ..
 • H. G. JAYASIMHA,Bengaluru

  9:49 PM , 29/06/2017

  ಆಚಾರ್ಯ ರಿಗೆ ನಮಸ್ಕಾರ ಗಳು. ನೀವು ಹಾಕಿರುವ ಪ್ರ. ಶ್ನಿ
 • Kiran Kumar kr,Kanakapura

  9:46 PM , 29/06/2017

  ಆಚಾರ್ಯರೆ ನಿಮಗೆ ನಮಸ್ಕಾರಗಳು. ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಮಠದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುವುದು ತಪ್ಪು.ಮುಸ್ಲಿಂ ರ ಪ್ರಕಾರ ಅವರು ನಂಬುವ ಅಲ್ಲಾಹ್ ಆಕಾರ ರಹಿತನಾಗಿದ್ದಾನೆ.ಆದರೆ ನಾವು ಹಿಂದೂಗಳು ನಂಬುವ ಪರಬ್ರಹ್ಮನಾದ ಕೃಷ್ಣನಿಗೆ ಆಕಾರವಿದೆ.ಆದ್ದರಿಂದ ಅವರನ್ನು ಕರೆಸಿ ನಮಾಜ್ ಮಾಡಿಸಿದ್ದು ತಪ್ಪು. ನಿಮ್ಮ ಈ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಇದು ನನ್ನ ವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಅಭಿಪ್ರಾಯ...ಹರಿ ಸರ್ವೋತ್ತಮ.... ಹರಿ ಓಂ
 • Krishnamurthy Kulkarni,Bengaluru

  9:09 PM , 29/06/2017

  ಪೇಜಾವರ ಶ್ರೀಗಳ ನಡೆ ಸುಲಲಿತವಾದದ್ದು, ಸಾತ್ವಿಕವಾಗಿದ್ದು ಅವರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅವರ ನಿರ್ಧಾರವನ್ನು ನಿಂದನೆ ಮಾಡಲಿಕ್ಕೆ ಕಳೆದ ಸಮಯವನ್ನು ದೇವರ ಚಿಂತನೆ ಮಾಡುವದರಲ್ಲಿ ಕಳೆಯೋಣ. ಪ್ರತಿಕ್ಷಣವೂ ಅತ್ಯಮೂಲ್ಯವಾದದ್ದು. 
  
  ಯಾವಾಗಲೂ ಹರಿಯಧ್ಯಾನಾಸಕ್ತರಾಗೋಣ. 
  
  ಹರೇ ಕೃಷ್ಣ

  Vishnudasa Nagendracharya

  ಯಾಕೀ ದ್ವಂದ್ವಪ್ರವೃತ್ತಿ? ಕೃಷ್ಣಮೂರ್ತಿ. 
  
  ಪೇಜಾವರಶ್ರೀಗಳ ಕುರಿತು ಚರ್ಚೆ ಮಾಡುವ ಅಪೇಕ್ಷೆ ನಿಮಗಿರಲಿಲ್ಲ ಎಂದಾಗಿದ್ದರೆ, ನೀವೇ ಯಾಕೆ ವಿಶ್ವನಂದಿನಿಯ ಪ್ರಶ್ನೋತ್ತರವಿಭಾಗದಲ್ಲಿ ಬಂದು ಈ ರೀತಿ ಪ್ರಶ್ನೆ ಕೇಳಿದ್ದೀರಿ — 
  
  “ಹರಿಃ ಓಂ, ಪೇಜಾವರ ಶ್ರೀಗಳು ಮುಸ್ಲಿಮ್ ಜನರಿಗೆ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸುವದಲ್ಲದೇ , ಅವರಿಗೆ ರಾಜಾಂಗಣದಲ್ಲಿ ನಮಾಜ್ ಮಾಡಲು ಬಿಟ್ಟಿದ್ದಾರೆ. ಇದು ಸರಿಯೋ ಅಥವಾ ತಪ್ಪೋ? ಇದರಿಂದ ಅನೇಕ ವೈದಿಕರು ಕೋಪಗೊಂಡಿದ್ದಾರೆ. ದಯವಿಟ್ಟು ಉತ್ತರಿಸಿ.”
  
  ಯಾಕೆ, ಪ್ರಶ್ನೆ ಕೇಳುವಾಗ ಹರಿಯ ಸ್ಮರಣೆ ಮಾಡುವದು ಮರೆತು ಹೋಗಿತ್ತಾ. 
  
  ಈಗ ಬಂದು ಎಲ್ಲರಿಗೂ ಹರಿಯ ಸ್ಮರಣೆಯ ಉಪದೇಶ ಮಾಡುತ್ತಿದ್ದೀರಲ್ಲಾ, ಏನಾಗಿದೆ ನಿಮಗೆ. 
  
