Upanyasa - VNU483

ಗುರುದೇವತಾಭಿಷೇಕ

31/07/2017

ನಮ್ಮ ಮನೆಯಲ್ಲಿ ಯಾವ ಗುರುಗಳ ಹಾಗೂ ಯಾವ ದೇವತೆಗಳ ಪ್ರತೀಕಗಳಿರಬೇಕು, ಅವುಗಳಲ್ಲಿ ಸಾನ್ನಿಧ್ಯವನ್ನು ತುಂಬುವ ಸಂಕ್ಷಿಪ್ತಕ್ರಮದ ವಿವರಣೆ, ಗುರು ದೇವತೆಗಳಿಗೆ ನಿರ್ಮಾಲ್ಯಾಭಿಷೇಕವನ್ನು ಅಭಿಷೇಕವನ್ನು ಮಾಡುವ ಆರೋಹಣ ಹಾಗೂ ಅವರೋಹಣಕ್ರಮಗಳು, ಅತೀಸಂಕ್ಷಿಪ್ತ, ಸಂಕ್ಷಿಪ್ತ, ವಿಸ್ತೃತ, ಪರಿಪೂರ್ಣವಾಗಿ ಮಾಡುವ ಅಭಿಷೇಕಾದಿಗಳ ವಿವರಣೆಯನ್ನು ಈ ಉಪನ್ಯಾಸದಲ್ಲಿ ನೀಡಲಾಗಿದೆ. 

Play Time: 40:41

Size: 7.36 MB


Download Upanyasa Share to facebook View Comments
3882 Views

Comments

(You can only view comments here. If you want to write a comment please download the app.)
 • Prabhanjan Joshi,Ankola

  3:53 PM , 01/09/2019

  ಆಚಾರ್ಯರಿಗೆ ನಮಸ್ಕಾರಗಳು,
  ತಾವು ಪೂಜಾ ವಿಧಾನವನ್ನು ತಿಳಿಸಿ ಅದರ ಅರ್ಥವನ್ನು ತಿಳಿಸಿದ್ದೀರಿ ಆದ್ದರಿಂದ ಪ್ರತಿಬಾರಿ ಪೂಜೆ ಮಾಡುವಾಗಲೂ ಎಲ್ಲಿಲದ ಸಂತೋಷ ಸಿಗುತ್ತದೆ .
  .
  ಒಂದು ವಿನಂತಿ 
  ತಾವು ದಯವಿಟ್ಟು ನಿಮ್ಮ ಸಂಪೂರ್ಣ ಪೂಜೆಯನ್ನು ನಿಮ್ಮ ವಿಶ್ವ ನಂದಿನಿ YouTube ನಲ್ಲಿ ಹಾಕಬೇಕೆಂದು ನನ್ನ ಹೃತ್ಪೂರ್ವಕ ವಿನಂತಿ
  
  ಇಲ್ಲಿ ನನ್ನ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ...
 • Prabhanjan Joshi,Ankola

