Upanyasa - VNU480

ನೀರಿನ ಮಹತ್ತ್ವ ಮತ್ತು ಗುಣಲಕ್ಷಣಗಳು

17/07/2017

ದೇವರನ್ನು ಪೂಜೆ ಮಾಡಲು ನೀರೇ ಯಾಕೆ ಬೇಕು, ಹಾಲು ಎಳನೀರು ಮುಂತಾದ ಪದಾರ್ಥಗಳಿಂದ ದೇವರ ಪೂಜೆಯನ್ನು ಮಾಡಬಾರದೇ? ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಬೃಹದಾರಣ್ಯೋಕಪನಿಷತ್ತಿನ ಭಾಷ್ಯದಲ್ಲಿ ತಿಳಿಸಿದ, ಶ್ರೀ ಮಂತ್ರಾಲಯಪ್ರಭುಗಳು ವಿವರಿಸಿರುವ ತತ್ವವನ್ನು ಇಲ್ಲಿ ನಿರೂಪಿಸಿ ನೀರಿಲ್ಲದೇ ಪೂಜೆಯಿಲ್ಲ ಎಂಬ ಮಾತನ್ನು ಪ್ರತಿಪಾದಿಸಲಾಗಿದೆ. 

ಯಾವೆಲ್ಲ ಗುಣಲಕ್ಷಣಗಳಿದ್ದಾಗ ನೀರು ಪೂಜೆಗೆ ಅರ್ಹವಾಗುತ್ತದೆ, ಬಳಕೆಗೆ ಅರ್ಹವಾಗುತ್ತದೆ ಎನ್ನುವದನ್ನು ಶ್ರೀಮನ್ನಾರಾಯಣಪಂಡಿತಾಚಾರ್ಯರು ಶ್ರೀಮಧ್ವವಿಜಯದಲ್ಲಿ ಮತ್ತು ಅದರ ವ್ಯಾಖ್ಯಾನದಲ್ಲಿ ತಿಳಿಸಿದ್ದಾರೆ. ಅವರು ಉದಾಹರಿಸಿರುವ ಆಯುರ್ವೇದದ ವಚನದ ವಿವರಣೆ ಈ ಭಾಗದಲ್ಲಿದೆ. 

Play Time: 23:01

Size: 4.33 MB


Download Upanyasa Share to facebook View Comments
2431 Views

Comments

(You can only view comments here. If you want to write a comment please download the app.)
 • Anantharaj,Bangalore

  1:15 PM , 17/07/2017

  ಪೂಜ್ಯರೆ, ಒಂದು ಉತ್ತಮವಾದಂತಹ ಗಂಡು ಮಗುವಿನ ಅಪೇಕ್ಷೆ ಇರುವಂತಹ ದಂಪತಿಯು ಯಾವ ಸಾಧನೆ ಮಾಡಬೇಕು. (Eg. ಗಾಯತ್ರಿ ಮಂತ್ರ, ಇತರೆ ಯಾವ ಸ್ತೊತ್ರ. ಇತ್ಯಾದಿ.) ಈ ರೀತಿ ಅಪೇಕ್ಷೆ ವೇದದಲ್ಲಿ ಉಲ್ಲೇಖವಿದೆಯಾ?

  Vishnudasa Nagendracharya

  ಬೃಹದಾರಣ್ಯೋಕಪನಿಷತ್ತಿನಲ್ಲಿ ಇದರ ಕುರಿತ ವಿವರಣೆಯಿದೆ. 
  
  ಪುತ್ರಕಾಮೇಷ್ಟಿ ಎಂಬ ಯಜ್ಞದ ಪ್ರಭೇದವೇ ಇದೆ. 
  
  ಆದರೆ ವೇದಮಂತ್ರಗಳ ಉಪದೇಶ ಮತ್ತು ಸರಿಯಾದ ಪಠಣ ಇಲ್ಲದಿದ್ದರೆ ಅವುಗಳ ಫಲ ದೊರೆಯುವದಿಲ್ಲ. 
  
  ಪಾಜಕ ಮುಂತಾದ ಕ್ಷೇತ್ರಗಳಲ್ಲಿ ಶ್ರೀಮದಾಚಾರ್ಯರಾದಿ ಗುರುಗಳ, ಮುಖ್ಯವಾಗಿ ಶ್ರೀ ಮಂತ್ರಾಲಯಪ್ರಭುಗಳ ಸೇವೆಯನ್ನು ಮಾಡುವದರಿಂದ, ಪ್ರತೀದಿವಸ ಅವರ ಗ್ರಂಥದ ಮುಂದೆ ದೀಪವನ್ನು ಹಚ್ಚುವದರಿಂದ ಪುತ್ರಸಂತಾನವುಂಟಾಗುತ್ತದೆ. “ದೀಪಸಂಯೋಜಾನ್ ಜ್ಞಾನಂ ಪುತ್ರಲಾಭೋ ಭವೇದ್ ಧ್ರುವಮ್”
  
  ನಮಸ್ಕಾರ ಮತ್ತು ಸಂಕೀರ್ತನೆಗಳಿಂದ ಪಡೆಯಲಿಕ್ಕಾಗದ ಪದಾರ್ಥವೇ ಇಲ್ಲ. 
 • ಭಾಸ್ಕರ ಜೋಯಿಸ್,ಬೆಂಗಳೂರು

  2:52 PM , 17/07/2017

  ಗುರುಜಿ ಕಲುಷಿತ ನೀರು ಬಳಸ ಬಾರದು ಏಂದು ಹೇಳಿದ್ದಿರಿ.
  ಮಳೆಗಾಲದಲ್ಲಿ ಬಾವಿ,ನದಿನೀರು ಮಣ್ಣುಮಿಶ್ರಿತವಾಗಿ ಬಣ್ಣವಾಗಿರುತ್ತದೆ. ಅದನ್ನು ಪೂಜೆಗೆ ಬಳಸುವುದು ಸರಿಯೆ ತಪ್ಪೆ ತ

  Vishnudasa Nagendracharya

  ತುಂಬ ಮಣ್ಣಾಗಿದ್ದರೆ ಬಳಸಲಾಗುವದಿಲ್ಲ. ಆದರೆ ಚನ್ನಾಗಿ ಶೋಧಿಸಿ ಅವಶ್ಯವಾಗಿ ಬಳಸಬಹುದು. 
 • P N Deshpande,Bangalore

  9:17 AM , 18/07/2017

  S.Namaskargalu. it is an extraordinary explanation regarding water. We ordinary people are not aware of many many things we salute for your wonderful gift of great knowledge
 • P N Deshpande,Bangalore

  9:17 AM , 18/07/2017

  S.Namaskargalu. it is an extraordinary explanation regarding water. We ordinary people are not aware of many many things we salute for your wonderful gift of great knowledge