  ಪೇಜಾವರ ಶ್ರೀಗಳ ನಡೆಗೆ ಬೆಂಬಲ ಇದ್ದರೆ, ಬಂದು ಯಾಕೆ ಪ್ರಶ್ನೆ ಮಾಡಿದಿರಿ. 
  
  ವಿಮರ್ಶೆಗೂ ನಿಂದೆಗೂ ವ್ಯತ್ಯಾಸ ತಿಳಿಯುವಷ್ಟು ಪ್ರಬುದ್ಧತೆ ಇಲ್ಲ ಎಂದರೆ ಆ ಪ್ರಬುದ್ಧತೆಯನ್ನು ಸಂಪಾದಿಸಿಕೊಳ್ಳಲು ಪ್ರಯತ್ನ ಪಡಿ.
  
  ನಾನು ನಿಮ್ಮ ಪ್ರಶ್ನೆಗೆ ಉತ್ತರವಾಗಿಯೇ ಉಪನ್ಯಾಸವನ್ನು ಪ್ರಶ್ನೋತ್ತರದಲ್ಲಿ ಪ್ರಕಟಿಸೋಣ ಅಂತ ಇದ್ದೆ. ಸಣ್ಣ ಹುಡುಗ, ಯಾರಾದರೂ ತೊಂದರೆ ಮಾಡಿಯಾರು, ಬೇಡ, ಎಂದು ಆಲೋಚಿಸಿ ನಿಮ್ಮ ಹೆಸರು ತೆಗೆದುಕೊಳ್ಳದೆ ಪ್ರಕಟಿಸಿದರೆ, ಈಗ ಬಂದು ಈ ರೀತಿ ಮಾತನಾಡುತ್ತಿದ್ದೀರ. 
  
  ದಯವಿಟ್ಟು ನನ್ನ ಮತ್ತು ವಿಶ್ವನಂದಿನಿಯ ಬಾಂಧವರ ಸಮಯ ಹಾಳು ಮಾಡದೆ, ಹರಿಯ ಸ್ಮರಣೆಯಲ್ಲಿ ನಿರತರಾಗಿ. 
 • R sridharan,Thanjavur

  9:03 PM , 29/06/2017

  Namaskara.heard ur upanyas about iftaar party. Concur with ur views.
 • P N Deshpande,Bangalore

  8:13 PM , 29/06/2017

  S.Namaskargalu
 • Shravan Kumar,Bengaluru

  7:01 PM , 29/06/2017

  Gurugalige nanna namaskaragalu... Musalmanaru Sri Krishna matakke swamigala Melina gaurava mathu Krishnana Melina bhakti iruvudakke allige bandiddare endu eke thiliyabaradu. Avaru avarige thilida reetiyalli Shri Krishnananne Alli poojisidaru endeke thiliyabaradu ? Thappiddalli kshamisi.

  Vishnudasa Nagendracharya

  ಇದ್ದುದನ್ನು ಇದ್ದ ಹಾಗೆ ಅರ್ಥ ಮಾಡಿಕೊಳ್ಳಬೇಕೋ, ಅಥವಾ ನಮಗೆ ತೋಚಿದಂತೆ ಅರ್ಥ ಮಾಡಿಕೊಳ್ಳಬೇಕೋ ನೀವೇ ಹೇಳಿ. 
  
  ಅವರು ಕೃಷ್ಣಭಕ್ತರಾಗಿಯೇ ಬಂದಿದ್ದಲ್ಲಿ ಯಾವ ವಿರೋಧವಿಲ್ಲ ಎಂದು ಹೇಳಿದ್ದೇನೆ. 
  
  ಕೃಷ್ಣಭಕ್ತರಾಗಿ ಬಂದಿರಲಿಲ್ಲ, ರಂಜಾನಿನ ಉಪವಾಸವನ್ನು ಮುಗಿಸುವ ಕಾರ್ಯಕ್ರಮಕ್ಕಾಗಿಯೇ ಬಂದಿದ್ದರು ಎನ್ನವದು ಸ್ಪಷ್ಟ. 
  
  ಯಾವುದೇ ಘಟನೆಯನ್ನು ನಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿಕೊಳ್ಳಬಾರದು. ಇದ್ದುದನ್ನು ಇದ್ದಂತೆಯೇ ಅರ್ಥ ಮಾಡಿಕೊಳ್ಳುಬೇಕು. 
  
  ಕೃಷ್ಣಭಕ್ತರಾಗಿ ಬಂದಿದ್ದರೆ, ಕೃಷ್ಣಭಕ್ತರಿಗೆ ಎಷ್ಟು ಹೊತ್ತಿಗೆ ಪ್ರಸಾದ ವಿತರಣೆಯಾಗುತ್ತಿತ್ತೋ ಅಷ್ಟು ಹೊತ್ತಿಗೇ ಪ್ರಸಾದ ಸ್ವೀಕರಿಸುತ್ತಿದ್ದರು. 
  