  2:23 PM , 01/09/2019

  ಮುಂದಿನ ಪೂಜೆಯ ಬಗ್ಗೆಯ ಉಪನ್ಯಾಸ ಯಾವಾಗ ಗುರುಗಳೇ...
 • Vishwnath MJoshi,Bengaluru

  5:48 PM , 15/01/2019

  ಶ್ರೀ ಗುರುಭ್ಯೋ ನಮಃ ಪುಜ್ಯಗುರುಗಳ ಪಾದಗಳಳಿಗೆ ನಮಸ್ಕಾರ. ಗರುಗಳಿಗೆ ಸಂಕ್ರಾಂತಿ ಹಬ್ಬದಶುಭಾಶಯಗಳು ಗುರುಗಳೆ,ನಿಮ್ಮ ಪೂಜಾ ಕ್ರಮ ವನ್ನು ಪಠಣ ಮಾಡಿದೇ, ವಂದು ಪ್ರಶ್ನೆ,ವಂದು ಕಡೆ ನೀವು ಗೋಪಿಚಂದ್ನ ಹಚ್ಚಿಕೊಳ್ಳದೆ ಸಾಲಿಗ್ರಾಮ ಗಳನ್ನು ಮುಟ್ಟುವ ಅಧಿಕಾರ ವಿಲ್ಲವಂದು ತೇಳಸಿದ್ದಿರೀ. ಹಾಗು ನಿಮ್ಮ ಉರ್ಧಪುಂಡ್ರ ಲೇಖನದಲ್ಲಿ ,ಎರಡನೆಯ ಸ್ನಾನದ ಬಳಿಕಾ ,ನೈರ್ಮಲ್ಯ ಅಭಿಷೇಕ, ನೈರ್ಮಲ್ಯ ತೀರ್ಥ ಪ್ರಾಷಣ ಆ ನೈರ್ಮಲ್ಯ ತೀರ್ಥದಿಂದ ಗೋಪಿಚಂದ ಧಾರಣ ಯಂದು ತಿಳಸಿದ್ದಿರಿ. ನನ್ನ ಪ್ರಶ್ನೆ ಅಂದ್ರೆ ಗೋಪಿಚಂದ್ನ ಧಾರಣ ಆಗದೆ ಸಾಲಿಗ್ರಾಮದ ನೈರ್ಮಲ್ಯ ಅಭಿಷೇಕ ಹೇಗೆ ಯಂದು
  ಎರಡನೆಯ ಫ್ತಶ್ನೆ, ಈ ನಾವೇದ್ಯ ಕ್ರಮ ಸರಿನಾ ಮೋದಲು ಶ್ರೀ ಲಕ್ಷ್ಮಿ ನಾರಾಯಣ,ಆಮೆಲೆ ಮುಖ್ಯ ಪ್ರಾಣ ದೇವರು,ಆಮೆಲೆ ಭಾರತಿದೀವಿ, ಆಮೆಲೆ ರುದ್ರದೇವರು-ಶೇಷ ದೇವರು-ಗರುಡ ದೇವರು-ಗಣಪತಿ-ಗುರುಗಳು.
  ದಾಯಟ್ಟು ತೆಲೆಸಿ
 • Ashutosh Prabhu,Mangalore

  9:38 PM , 10/04/2018

  ಗುರುಗಳ ವೃಂದಾವನಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಿದರೆ ಅದನ್ನು ಸ್ವೀಕರಿಸಬಹುದೇ??

  Vishnudasa Nagendracharya

  ಅವಶ್ಯವಾಗಿ
 • K Anil,Bangalore

  1:31 PM , 02/08/2017

  sthree devathegala vigrahagalannu ittukollabahade?Avakke abhisheka madabahude?

  Vishnudasa Nagendracharya

  ಮಾಡಬಹುದು. 
  
  ಯಾವುದೇ ಸ್ತ್ರೀದೇವತೆಯನ್ನು ಪತಿಯೊಂದಿಗೇ ಪೂಜಿಸುವದು ಶ್ರೇಯಸ್ಕರ. 
 • Rammurthy Kulkarni,Mangaluru

  9:38 PM , 02/08/2017

  ಧನ್ಯವಾದಗಳು. ಯತಿಗಳು ಅಶ್ರಮದಲ್ಲಿ ದಾಸರಿಗಿಂತ ಶ್ರೇಷ್ಠರು ಎಂದಿರಿ..ಹಾಗಾದರೆ, ನಮ್ಮ ಸಮಕಾಲೀನ ಈಗಿನ ಯತಿಗಳು ಹರಿದಾಸರ ಪೂಜೆ ಮಾಡಬಾರದೇ?

  Vishnudasa Nagendracharya

  ಅವಶ್ಯವಾಗಿ ಮಾಡಲೇಬೇಕು. 
  
  ಗತಿಸಿಹೋದ ಗುರುಗಳ ಅಭಿಷೇಕ, ನೈವೇದ್ಯಗಳನ್ನು ಮಾಡಬೇಕಾದರೆ, 
  
  ಯತಿಗಳು ಮೊದಲು. ಗೃಹಸ್ಥರು ಅನಂತರು. 
  
  ಯತಿಗಳಲ್ಲಿಯೂ ಮೊದಲು ಆಶ್ರಮ ಸ್ವೀಕರಿಸಿದವರು ಮೊದಲು. ನಂತರದವರು ನಂತರ. 
  