  ಹಿಂದೂಧರ್ಮದ ಸಂಸ್ಕೃತಿಗೆ ವಿರುದ್ಧವಾಗಿ ಸೂರ್ಯಮುಳುಗಿದ ತಕ್ಷಣ ಸ್ವೀಕರಿಸುತ್ತಿರಲಿಲ್ಲ. 
 • K Dattatreya,Sandur

  6:59 PM , 29/06/2017

  ಗುರುಗಳೇ ನಮಸ್ಕಾರ,
  ನಿಮ್ಮ ವಿಶಿಷ್ಟವಾದ ಪ್ರವಚನ ದಿಂದ ನನ್ನ ಗೊಂದಲ ನಿವಾರಣೆ ಆಯಿತು. ಧನ್ಯವಾದಗಳು
 • Raghuttama,Sangli

  3:14 PM , 29/06/2017

  D prahladacharyarige sanyasa kodtarante. Idara bagge shastriya vicarane bekitalla .

  Vishnudasa Nagendracharya

  ಇನ್ನೂ ಯಾವುದೂ ಖಚಿತವಾಗಿ ನಿರ್ಧಾರವಾಗಿಲ್ಲ. 
  
  ಅವರು ತಮ್ಮ ನಡೆಯನ್ನು ಪ್ರಕಟಿಸಲಿ.ಆ ನಂತರ ವಿಚಾರ ಮಾಡೋಣ. ಊಹಾಪೋಹಗಳ ಮೇಲೆ ಸಮಯ ವ್ಯರ್ಥ ಮಾಡಬಾರದು. ಅಧಿಕೃತ ಮಾಹಿತಿ ದೊರೆತಾಗ ಮಾತ್ರ ಅದರ ಕುರಿತು ಮಾತನಾಡಬೇಕು. 
  
  
 • Raghoottam Rao,Bangalore

  6:29 PM , 29/06/2017

  Adbhuta vishleshane. 
  
  Tamma bahumukha jnanakke naavu sharamagiddeve
 • Sangeetha prasanna,Bangalore

  6:28 PM , 29/06/2017

  ಹರೇಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ತಮ್ಮ ಮಾತುಗಳು ನಮಗೆ ಧರ್ಮದ ಬಗ್ಗೆ ಇರುವ ಗೌರವಾದರಗಳನ್ನು ಹೆಚ್ಚು ಮಾಡುತ್ತಿವೆ .🙏🙏
 • Madhvwshachar,Bangalore

  5:46 PM , 29/06/2017

  Kannada typing is new to me. Please excuse my typing mistakes . acharyare
 • Srivathsa G agnihotri,Mysore

  4:28 PM , 29/06/2017

  ಆಚಾರ್ಯರೇ ಪೇಸ್ ಬುಕ್ ನಲ್ಲಿ ನಾನು ಬರೆದ ಎರಡು ವಿಚಾರ 
  ೧) ದುರ್ಯೋಧನಾದಿಗಳಲ್ಲಿ ಪ್ರಾಣದೇವರು ಇದ್ದೆ ವ್ಯಾಪರ ಮಾಡಿದ್ದರು ಇದ್ದು ದುಷ್ಟ ಜನರ ಒಳಗೆ ಪ್ರಾಣದೇವರು ನಿಂತು ವ್ಯಾಪರ ಮಾಡಿಸುತ್ತಿದ್ದಾರೆ ಆವರು ಮಾಡಿದ ಪಾಪ ಕಾರ್ಯಗಳ ಸರಿ ತಪ್ಪು ಎಂಬ ತಿರ್ಮಾನ ಮಾಡಿ ಅದರ ಶಿಕ್ಷೆ ಕೊಡುವವ ಒಬ್ಬನೆ ಶ್ರೀಮನ್ ನಾರಯಣ ..ನಮಗೆ ಇದರ ಬಗ್ಗೆ ಪ್ರಶ್ನೆ ಮಾಡುವ ಯೋಗ್ಯತೆ ಇದೆಯೇ??
  ಮುಸ್ಲಿಂ ರು ಗೊ ಮಾಂಸ ಭಕ್ಷಕರು ಅವರು ಕೊಟ್ಟ ಧಾನ ಸ್ವೀಕಾರ ತಪ್ಪಲ್ಲವೇ??
  ಅಪಾತ್ರರಿಗೆ ಧಾನ ಕೊಡಬಾರದು ಸ್ವೀಕರಿಸಲು ಬಾರದು ಎಂಬುದು ಶಾಸ್ತ್ರದ ಮಾತು.
  ಉಡುಪಿಯ ಕಡಗೋಲು ಕೃಷ್ಣ ಹಾಗೂ ನಮ್ಮ ಆಚಾರ್ಯರ ಸಿದ್ದಾಂತ ಕೇವಲ ಮಾದ್ವರಿಗೆ ಸಂಭಂಧಪಟ್ಡದೆ ಅಥವಾ ಇ ಜಗತ್ತಿಗೆ ಸಂಭಂಧ ಪಟ್ಟ ವಿಚಾರವೇ?
  ಅಲ್ಲಾಹು ಅಕ್ಬರ್ ಎಂದು ಅವರು ಕರೆದರೆ ಅದರ ಅರ್ಥ ಪ್ರಭು ನಿನಗೆ ಸಮರಾದ ದೈವ ಇನ್ನೊಬ್ಬ ಇಲ್ಲ ಎಂದು ಅರ್ಥ ..ಸರ್ವಶಬ್ದವಾಚ್ಯ ನಮ್ಮ ಶ್ರೀ ಹರಿ ಪ್ರತಿ ಶಬ್ದಗಳು ಅವನನ್ನೆ ತಿಳಿಸುತ್ತಾವೆ ಎಂದ ಮೇಲೆ ಕುರಾನ್ ಗ್ರಂಥದಲ್ಲಿ ಇರುವ ಶಬ್ದ ನಮ್ಮ ಶ್ರೀಹರಿಯನ್ನೆ ಹೇಳುತ್ತಾವೆ ಎಂದು ಅರ್ಥವಲ್ಲವೆ ಇದರಿಂದ ನಮಾಜ್ ಕೃಷ್ಣಮಠದಲ್ಲಿ ಮಾಡಿದ್ದು ತಪ್ಪು ಹೇಗೆ ಹಾಗುತ್ತದೆ...