  ಗೃಹಸ್ಥರಲ್ಲಿ ಗುರು-ಶಿಷ್ಯಭಾವವನ್ನು ಗ್ರಹಿಸಬೇಕು. ಅದು ದೊರೆಯದೇ ಇದ್ದಲ್ಲಿ ವಯಸ್ಸು. 
  
  ಬದುಕಿರುವ ಯತಿಗಳಾಗಲೀ ಯಾರೇ ಆಗಲಿ,
  
  ತಮಗಿಂತ ಜ್ಞಾನಜ್ಯೇಷ್ಠರಾದ ಗೃಹಸ್ಥದಾಸರಿಗೂ ನಮಸ್ಕಾರಾದಿ ಗೌರವಗಳನ್ನು ಸಲ್ಲಿಸುವದು ಸತ್ಸಂಪ್ರದಾಯ. 
  
  ಅರ್ಜುನ, ತಾನು ಸಂನ್ಯಾಸಿವೇಷವನ್ನು ತೊಟ್ಟು ಬಂದಾಗ ಗೃಹಸ್ಥರಾದ ಬಲರಾಮದೇವರು ಅವನನ್ನು ಯತಿ ಎಂದು ತಿಳಿದು ಅವರಿಗೆ ನಮಸ್ಕರಿಸುತ್ತಾರೆ. ಆಗ ಅರ್ಜುನ ಅವರಿಗೆ ಪ್ರತಿನಮಸ್ಕಾರ ಮಾಡುತ್ತಾನೆ. ಕಾರಣ, ಬಲರಾಮದೇವರು ಜ್ಞಾನ-ಬಲಮುಂತಾದ ಗುಣಗಳಲ್ಲಿ ದೊಡ್ಡವರು ಎನ್ನುವ ಕಾರಣಕ್ಕೆ. ಹೀಗೆ, ಸಂನ್ಯಾಸಿಗಳೂ ಸಹ ತಮಗಿಂತಜ್ಞಾನದಲ್ಲಿ ಹಿರಿಯರಾದ ಮತ್ತು ಶ್ರೀಶಾಪರೋಕ್ಷಿಗಳು ಎಂದು ಪ್ರಸಿದ್ಧರಾದ ಹರಿದಾಸರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು. ಸತ್ಪರಂಪರೆಯಲ್ಲಿ ಬಂದಿರುವ ಅನೇಕ ಯತಿಗಳು ಇವತ್ತಿಗೂ ಆ ನಿಯಮವನ್ನು ಪಾಲಿಸುತ್ತಾರೆ. 
  
 • H. Suvarna kulkarni,Bangalore

  5:05 AM , 03/08/2017

  ಗುರುಗಳಿಗೆ ಪ್ರಣಾಮಗಳು ಸಾಕಷ್ಟು ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು
 • B. Suresh Kumar,Chennai

  10:33 PM, 01/08/2017

  Hari vayu stuthi heli Brindavan ake devathegalige nirmalya Abhishek mathra madathane vayu devarige balitha sukta laksmi deviga Sri sukta heli madathane bori nirmalya mathra adhu thappallave swalpa daya madi tilisbeku

  Vishnudasa Nagendracharya

  Upanyasadalli vivarisiruvante anusarisi. 
  
  avaravara stotradinda abhishekha maaduvadu shreshtha. 
  
  
 • Rammurthy Kulkarni,Mangaluru

  10:36 PM, 01/08/2017

  Excellent explanation..ಆದರೆ‌ ನನಗೆ ಕೆಲವು ಸಂದೇಹಗಳಿವೆ..
  
  ೧. ಮನೆಗಳಲ್ಲಿ ಆರೋಹಣ ಕ್ರಮವೋ, ಅವರೋಹಣವೋ? ಮನೆ, ದೇವಾಲಯಗಳಲ್ಲಿ ಏಕೆ ಕ್ರಮದಲ್ಲಿ ವ್ಯತ್ಯಾಸ?
  