  Vishnudasa Nagendracharya

  1. ನಾನಿಲ್ಲಿ ಶಿಕ್ಷೆ ಕೊಡುವ ಮಾತಾಡಿಲ್ಲ. ಕೊಡುವ ಅಧಿಕಾರವೂ ನನಗಿಲ್ಲ. ಇಲ್ಲದ್ದನ್ನು ದಯವಿಟ್ಟು ಹೇಳಬೇಡಿ. 
  
  ಪ್ರಾಣದೇವರ ವ್ಯಾಪಾರ ಎಂದು ತಿಳಿದು ಶಿಕ್ಷೆ ಕೊಡುವ ಅಧಿಕಾರ ಯಾರಿಗೂ ಇಲ್ಲ ಎಂದರೆ ಯಾಕಾಗಿ ಗುರು ಶಿಷ್ಯರ ವ್ಯವಸ್ಥೆ. ಶಿಷ್ಯರ ತಪ್ಪುಗಳನ್ನು ಗುರುಗಳು ನೋಡಬೇಕೇಕೆ, ತಿದ್ದಬೇಕೇಕೆ, ಶಿಕ್ಷೆ ಕೊಡಬೇಕೇಕೆ? 
  
  ಸರಿ, ನನ್ನಲ್ಲಿ ನಿಂತು ಪ್ರಾಣದೇವರು ಈ ಕಾರ್ಯ ಮಾಡಿಸಿದ್ದಾರೆ. ನೀವು ಯಾಕೆ ಪ್ರಶ್ನೆ ಮಾಡುತ್ತಿದ್ದೀರಿ. 
  
  ನೀವು ಪ್ರಶ್ನೆ ಮಾಡುವದು ಸರಿಯಾದರೆ ನಾವೇಕೆ ಶ್ರೀ ಪೇಜಾವರಶ್ರೀಗಳನ್ನು ಪ್ರಶ್ನೆ ಮಾಡಬಾರದು? 
  
  ಗುರುಗಳು ಶಾಸ್ತ್ರಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ವಿನಯ ಗೌರವದಿಂದಲೇ ಪ್ರಶ್ನೆ ಮಾಡಬೇಕು ಎಂದು ಆಚಾರ್ಯರೇ ಗೀತಾತಾತ್ಪರ್ಯನಿರ್ಣಯದಲ್ಲಿ ಹೇಳಿದ್ದಾರೆ. ನಾನು ಪ್ರಾಮಾಣಿಕ ವಿನಯದಿಂದಲೇ ಶ್ರೀ ಪೇಜಾವರಶ್ರೀಗಳನ್ನು ಪ್ರಶ್ನೆ ಮಾಡಿದ್ದೇನೆ, ಶಾಸ್ತ್ರದ ದೃಷ್ಟಿಯಿಂದ ಇದು ತಪ್ಪು ಎನ್ನುವದನ್ನು ಪ್ರತಿಪಾದಿಸಿದ್ದೇನೆ. 
  
  ದೇವರು ಮನುಷ್ಯರಿಗೆ ಬುದ್ಧಿಯನ್ನು ನೀಡಿದ್ದಾನೆ, ಶಾಸ್ತ್ಪವನ್ನು ನೀಡಿದ್ದಾನೆ. ಶಾಸ್ತ್ರದಿಂದ ಬುದ್ಧಿಯನ್ನು ಹದಗೊಳಿಸಿಕೊಂಡು ಅದರಂತೆ ನಡೆಯಬೇಕಾದ್ದು, ಆ ಶಾಸ್ತ್ರದ ಜ್ಞಾನದಿಂದ ಮೊದಲಿಗೆ ನಮ್ಮನ್ನು, ಆ ನಂತರ ನಮ್ಮವರನ್ನು, ಆ ನಂತರ ಸಮಾಜವನ್ನು, ಮತ್ತು ವಿನಯಯುಕ್ತವಾಗಿಯೇ ಗುರುಗಳನ್ನು ತಿದ್ದಬೇಕಾದ್ದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ನಾನು ಅದನ್ನೇ ಮಾಡಿದ್ದೇನೆ. 
  
  2. ಗೋಹಂತಕ ನೀಡುವ ದಾನ ಖಂಡಿತ ನಿಷಿದ್ಧ. ಸಂಶಯವಿಲ್ಲ. ಆದರೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತರೂಪವಾಗಿ ನೀಡಿದಾಗ ಸ್ವೀಕರಿಸಬಹುದು. 
  
  ಇನ್ನು ಶ್ರೀ ಪೇಜಾವರಶ್ರೀಗಳು ಮುಸಲ್ಮಾನರಿಂದ ಹೊರೆಕಾಣಿಕೆ ಸ್ವೀಕರಿಸಿದ್ದೂ ಸಹ ತಪ್ಪಲ್ಲ. ಕಾರಣ, ಕೃಷ್ಣಮಠಕ್ಕೆ ಆಧ್ಯಾತ್ಮಿಕ ಮುಖ ಹೇಗಿದೆಯೋ ಹಾಗೆಯೇ ಸಾಮಾಜಿಕ ಮುಖವೂ ಇದೆ. ಆ ಸಾಮಾಜಿಕ ಕಾರ್ಯಗಳಿಗಾಗಿ ನೆರವು ನೀಡುವ ಅಧಿಕಾರ ಮುಸಲ್ಮಾನರಿಗೂ ಇದೆ. ಆಗ ಅದು ದಾನ ಎಂದು ಕರೆಸಿಕೊಳ್ಳುವದಿಲ್ಲ, ಸಾಮಾಜಿಕ ಬದ್ಧತೆ ಎಂದು ಕರೆಸಿಕೊಳ್ಳುತ್ತದೆ. ಅದರಿಂದಲೂ ಅವಶ್ಯವಾಗಿ ನೀಡಿದವರಿಗೆ ಉನ್ನತಿ ಉಂಟಾಗುತ್ತದೆ. 
  
  3. ಉಡುಪಿಯ ಕಡಗೊಲು ಕೃಷ್ಣ, ಅಷ್ಟಮಠಾಧೀಶರ ಆಸ್ತಿ, ಮಾಧ್ವರ ಪ್ರಾಣ, ಬ್ರಾಹ್ಮಣರ ಪ್ರೀತಿಯ ಆರಾಧ್ಯದೈವ, ಹಿಂದೂಗಳ ಪ್ರೀತಿಯ ದೈವ, ಭಾರತೀಯರ ಹೆಮ್ಮೆ, 
  
  ಹಾಗೆ ಆಚಾರ್ಯರ ಸಿದ್ಧಾಂತ ಪ್ರತಿಯೊಬ್ಬ ಸಾಧಕನಿಗೆ ಸಂಬಂಧಿಸಿದ್ದು. ಜಾತಿ-ಮತ-ಲಿಂಗ-ಭೇದವಿಲ್ಲದೆ ಎಲ್ಲರೂ ಆಚಾರ್ಯರ ಸಿದ್ಧಾಂತವನ್ನು ತಮತಮಗೆ ಯೋಗ್ಯವಾದ ರೀತಿಯಲ್ಲಿ ಅನುಸರಿಸಬಹುದು. 
  
  ನಾಲ್ಕನೆಯ ಪ್ರಶ್ನೆಗೆ ನಿಮ್ಮ ಕೆಳಗಿನ ಕಾಮೆಂಟಿನಲ್ಲಿ ಉತ್ತರಿಸಿದ್ದೇನೆ. 
  