  ೨. ದಾಸರಾಯರ ಪ್ರತೀಕಗಳಿದ್ದಾಗ, ಕೆಲವು ದಾಸರು ಕೆಲವು ಯತಿಗಳ ಮುಂಚೆ ಅವತರಿಸಿದವರು.ಉದಾ- ಪುರಂದರ ದಾಸರು ಮಂತ್ರಾಲಯ ಪ್ರಭುಗಳ ಮುಂಚೆ ಅವತರಿಸಿದವರು...ಇವರಲ್ಲಿ ಯಾರಿಗೆ ಮೊದಲು ಅಭಿಷೇಕ ಮಾಡಬೇಕು?
  
  ೩. ನಾವು ಎಲ್ಲ ಯತಿಗಳಿಗೆ ಮೊದಲು ನಿರ್ಮಾಲ್ಯ ಅಭಿಷೇಕ ಮಾಡಿ ಆಮೇಲೆ ಎಲ್ಲರಿಗೆ ಪೂರ್ಣ ಅಭಿಷೇಕ ಮಾಡಬೇಕೋ? ಅಥವಾ ಒಬ್ಬೊಬ್ಬ ಯತಿಗಳ, ದೇವತೆಗಳ ನಿರ್ಮಾಲ್ಯ ಮತ್ತು ಪೂರ್ಣ ಅಭಿಷೇಕ (ರಾಘವೇಂದ್ರ ರಿಗೆ ನಿರ್ಮಾಲ್ಯ ಮತ್ತು ಪೂರ್ಣ, ನಂತರ ವಾದಿರಾಜರ ನಿರ್ಮಾಲ್ಯ, ಪೂರ್ಣ ಹೀಗೆ) ಮಾಡಬೇಕೊ? 
  ೪. ಗುರುಗಳ ಪಾದೋದಕ ಸೇವಿಸಬಹುದು ಆದರೆ ದೇವತೆಗಳ ಪಾದೋದಕ ಸೇವಿಸಬಾರದು ಏಕೆ? ದೇವತೆಗಳ ಯೋಗ್ಯತೆ ಗುರುಗಳಿಗಿಂತ ಮೇಲು ಅಲ್ಲವೇ?

  Vishnudasa Nagendracharya

  1. ಮನೆಯಲ್ಲಿ ಆರೋಹಣ ಕ್ರಮ ಶ್ರೇಷ್ಠ. 
  
  ದೇವಸ್ಥಾನಗಳಲ್ಲಿ ಅವರೋಹಣ ಕ್ರಮ ಅನಿವಾರ್ಯ. ಕಾರಣ ದೊಡ್ಡ ದೊಡ್ಡ ಕೊಡಗಳಷ್ಟು ನೀರಿನ ಆವಶ್ಯಕತೆಯಿರುತ್ತದೆ. ಒಬ್ಬ ಗುರು-ದೇವತೆಗೆ ಮಾಡಿ ಉಳಿದದ್ದನ್ನು ಮತ್ತೊಬ್ಬರಿಗೆ ಮಾಡುವ ಅನಿವಾರ್ಯತೆ ಇರುತ್ತದೆ. 
  
  ೨. ಯತಿಗಳು ದಾಸರಲ್ಲಿ ಯತಿಗಳ ನಂತರವೇ ದಾಸರು. ಕಾರಣ ಯತಿಗಳು ಆಶ್ರಮದಲ್ಲಿ ಶ್ರೇಷ್ಠರು. ಹೀಗಾಗಿ ಆ ಕ್ರಮ. ಭಜನೆ ಮಾಡಬೇಕಾದರೂ ಮೊದಲಿಗೆ ಎಲ್ಲ ದಾಸರನ್ನು ಸ್ಮರಿಸಿ ನಂತರ ಯತಿಗಳನ್ನು ಸ್ಮರಿಸುತ್ತಾರೆ. ಉದಾಹರಣೆಗೆ ಪುರಂದರದಾಸರ ಹಾಡು ಹಾಡಿ ನಂತರ ಶ್ರೀ ಮಾದನೂರಿನ ವಿಷ್ಣುತೀರ್ಥರ ಕುರಿತ ಹಾಡು ಹಾಡುತ್ತಾರೆ. 
  