  ಸೂಚನೆ - ಪ್ರಶ್ನೆಗಳನ್ನು ಬೇರೆಬೇರೆಯಾಗಿ ಕೇಳಿ. ನಿಮಗೆ ಕೇಳಲು, ನನಗೆ ಉತ್ತರಿಸಲು, ಜನರಿಗೆ ಓದಲು ಸುಲಭ. 😊
  
 • Madhvwshachar,Bangalore

  5:41 PM , 29/06/2017

  ಅದ್ಭುತ ಉತ್ತರ ಆಚಾರ್ಯರೇ. ಸಮಗ್ರ ಜೀವ ಪ್ರಪಂಚದಲ್ಲಿ ಪರಮಾತ್ಮ ಇದ್ದಾನೆ ಅಂದ ಶ್ರೀವತ್ಸ ಅವರೆ. ಪರಮಾತ್ಮ ಎಲ್ಲದಲ್ಲು ವ್ಯಾಪಿಸಿ ಇದ್ದಾನೆ ಯೆನ್ನುವ ಜಗನ್ನಾಥ ದಾಸರ , ಇತರ ಸ್ಮ್ರುತಿ ಪ್ರಮಾನದ ಪ್ರಕಾರ ಮಾಂಸಾದಿಗಳಲ್ಲಿಯು ಪರಮಾತ್ಮ ಇದ್ದನೆ ಅಂಥ ಅದನ್ನು ತಿಂತಿವಾ. ಯೆಲ್ಲಾದಲ್ಲು ಯೆಲ್ಲರಲ್ಲು ಪರಮಾತ್ಮ ಇದ್ದಾನೆ ಅವುಗಳಿಗೆ ಹಾನಿ ಮಾಡಬೇಡಿ ಅಂಥ ಪರಮಾತ್ಮನ ವಚನ. ಅದನ್ನು ಪಾಲಿಸುವುದಕ್ಕೆ ನನೀಡಿದ ಈ ಮಾಧ್ವ ಜನ್ಮದ ಆಂತರ್ಯ ತಿಳಿದು ಬಾಳಿದರೆ ಉತ್ತಮ. 
  ಆಚಾರ್ಯರಿಗೆ ಶಿರ: ಸಾಷ್ಟಾಂಗ ಪ್ರಣಾಮಗಳು. ನಿಮ್ಮ ಸಾಮಾಜಿಕ ಸೇವೆಗೆ . ಹರಯೇ ನಮ:
 • Pattabiraman C L,Bangalore

  4:56 PM , 29/06/2017

  Pranams to Acharya. Yesterday I was discussing with my family members and supported Swamiji,s action. But after listening to your pravachana I have changed my views. Thanks for clear msg. However let us all pray for soomth conclusion of this episode. Regards Pattabiraman

  Vishnudasa Nagendracharya

  Tumba Santosha. 
  
  Pratoyobba sajjananan ella alochanegaLoo shastarakke anuguNavagiye irabeku ennnuvade ee jnanakaryada uddesha. 
 • Srivathsa G agnihotri,Mysore

  3:45 PM , 29/06/2017

  ಆಚಾರ್ಯರೇ ನಮಸ್ಕಾರ..
  ಅಲ್ಲಾಹು ಅಕ್ಬರ್‌ ಎಂದರೆ ದೇವರು ದೊಡ್ಡವನು ಎನ್ನುವ ಅರ್ಥವಿದೆ ಇದರಲ್ಲಿ ತಪ್ಪು ಏನಿದೆ...ಸರ್ವ ಶಬ್ದ ವಾಚ್ಯನಲ್ಲವೇ ನಮ್ಮ ಶ್ರೀಹರಿ?? ದಯವಿಟ್ಟು ಇದರ ಬಗ್ಗೆ ತಿಳಿಸಿ

  Vishnudasa Nagendracharya

  ಶಾಸ್ತ್ರೀಯ ತತ್ವಗಳನ್ನು ಎಂದಿಗೂ ದುರುಪಯೋಗ ಪಡಿಸಿಕೊಳ್ಳಬಾರದು. 
  
  ಅಲ್ಲಾಹು ಎನ್ನುವದು ದೇವರ ಹೆಸರು. ಅಲ್ಲಾಹುವೇ ವೇದಪ್ರತಿಪಾದ್ಯನಾದ ಪರಬ್ರಹ್ಮನಲ್ಲ. 
  
  ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರಾಣದೇವರು ಇದ್ದಾರೆ ಅಲ್ಲವೇ. ಯಾಕೆ ನೀವು ಒಬ್ಬ ಮನುಷ್ಯನನ್ನು ಕೂಡಿಸಿ ವಾಯುಸ್ತುತಿಯನ್ನು ಹೇಳುತ್ತ ಆ ವ್ಯಕ್ತಿಗೆ ಮಧು ಅಭಿಷೇಕ ಮಾಡುವದಿಲ್ಲ? ಯಾಕೆಂದರೆ ಅವನಲ್ಲಿರುವ ಪ್ರಾಣದೇವರ ಸನ್ನಿಧಾನ ಅವನನ್ನು ಬದುಕಿಸುತ್ತದೆ. ಅಷ್ಟೆ. ಪೂಜ್ಯವಾದ ಸನ್ನಿಧಾನ ಪ್ರತಿಮೆಗಳಲ್ಲಿ ಇದೆ. ಅದಕ್ಕಾಗಿ ನಾವು ಅಲ್ಲಿ ಅಭಿಷೇಕ ಅರ್ಚನೆ ಮಾಡುತ್ತೇವೆ. 
  
  ಹಾಗೆ, ದೇವರು ಸರ್ವಶಬ್ದವಾಚ್ಯ ನಿಜ. ನಮ್ಮ ಶ್ರೀಮನ್ನಾರಾಯಣನಿಗೆ ಅಲ್ಲಾಹು ಎಂಬ ಹೆಸರಿದೆ. ಎಲ್ಲ ಹೆಸರೂ ಇದೆ. ಎಲ್ಲಿಯೇ ಅಲ್ಲಾಹು ಅಕ್ಬರ್ ಎಂಬ ಮಾತು ಕೇಳಿದಾಗ ನಾವು ಮಾಡುವ ಅನುಸಂಧಾನವೇ ಇದು. ಪರಮತೀಯರೂ ಹರಿ ಸರ್ವೋತ್ತಮ ಎಂದು ಕೂಗುತ್ತಿದ್ದಾರೆ ನೋಡು ಎಂದು. ಆದರೆ, ಆ ಅಭಿಪ್ರಾಯ ಮುಸಲ್ಮಾನಗಿಲ್ಲ, ಇರಲೂ ಬೇಕಾಗಿಲ್ಲ, ಇರಬೇಕೆಂದು ನಾವು ಅಪೇಕ್ಷಿಸುತ್ತಲೂ ಇಲ್ಲ. 
  
  ಜೀವ ಬ್ರಹ್ಮರಿಗೆ ಐಕ್ಯವನ್ನು ಹೇಳುವ ಮಾಯಾವಾದಿಗಳ ಭಾಷ್ಯದಲ್ಲಿನ ಒಂದೊಂದು ಅಕ್ಷರದಿಂದಲೂ ಶ್ರೀಹರಿಯೇ ವಾಚ್ಯ. ಹಾಗಾದರೆ ಅದನ್ನೇಕೆ ಖಂಡನೆ ಮಾಡುತ್ತೀರಿ. ಮಾಯಾವಾದಿ ಭಾಷ್ಯವನ್ನೇಕೆ ಪೀಠದಲ್ಲಿಟ್ಟು ಪೂಜಿಸುವದಿಲ್ಲ? ಏಕೆಂದರೆ, ಅಲ್ಲಿ ವಕ್ತೃತಾತ್ಪರ್ಯ ಇಲ್ಲ. ಅಂದರೆ, ಅದನ್ನು ಬರೆದ ಶಂಕರರಿಗೆ ಆ ಅಭಿಪ್ರಾಯವಿಲ್ಲ. ಅಲ್ಲಿನ ಶಬ್ದಗಳಿಗೆ ಅವರಿಗೆ ಯಾವ ಅಭಿಪ್ರಾಯವಿದೆಯೋ ಅದೇ ಅಭಿಪ್ರಾಯವಿದೆ. ನಮಗೆ ತೋಚಿದ ಅಭಿಪ್ರಾಯ ಅವರ ಗ್ರಂಥದಲ್ಲಿರುವದಲ್ಲ. 
  
  ಯಾವುದೇ ಶಬ್ದವನ್ನು ಕೇಳಿದಾಗ ಈ ಶಬ್ದ ಶ್ರೀಹರಿಯದು ಎಂದು ಅನುಸಂಧಾನ ಮಾಡಬೇಕಷ್ಟೆ ಹೊರತು, ಅವೆಲ್ಲವನ್ನೂ ನಾವು ಪಠಿಸುವಂತಿಲ್ಲ, ಪೂಜಿಸುವಂತಿಲ್ಲ. ಅಲ್ಲಾಹು ಎನ್ನುವದು ಹರಿಯ ನಾಮವಾದರೂ ಅದನ್ನು ಮಂತ್ರದಂತೆ ನಾವು ಜಪಿಸುವಂತಿಲ್ಲ. ಆ ರೀತಿಯ ಅಕ್ಷರ ಅಕ್ಷರದ ಉಪಾಸನಗೆ ಶ್ರೀ ಋಜುದೇವತೆಗಳು ಮಾತ್ರ ಅರ್ಹರು. 
  