  ೩. ಒಬ್ಬರಿಗೆ ನಿರ್ಮಾಲ್ಯ ಮತ್ತು ಪೂರ್ಣ ಅಭಿಷೇಕ ಮುಗಿಸಿ ಮತ್ತೊಬ್ಬರಿಗೆ ನಿರ್ಮಾಲ್ಯ ಮತ್ತು ಪೂರ್ಣ ಅಭಿಷೇಕ. 
  
  ೪. ವಿಸ್ತಾರವಾಗಿ ಚರ್ಚೆಯೊಂದಿಗೆ ವಿವರಿಸಬೇಕಾದ ವಿಷಯ. ಸದಾಚಾರಸ್ಮೃತಿಯ ಭೋಜನ ಪ್ರಕರಣದಲ್ಲಿ ವಿವರಿಸುತ್ತೇನೆ. 
 • B. Suresh Kumar,Chennai

  10:30 PM, 01/08/2017

  Thumba Dhanyavadagalu acharyare. Yevuthu Pooja nerli nodlakka barubeku antha eradu divasaka munche daya madi heli Elli idaranu bandhuduthane
 • Aditya C s,Bangalore

  6:11 PM , 01/08/2017

  Sooryadayavgi bahala hottu agiddare, tada madade devara nirmalya visarjaneyannu madabeku allava? 
  Yaava sandharbhadalliyadaru sandhyavandane mugisikonde nirmalya visarjane gurudevata abhisheka madabeka?

  Vishnudasa Nagendracharya

  ಇಂತಹ ಅನಿವಾರ್ಯ ಸಂದರ್ಭದಲ್ಲಿ ಮೊದಲು ನಿರ್ಮಾಲ್ಯ ವಿಸರ್ಜನೆ ಮಾಡಿ ಸಂಧ್ಯಾವಂದನೆ ಮಾಡಿ ಗುರುದೇವತಾಭಿಷೇಕವನ್ನು ಮಾಡಬೇಕು.ಆದರೆ ಅದನ್ನೇ ಪದ್ಧತಿಯನ್ನಾಗಿ ಮಾಡಿಕೊಳ್ಳಬಾರದು. ಆದಷ್ಟು ಬೇಗ ನಿರ್ಮಾಲ್ಯವಿಸರ್ಜನೆಯನ್ನು ಮಾಡಬೇಕು. 
  
  ಈ ಪ್ರಕ್ರಿಯೆಯಲ್ಲಿಯೂ ಗೋಪಿಚಂದನವನ್ನು ಹಚ್ಚಿಕೊಂಡಿರಲೇಬೇಕು. ಇಲ್ಲದಿದ್ದರೆ ಸಾಲಿಗ್ರಾಮಾದಿಗಳನ್ನು ಮುಟ್ಟುವ ಅರ್ಹತೆ ಬರುವದಿಲ್ಲ. 
  
  ನಿರ್ಮಾಲ್ಯವಿಸರ್ಜನೆಯ ಉಪನ್ಯಾಸದಲ್ಲಿ ಇದನ್ನು ಹೇಳಿದ್ದೇನೆ. 
 • Aditya C S,Bangalore

  5:38 PM , 01/08/2017

  Acharyare,
  
  Sooryodayanantara nirmalya visarjane maduva sandharbhadalli, devara nirmalya visarjane madi, sandhyavandane madi amele guru devata abhisheka madabeko athava devara nirmalya visarjane madi,guru devata abhisheka madi amele sandhyavandane madabeko?
  
  Dayamadi ee vishayavanna tiliskodi.

  Vishnudasa Nagendracharya

  ಮೊದಲು ಸಂಧ್ಯಾವಂದನೆ.
  
  ಆ ನಂತರ ನಿರ್ಮಾಲ್ಯವಿಸರ್ಜನೆ. 
  
  ಆ ನಂತರ ಗುರುದೇವತಾಭಿಷೇಕ. 
  
 • Vilas,Bellary

  8:33 AM , 01/08/2017

  Hare shrinivasa
  Most awaited topic....
  Dhanyavadagalu acharyare