  ಹೀಗೆ, ಅಲ್ಲಾಹು ಎನ್ನುವದು ದೇವರ ಹೆಸರಾದರೂ, ಅಲ್ಲಾಹು ಅಕ್ಬರ್ ಎಂದು ಕೂಗುತ್ತಿರುವ ವ್ಯಕ್ತಿಗೆ ಆ ಅಭಿಪ್ರಾಯವಿಲ್ಲವಾದ್ದರಿಂದ, ಅವರ ಅಭಿಪ್ರಾಯ ಅಲ್ಲಾಹು ಎಂಬ ಚೇತನ ದೇವರು ಎಂದೇ. ಹೀಗಾಗಿ ಆ ರೀತಿಯ ಪಠಣವನ್ನು ನಾವು ವಿರೋಧಿಸುತ್ತಿದ್ದೇವೆ. 
  
  ಶ್ರೀವತ್ಸ, ಸಹಜವಾಗಿ ಒಂದು ಪ್ರಶ್ನೆ, ತುಳಸಿಯಲ್ಲಿರುವದೂ ದೇವರೇ. ಹೊಗೆಸೊಪ್ಪಿನಲ್ಲಿರುವದೂ ದೇವರೇ. ಅಲ್ಲಾಹು ಅಕ್ಬರ್ ಎಂದು ಕೂಗುವದು ತಪ್ಪಿಲ್ಲವಾದರೆ, ನಾಳೆಯಿಂದ ಹೊಗೆಸೊಪ್ಪಿನಿಂದ ದೇವರ ಅರ್ಚನೆಯನ್ನು ಮಾಡುತ್ತೀರಾ... 
  
  
 • Pramod s r,Bangalore

  4:50 PM , 29/06/2017

  Tumba duka agide gurugale
 • Narayanaswamy,chamarajanagara

  4:49 PM , 29/06/2017

  Krishnam vande jagadgurum
 • GIRIDHAR SARAF,Bengaluru

  4:34 PM , 29/06/2017

  ಅಪರಾಧವಾಗಿದೆ ಅದನ್ನು ಸಮಜಾಯಿಷಿ ಕೊಟ್ಟು ಮುಂದಿನ ಅನರ್ಥಕ್ಕೆ ದಾರಿ ಕೂಡಾ ಮಾಡಿಕೊಟ್ಟು ಹಳಹಳಿಸಿವಂತೆ ಮಾಡಿದರು. ಅರಳಮರಳು ಕೂಡಾ ಅನ್ನುವ ಹಾಗೂ ಇಲ್ಲ. ತಮ್ಮ ಸ್ಪಸ್ಟ ನಿಲುವಿಗೆ ನಮನಗಳು.
 • Pradyumna.S.P,Mysuru

  4:31 PM , 29/06/2017

  Thanks for good information great work Achar
 • Krishnavarma,Hyderabad

  3:57 PM , 29/06/2017

  👍👍👍👍
 • Manjunath,Bangalore

  3:57 PM , 29/06/2017

  ಆಚಾರ್ಯರೆ ಉತ್ತರ ಬರೊಲ್ಲ ನಿರೀಕ್ಷಿಸಬೇಡಿ
  
  ಹಿಂದೆಯು ಸಹ ಶ್ರೀ ಸತ್ಯಾತ್ಮತೀರ್ಥರು ಮಾಡಿದ ತಪ್ಪನ್ಮು ತೋರಿಸಿದ್ದಿರಿ ಅದನ್ನು ಸಹಿತ ಅವರು ಒಪ್ಪಿಕೊಳ್ಳಲಿಲ್ಲ ಮತ್ತು ಉತ್ತರವು ನೀಡಲಿಲ್ಲ.
  ಅತಿರಿಕ್ತೋಪವಾಸದಲ್ಲು ಸಹಿತ ಮುಕ್ತ ಚರ್ಚೆಗೆ ಕರೆದಿರಿ ಅದನ್ನು ಉತ್ತರಿಸಲಿಲ್ಲ
  ಉಪಾಕರ್ಮದ ವಿಚಾರವನ್ನು ಸ್ಪಷ್ಟನೆ ಮಾಡಿದ್ರಿ ಅದಕ್ಕು ಉತ್ತರವಿಲ್ಲ 
  
  ಇದನ್ನು ನೋಡಿದರೆ ಗೊತ್ತಿಲ್ಲವೇ 
  
  ತತ್ತ್ವ ಬೇಕಿಲ್ಲ ಬರೀ ಗೊಡ್ಡು ಸಂಪ್ರದಾಯದೊಂದಿಗೆ ಅವರ ಪಾಂಡಿತ್ಯವೇ ದೊಡ್ಡದು 
  ಪ್ರಮಾಣಗಳಿಗಿಂತ ಅವರ ಮಾತು ದೊಡ್ಡದು ಎನ್ನುವ ಭ್ರಮೆ ಅವರದ್ದು